ರಾಜಮೌಳಿ ಮೆಗಾ ಸಿನಿಮಾ 'RRR' ಒಟಿಟಿಗೆ ಲಗ್ಗೆ?

ಭಾರತೀಯ ಚಿತ್ರರಂಗದ ಮೂವಿ ಮಾಂತ್ರಿಕ ರಾಜಮೌಳಿ ವಿಶಿಷ್ಟ ನಿರೂಪಣಾ ಶೈಲಿಯಿಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಗೆದ್ದಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳನ್ನು ಕಡೆಗಣಿಸುತ್ತಿದ್ದ ಬಾಲಿವುಡ್‌ ಮಂದಿಯೇ ತಿರುಗಿ ನೋಡುವ ಮಟ್ಟದಲ್ಲಿ ಸಿನಿಮಾಗಳನ್ನು ಮಾಡಿ ಅಚ್ಚರಿ ಮೂಡಿಸಿದ್ದಾರೆ.

'ಬಾಹುಬಲಿ', 'ಬಾಹುಬಲಿ 2' ಬಾಲಿವುಡ್‌ ಸಿನಿಮಾಗಳೇ ನಾಚುವಂತೆ ಅದ್ದೂರಿಯಾಗಿ ಚಿತ್ರೀಕರಣ ಮಾಡಲಾಗಿತ್ತು. ಯಾವಾಗಲೂ ವಿಭಿನ್ನ ರೀತಿಯಲ್ಲಿ ಕಥೆಯನ್ನು ಹೇಳುವ ರಾಜಮೌಳಿ 'ಬಾಹುಬಲಿ' ಸಿನಿಮಾದಲ್ಲಿ ಅದ್ಧೂರಿ ಸೆಟ್‌ನ ಮೂಲಕ ಜನರನ್ನು ಥಿಯೇಟರ್‌ಗಳಲ್ಲಿ ಹಿಡಿದಿಡುವ ಕಾರ್ಯವನ್ನು ಮಾಡಿದ್ದರು.

ಸದ್ಯಕ್ಕೀಗ 'RRR' ಸಿನಿಮಾ ಕೂಡ ಅದೇ ರೇಸ್‌ನಲ್ಲೇ ಇದೆ. ಐದು ಭಾಷೆಗಳಲ್ಲಿ ರಿಲೀಸ್‌ ಆದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದೆ. ಇಲ್ಲಿಯವರೆಗೂ 'RRR' 1100 ಕೋಟಿಯಷ್ಟು ಗಳಿಕೆ ಮಾಡಿದ್ದು, ಇನ್ನು ಹಲವು ಕಡೆ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈಗ 3D ಅವತರಣಿಕೆಯಲ್ಲಿ ಬಂದಿರುವ ಸಿನಿಮಾ ಒಟಿಟಿಗೆ ಬರಲು ಸಜ್ಜಾಗಿದೆ.

 ಒಟಿಟಿ ಲಗ್ಗೆ ಇಡುತ್ತಾ 'RRR'

ಒಟಿಟಿ ಲಗ್ಗೆ ಇಡುತ್ತಾ 'RRR'

ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್‌ ಆದ 'RRR' ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿತ್ತು. ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ಹಾಗೂ ರಾಮ್‌ ಚರಣ್ ತೇಜ ಕಾಣಿಸಿಕೊಂಡಿದ್ದರು. ಇವರಿಬ್ಬರ ಕಾಂಬಿನೇಶನ್‌ನ ಪ್ರೇಕ್ಷಕ ಪ್ರಭು ಸಹ ಮೆಚ್ಚಿಕೊಂಡಿದ್ದರು. ಇಬ್ಬರ ನಟನೆಗೂ ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಸದ್ಯ ಈಗ ಥಿಯೇಟರ್‌ನಲ್ಲಿ ನೋಡದೇ ಇದ್ದವರಿಗೆ ಒಟಿಟಿಯಲ್ಲಿ ನೋಡುವ ಭಾಗ್ಯ ಸಿಕ್ಕಿದೆ. ಇದೇ ತಿಂಗಳ ಮೇ 20 ರಂದು 'ಆರ್‌ಆರ್‌ಆರ್‌' ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿಗಳು ಹರಿದಾಡ್ತಿದೆ. ಸದ್ಯಕ್ಕೆ ಚಿತ್ರತಂಡದಿಂದ ಅಧಿಕೃತವಾಗಿ ಘೋಷಣೆ ಆಗಿಲ್ಲ. ಆದರೆ, ಮೇ 20 ರಂದೇ ರಿಲೀಸ್ ಆಗಬಹುದು ಎಂಬ ಟಾಕ್ ಮಾತ್ರ ಸಿನಿರಂಗದಲ್ಲಿ ಚರ್ಚೆಯಾಗುತ್ತಿದೆ.

 ರಿಲೀಸ್‌ಗೂ ಮುನ್ನವೇ ಒಟಿಟಿಗೆ ಮಾರಾಟ

ರಿಲೀಸ್‌ಗೂ ಮುನ್ನವೇ ಒಟಿಟಿಗೆ ಮಾರಾಟ

'RRR' ಸಿನಿಮಾ ರಿಲೀಸ್‌ ಆಗುವ ಮುಂಚೆಯೇ ಭರ್ಜರಿ ಬಿಸಿನೆಸ್‌ ಮಾಡಿತ್ತು. ಎರಡು ಒಟಿಟಿ ಸಂಸ್ಥೆಗಳಿಗೆ 'RRR' ಸಿನಿಮಾ ಪ್ರಸಾರದ ಹಕ್ಕುಗಳು ಮಾರಾಟ ಆಗಿದ್ದವು. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿ 'RRR' ಚಿತ್ರದ ಒಟಿಟಿ ಹಕ್ಕುಗಳನ್ನು ಜೀ 5 ಸಂಸ್ಥೆ ಈಗಾಗಲೇ ಖರೀದಿಸಿದೆ. ಹಿಂದಿ ವರ್ಷನ್‌ ಅನ್ನು ನೆಟ್‌ಫ್ಲಿಕ್ಸ್ ಕೊಂಡು ಕೊಂಡಿದೆ. ಕೊರೊನಾ ಸಮಯದಲ್ಲಿ ಇಡೀ ದೇಶವೇ ಲಾಕ್‌ಡೌನ್‌ ಆದಾಗ ಮನೆಯಲ್ಲಿಯೇ ಜನರಿಗೆ ಸೂಪರ್‌ಸ್ಟಾರ್‌ ಸಿನಿಮಾಗಳನ್ನು ಒಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲಿ ನೀಡಲಾಗುತ್ತಿತ್ತು. ಇದರಿಂದ ಒಟಿಟಿ ಪ್ರಭಾವ ಕೂಡ ಹೆಚ್ಚಾಯಿತು. ಈಗಂತೂ ಒಟಿಟಿ ಸಂಸ್ಥೆಗಳ ನಡುವೆ ಭಾರೀ ಪೈಪೋಟಿ ಇರುವುದರಿಂದ ಸೂಪರ್‌ ಹಿಟ್ ಸಿನಿಮಾಗಳನ್ನು ಒಟಿಟಿ ಸಂಸ್ಥೆಗಳು ಮುಗಿಬಿದ್ದು ಕೊಂಡು ಕೊಳ್ಳುತ್ತಿವೆ.

 'ಕೆಜಿಎಫ್‌ 2' ರಿಲೀಸ್ ಬಳಿಕ 'RRR' ಕಲೆಕ್ಷನ್ ಇಳಿಕೆ

'ಕೆಜಿಎಫ್‌ 2' ರಿಲೀಸ್ ಬಳಿಕ 'RRR' ಕಲೆಕ್ಷನ್ ಇಳಿಕೆ

ಏಪ್ರಿಲ್ 14 ರಂದು 'ಕೆಜಿಎಫ್‌' ವಿಶ್ವದಾದ್ಯಂತ ರಿಲೀಸ್‌ ಆಗಿತ್ತು. ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಎಲ್ಲಾ ಭಾಷೆಗಳಲ್ಲೂ ಭರ್ಜರಿಯಾಗಿ ಕಲೆಕ್ಷನ್ ಮಾಡಿಕೊಂಡಿತ್ತು. ಹೀಗಾಗಿ 'ಕೆಜಿಎಫ್‌ 2'ಗೂ ಮುನ್ನ ರಿಲೀಸ್ ಆ'RRR' ಸಿನಿಮಾ ಕಲೆಕ್ಷನ್‌ಗೆ ಭಾರೀ ಪೆಟ್ಟು ಬಿದ್ದಂತಾಯಿತು. 'ಕೆಜಿಎಫ್‌ 2'ಗೂ ಮುನ್ನ ಅಬ್ಬರದಿಂದ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದ ಸಿನಿಮಾ 'ಕೆಜಿಎಫ್‌ 2' ಅಬ್ಬರಕ್ಕೆ ಮಂಕಾಯಿತು. ಕಲೆಕ್ಷನ್‌ನಲ್ಲೂ ಹಿಂದೆ ಉಳಿಯಿತು. ಸದ್ಯ 'ಕೆಜಿಎಫ್‌ 2' ಈಗಲೂ ಕೂಡ ಹಲವು ರಾಜ್ಯಗಳಲ್ಲಿ ಓಡುತ್ತಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

 ಭರ್ಜರಿ ಕಲೆಕ್ಷನ್ ಮಾಡಿಕೊಂಡ 'RRR'

ಭರ್ಜರಿ ಕಲೆಕ್ಷನ್ ಮಾಡಿಕೊಂಡ 'RRR'

'RRR' ಸಿನಿಮಾ ರಿಲೀಸ್‌ ಆದಾಗಿನಿಂದ ಇಲ್ಲಿಯವರೆಗೂ ಬಾಕ್ಸಾಫಿಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿಕೊಂಡಿದೆ. ಸಿನಿಮಾದಲ್ಲಿರುವ ಸಿನಿಮ್ಯಾಟಿಕ್ ದೃಶ್ಯಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಹೆಚ್ಚು ಜನರು ಸಿನಿಮಾಗಳನ್ನು ಥಿಯೇಟರ್‌ನಲ್ಲೇ ಬಂದು ವೀಕ್ಷಣೆ ಮಾಡಿದ್ದಾರೆ. ಈಗಲೂ ಸಹ ಹಲವು ಕಡೆ ಸಿನಿಮಾ ಪ್ರಸಾರವಾಗುತ್ತಿದೆ. ಸದ್ಯಕ್ಕೆ 'ಕೆಜಿಎಫ್‌ 2' ಅಬ್ಬರ ಇರುವುದರಿಂದ ಕೆಲಕ್ಷನ್‌ ಇಳಿಕೆ ಕಂಡಿದೆ ಅಷ್ಟೇ. ಆದರೆ, ಈಗಲು ಕೆಲ ಸಿನಿಮಾ ಪ್ರದರ್ಶನವಾಗುತ್ತಿದ್ದು, ಚಿತ್ರ ಓಡುತ್ತಿದೆ. ಈವರೆಗೆ 1,100 ಕೋಟಿ ಕಲೆಕ್ಷನ್‌ ಮಾಡಿಕೊಂಡಿರುವ ಚಿತ್ರ ಈಗ ಒಟಿಟಿಯಲ್ಲಿ ರಿಲೀಸ್ ಆದರೆ, ಈ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಾ ಅಂತ ಕಾದು ನೋಡಬೇಕಿದೆ.

More from Filmibeat

English summary
RRR OTT Release Date : Jr NTR, Ram Charan and Alia Bhatt Starrer RRR Movie Likely to Release on Netflix and Zee5 on May 20th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X