For Quick Alerts
  ALLOW NOTIFICATIONS  
  For Daily Alerts

  ಕಾಫಿ ವಿತ್ ಕರಣ್‌ನಲ್ಲಿ ತಮ್ಮ ವಿಚ್ಛೇಧನದ ಬಗ್ಗೆ ಮಾತನಾಡಿದ ಸಮಂತಾ

  |

  ನಟಿ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇಧನದ ಚರ್ಚೆಗಳು ಇಂದಿಗೂ ನಿಂತಿಲ್ಲ. ಇಬ್ಬರೂ ತಮ್ಮ ವಿಚ್ಛೇಧನ ಘೋಷಿಸಿ ವರ್ಷವಾಗುತ್ತಾ ಬಂದಿದೆಯಾದರೂ ಆಗೊಮ್ಮೆ-ಈಗೊಮ್ಮೆ ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ.

  ವಿಚ್ಛೇಧನ ಪಡೆದು ಒಂದು ವರ್ಷವಾದರೂ ಸಹ ಈ ವರೆಗೆ ನಟಿ ಸಮಂತಾ ತಮ್ಮ ವಿಚ್ಛೇಧನದ ಕುರಿತಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಇದೇ ಮೊದಲ ಬಾರಿಗೆ ನಟಿ ಸಮಂತಾ ಈ ಬಗ್ಗೆ ಮಾತನಾಡಿದ್ದಾರೆ. ಅದೂ 'ಕಾಫಿ ವಿತ್ ಕರಣ್' ಶೋನಲ್ಲಿ.

  ಉರ್ಕೊಳ್ಳೋರ್ ಉರ್ಕೊಳ್ಳಲಿ: ಅಕ್ಷಯ್ ಕುಮಾರ್ ತೆಕ್ಕೆಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಮಂತಾ!ಉರ್ಕೊಳ್ಳೋರ್ ಉರ್ಕೊಳ್ಳಲಿ: ಅಕ್ಷಯ್ ಕುಮಾರ್ ತೆಕ್ಕೆಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಮಂತಾ!

  'ಕಾಫಿ ವಿತ್ ಕರಣ್' ಶೋನಲ್ಲಿ ನಿರೂಪಕ ಕರಣ್, ಸಾಮಾನ್ಯವಾಗಿ ನಟ-ನಟಿಯರ ಖಾಸಗಿ ಬದುಕಿನ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ನಟಿ ಸಮಂತಾ ಹಾಗೂ ಅಕ್ಷಯ್ ಕುಮಾರ್ ಒಟ್ಟಾಗಿ 'ಕಾಫಿ ವಿತ್ ಕರಣ್‌' ಶೋಗೆ ಆಗಮಿಸಿದ್ದು, ಎಪಿಸೋಡ್ ಈಗಾಗಲೇ ಪ್ರಸಾರವಾಗಿದೆ. ಈ ಶೋನಲ್ಲಿ ನಟಿ ಸಮಂತಾ ತಮ್ಮ ವಿಚ್ಛೇಧನದ ವಿಷಯವಾಗಿ ಮಾತನಾಡಿದ್ದಾರೆ.

  ಹಸ್ಬೆಂಡ್ ಅಲ್ಲ ಎಕ್ಸ್‌ ಹಸ್ಬೆಂಡ್: ಸಮಂತಾ

  ಹಸ್ಬೆಂಡ್ ಅಲ್ಲ ಎಕ್ಸ್‌ ಹಸ್ಬೆಂಡ್: ಸಮಂತಾ

  ನಿಮ್ಮ ಹಸ್ಬೆಂಡ್‌ನಿಂದ ದೂರಾಗಿದ್ದು ನಿಮಗೆ ಹೇಗನ್ನಿಸಿತು? ಎಂದು ಕರಣ್, ಸಮಂತಾರನ್ನು ಪ್ರಶ್ನೆ ಮಾಡಿದ್ದಾರೆ. ಆಗ ಸಮಂತಾ 'ಹಸ್ಬೆಂಡ್ ಅಲ್ಲ ಎಕ್ಸ್ ಹಸ್ಬೆಂಡ್' ಎನ್ನುತ್ತಾರೆ. ನಂತರ ಕರಣ್ ತಮ್ಮ ಪ್ರಶ್ನೆಯನ್ನು ಸರಿ ಮಾಡಿಕೊಳ್ಳುತ್ತಾರೆ. ಅದೊಂದು ಬಹಳ ಕಷ್ಟದ ನಿರ್ಣಯವಾಗಿತ್ತು, ಸುಲಭವಾಗಿರಲಿಲ್ಲ. ಈಗ ನಿಧಾನಕ್ಕೆ ಅದರಿಂದ ಹೊರಗೆ ಬರುತ್ತಿದ್ದೇನೆ'' ಎಂದಿದ್ದಾರೆ.

  ಕರಣ್ ಜೋಹರ್ 'ಕಾಫಿ ವಿಥ್ ಕರಣ್' ಶೋಗೆ ಸಮಂತಾ ಕರೆದಿದ್ದು ಯಾಕೆ? ಏನಂತಿದೆ ಟಾಲಿವುಡ್?ಕರಣ್ ಜೋಹರ್ 'ಕಾಫಿ ವಿಥ್ ಕರಣ್' ಶೋಗೆ ಸಮಂತಾ ಕರೆದಿದ್ದು ಯಾಕೆ? ಏನಂತಿದೆ ಟಾಲಿವುಡ್?

  ಹಿಂದೆಂದಿಗಿಂತಲೂ ಗಟ್ಟಿಯಾಗಿದ್ದೇನೆ: ಸಮಂತಾ

  ಹಿಂದೆಂದಿಗಿಂತಲೂ ಗಟ್ಟಿಯಾಗಿದ್ದೇನೆ: ಸಮಂತಾ

  ''ಈಗ ನಾನು ಈ ಹಿಂದಿಗಿಂತಲೂ ಹೆಚ್ಚು ಗಟ್ಟಿಯಾಗಿದ್ದೇನೆ. ಇನ್ನಷ್ಟು ಗಟ್ಟಿಯಾಗುತ್ತಿದ್ದೇನೆ, ಜೀವನ ಸಹ ಸುಧಾರಣೆ ಆಗುತ್ತಿದೆ'' ಎಂದಿರುವ ಸಮಂತಾ, ಪರಸ್ಪರರ ಮೇಲೆ ಸಿಟ್ಟು ಇನ್ನು ಇದೆಯೇ ಅಥವಾ ವಿಚ್ಛೇಧನದ ನಿರ್ಣಯದ ಬಗ್ಗೆ ಬೇಸರ ಇದೆಯೇ? ಎಂಬುದಕ್ಕೆ ಉತ್ತರಿಸಿ, 'ಸಿಟ್ಟು ಇನ್ನೂ ಇದೆ. ರಿಗ್ರೆಟ್ಸ್ ಸಹ ಇದೆ' ಆದರೆ ಎಲ್ಲವೂ ನಿಧಾನಕ್ಕೆ ಕರಗುತ್ತಿದೆ. ನನ್ನ ಜೀವನದಲ್ಲಿ ನಾನು ಬ್ಯುಸಿಯಾಗುತ್ತಿದ್ದೇನೆ. ಖುಷಿಗಳನ್ನು ಕಂಡುಕೊಳ್ಳುತ್ತಿದ್ದೇನೆ'' ಎಂದಿದ್ದಾರೆ.

  ಮತ್ತೆ ಪ್ರೀತಿಸಲು ರೆಡಿಯಿದ್ದಾರಾ ಸಮಂತಾ?

  ಮತ್ತೆ ಪ್ರೀತಿಸಲು ರೆಡಿಯಿದ್ದಾರಾ ಸಮಂತಾ?

  ಕೆಲವು ತರಲೆ ಪ್ರಶ್ನೆಗಳನ್ನು ಸಹ ಕರಣ್ ಜೋಹರ್, ಸಮಂತಾರನ್ನು ಕೇಳಿದ್ದು, ''ನಿಮ್ಮ ಹೃದಯ ಖಾಲಿ ಇದೆಯೇ? ಪ್ರೀತಿಯ ವಿಷಯವಾಗಿ ನೀವು ಒಪನ್‌ ಆಗಿದ್ದೀರಾ?'' ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಖಡಾಖಂಡಿತವಾಗಿ ಉತ್ತರಿಸಿರುವ ಸಮಂತಾ, ಖಂಡಿತ ನನ್ನ ಹೃದಯ ತೆರೆದಿಲ್ಲ ಸದ್ಯಕ್ಕೆ ಅದು ಮುಚ್ಚಿದೆ, ಹೃದಯ ಪ್ರವೇಶಿಸಲು ಬರುವವರಿಗೆ ಅಲ್ಲಿ ನೋ ಎಂಟ್ರಿ ಬೋರ್ಡ್ ಇದೆ, ಅವರು ಯೂ ಟರ್ನ್ ತೆಗೆದುಕೊಳ್ಳಬಹುದು ಎಂದಿದ್ದಾರೆ.

  ವಿಚ್ಛೇಧನಕ್ಕೆ ನಾನು ಕಾರಣ ಬಹಿರಂಗಪಡಿಸಿಲ್ಲ: ಸಮಂತಾ

  ವಿಚ್ಛೇಧನಕ್ಕೆ ನಾನು ಕಾರಣ ಬಹಿರಂಗಪಡಿಸಿಲ್ಲ: ಸಮಂತಾ

  ನಾನು ನನ್ನ ಜೀವನದ ಕೆಲವು ಅಂಶಗಳನ್ನು ಜನರೊಟ್ಟಿಗೆ ಶೇರ್ ಮಾಡಿಕೊಳ್ಳಲು ಇಚ್ಚಿಸುತ್ತೇನೆ, ಹಾಗಾಗಿ ನನ್ನ ದಿನನಿತ್ಯದ ಜೀವನದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತೇನೆ. ಆದರೆ ನಾನು ವಿಚ್ಛೇಧನ ತೆಗೆದುಕೊಂಡಾಗ ನಾನು ಯಾವ ಕಾರಣವನ್ನೂ ನೀಡಿರಲಿಲ್ಲ. ಈಗಲೂ ನೀಡಿಲ್ಲ. ನನ್ನ ಅಭಿಮಾನಿಗಳಿಗೆ ನನ್ನ ಜೀವನದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವ ಹಕ್ಕು ಇದೆ. ಆದರೆ ವಿಚ್ಛೇಧನದ ವಿಷಯದಲ್ಲಿ ನಾನು ಅದನ್ನು ಖಾಸಗಿಯಾಗಿ ಇಟ್ಟಿದ್ದೇನೆ'' ಎಂದಿದ್ದಾರೆ.

  Recommended Video

  Niveditha Gowda ಹೊಸ ಸಾಧನೆಗೆ ಅಭಿಮಾನಿಗಳೆಲ್ಲಾ ಖುಷ್ *Sandalwood | Filmibeat Kannada
  English summary
  Actress Samantha talked about her and Naga Chaithanya's divorce in Koffee with Karan show.
  Friday, July 22, 2022, 14:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X