ಕರಣ್ ಜೋಹರ್ ಶೋನಲ್ಲಿ ಮದುವೆಯನ್ನು 'ಕೆಜಿಎಫ್'ಗೆ ಹೋಲಿಸಿದ ಸಮಂತಾ! ಕಾರಣ?

ನಟಿ ಸಮಂತಾ-ನಾಗ ಚೈತನ್ಯ ವಿಹಾವ ವಿಚ್ಛೇಧನ ಅವರ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ದಕ್ಷಿಣ ಭಾರತದ ಅತ್ಯಂತ ಕ್ಯೂಟ್ ಜೋಡಿ ಎಂದೇ ಹೆಸರಾಗಿದ್ದ ಈ ಜೋಡಿ ಯಾವುದೇ ಸಣ್ಣ ಸುಳಿವೂ ಸಹ ಇಲ್ಲದೆ ಒಮ್ಮೆಲೆ ವಿಚ್ಛೇಧನ ಘೋಷಿಸಿತು.

ಇವರಿಬ್ಬರ ವಿಚ್ಛೇಧನವಾಗಿ ಒಂದು ವರ್ಷಕ್ಕೆ ಇನ್ನೆರಡು ತಿಂಗಳಷ್ಟೆ ಬಾಕಿ ಇದೆ. ಇಷ್ಟು ಸಮಯವಾದರೂ ವಿಚ್ಛೇಧನ ಕುರಿತಾದ ಚರ್ಚೆ ಇನ್ನೂ ಜಾರಿಯಲ್ಲಿದೆ.

ಈಗಲೂ ಸಮಂತಾ-ನಾಗಚೈತನ್ಯರ ವಿಚ್ಛೇಧನ ಅವರ ಈ ಹಿಂದಿನ ಸಂಬಂಧದ ಬಗ್ಗೆ ಮಾತುಗಳು ಆಗಾಗ್ಗೆ ಹರಿದಾಡುತ್ತಲೇ ಇರುತ್ತವೆ. ಸಮಂತಾ ಹಾಗೂ ನಾಗ ಚೈತನ್ಯ ಪರಸ್ಪರ ವಿಚ್ಛೇಧನ ಘೋಷಿಸಿದರಾದರು ಅದಕ್ಕೆ ಕಾರಣವನ್ನು ಈವರೆಗೆ ಹೇಳಿಲ್ಲ. ಇದೀಗ ಸಮಂತಾ, ಹಿಂದಿಯ ಜನಪ್ರಿಯ ಟಾಕ್ ಶೋ ಕಾಫಿ ವಿತ್ ಕರಣ್‌ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದು, ಅಲ್ಲಿ 'ಅತೃಪ್ತ ಮದುವೆ' ಅಥವಾ ಅಸಂತುಷ್ಟ ಮದುವೆಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಭಾರತದಲ್ಲಿ ಮದುವೆಗಳು ಹೀಗೆ ವೈಫಲ್ಯತೆ ಅನುಭವಿಸುತ್ತಿರುವದಕ್ಕೆ ಕರಣ್ ಜೋಹರ್ ಕಾರಣ ಎಂದಿದ್ದಾರೆ.

ಕಾಫಿ ವಿತ್ ಕರಣ್‌ನಲ್ಲಿ ಸಮಂತಾ ಅತಿಥಿ

ಕಾಫಿ ವಿತ್ ಕರಣ್‌ನಲ್ಲಿ ಸಮಂತಾ ಅತಿಥಿ

ಈ ಬಾರಿಯ 'ಕಾಫಿ ವಿತ್ ಕರಣ್‌' ನಲ್ಲಿ ನಟಿ ಸಮಂತಾ ಅತಿಥಿಯಾಗಿ ಎಪಿಸೋಡ್ ಒಂದರಲ್ಲಿ ಭಾಗವಹಿಸಿದ್ದು, ಈಗ ಬಿಡುಗಡೆ ಆಗಿರುವ ಕಾರ್ಯಕ್ರದ ಟ್ರೈಲರ್‌ನಲ್ಲಿ ಸಮಂತಾರ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ. ಟ್ರೈಲರ್‌ನಲ್ಲಿ ಕಂಡು ಬರುತ್ತಿರುವಂತೆ ನಟಿ ಸಮಂತಾ, ಬಾಲಿವುಡ್‌ನ ಸ್ಟಾರ್ ನಟ ಅಕ್ಷಯ್ ಕುಮಾರ್ ಜೊತೆ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಕರಣ್ ಜೋಹರ್‌ರ ಪ್ರಶ್ನೆಗಳಿಗೆ ಕಾನ್ಫಿಡೆಂಟ್ ಆಗಿ ಉತ್ತರ ನೀಡಿದ್ದಾರೆ.

ಮದುವೆ ಎಂಬುದು 'ಕೆಜಿಎಫ್' ಇದ್ದಂತೆ: ಸಮಂತಾ

ಮದುವೆ ಎಂಬುದು 'ಕೆಜಿಎಫ್' ಇದ್ದಂತೆ: ಸಮಂತಾ

ಶೋನಲ್ಲಿ ಕರಣ್, ಮದುವೆ ಬಗ್ಗೆ ಕೇಳಿರುವ ಪ್ರಶ್ನೆಗಳಿಗೆ ಸಮಂತಾ ಉತ್ತರಿಸಿರುವ ಸಣ್ಣ ತುಣುಕನ್ನು ಟ್ರೈಲರ್‌ನಲ್ಲಿ ಸೇರಿಸಲಾಗಿದೆ. ಭಾರತದಲ್ಲಿ ಅಸಂತುಷ್ಟ ಮದುವೆಗಳಿಗೆ (ಅನ್‌ಹ್ಯಾಪಿ ಮ್ಯಾರೇಜಸ್)ಗೆ ನೀವೇ ಕಾರಣ ಎಂದು ಕರಣ್ ಜೋಹರ್ ಅನ್ನು ದೂರಿದ್ದಾರೆ ಸಮಂತಾ. ಮದುವೆಗಳು 'ಕೆ3ಜಿ' (ಕಭಿ ಖುಷಿ ಕಭಿ ಗಮ್) ರೀತಿಯಲ್ಲಿರುತ್ತವೆ ಎಂದು ತೋರಿಸಿದ್ದೀರಿ. ಆದರೆ ನಿಜ ಜೀವನದಲ್ಲಿ ಅವು 'ಕೆಜಿಎಫ್' ಆಗಿರುತ್ತವೆ ಎಂದಿದ್ದಾರೆ ಸಮಂತಾ.

'ಕೆಜಿಎಫ್' ಅನ್ನು ನೆನಪಿಸಿಕೊಂಡರೇಕೆ ಸಮಂತಾ

'ಕೆಜಿಎಫ್' ಅನ್ನು ನೆನಪಿಸಿಕೊಂಡರೇಕೆ ಸಮಂತಾ

'ಕಭಿ ಖುಷಿ ಕಭಿ ಗಮ್' ಕರಣ್ ಜೋಹರ್‌ ಸಿನಿಮಾನೇ ಆಗಿದ್ದು, ಅದರಲ್ಲಿ ಸುಂದರ ಕುಟುಂಬ, ಸಂತೋಶವೇ ತುಂಬಿರುವ ದಂಪತಿ ಇನ್ನಿತರೆಗಳನ್ನು ತೋರಿಸಲಾಗಿದೆ. ಹಾಗಾಗಿಯೇ ಸಮಂತಾ ಆ ಸಿನಿಮಾದ ಉದಾಹರಣೆ ತೆಗೆದುಕೊಂಡಿದ್ದಾರೆ. ನಮ್ಮ ಜೀವನ ಸಹ 'ಕೆ3ಜಿ' ರೀತಿ ಇರುತ್ತದೆಂದು ಮದುವೆ ಆಗುತ್ತಾರೆ, ಆದರೆ ಆ ನಂತರ ಗೊತ್ತಾಗುತ್ತದೆ ಮದುವೆ ಎಂಬುದು 'ಕೆಜಿಎಫ್' ಮಾದರಿ ಎಂದು. ಅಂದರೆ ಜಗಳ, ಮುನಿಸು, ಕಾದಾಟ ಎಲ್ಲವೂ ಇರುತ್ತದೆ ಎಂಬರ್ಥದಲ್ಲಿ ಸಮಂತಾ ಈ ಮಾತು ಹೇಳಿದ್ದಾರೆ.

ಶೋಭಿತಾ ಅನ್ನು ವಿವಾಹವಾಗಲಿರುವ ನಾಗ ಚೈತನ್ಯ!

ಶೋಭಿತಾ ಅನ್ನು ವಿವಾಹವಾಗಲಿರುವ ನಾಗ ಚೈತನ್ಯ!

ಸಮಂತಾ ಹಾಗೂ ನಾಗಚೈತನ್ಯ ಸತತ ಹತ್ತು ವರ್ಷ ಜೊತೆಗಿದ್ದರು. 2017 ರಲ್ಲಿ ವಿವಾಹವಾಗಿದ್ದ ಇವರು ಅದಕ್ಕೂ ಮುನ್ನ ಸುಮಾರು ಆರು ವರ್ಷ ಪ್ರೀತಿಸುತ್ತಿದ್ದರು. ಅಂತಿಮವಾಗಿ 2021 ರಲ್ಲಿ ವಿಚ್ಛೇಧನ ಪಡೆದುಕೊಂಡು ದೂರಾದರು. ಇವರಿಬ್ಬರ ವಿಚ್ಛೇಧನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಮಂತಾರನ್ನು ದೋಷಿ ಎಂಬಂತೆ ಟೀಕಿಸಲಾಯಿತು. ಸತತ ಮೂದಲಿಕೆಗೆ ಗುರಿಪಡಿಸಲಾಯಿತು. ಆದರೆ ಸಮಂತಾ ಶಾಂತ ರೀತಿಯಿಂದ ಉತ್ತರಗಳನ್ನು ನೀಡಿದರು. ಇದೀಗ ಪೂರ್ಣವಾಗಿ ತಮ್ಮ ವೃತ್ತಿಯ ಬಗ್ಗೆ ಗಮನ ವಹಿಸಿರುವ ಸಮಂತಾ ಹಲವು ಭಿನ್ನ-ಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನಾಗ ಚೈತನ್ಯ, ಶೋಭಿತಾ ಧುಲಿಪಾಲ ಅನ್ನು ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Actress Samantha compares marriage to KGF movie in Koffee with Karan show. She said Karan Johar is the reason for unhappy marriages in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X