ಎರಡು ಒಟಿಟಿಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ 'RRR': ಯಾವಾಗ? ಎಲ್ಲಿ?

ರಾಜಮೌಳಿ ನಿರ್ದೇಶಿಸಿ, ಜೂ ಎನ್‌ಟಿಆರ್-ರಾಮ್ ಚರಣ್ ತೇಜ ನಟಿಸಿರುವ 'RRR' ಸಿನಿಮಾ ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದ್ದು ಇನ್ನೂ ಯಶಸ್ವಿಯಾಗಿಯೇ ಪ್ರದರ್ಶನ ಕಾಣುತ್ತಿದೆ.

ಮಾರ್ಚ್ 24 ರಂದು ಬಿಡುಗಡೆ ಆದ ಈ ಸಿನಿಮಾ ದೇಶದಾದ್ಯಂತ ದಾಖಲೆ ಪ್ರದರ್ಶನ ಕಂಡಿತ್ತು. ದೇಶದ ಒಳಗೆ ಮಾತ್ರವಲ್ಲ, ವಿದೇಶಗಳಲ್ಲಿಯೂ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು.

ಸಿನಿಮಾ 50 ದಿನ ಪ್ರದರ್ಶನ ಕಂಡ ಬಳಿಕ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುವ ದಿನಾಂಕವನ್ನು ಪ್ರಕಟಿಸಲಾಗಿದೆ. 'RRR' ಸಿನಿಮಾವು ಏಕಕಾಲಕ್ಕೆ ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗುತ್ತಿರುವುದು ವಿಶೇಷ.

RRR Movie Will Stream On Two OTTs On May 20

ಚಿತ್ರಮಂದಿರಗಳಲ್ಲಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಿರುವ 'RRR' ಸಿನಿಮಾ ಎರಡು ಒಟಿಟಿಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿ ಅಲ್ಲಿಯೂ ಪ್ರೇಕ್ಷಕರನ್ನು ಸೂರೆಗೊಳಿಸಲು ಸಜ್ಜಾಗಿದೆ.

ಮೇ 20 ನೇ ತಾರೀಖಿನಂದು 'RRR' ಸಿನಿಮಾವು ಜೀ5 ಹಾಗೂ ನೆಟ್‌ಫ್ಲಿಕ್ಸ್‌ಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಜೀ 5 ನಲ್ಲಿ ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಅದೇ ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿ ಭಾಷೆಯಲ್ಲಿ ಮಾತ್ರವೇ ಬಿಡುಗಡೆ ಆಗಲಿದೆ. ಅಂದಹಾಗೆ ಮೇ 20ರಂದು ಜೂ ಎನ್‌ಟಿಆರ್ ಹುಟ್ಟುಹಬ್ಬ ಸಹ.

'RRR' ಸಿನಿಮಾವು ಒಟಿಟಿಗೆ ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಸುಮಾರು 50 ಕೋಟಿ ಮೊತ್ತಕ್ಕೆ ಜೀ 5 ಹಾಗೂ ನೆಟ್‌ಫ್ಲಿಕ್ಸ್‌ಗೆ ಸಿನಿಮಾ ಮಾರಾಟವಾಗಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.

'RRR' ಸಿನಿಮಾ ಈವರೆಗೆ ಸುಮಾರು 1500 ಕೋಟಿಗೂ ಹೆಚ್ಚು ಹಣವನ್ನು ಚಿತ್ರಮಂದಿರದಿಂದ ಕಲೆಕ್ಷನ್ ಮಾಡಿದೆ. ಹಲವು ರೆಕಾರ್ಡ್‌ಗಳನ್ನು ಮುರಿದು ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕ ಚಿತ್ರಮಂದಿರಗಳಿಂದ ಸಿನಿಮಾವನ್ನು ತೆಗೆಯುವ ಸಾಧ್ಯತೆ ಇದೆ.

'RRR' ಸಿನಿಮಾದಲ್ಲಿ ರಾಮ್ ಚರಣ್ ಹಾಗೂ ಜೂ ಎನ್‌ಟಿಆರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆಲಿಯಾ ಭಟ್ ನಾಯಕಿ, ಬಾಲಿವುಡ್‌ನ ಅಜಯ್ ದೇವಗನ್, ಶ್ರೆಯಾ ಶರನ್ ಸಹ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವು ತೆಲುಗು ರಾಜ್ಯಗಳ ಸ್ವಾತಂತ್ರ್ಯ ವೀರರಾದ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಕುರಿತಾದ ಕಾಲ್ಪನಿಕ ಕತೆಯನ್ನು ಹೊಂದಿದೆ. ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದು, ಡಿವಿವಿ ದಯಾನಂದ ನಿರ್ಮಾಣ ಮಾಡಿದ್ದಾರೆ.

More from Filmibeat

English summary
RRR movie will stream on zee 05 and Netflix on same day. RRR is already a block buster at box office now its releasing on OTT on May 20.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X