twitter
    For Quick Alerts
    ALLOW NOTIFICATIONS  
    For Daily Alerts

    ಒಟಿಟಿಗೆ ಬಂತು ಸಾಯಿ ಪಲ್ಲವಿಯ 'ವಿರಾಟ ಪರ್ವಂ': ಎಲ್ಲಿ? ಯಾವಾಗ ಪ್ರದರ್ಶನ?

    |

    ಕೆಲವು ಕಾರಣಗಳಿಂದ ಸುದ್ದಿಯಾಗಿದ್ದ ಸಾಯಿ ಪಲ್ಲವಿ ನಟನೆಯ 'ವಿರಾಟ ಪರ್ವಂ' ಸಿನಿಮಾ ಚಿತ್ರಮಂದಿರಗಳ ಓಟ ಮುಗಿಸಿ ಒಟಿಟಿಯತ್ತ ಬಂದಿದೆ.

    ಇದೇ ತಿಂಗಳ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ 'ವಿರಾಟ ಪರ್ವಂ' ಸಿನಿಮಾ ಬಿಡುಗಡೆ ಆದ ಹದಿನೈದು ದಿನಗಳಲ್ಲೇ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ.

    ನಕ್ಸಲೈಟ್ ಕತೆ ಹೊಂದಿರುವ 'ವಿರಾಟ ಪರ್ವಂ' ಸಿನಿಮಾ ಜುಲೈ 1 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಗೆ ಬರಲಿದ್ದು, ವಿದೇಶಗಳಲ್ಲಿಯೂ ಈ ಸಿನಿಮಾ ಸ್ಟ್ರೀಮ್ ಆಗಲಿದೆ.

    ಜೂನ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾಕ್ಕೆ ಉತ್ತಮ ವಿಮರ್ಶೆಗಳ ದೊರೆತವಾದರೂ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಹಿಟ್ ಆಗಲಿಲ್ಲ. ಹದಿನೈದು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಚಿತ್ರಮಂದಿರಗಳಿಂದ ಕೇವಲ 12 ಕೋಟಿಯಷ್ಟೆ ಗಳಿಸಿದೆ ಎನ್ನಲಾಗುತ್ತದೆ.

    ಆದರೆ ನೆಟ್‌ಫ್ಲಿಕ್ಸ್‌ ಡೀಲ್‌ನಿಂದ ಬಹಳ ಒಳ್ಳೆಯ ಹಣವನ್ನೇ 'ವಿರಾಟ ಪರ್ವಂ' ಗಳಿಸಿದೆ ಎಂಬ ಮಾತುಗಳು ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. 'ವಿರಾಟ ಪರ್ವಂ' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮುನ್ನವೇ ಸುಮಾರು ಹತ್ತು ಕೋಟಿಗೆ ನೆಟ್‌ಫ್ಲಿಕ್ಸ್‌ಗೆ ಮಾರಾಟವಾಗಿದೆಯಂತೆ ಅದೇ ಕಾರಣಕ್ಕೆ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.

    ನಿಜ ಘಟನೆ ಆಧರಿತ ಸಿನಿಮಾ ಇದಾಗಿದೆ

    ನಿಜ ಘಟನೆ ಆಧರಿತ ಸಿನಿಮಾ ಇದಾಗಿದೆ

    'ವಿರಾಟ ಪರ್ವಂ' ಸಿನಿಮಾ ನಕ್ಸಲ್ ನಾಯಕ ಹಾಗೂ ಒಬ್ಬ ಹಳ್ಳಿ ಯುವತಿಯ ನಡುವಿನ ಕತೆ ಹೊಂದಿದೆ. ಸಿನಿಮಾದಲ್ಲಿ ವೆನ್ನೆಲ ಹೆಸರಿನ ಹಳ್ಳಿ ಹುಡುಗಿ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ರವನ್ನ ಹೆಸರಿನ ನಕ್ಸಲ್ ನಾಯಕನ ಪಾತ್ರದಲ್ಲಿ ರಾಣಾ ದಗ್ಗಬಾಟಿ ನಟಿಸಿದ್ದಾರೆ. ಸಿನಿಮಾವನ್ನು ವೇಣು ಉದ್ದಗಲ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಪ್ರಿಯಾಮಣಿ ಸಹ ಇದ್ದಾರೆ. ನಿಜ ಘಟನೆ ಆಧರಿತ ಸಿನಿಮಾ ಆಗಿದೆ.

    ನಕ್ಸಲ್‌ವಾದದ ಬಗ್ಗೆ ಸಾಯಿ ಪಲ್ಲವಿ ಮಾತು

    ನಕ್ಸಲ್‌ವಾದದ ಬಗ್ಗೆ ಸಾಯಿ ಪಲ್ಲವಿ ಮಾತು

    ಸಿನಿಮಾ ಬಿಡುಗಡೆ ಆಗುವ ಮುನ್ನ ಸಾಯಿ ಪಲ್ಲವಿ ನೀಡಿದ್ದ ಹೇಳಿಕೆಯಿಂದ ದೊಡ್ಡ ಮಟ್ಟದ ಚರ್ಚೆ, ವಾದ ವಿವಾದ ಎದ್ದಿತ್ತು. ನಕ್ಸಲ್ ವಾದದ ಬಗ್ಗೆ ಮಾತನಾಡುತ್ತಾ, ''ಅದೊಂದು ಐಡಿಯಾಲಜಿ. ಶಾಂತಿ ಎಂದರೇನು ಎಂಬ ಬಗ್ಗೆ ನಿಮಗೆ ಒಂದು ಅಭಿಪ್ರಾಯ ಇರಬಹುದು. ಹಿಂಸೆ ಎಂದರೆ ಸಂಹವನದ ಅತಿ ತಪ್ಪು ದಾರಿ ಎಂದು ನಾನು ಭಾವಿಸಿದ್ದೇನೆ. ಹಿಂಸಾತ್ಮಕವಾಗಿ ನಾನು ಏನನ್ನಾದರು ಸಾಧಿಸುತ್ತೇನೆ ಎಂಬುದನ್ನು ನಾನು ಒಪ್ಪುವುದಿಲ್ಲ. ಆದರೆ ಆ ಸಮಯದಲ್ಲಿ ಅವರು (ನಕ್ಸಲ್) ತಮ್ಮ ಕಷ್ಟಗಳನ್ನು ಯಾರಿಗೆ ಹೇಗೆ ಅರಿಕೆ ಮಾಡಬೇಕೆಂಬುದು ಅರಿಯದೆ, ಅಥವಾ ನ್ಯಾಯ ಸರಿಯಾದ ದಾರಿಯಲ್ಲಿ ಧಕ್ಕದಾಗ ಒಂದು ಗುಂಪು ಮಾಡಿಕೊಂಡರು. ನಾವು ಜನರಿಗೆ ಒಳ್ಳೆಯದು ಮಾಡುತ್ತೇವೆ ಎಂದುಕೊಂಡರು. ಅವರು ಮಾಡಿದ್ದು ಸರಿಯಾ ತಪ್ಪಾ ನಾವೀಗ ನಿರ್ಣಯ ಮಾಡುವುದು ಸೂಕ್ತವಲ್ಲವೇನೋ'' ಎಂದಿದ್ದರು,

    ''ಕಾಶ್ಮೀರ ಫೈಲ್ಸ್ ಹಾಗೂ ಗೋರಕ್ಷಣೆ ಹೆಸರಲ್ಲಿ ಹಿಂಸೆ ಎರಡೂ ಒಂದೇ''

    ''ಕಾಶ್ಮೀರ ಫೈಲ್ಸ್ ಹಾಗೂ ಗೋರಕ್ಷಣೆ ಹೆಸರಲ್ಲಿ ಹಿಂಸೆ ಎರಡೂ ಒಂದೇ''

    ಮುಂದುವರೆದು, 'ನ್ಯೂಟ್ರಲ್ ಫ್ಯಾಮಿಲಿಯಲ್ಲಿ ಬೆಳೆದ ಕಾರಣ ಎಡ-ಬಲದಲ್ಲಿ ಯಾರು ಸರಿ ಎಂದು ನನಗೆ ಹೇಳುವುದು ಕಷ್ಟ. ಕೆಲವು ದಿನಗಳ ಮುಂದೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಂತು ಅದರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಹೇಗೆ ಹಿಂಸೆ ಮಾಡಲಾಯಿತು ಎಂದು ಅವರು ತೋರಿಸಿದ್ದಾರೆ. ಹಾಗೆ ಕಳೆದ ವರ್ಷವೇ ಇರಬೇಕು ಕೋವಿಡ್ ಸಮಯದಲ್ಲಿ ವ್ಯಕ್ತಿಯೊಬ್ಬ ಗಾಡಿಯಲ್ಲಿ ಹಸು ತೆಗೆದುಕೊಂಡು ಹೋಗುತ್ತಿದ್ದ. ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಮುಸ್ಲಿಂ ಆಗಿದ್ದ ಎಂಬ ಕಾರಣಕ್ಕೆ ಅವನ ಮೇಲೆ ಹಲ್ಲೆ ಮಾಡಲಾಯಿತು. ಜೈ ಶ್ರೀರಾಮ್ ಘೋಷಣೆ ಕೂಗಲಾಯಿತು. ಇದನ್ನು ನೋಡಿದಾಗ ಆಗ ಕಾಶ್ಮೀರದಲ್ಲಿ ನಡೆದಿದ್ದಕ್ಕೂ ಈಗ ನಡೆದಿದ್ದಕ್ಕೂ ವ್ಯತ್ಯಾಸ ಕಾಣಿಸುತ್ತಿಲ್ಲ'' ಎಂದಿದ್ದಾರೆ ಸಾಯಿ ಪಲ್ಲವಿ.

    ಸೈನಿಕರ ಬಗ್ಗೆ ಮಾತನಾಡಿದ್ದ ಸಾಯಿ ಪಲ್ಲವಿ

    ಸೈನಿಕರ ಬಗ್ಗೆ ಮಾತನಾಡಿದ್ದ ಸಾಯಿ ಪಲ್ಲವಿ

    ಭಾರತ, ಪಾಕಿಸ್ತಾನದ ಉದಾಹರಣೆ ಬಳಸಿ ಮಾತನಾಡಿದ ಸಾಯಿ ಪಲ್ಲವಿ, ''ಪಾಕಿಸ್ತಾನದ ಸೈನಿಕರು, ನಮ್ಮ ದೇಶದ ಸೈನಿಕರನ್ನು ಶತ್ರುಗಳೆಂದು, ಭಯೋತ್ಪಾದಕರೆಂದು ಭಾವಿಸುತ್ತಾರೆ. ಏಕೆಂದರೆ ನಾವು ಈ ಕಡೆ ಇದ್ದೇವೆ, ನಮ್ಮ ಸೈನಿಕರು ಪಾಕಿಸ್ತಾನದ ಸೈನಿಕರನ್ನು ಭಯೋತ್ಪಾದಕರು, ವೈರಿಗಳು ಎಂದುಕೊಳ್ಳುತ್ತಾರೆ. ಹೀಗೆ ದೃಷ್ಟಿಕೋನಗಳು ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿ ಬದಲಾಗಿಬಿಡುತ್ತವೆ. ಅದು ನನಗೆ ಅರ್ಥ ಆಗುವುದಿಲ್ಲ. ಹಾಗಾಗಿ ನಾವು ಅವರದ್ದು ತಪ್ಪು, ಇವರದ್ದು ಸರಿ ಎಂದು ಹೇಳಲಾಗುವುದಿಲ್ಲ. ಆ ಸಮಯದಲ್ಲಿ ಅವರು (ನಕ್ಸಲರು) ನಂಬಿದ್ದರು, ನಾವು ಹೀಗೆ ಮಾಡಿದರೆ (ಶಸ್ತ್ರಸಜ್ಜಿತ ಹೋರಾಟ) ನಮಗೆ ನ್ಯಾಯ ಸಿಗುತ್ತೆ ಎಂದು ನಂಬಿದರು, ಹೀಗೆ ಮಾಡಿದರೆ ನಮ್ಮ ಮಕ್ಕಳು ಚೆನ್ನಾಗಿ ಬದುಕಬಲ್ಲರು ಎಂದುಕೊಂಡರು. ಹೀಗಿರುವಾಗ ನಾನು ಈಗಿನ ಪರಿಸ್ಥಿತಿಯಲ್ಲಿ ಕೂತು ಅವರ ಕಾರ್ಯವನ್ನು ಜಡ್ಜ್ ಮಾಡುವುದು ಸೂಕ್ತವಲ್ಲ'' ಎಂದಿದ್ದರು ಸಾಯಿ ಪಲ್ಲವಿ.

    English summary
    Sai Pallavi starrer Virata Parvam movie movie will stream on Netflix from July 01. Movie released on theaters on June 17.
    Thursday, June 30, 2022, 9:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X