Independence Day 2025: ಈ ಸ್ವಾತಂತ್ರೋತ್ಸವದಂದು ಒಟಿಟಿಯಲ್ಲಿ ನೋಡಬಹುದಾದ 5 ಬೆಸ್ಟ್ ವೆಬ್ ಸರಣಿಗಳಿವು

ಆಗಸ್ಟ್ 15 ಅನ್ನು ಭಾರತೀಯರಾದ ನಾವು ಸ್ವಾತಂತ್ರ್ಯ ದಿವಸ ಅಂತ ಕರೆಯುವುದಕ್ಕಿಂತ ಹೆಚ್ಚಾಗಿ ಸ್ವಾತಂತ್ರೋತ್ಸವ ಎಂದೇ ಕರೆಯುತ್ತೇವೆ . ಭಾರತ ಹತ್ತಾರು ಧರ್ಮ ನೂರಾರು ಜಾತಿಗಳಿರುವ ಜಾತ್ಯತೀತ ದೇಶ. ಇಲ್ಲಿನ ಮನೆಗಳಲ್ಲಿ ಪ್ರತಿಯೊಂದು ಧರ್ಮದವರು ತಮ್ಮ ತಮ್ಮ ಹಬ್ಬಗಳನ್ನು ಪ್ರತ್ಯೇಕವಾಗಿ ಆಚರಿಸಿದರೂ ಒಟ್ಟಾಗಿ ಈ ನೆಲದಲ್ಲಿ ಆಚರಿಸುವುದು ಸ್ವಾತಂತ್ರ್ಯ ದಿನವನ್ನೇ. ನಮ್ಮ ಊರ ಹಬ್ಬಗಳಿಗೆ, ನಾಡ ಹಬ್ಬಗಳ ಹಿಂದೆ ಇತಿಹಾಸವಿದ್ದರೆ ಈ ನಮ್ಮ ರಾಷ್ಟ್ರೀಯ ಹಬ್ಬದ ಹಿಂದೆ ದೊಡ್ಡ ಬಲಿದಾನವೇ ಇದೆ .

1947 ಆಗಸ್ಟ್ 15 ಭಾರತ ಆಂಗ್ಲರ ಅದೀನದಿಂದ ನಾವು ಅವರ ಗುಲಾಮಗಿರಿಯಿಂದ ಹೊರಬಂದ ದಿನ, ಇಂದಿಗೆ ಭರ್ತಿ 79 ವರ್ಷ. ಈ ಹಿನ್ನೆಲೆ ಈ ಆಗಸ್ಟ್ 15ರಂದು ಸ್ವಾತಂತ್ರೋತ್ಸವದ ಪ್ರಯುಕ್ತ ಮನೆಯಲ್ಲಿ ಮನೆಮಂದಿ ಜೊತೆ ನೋಡಬಹುದಾದ, ದೇಶಪ್ರೇಮವನ್ನು ಸಾರುವ ಐದು ಹಿಂದಿ ವೆಬ್ ಸರಣಿಗಳ ಪಟ್ಟಿಯನ್ನು ನಾವು ಇಲ್ಲಿ ಮಾಡಿದ್ದೇವೆ. ಆ ಚಿತ್ರಗಳು ಯಾವ್ಯಾವು ಎಂದು ತಿಳಿಯಲು ಓದಿ.

Salute the Nation The Family Man to Special Ops Your Ultimate Independence Day OTT Watchlist

ಸ್ಪೆಷಲ್ ಆಪ್ಸ್ (Special Ops)

ಕೆಕೆ ಮೆನನ್ ವೃತ್ತಿ ಬದುಕಿನ ಅತ್ಯಂತ ಶ್ರೇಷ್ಠ ಸರಣಿಗಳಲ್ಲಿ ಒಂದಾದ ''ಸ್ಪೆಷಲ್ ಒಪಿಎಸ್/ ಸ್ಪೆಷಲ್ ಆಪ್ಸ್‌'' ನ ಮೊದಲ ಸರಣಿ ಮಾರ್ಚ್ 17-2020ರಲ್ಲಿ ಪ್ರಸಾರವಾಗಿತ್ತು. ದೇಶದ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಹಿಂದಿನ ಮಾಸ್ಟರ್‌ ಮೈಂಡ್‌ನ ಪತ್ತೆ ಮಾಡುವ ಕಥೆ ಈ ಚಿತ್ರದಲ್ಲಿತ್ತು.

ಮೊದಲ ಭಾಗಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದ ಇದೇ ಚಿತ್ರದ ಚಿಕ್ಕ ಇನ್‌ಸ್ಟಾಲ್‌ಮೆಂಟ್‌ನ್ನು ''ಸ್ಪೆಷಲ್ ಒಪಿಎಸ್ 1.5'' ಹೆಸರಿನಡಿಯಲ್ಲಿ 2021ರ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ನಂತರ ಇತ್ತೀಚೆಗೆ ಅಂದರೆ ಜುಲೈ 18-2025ರಂದು ಈ ವೆಬ್ ಸರಣಿಯ ಎರಡನೇ ಭಾಗವನ್ನು ಬಿಡುಗಡೆ ಮಾಡಲಾಯ್ತು. ನೀರಜ್ ಪಾಂಡೆ ಸಾರಥ್ಯದಲ್ಲಿ ಮೂಡಿ ಬಂದ ಈ ವೆಬ್ ಸರಣಿಯ ಒಂದೊಂದು ಎಪಿಸೋಡ್‌ಗಳು 44ರಿಂದ 55 ನಿಮಿಷ ಇದ್ದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೀವು ಈ ಸರಣಿಯನ್ನು ನೋಡಬಹುದು.

Salute the Nation The Family Man to Special Ops Your Ultimate Independence Day OTT Watchlist

ದಿ ಫ್ಯಾಮಿಲಿ ಮ್ಯಾನ್ (The Family Man)

ಮನೋಜ್ ಬಾಜಪೇಯಿ ಮತ್ತು ಪ್ರಿಯಾಮಣಿ ಅಭಿನಯದ ''ದಿ ಫ್ಯಾಮಿಲಿ ಮ್ಯಾನ್‌'' ವೆಬ್ ಸರಣಿಯಲ್ಲಿ TASC ಗುಪ್ತಚರ ಇಲಾಖೆಯ ಕಥೆಯನ್ನು ಹೇಳಲಾಗಿದೆ. ಇದರ ಜೊತೆಯಲ್ಲಿ ಮಧ್ಯಮ ವರ್ಗದ ಕುಟುಂಬದ ಬದುಕು ಬವಣೆ ಮತ್ತು ತಲ್ಲಣಗಳಿಗೆ ಕೂಡ ಕೈ ಹಿಡಿಯುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ.

ಒಂದು ಕಡೆ ದೇಶ ಸೇವೆ ಮತ್ತೊಂದು ಕಡೆ ಈ ಎರಡು ಜವಾಬ್ಧಾರಿಗಳನ್ನು ಮನೋಜ್ ಬಾಜಪೇಯಿ ಹೇಗೆ ನಿರ್ವಹಿಸುತ್ತಾರೆ ಎನ್ನುವ ಕಥಾಹಂದರದ ಈ ಸರಣಿಯ ಮೊದಲ ಭಾಗದಲ್ಲಿ ಕನ್ನಡದ ಕಿಶೋರ್ ಕೂಡ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದರು. ಸೆಪ್ಟೆಂಬರ್ 20-2019ರಲ್ಲಿ ಮೊದಲ ಸೀಸನ್ ಪ್ರಸಾರವಾಗಿತ್ತು. ಎರಡನೇ ಸೀಸನ್‌ನಲ್ಲಿ ಮನೋಜ್ ಬಾಜಪೇಯಿ ಜೊತೆ ಸಮಂತಾ ರುತ್ ಪ್ರಭು ಕೂಡ ಕಾಣಿಸಿಕೊಂಡಿದ್ದರು. ಶ್ರೀಲಂಕಾದ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ)ಯ ಸುತ್ತ ಕಥೆಯನ್ನು ಹೆಣೆಯಲಾಗಿತ್ತು. 2021 ಜೂನ್ 4ರಂದು ಎರಡನೇ ಸರಣಿ ಪ್ರಸಾರವಾಯ್ತು. ರಾಜ್ & ಡಿಕೆ ನಿರ್ದೇಶನದ ಈ ಸರಣಿಯ ಮೂರನೇ ಭಾಗ ಈ ವರ್ಷ ಬರುವ ನಿರೀಕ್ಷೆ ಇದೆ. ಒಟ್ಟು 19 ಎಪಿಸೋಡ್‌ ಇರುವ ಈ ಎರಡು ಸರಣಿಯನ್ನು ಅಮೆಜಾನ್ ಪ್ರೈಂನಲ್ಲಿ ನೋಡಬಹುದು.

Salute the Nation The Family Man to Special Ops Your Ultimate Independence Day OTT Watchlist

ರಕ್ಷಕ್ (Rakshak)

2004ರಲ್ಲಿ ಜಮ್ಮು ರೈಲು ನಿಲ್ದಾಣದಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯಲ್ಲಿ ಹಲವಾರು ಜನ ಪ್ರಾಣವನ್ನು ಕಳೆದುಕೊಂಡರು. ಈ ಹೃದಯ ವಿದ್ರಾವಕ ನೈಜ ಕಥೆಯನ್ನಾಧರಿಸಿ ಮಾಡಲಾದ ಚಿತ್ರ ''ರಕ್ಷಕ್''.

ಅಜಯ್ ಭುಯಾನ್ ನಿರ್ದೇಶನದಲ್ಲಿ ಸಿದ್ಧವಾದ ಈ ವೆಬ್ ಸರಣಿಯಲ್ಲಿ ಜನರ ಪ್ರಾಣವನ್ನು ಉಳಿಸಲು ತಮ್ಮ ಪ್ರಾಣವನ್ನೇ ಅರ್ಪಿಸಿದ ಲೆಫ್ಟಿನೆಂಟ್ ತ್ರಿವೇಣಿ ಸಿಂಗ್ ಅವರ ಪಾತ್ರವನ್ನು ವರುಣ್ ಮಿತ್ರಾ ನಿರ್ವಹಿಸಿದ್ದರು. ಎರಡು ಭಾಗಗಳಲ್ಲಿ ಈ ಚಿತ್ರ ಪ್ರದರ್ಶನಗೊಂಡಿದ್ದು ಮೊದಲ ಭಾಗ 2023ರಲ್ಲಿ ಬಿಡುಗಡೆಯಾಗಿದ್ದರೆ ಎರಡನೇ ಭಾಗ 2024ರಲ್ಲಿ ಬಿಡುಗಡೆಯಾಗಿತ್ತು. ಅಮೆಜಾನ್ miniTV ಯಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯ ಇದೆ.

Salute the Nation The Family Man to Special Ops Your Ultimate Independence Day OTT Watchlist

ಅವ್ರೋಧ್: ದಿ ಸೀಜ್ (Avrodh: The Siege)

2016ರಲ್ಲಿ ಪಾಕಿಸ್ತಾನದ ಮೇಲೆ ಭಾರತದ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ ಮೇಲೆ ಇಲ್ಲಿಯವರೆಗೆ ಹಲವು ಚಿತ್ರಗಳು ಬಂದಿವೆ. ವೆಬ್ ಸರಣಿಗಳು ಕೂಡ ಬಂದಿವೆ. ಆ ಪೈಕಿ ''ಅವ್ರೋಧ್ - ದಿ ಸೀಜ್'' ಕೂಡ ಒಂದು. ಶಿವ್ ಅರೂರ್ ಮತ್ತು ರಾಹುಲ್ ಸಿಂಗ್ ಅವರ ''ಇಂಡಿಯಾಸ್ ಮೋಸ್ಟ್ ಫೀಯರ್‌ಲೆಸ್'' ಪುಸ್ತಕವನ್ನು ಆಧರಿಸಿದ ಈ ಸರಣಿ ಅಂದು ನಡೆದ ಕಾರ್ಯಾಚರಣೆ ಮತ್ತು ಅದಕ್ಕೂ ಮುನ್ನ ಮಾಡಲಾದ ತಂತ್ರಗಾರಿಕೆಯ ಮೇಲೆ ಬೆಳಕು ಚೆಲ್ಲುತ್ತೆ.

ರಾಜ್ ಆಚಾರ್ಯ ನಿರ್ದೇಶನದಲ್ಲಿ ಮೂಡಿ ಬಂದ ಈ ವೆಬ್ ಸರಣಿಯ ಮೊದಲ ಭಾಗ 30 ಜುಲೈ 2020ರಲ್ಲಿ ಪ್ರಸಾರವಾದರೆ ಎರಡನೇ ಭಾಗ 23 ಜೂನ್ 2022ರಲ್ಲಿ ಪ್ರಸಾರವಾಗಿತ್ತು. ಮೇಜರ್ ವಿದೀಪ್ ಸಿಂಗ್ ಪಾತ್ರದಲ್ಲಿ ಅಮಿತ್ ಸಾಧ್ ಕಾಣಿಸಿಕೊಂಡಿದ್ದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹೋಲುವ ಪಾತ್ರದಲ್ಲಿ ವಿಕ್ರಮ್ ಗೋಖಲೆ ಕಾಣಿಸಿಕೊಂಡಿದ್ದರು. 23 ರಿಂದ 25 ನಿಮಿಷಗಳ ಎಪಿಸೋಡ್‌ಗಳನ್ನೊಂದಿರುವ ಈ ವೆಬ್ ಸರಣಿಯನ್ನು SonyLIVನಲ್ಲಿ ನೀವು ನೋಡಬಹುದು.

Salute the Nation The Family Man to Special Ops Your Ultimate Independence Day OTT Watchlist

ದಿ ಫರ್ಗಾಟನ್ ಆರ್ಮಿ (The Forgotten Army)

ಸ್ವಾತಂತ್ರ್ಯಕ್ಕಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಭಾರತೀಯ ರಾಷ್ಟ್ರೀಯ ಸೇನೆಯ[INA] ಹೋರಾಟದ ಚಿತ್ರಣವನ್ನು ತೆರೆದಿಡುವ ಚಿತ್ರ ''ದಿ ಫರ್ಗಾಟನ್ ಆರ್ಮಿ''. ಬ್ರಿಟೀಷರ ಪರವಾಗಿ ಎರಡನೇ ವಿಶ್ವಯುದ್ಧದಲ್ಲಿ ಜಪಾನ್ ವಿರುದ್ಧ ಹೋರಾಡಿದ್ದ ಭಾರತೀಯ ಸೇನೆಯೇ ಮುಂದೆ ಸುಭಾಷ್ ಚಂದ್ರ ಭೋಸ್ ನಾಯಕತ್ವದಲ್ಲಿ ಎನ್‌ಐಎ ಎಂಬ ಹೆಸರು ಪಡೆದು ಸ್ವಾತಂತ್ರ್ಯ ಪಡೆಯಲು ದೆಹಲಿಯತ್ತ ಹೆಜ್ಜೆ ಇಟ್ಟಿತ್ತು. ಆದರೆ ಸುಭಾಷ್‌ ಚಂದ್ರ ಭೋಸ್‌ರ ಕಾಲವಾದ ಬಳಿಕ ಈ ಸೇನೆ ಹೇಳ ಹೆಸರಿಲ್ಲದಂತೆ ಆಗಿಬಿಟ್ಟಿತು. ಹಾಗಾಗಿಯೇ ಇತಿಹಾಸ ಮರೆತು ಹೋದ ಈ ಸೇನೆಯ ಕುರಿತಾದ ವೆಬ್ ಸರಣಿಗೆ '' ದಿ ಫರ್ಗಾಟನ್ ಆರ್ಮಿ'' ಎಂದೇ ಹೆಸರಿಡಲಾಗಿದೆ.

ಕಬೀರ್ ಖಾನ್ ನಿರ್ದೇಶನ ಮತ್ತು ನಿರ್ಮಾಣದ ಈ ಚಿತ್ರದಲ್ಲಿ ಸನ್ನಿ ಕೌಶಲ್ ಪ್ರಮುಖ ಪಾತ್ರವನ್ನು ವಹಿಸಿದ್ದು, 30-45 ನಿಮಿಷಗಳಿರುವ 5 ಎಪಿಸೋಡ್‌ಗಳಿರುವ ಈ ಸರಣಿ 24 ಜನವರಿ 2020ರಲ್ಲಿ ಬಿಡುಗಡೆಯಾಗಿತ್ತು. ಈ ವೆಬ್ ಸರಣಿಯು ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಕೇವಲ ಈ ಚಿತ್ರಗಳು ಮಾತ್ರವಲ್ಲ ಇನ್ನು ದೇಶಪ್ರೇಮ ಸಾರುವಂತಹ ಇನ್ನು ಹತ್ತು ಹಲವಾರು ವೆಬ್ ಸೀರೀಸ್‌ಗಳು ಬೇರೆ ಬೇರೆ ಓಟಿಟಿ ವೇದಿಕೆಗಳಲ್ಲಿವೆ. ಕೇವಲ ವೆಬ್ ಸರಣಿ ಮಾತ್ರವಲ್ಲ ದೇಶಪ್ರೇಮ ಬಡಿದೆಬ್ಬಿಸುವ ವಿಕ್ಕಿ ಕೌಶಲ್ ಅಭಿನಯದ ''ಉರಿ; ದಿ ಸರ್ಜಿಕಲ್ ಸ್ಟ್ರೈಕ್''.. ಅಕ್ಷಯ್ ಕುಮಾರ್ ಅಭಿನಯದ ''ಕೇಸರಿ''..''ಗೋಲ್ಡ್'' .. ರಾಣಾ ದಗ್ಗುಬಾಟಿ ಮತ್ತು ಅತುಲ್ ಕುಲಕರ್ಣಿ ಅಭಿನಯದ ''ದಿ ಗಾಜಿ ಅಟ್ಯಾಕ್''.. ಅಲಿಯಾ ಭಟ್ ಅಭಿನಯದ ''ರಾಜಿ''.. ಶಾರುಖ್ ಖಾನ್ ಅಭಿನಯದ ''ಸ್ವದೇಸ್''..''ಚಕ್‌ ದೇ ಇಂಡಿಯಾ'' ಆಮಿರ್ ಖಾನ್ ಅಭಿನಯದ ''ಲಗಾನ್''.. ''ರಂಗ್‌ ದೇ ಬಸಂತಿ''.. ಮಂಗಲ್ ಪಾಂಡೆ..ಅಜಯ್ ದೇವಗನ್ ಅಭಿನಯದ '' ದಿ ಲೆಜೆಂಡ್ ಆಫ್ ಭಗತ್ ಸಿಂಗ್''.. ''ಭುಜ್ ದಿ ಪ್ರೈಡ್ ಆಫ್ ಇಂಡಿಯಾ''.. ''ಮೈದಾನ್'' ಹೀಗೆ ಹಲವಾರು ಚಿತ್ರಗಳು ಕೂಡ ನಾನಾ ಓಟಿಟಿ ವೇದಿಕೆಗಳಲ್ಲಿವೆ.

More from Filmibeat

English summary
Looking for an Independence Day binge? Dive into the action with top patriotic shows and movies like The Family Man, Special Ops, and Avrodh. Find them all on your favorite OTT platforms.
Read more about: filmibeat news bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X