OTTಯಲ್ಲಿ ಮೆಗಾ ಮೂವಿ 'RRR' : ನೆಟ್‌ಫ್ಲಿಕ್ಸ್, ಜೀ5ನಲ್ಲಿ ರಾಜಮೌಳಿ ಸಿನಿಮಾ
ವಿಶ್ವದಾದ್ಯಂತ ಅಬ್ಬರಿಸಿದ್ದ 'RRR' ಸಿನಿಮಾ ಈಗ ಒಟಿಟಿಗೆ ಲಗ್ಗೆ ಇಡುವ ಕಾಲ ಹತ್ತಿರ ಬಂದಿದೆ. ರಾಜಮೌಳಿ ನಿರ್ದೇಶನದ ಐತಿಹಾಸಿಕ ಕಥಾಹಂದರವಿರುವ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿಕೊಂಡಿತ್ತು. ಅಲ್ಲದೆ ಸಿನಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು.
ಮಾರ್ಚ್ 18 ರಂದು ರಿಲೀಸ್ ಆದ ಸಿನಿಮಾ ಐದು ಭಾಷೆಗಳಲ್ಲೂ ಭರ್ಜರಿ ಯಶಸ್ಸು ಕಂಡಿತ್ತು, ನಟ ರಾಮ್ ಚರಣ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ನಟನೆಗೆ ಪ್ರೇಕ್ಷಕರು ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದ್ದರು. ಅಲ್ಲದೆ 'ಕೆಜಿಎಫ್ 2' ರಿಲೀಸ್ ಆಗುವುದಕ್ಕೂ ಮುನ್ನ ಎಲ್ಲಾ ಥಿಯೇಟರ್‌ಗಳು 'RRR' ಸಿನಿಮಾದ ಹಾರಾಟವೇ ಜೋರಾಗಿತ್ತು. ಆ ಮಟ್ಟಿಗೆ ಕ್ರೇಜ್ ಸೃಷ್ಟಿಯಾಗಿತ್ತು.
'RRR' ಸಿನಿಮಾ ಬಾಲಿವುಡ್ ಸಿನಿಮಾ ಅಂಗಳದಲ್ಲೂ ಭರ್ಜರಿ ಕಲೆಕ್ಷನ್ ಬಾಚಿಕೊಂಡಿತ್ತು. ಬಾಲಿವುಡ್ ಸ್ಟಾರ್ ಸಿನಿಮಾಗಳನ್ನೇ ಮೂಲೆಗುಂಪು ಮಾಡಿ ದಕ್ಷಿಣ ಭಾರತದ ಸಿನಿಮಾ ಸಕ್ಸಸ್ ಪ್ರದರ್ಶನ ಕಂಡಿತ್ತು. ಇಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಕೂಡ ಅದ್ದೂರಿ ಪ್ರದರ್ಶನ ಕಂಡು ಅಲ್ಲಿರುವ ಸಿನಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಈಗ ನಾಳೆಯಿಂದ ಒಟಿಟಿ ಪ್ರಪಂಚಕ್ಕೆ ಸಿನಿಮಾ ಕಾಲಿಡುತ್ತಿದ್ದು, ಒಟಿಟಿಯಲ್ಲಿ ಸಿನಿಮಾ ಅಬ್ಬರ ಹೇಗಿರಲಿದೆ ಎಂದು ನೋಡಬೇಕಿದೆ

ಒಟಿಟಿಗೆ ರಾಜಮೌಳಿಯ 'RRR'
ರಾಜಮೌಳಿ ನಿರ್ದೇಶನದ 'RRR' ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ಸು ತಂದುಕೊಟ್ಟಿತ್ತು. ಸದ್ಯ ನಾಳೆಯಿಂದ ಒಟಿಟಿ ಪ್ಲಾಟ್ ಫಾರ್ಮ್‌ಗೆ ಲಗ್ಗೆ ಇಡುತ್ತಿದೆ. ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಲು ಆಗದೇ ಇರುವವರು ನಾಳೆಯಿಂದ ತಮ್ಮ ಮೊಬೈಲ್‌ಗಳಲ್ಲೇ ಪೂರ್ತಿ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ. ಜಿ5 ಈ ಅವಕಾಶವನ್ನು ತನ್ನ ಚಂದಾದಾರರಿಗೆ ನೀಡಿದೆ. ಹೀಗಾಗಿ ನಾಳೆ ಒಟಿಟಿಗೆ ಲಗ್ಗೆ ಇಡುತ್ತಿರುವ ಸಿನಿಮಾಗೆ ಪ್ರೇಕ್ಷಕರು ಎಷ್ಟು ಮಾರ್ಕ್ ಕೊಡ್ತಾರೆ ಅಂತ ಕಾದು ನೋಡಬೇಕಿದೆ.

ಹಿಂದಿಯಲ್ಲೂ ಒಟಿಟಿಯಲ್ಲಿ 'RRR' ಬಿಡುಗಡೆ
ನಾಳೆಯಿಂದ RRR ಸಿನಿಮಾ ಒಟಿಟಿಗೆ ಲಗ್ಗೆ ಇಡುತ್ತಿದೆ. ಐದು ಭಾಷೆಗಳಲ್ಲೂ ಸಿನಿಮಾ ಡಬ್ ಎಲ್ಲಾ ರೀತಿಯ ಪ್ರೇಕ್ಷಕರಿಗೂ ಲಭ್ಯವಾಗಲಿದೆ. ಈ ಹಿಂದೆ ನೆಟ್‌ಫ್ಲಿಕ್ಸ್ ಇಂಡಿಯಾ RRR ಹಿಂದಿ ಡಬ್ಬಿಂಗ್ ಆವೃತ್ತಿಯನ್ನು ಜೂನ್ 2 ರಂದು ತಮ್ಮ ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಸದ್ಯ ನಾಳೆಯಿಂದಲೇ ಜೀ5 ನಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ನೆಟ್‌ಫ್ಲಿಕ್ಸ್ ಇಂಡಿಯಾ ಕೂಡ ನಾಳೆಯೇ ಹಿಂದಿ ಆವೃತ್ತಿಯ RRR ಸಿನಿಮಾ ಬಿಡುಗಡೆಯಾಗುವುದಾಗಿ ತಿಳಿಸಿದೆ. ಈ ಮೂಲಕ ಹಿಂದಿ ಪ್ರೇಕ್ಷಕರೂ ಕೂಡ ನಾಳೆಯಿಂದಲೇ RRR ಸಿನಿಮಾವನ್ನು ವೀಕ್ಷಣೆ ಮಾಡಬಹುದಾಗಿದೆ.

ಜೀ5 ಚಂದಾದಾರರಿಗೆ ಗುಡ್ ನ್ಯೂಸ್
ಮೇ 20 ರಿಂದ RRR ಸಿನಿಮಾವನ್ನು ಮನೆಯಲ್ಲೇ ಕುಳಿತು ವೀಕ್ಷಣೆ ಮಾಡಬಹುದಾಗಿದೆ. ಜೀ ಒಟಿಟಿ ವೇದಿಕೆಯಲ್ಲಿ ಚಿತ್ರ ಪ್ರಸಾರವಾಗಲಿದೆ. ಈ ಮೊದಲು ಒಟಿಟಿ ಪ್ರಸಾರಕ್ಕೆ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿತ್ತು. ಈಗಾಗಲೇ ಜೀ5 ಚಂದಾದದಾರಾಗಿದ್ದರೂ ಸಹ ಹೆಚ್ಚುವರಿ ಹಣ ನೀಡಿ ಸಿನಿಮಾ ನೋಡಬೇಕಿತ್ತು. ಸದ್ಯ ಈಗ ಆ ನಿರ್ಧಾರದಿಂದ ಜೀ5 ಹಿಂದೆ ಸರಿದಿದೆ. ಪ್ರೇಕ್ಷಕರಿಗೆ ಹೆಚ್ಚಿನ ಒತ್ತಾಯ ಕೇಳಿ ಬಂದ ಹಿನ್ನಲೆ ಜೀ5 ಚಂದಾದಾರರು ಯಾವುದೇ ಹೆಚ್ಚುವರಿ ಹಣ ನೀಡದೇ ಸಿನಿಮಾ ನೋಡಬಹುದಾಗಿದೆ. ಈ ಬಗ್ಗೆ ಜೀ 5 ಅಧಿಕೃತ ಮಾಹಿತಿ ನೀಡಿದೆ, ಈ ವಿಷಯ ತಿಳಿದ ಪ್ರೇಕ್ಷಕರು ಖುಷಿ ಪಟ್ಟಿದ್ದಾರೆ.

ಭರ್ಜರಿ ಕಲೆಕ್ಷನ್ ಮಾಡಿಕೊಂಡ 'RRR'
'RRR' ಸಿನಿಮಾ ರಿಲೀಸ್ ಆಗಿನಿಂದ ಇಲ್ಲಿಯವರೆಗೂ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿಕೊಂಡಿದೆ. ಸಿನಿಮಾದಲ್ಲಿರುವ ಸಿನಿಮ್ಯಾಟಿಕ್ ದೃಶ್ಯಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಹೆಚ್ಚು ಜನರು ಸಿನಿಮಾಗಳನ್ನು ಥಿಯೇಟರ್‌ನಲ್ಲೇ ಬಂದು ವೀಕ್ಷಣೆ ಮಾಡಿದ್ದಾರೆ. ಈಗಲೂ ಸಹ ಹಲವು ಕಡೆ ಸಿನಿಮಾ ಪ್ರಸಾರವಾಗುತ್ತಿದೆ. ಸದ್ಯಕ್ಕೆ 'ಕೆಜಿಎಫ್ 2' ಅಬ್ಬರ ಇರುವುದರಿಂದ ಕಲೆಕ್ಷನ್ ಇಳಿಕೆ ಕಂಡಿದೆ. ಅಷ್ಟೇ ಅಲ್ಲದೆ, ಈಗಲೂ ಕೆಲ ಸಿನಿಮಾ ಪ್ರದರ್ಶನವಾಗುತ್ತಿದ್ದು, ಚಿತ್ರ ಓಡುತ್ತಿದೆ. ಈವರೆಗೆ 1,100 ಕೋಟಿ ಕಲೆಕ್ಷನ್ ಮಾಡಿಕೊಂಡಿರುವ ಚಿತ್ರ ಈಗ ನಾಳೆಯಿಂದ ಒಟಿಟಿಯಲ್ಲಿ ರಿಲೀಸ್ ಆಗುತ್ತಿದ್ದು, ಈ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಾ ಅಂತ ಕಾದು ನೋಡಬೇಕಿದೆ.


Click it and Unblock the Notifications











