For Quick Alerts
  ALLOW NOTIFICATIONS  
  For Daily Alerts

  ವಿಚ್ಚೇದನದ ಬಳಿಕ 250 ಕೋಟಿ ಜೀವನಾಂಶ ಪಡೆದರೇ ಸಮಂತಾ! ಬೆಡಗಿ ಹೇಳಿದ್ದೇನು?

  |

  ಸಮಂತಾ ಹಾಗೂ ನಾಗ ಚೈತನ್ಯ ಕಳೆದ ವರ್ಷ ಅತಿ ಹೆಚ್ಚು ಚರ್ಚಿತವಾದ ಸಿನಿಮಾ ಜೋಡಿ. ಇದಕ್ಕೆ ಕಾರಣ ಅವರ ವಿಚ್ಛೇಧನ.

  ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇಧನ ಪಡೆಯುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅಚಾನಕ್ಕಾಗಿ ಈ ಜೋಡಿ ವಿಚ್ಛೇದನ ಪಡೆದಾಗ ಅಭಿಮಾನಿಗಳಿಗೆ ಸಹಜವಾಗಿಯೇ ಶಾಕ್ ಆಗಿತ್ತು. ಇವರಿಬ್ಬರು ಪರಸ್ಪರ ವಿಚ್ಛೇಧನ ಪಡೆದು ವರ್ಷವಾಗುತ್ತಾ ಬಂದಿದೆಯಾದರೂ ವಿಚ್ಛೇಧನದ ಬಗ್ಗೆ ಚರ್ಚೆಗಳು ನಿಂತಿಲ್ಲ.

  ಯಶ್ ಧ್ವನಿಗೆ ಮಾರು ಹೋದ ಸಮಂತಾ: ಈಡೇರುತ್ತಾ ಸ್ಯಾಮ್ ಆಸೆ?ಯಶ್ ಧ್ವನಿಗೆ ಮಾರು ಹೋದ ಸಮಂತಾ: ಈಡೇರುತ್ತಾ ಸ್ಯಾಮ್ ಆಸೆ?

  ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆದಾಗ ಹಲವರು ಹಲವು ಸುದ್ದಿಗಳನ್ನು ಹರಡಿದರು. ವಿಚ್ಛೇಧನಕ್ಕೆ ಸಮಂತಾರೆ ಕಾರಣ ಎನ್ನಲಾಯಿತು. ಸಮಂತಾಗೆ ಮಕ್ಕಳು ಬೇಕಿರಲಿಲ್ಲ ಅದಕ್ಕೆ ವಿಚ್ಛದನ ಪಡೆದರು ಎಂದರು. ವಿಚ್ಛೇದನದ ಬಳಿಕ ಸಮಂತಾ 250 ಕೋಟಿ ಜೀವನಾಂಶ ಪಡೆದರು ಎಂಬ ಸುದ್ದಿಯೂ ಹರಿದಾಡಿತು. ಈ ಬಗ್ಗೆ ನಟಿ ಸಮಂತಾ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

  250 ಕೋಟಿ ಪಡೆದಿದ್ದೇನೆ ಎಂದು ಬರೆದಿದ್ದರು: ಸಮಂತಾ

  250 ಕೋಟಿ ಪಡೆದಿದ್ದೇನೆ ಎಂದು ಬರೆದಿದ್ದರು: ಸಮಂತಾ

  ನಿಮ್ಮ ಬಗ್ಗೆ ನೀವು ಓದಿದ ಅತ್ಯಂತ ಕೆಟ್ಟ ಸುದ್ದಿ ಅಥವಾ ನಿಮಗೆ ಬಹಳ ಬೇಸರ ತರಿಸಿದ ಸುಳ್ಳು ಸುದ್ದಿ ಯಾವುದು ಎಂದು ಕರಣ್ ಜೋಹರ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ನಟಿ ಸಮಂತಾ, ''ನಾನು ವಿಚ್ಛೇದನದ ಬಳಿಕ ಜೀವನಾಂಶವಾಗಿ 250 ಕೋಟಿ ಹಣ ಪಡೆದಿದ್ದೇನೆ ಎಂದು ಬರೆದಿದ್ದರು. ಇನ್ನೂ ಸಾಕಷ್ಟು ವಿಷಯಗಳನ್ನು ಬರೆದಿದ್ದು, ನನ್ನ ವಿರುದ್ಧ ಬರೆದ ವಿಷಯಗಳನ್ನು ಎಬಿಸಿಡಿ ಎಂದು ಆರ್ಡರ್‌ನಲ್ಲಿ ಬೇಕಾದರು ಹೇಳಬಹುದು ಅಷ್ಟು ವಿಷಯಗಳನ್ನು ಬರೆದಿದ್ದರು'' ಎಂದಿದ್ದಾರೆ ಸಮಂತಾ.

  ಕಾಫಿ ವಿತ್ ಕರಣ್‌ನಲ್ಲಿ ತಮ್ಮ ವಿಚ್ಛೇಧನದ ಬಗ್ಗೆ ಮಾತನಾಡಿದ ಸಮಂತಾಕಾಫಿ ವಿತ್ ಕರಣ್‌ನಲ್ಲಿ ತಮ್ಮ ವಿಚ್ಛೇಧನದ ಬಗ್ಗೆ ಮಾತನಾಡಿದ ಸಮಂತಾ

  ಹಲವು ಗಾಸಿಪ್‌ಗಳನ್ನು ಬರೆದರು: ಸಮಂತಾ

  ಹಲವು ಗಾಸಿಪ್‌ಗಳನ್ನು ಬರೆದರು: ಸಮಂತಾ

  ''ಆದರೆ ಜೀವನಾಂಶ ಪಡೆಯುವಂತಿಲ್ಲ ಎಂದು ಮೊದಲೇ ನಿಶ್ಚಯವಾಗಿತ್ತು ಹಾಗಾಗಿ ಜೀವನಾಂಶ ಪಡೆದಿಲ್ಲ ಎಂಬುದು ಆಮೇಲೆ ಖಾತ್ರಿಯಾಯಿತು. ಆ ನಂತರವೂ ಬೇರೆ ಏನೇನನ್ನೋ ಬರೆದರು. ನಾನು ಕೆಲವಕ್ಕೆ ಸ್ಪಷ್ಟನೆಯನ್ನೂ ಕೊಟ್ಟೆ. ಆದರೆ ಆ ಸಮಯದಲ್ಲಿ ಸಾಕಷ್ಟು ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆಯಲಾಯ್ತು'' ಎಂದು ಸಮಂತಾ ಬೇಸರಸಿಕೊಂಡಿದ್ದಾರೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಫ್ಯಾಕ್ಟ್ ಹೆಸರಿನಲ್ಲಿ ಗಾಳಿ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ ಅದು ಬಹಳ ಬೇಸರ ತರಿಸುತ್ತದೆ ಎಂದೂ ಸಹ ಸಮಂತಾ ಅದೇ ಶೋನಲ್ಲಿ ಹೇಳಿದ್ದಾರೆ.

  ಸಮಂತಾ-ನಾಗ ಚೈತನ್ಯ ನಡುವೆ ಕೊಲ್ಲುವಷ್ಟು ಕೋಪ!

  ಸಮಂತಾ-ನಾಗ ಚೈತನ್ಯ ನಡುವೆ ಕೊಲ್ಲುವಷ್ಟು ಕೋಪ!

  ತಮ್ಮ ಹಾಗೂ ನಾಗ ಚೈತನ್ಯ ನಡುವಿನ ಸಂಬಂಧದ ಬಗ್ಗೆ ಮಾತನಾಡುತ್ತಾ, ''ಚೂಪಾದ ವಸ್ತುಗಳಿರುವ ಕೋಣೆಯಲ್ಲಿ ನಮ್ಮಿಬ್ಬರನ್ನು ಬಿಡುವಂತಿಲ್ಲ, ಬಿಟ್ಟರೆ ಆ ಚೂಪಾದ ವಸ್ತುಗಳನ್ನು ಬಚ್ಚಿಡಬೇಕು'' ಎಂದಿದ್ದಾರೆ. ಆ ಮೂಲಕ ಇಬ್ಬರ ನಡುವೆ ಬಹಳ ಗಂಭೀರವಾದ ಜಗಳವೇ ಆಗಿ, ಗಂಭೀರ ವಿಷಯಕ್ಕೆ ಇಬ್ಬರು ದೂರಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಆದರೆ ಈ ಸಿಟ್ಟು ಕಾಲ ಸರಿದಂತೆ ಕಡಿಮೆ ಆಗಬಹುದು ಎಂದು ಸಮಂತಾ ಹೇಳಿದ್ದಾರೆ.

  ಹಲವು ವಿಷಯ ಮಾತನಾಡಿದ್ದಾರೆ ಸಮಂತಾ

  ಹಲವು ವಿಷಯ ಮಾತನಾಡಿದ್ದಾರೆ ಸಮಂತಾ

  ಕಾಫಿ ವಿತ್ ಕರಣ್ ಶೋನಲ್ಲಿ ತಮ್ಮ ಖಾಸಗಿ ಜೀವನದ ಬಗ್ಗೆ ಹಲವು ವಿಷಯಗಳನ್ನು ಕರಣ್ ಜೋಹರ್ ಮಾತನಾಡಿದ್ದಾರೆ. ''ನಿಮ್ಮ ಹಸ್ಬೆಂಡ್‌ನಿಂದ ದೂರಾಗಿದ್ದು ನಿಮಗೆ ಹೇಗನ್ನಿಸಿತು? ಎಂದು ಕರಣ್, ಸಮಂತಾರನ್ನು ಪ್ರಶ್ನೆ ಮಾಡಿದ್ದಾರೆ. ಆಗ ಸಮಂತಾ 'ಹಸ್ಬೆಂಡ್ ಅಲ್ಲ ಎಕ್ಸ್ ಹಸ್ಬೆಂಡ್' ಎನ್ನುತ್ತಾರೆ. ನಂತರ ಕರಣ್ ತಮ್ಮ ಪ್ರಶ್ನೆಯನ್ನು ಸರಿ ಮಾಡಿಕೊಳ್ಳುತ್ತಾರೆ. ಅದೊಂದು ಬಹಳ ಕಷ್ಟದ ನಿರ್ಣಯವಾಗಿತ್ತು, ಸುಲಭವಾಗಿರಲಿಲ್ಲ. ಈಗ ನಿಧಾನಕ್ಕೆ ಅದರಿಂದ ಹೊರಗೆ ಬರುತ್ತಿದ್ದೇನೆ. ಈಗ ನಾನು ಈ ಹಿಂದಿಗಿಂತಲೂ ಹೆಚ್ಚು ಗಟ್ಟಿಯಾಗಿದ್ದೇನೆ. ಇನ್ನಷ್ಟು ಗಟ್ಟಿಯಾಗುತ್ತಿದ್ದೇನೆ, ಜೀವನ ಸಹ ಸುಧಾರಣೆ ಆಗುತ್ತಿದೆ'' ಎಂದಿದ್ದಾರೆ.

  English summary
  Samantha clarifies did she took 250 crore rs alimony after her divorce with Naga Chaitanya. She said many false news written about her.
  Saturday, July 23, 2022, 9:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X