"ಕಿಸ್ಸಿಂಗ್, ರೊಮ್ಯಾನ್ಸ್, ಎಕ್ಸ್‌ಪೋಸ್ ನಿಲ್ಸಿ.. ನಾವಿರೋದು ಭಾರತದಲ್ಲಿ": ಓಟಿಟಿಗೆ ಸಲ್ಲು ಎಚ್ಚರಿಕೆ

ಬಾಲಿವುಡ್ ನಟ ಸಲ್ಮಾನ್ ಖಾನ್ ಓಟಿಟಿ ಸೆನ್ಸಾರ್‌ಶಿಪ್ ಬಗ್ಗೆ ಮಾತನಾಡಿದ್ದಾರೆ. ಡಿಜಿಟಲ್ ಸ್ಟ್ರೀಮಿಂಗ್ ಹೆಸರಿನಲ್ಲಿ ಅಸಭ್ಯತೆ, ನಗ್ನತೆ, ನಿಂದಿಸುವ ಕಂಟೆಂಟ್ ನಿಲ್ಲಬೇಕು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದ ಸಲ್ಲು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಡಿಜಿಟಲ್ ಪ್ರಪಂಚದಲ್ಲಿ ಯಾವುದು ಸರಿ? ಯಾವುದು ತಪ್ಪು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.

"ಓಟಿಟಿಗೆ ಸೆನ್ಸಾರ್‌ಶಿಪ್ ಬರಬೇಕು ಎಂದು ನನಗೆ ಅನ್ನಿಸುತ್ತದೆ. ಅಸಭ್ಯತೆ, ನಗ್ನತೆ, ನಿಂದಿಸುವ ಕಂಟೆಂಟ್ ನಿಲ್ಲಬೇಕು. 15-16 ವರ್ಷ ವಯಸ್ಸಿನ ಮಕ್ಕಳು ಈಗ ಈ ಕಂಟೆಂಟ್‌ ಅನ್ನು ತಮ್ಮ ಫೋನ್‌ನಲ್ಲಿ ವೀಕ್ಷಿಸಬಹುದು. ನಿಮ್ಮ ಚಿಕ್ಕ ಮಗಳು ಇದನ್ನು ವೀಕ್ಷಿಸುತ್ತಿದ್ದು ಆದರೆ ಆಕೆ ಓದುವುದಕ್ಕಾಗಿ ಫೋನ್ ಬಳಸುತ್ತಿದ್ದಾಳೆ ಎನ್ನುವ ಕಾರಣಕ್ಕೆ ಅದನ್ನು ಕ್ಷಮಿಸೋಕೆ ಸಾಧ್ಯಾನಾ? ಓಟಿಟಿ ಕಂಟೆಂಟ್‌ನ ಪರೀಕ್ಷಿಸುವುದು ಒಳಿತು ಎಂದು ನನಗೆ ಅನ್ನಿಸುತ್ತಿದೆ. ಕಂಟಂಟ್ ಉತ್ತಮವಾಗಿ ಇದ್ದಷ್ಟು ಓಟಿಟಿ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ" ಎಂದಿದ್ದಾರೆ.

Salman Khan talks on OTT censorship; He says Vulgarity, nudity, abuse on OTT needs to stop

ಇನ್ನು ಸಿನಿಮಾಗಳಲ್ಲಿ ಕಿಸ್ಸಿಂಗ್ ಹಾಗೂ ಹಾಟ್ ದೃಶ್ಯಗಳ ಬಗ್ಗೆ ಮಾತನಾಡಿರುವ ಸಲ್ಲು "ನೀವು ರೊಮ್ಯಾಂಟಿಕ್ ಸೀನ್, ಕಿಸ್ಸಿಂಗ್, ಹಾಟ್ ದೃಶ್ಯಗಳಲ್ಲಿ ನಟಿಸುತ್ತೀರಿ. ಆದರೆ ನೀವು ಮನೆಗೆ ಹೋದಾಗ ನಿಮ್ಮ ಮನೆಯ ಸೆಕ್ಯುರಿಟಿ ಗಾರ್ಡ್ ಕೂಡ ಇದನ್ನೇ ವೀಕ್ಷಿಸುತ್ತಿರುತ್ತಾನೆ. ಭದ್ರತೆ ದೃಷ್ಟಿಯಿಂದ ಇದೆಲ್ಲಾ ಸರಿಯಲ್ಲ. ನೀವು ನಿಮ್ಮ ಗಡಿ ದಾಟಬಾರದು. ನಾವು ಭಾರತದಲ್ಲಿ ಇದ್ದೇವೆ ಎನ್ನುವುದನ್ನು ಮರೆಯಬಾರದು. ಇದು ಮೊದಲು ಜಾಸ್ತಿಯಿತ್ತು. ಈಗ ಸ್ವಲ್ಪ ಕಮ್ಮಿ ಆಗಿದೆ" ಎಂದು ಸಲ್ಲು ವಿವರಿಸಿದ್ದಾರೆ.

Salman Khan talks on OTT censorship; He says Vulgarity, nudity, abuse on OTT needs to stop

ಯುವ ಕಲಾವಿದರ ಬಗ್ಗೆಯೂ ಸಲ್ಮಾನ್ ಖಾನ್ ಮಾತನಾಡಿದ್ದಾರೆ. ಚಿತ್ರರಂಗಕ್ಕೆ ಸಾಕಷ್ಟು ಹೊಸ ಪ್ರತಿಭೆಗಳು ಬರ್ತಿದ್ದಾರೆ. "ಈಗ ಬರುತ್ತಿರುವ ಯುವ ನಟರೆಲ್ಲಾ ಬಹಳ ಪ್ರತಿಭಾನ್ವಿತರು. ಕಷ್ಟಬಿದ್ದು ಕೆಲಸ ಮಾಡುತ್ತಿದ್ದಾರೆ. ಆದರೆ ನಾವು 5 ಜನ ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ನಾನು, ಶಾರುಕ್, ಆಮೀರ್, ಅಕ್ಷಯ್, ಅಜಯ್ ನಾವು ಸಿನಿಮಾ ಮಾಡುತ್ತಲೇ ಇರ್ತೀವಿ. ನಮ್ಮ ಸಿನಿಮಾಗಳು ಸಕ್ಸಸ್ ಆಗಿದ್ದಕ್ಕೆ ನಾವು ಸಂಭಾವನೆ ಹೆಚ್ಚಿಸಿಕೊಂಡಿದ್ದೇವೆ. ಆದರೆ ಕೆಲ ಹೀರೊಗಳು ಈಗ ಒಂದು ಎರಡು ಸಿನಿಮಾಗಳಿಗೆ ಸಂಭಾವನೆ ಹೆಚ್ಚಿಸುತ್ತಿದ್ದಾರೆ. ಯಾಕೆ? ಎಂದು ಸಲ್ಲು ಪ್ರಶ್ನಿಸಿದ್ದಾರೆ.

More from Filmibeat

English summary
Salman Khan talks on OTT censorship; He says Vulgarity, nudity, abuse on OTT needs to stop.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X