ಆಲಿಯಾ ಭಟ್ ನಟನೆಯ ಬಹುನಿರೀಕ್ಷೆಯ 'ಗಂಗೂಬಾಯಿ ಕಾಠಿಯಾವಾಡಿ' ಒಟಿಟಿಯಲ್ಲಿ ಬಿಡುಗಡೆ?

ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮತ್ತು ನಟಿ ಆಲಿಯಾ ಭಟ್ ನಟನೆಯ ಬಹುನಿರೀಕ್ಷೆಯ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಬಿಡುಗಡೆಗೆ ಸಿದ್ಧಾವಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಕಳೆದ ವರ್ಷವೇ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಹಾವಳಿಯಿಂದ ಮುಂದಕ್ಕೆ ಹೋಗಿತ್ತು.

ಈ ವರ್ಷ ಜುಲೈ 30ಕ್ಕೆ ಸಿನಿಮಾ ಬಿಡುಗಡೆಯಾಗುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಆದರೀಗ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಕಾರಣ ಈ ವರ್ಷವೂ ಅಂದುಕೊಂಡ ದಿನಾಂಕಕ್ಕೆ ಸಿನಿಮಾ ಬಿಡುಗಡೆಯಾಗುವುದು ಅನುಮಾನ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಆದರೆ ಗಂಗೂಬಾಯಿ ಸಿನಿಮಾವನ್ನು ಅಂದುಕೊಂಡ ದಿನಕ್ಕೆ ಬಿಡುಗಡೆ ಮಾಡಲು ಸಿನಿಮಾತಂಡ ಪ್ರಯತ್ನಿಸುತ್ತಿದೆ. ಚಿತ್ರಮಂದಿರದ ಬದಲಿಗೆ ಒಟಿಟಿಯಲ್ಲಿ ಚಿತ್ರ ರಿಲೀಸ್ ಮಾಡಲು ಸಂಜಯ್ ಲೀಲಾ ಬನ್ಸಾಲಿ ನಿರ್ಧಾರಿಸಿದ್ದಾರಂತೆ. ಜುಲೈ 30ಕ್ಕೆ ಸಿನಿಮಾ ಬಿಡುಗಡೆ ದಿನಾಂಕ ಅನೌನ್ಸ್ ಆಗಿತ್ತು, ಇದೀಗ ಅದೇ ದಿನ ಆನ್‌ಲೈನ್‌ನಲ್ಲಿ ಗಂಗೂಬಾಯಿ ಸಿನಿಮಾ ಬಿಡುಗಡೆ ಮಾಡಲು ಸಿನಿಮಾತಂಡ ನಿರ್ಧರಿಸಿದೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ವೈರಲ್ ಆಗಿದೆ.

Sanjay Leela Bhansali planning to release Gangubai Kathiawadi on OTT

ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳನ್ನು ದೊಡ್ಡ ಪರದೆ ಮೇಲೆ ನೋಡಿ ಆನಂದಿಸುವ ಮಜಾನೇ ಬೇರೆ. ಗಂಗೂಬಾಯಿ ಕಾಠಿಯಾವಾಡಿ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳಲು ಕಾತುರರಾಗಿದ್ದ ಅಭಿಮಾನಿಗಳಿಗೆ ಸಂಜಯ್ ಲೀಲಾ ಬನ್ಸಾಲಿ ಅವರ ಈ ನಿರ್ಧಾರ ಭಾರಿ ನಿರಾಸೆ ಮೂಡಿಸಿದೆ.

ಆದರೆ ಈ ಬಗ್ಗೆ ಸಿನಿಮಾತಂಡ ಅಧಿಕೃತವಾಗಿ ಇನ್ನು ಘೋಷಣೆ ಮಾಡಿಲ್ಲ. ಶೀಘ್ರದಲ್ಲೇ ಈ ಬಗ್ಗೆ ಬಹಿರಂಗ ಪಡಿಸುವ ಸಾಧ್ಯತೆ ಇದೆ. ಸದ್ಯ ಹೆಚ್ಚಾಗುತ್ತಿರುವ ಕೊರೊನಾ ಪರಿಸ್ಥಿತಿ ನೋಡಿದ್ರೆ ಸಿನಿಮಾ ನಿರ್ಮಾಪಕರಿಗೆ ಒಟಿಟಿ ಬಿಟ್ಟರೆ ಬೇರೆ ಮಾರ್ಗವಿಲ್ಲ. ಸರಿಯಾದ ಸಮಯಕ್ಕೆ ಪ್ರೇಕ್ಷಕರಿಗೆ ಸಿನಿಮಾ ತಲುಪಿಸಲು ಒಟಿಟಿ ಮೊರೆಹೋಗುತ್ತಿದ್ದಾರೆ. ಈ ಬಗ್ಗೆ ಸಂಜಯ್ ಲೀಲಾ ಬನ್ಸಾಲಿ ಗಂಭೀರವಾಗಿ ಚಿಂತಿಸಿದ್ದು, ಸದ್ಯದಲ್ಲೇ ಬಹಿರಂಗ ಪಡಿಸಲಿದ್ದಾರೆ.

ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಬರಹಗಾರ ಹುಸೇನ್ ಜೈದಿ ಅವರ ಮಾಫಿಯಾ ಕ್ವೀನ್ ಆಫ್ ಮುಂಬೈನ ರೂಪಾಂತರವಾಗಿದೆ. ನೈಜ ಘಟನೆ ಆಧಾರಿತ ಸಿನಿಮಾವನ್ನು ನೋಡಲು ಪ್ರೇಕ್ಷಕರು ಸಹ ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. ಸದ್ಯ ನಿರ್ದೇಶಕ ಬನ್ಸಾಲಿ ನಿರ್ಧಾರದ ಮೇಲೆ ಅಭಿಮಾನಿಗಳು ಗಮನ ಹರಿಸಿದ್ದಾರೆ.

More from Filmibeat

English summary
Director Sanjay Leela Bhansali planning to release Gangubai Kathiawadi on ott.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X