For Quick Alerts
  ALLOW NOTIFICATIONS  
  For Daily Alerts

  ಸಮಂತಾ ವಿಡಿಯೋ ನೋಡಿ ಅವಾಕ್ಕಾದ ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್

  |

  ನಟಿ ಸಮಂತಾ ಅಕ್ಕಿನೇನಿ ಈಗ ಟಾಕ್ ಆಫ್ ಟೌನ್. 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿ ನೋಡಿದವರೆಲ್ಲ ಸಮಂತಾ ನಟನೆಗೆ ಮಾರು ಹೋಗಿದ್ದಾರೆ. ಮನೋಜ್ ತಿವಾರಿಗಿಂತಲೂ ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ ಸಮಂತಾ ಅಕ್ಕಿನೇನಿ.

  ರೆಬೆಲ್ ಶ್ರೀಲಂಕನ್ ತಮಿಳು ಯುವತಿ 'ರಾಜಿ'ಯಾಗಿ ಮಿಂಚಿ ಮೀರಿ ಹೋಗಿದ್ದಾರೆ ಸಮಂತಾ. ಮೈಯೆಲ್ಲ ದ್ವೇಷವೇ ತುಂಬಿಕೊಂಡಿರುವ ಯುವತಿಯ ಪಾತ್ರದಲ್ಲಿ ಸಮಂತಾ ಅವರದ್ದು ಅದ್ಭುತವಾದ ನಟನೆ.

  ನಟನೆ ಮಾತ್ರವಲ್ಲ ಸಮಂತಾ ಅದ್ಭುತವಾದ ಆಕ್ಷನ್ ದೃಶ್ಯಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಸ್ಟಂಟ್‌ಗಳನ್ನು ಸಮಂತಾ ವೆಬ್ ಸರಣಿಯಲ್ಲಿ ಮಾಡಿದ್ದಾರೆ. ವಿಶೇಷವೆಂದರೆ ಇದಕ್ಕೆಲ್ಲ ಅವರು ಡ್ಯೂಪ್ ಬಳಸಿಲ್ಲ. ಶೂಟಿಂಗ್‌ನಲ್ಲಿ ತಾವೇ ಮಾಡಿರುವ ಸ್ಟಂಟ್ ಒಂದರ ವಿಡಿಯೋವನ್ನು ಸಮಂತಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿರುವ ರಶ್ಮಿಕಾ ಮಂದಣ್ಣ, ಕೀರ್ತಿ ಸುರೇಶ್‌ ಅವರುಗಳು ಅವಾಕ್ಕಾಗಿದ್ದಾರೆ.

  ಸ್ಟಂಟ್ ಮಾಡಿರುವ ವಿಡಿಯೋ ಹಂಚಿಕೊಂಡ ಸಮಂತಾ

  ವೆಬ್ ಸರಣಿಯಲ್ಲಿ ಟಾಸ್ಕ್ ಫೋರ್ಸ್‌ನವರು ಸಮಂತಾ ಹಿಂದೆ ಬಿದ್ದಿರುವ ಚೇಸಿಂಗ್ ದೃಶ್ಯವೊಂದಿದೆ ಆ ದೃಶ್ಯವನ್ನು ಚಿತ್ರೀಕರಣ ಮಾಡಬೇಕಾದರೆ ತೆಗೆದ ವಿಡಿಯೋ ಒಂದನ್ನು ಸಮಂತಾ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಮಂತಾ ತಮಗಿಂತ ಎರಡು ಪಟ್ಟು ಬಲಶಾಲಿಯೂ, ಬೃಹತ್‌ಕಾಯನೂ ಆದ ವ್ಯಕ್ತಿಯನ್ನು ಕಾಲಿನಿಂದ ಬಳಸಿ ಉರುಳಿಸಿ ಬಿಸಾಡುತ್ತಾರೆ. ಇದಕ್ಕೆ ಯಾವುದೇ ಡ್ಯೂಪ್ ಬಳಸಿಲ್ಲ ಸಮಂತಾ.

  ತರಬೇತುದಾರನಿಗೆ ಧನ್ಯವಾದ ತಿಳಿಸಿರುವ ಸಮಂತಾ

  ತರಬೇತುದಾರನಿಗೆ ಧನ್ಯವಾದ ತಿಳಿಸಿರುವ ಸಮಂತಾ

  ವಿಡಿಯೋ ಹಂಚಿಕೊಂಡಿರುವ ಸಮಂತಾ, ನನ್ನನ್ನು ತರಬೇತಿಗೊಳಿಸಿದ ಯಾನ್ನಿಕ್‌ಬೆನ್‌ಗೆ ಧನ್ಯವಾದಗಳು. ಎಲ್ಲ ಸ್ಟಂಟ್ಸ್‌ಗಳನ್ನು ನಾನೇ ಮಾಡುವಂತೆ ಮಾಡಿದಿರಿ, ಆ ಧೈರ್ಯ ಮೂಡಿಸಿದ್ದಕ್ಕೆ ನಿಮಗೆ ಋಣಿ. ವಿಪರೀತ ಮೈ-ಕೈ ನೋವು ಇದ್ದರೂ ನಾನು ಆಕ್ಷನ್‌ ದೃಶ್ಯಗಳಲ್ಲಿ ಪಾಲ್ಗೊಂಡೆ. ನೋವು ನಿರೋಧಕ ಮಾತ್ರೆಗಳಿಗೂ ಧನ್ಯವಾಗಳು ಎಂದಿದ್ದಾರೆ ಸಮಂತಾ.

  ಭಯವಾದರೂ ಕಟ್ಟದಿಂದ ಧುಮುಕಿದೆ: ಸಮಂತಾ

  ಭಯವಾದರೂ ಕಟ್ಟದಿಂದ ಧುಮುಕಿದೆ: ಸಮಂತಾ

  ಮುಂದುವರೆಸಿ, 'ನನಗೆ ಎತ್ತರದ ಪ್ರದೇಶಗಳೆಂದರೆ ಭಯ ಆದರೂ ಸಹ ನಾನು ಆ ಕಟ್ಟಡದ ಮೇಲಿನಿಂದ ಕೆಳಗೆ ಹಾರಿದೆ, ನೀವು ನನ್ನ ರಕ್ಷಣೆಗೆ ಇದ್ದೀರೆಂಬ ಕಾರಣಕ್ಕೆ ನಾನು ಆ ಸಾಹಸ ಮಾಡಿದೆ ಎಂದಿದ್ದಾರೆ ಸಮಂತಾ. ವೆಬ್ ಸರಣಿಯಲ್ಲಿ ಸಾಕಷ್ಟು ಆಕ್ಷನ್‌ ದೃಶ್ಯಗಳಿದ್ದು ಸಂಮತಾ ಅದ್ಭುತವಾಗಿ ಆಕ್ಷನ್‌ ದೃಶ್ಯಗಳಲ್ಲಿ ನಟಿಸಿದ್ದಾರೆ. ಹಲವು ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿದ್ದಾರೆ.

  ವಿಡಿಯೋ ನೋಡಿ ಶಾಕ್ ಆದ ನಟಿಯರು

  ವಿಡಿಯೋ ನೋಡಿ ಶಾಕ್ ಆದ ನಟಿಯರು

  ಸಮಂತಾ ಹಂಚಿಕೊಂಡಿರುವ ವಿಡಿಯೋಕ್ಕೆ ಕಮೆಂಟ್ ಮಾಡಿರುವ ರಶ್ಮಿಕಾ ಮಂದಣ್ಣ, 'ಅದ್ಭುತ' ಎಂದು ಬೆಂಕಿಯ ಇಮೋಜಿ ಹಾಕಿದ್ದಾರೆ. ಕೀರ್ತಿ ಸುರೇಶ್ ಸಹ ಪ್ರತಿಕ್ರಿಯಿಸಿದ್ದು, 'ಅತ್ಯದ್ಭುತ' ಎಂದಿದ್ದಾರೆ. ನಟಿ ಅನುಪಮಾ ಪರಮೇಶ್ವರನ್ ಸಹ ಕಮೆಂಟಿಸಿದ್ದು, ಬೆಂಕಿ ಇಮೋಜಿಗಳನ್ನು ಹಾಕಿದ್ದಾರೆ. ನಟಿ ರಾಕುಲ್ ಸಹ ಕಮೆಂಟ್ ಮಾಡಿದ್ದು, 'ಇದು ಅತ್ಯದ್ಭುತ' ಎಂದಿದ್ದಾರೆ. ಇನ್ನೂ ಹಲವಾರು ನಟಿಯರು ಸಮಂತಾ ಸ್ಟಂಟ್ ವಿಡಿಯೋ ನೋಡಿ ಅವಾಕ್ಕಾಗಿದ್ದಾರೆ.

  English summary
  Actress Samantha performed stunts her own in The Family Man 2. She posted a video of her doing stunt. Actress Rashmika, Keerthi, Rakul were were shocked seeing by that.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X