Sanju Weds Geetha- 2 OTT: ಓಟಿಟಿಗೆ ಬಂತು 'ಸಂಜು ವೆಡ್ಸ್ ಗೀತಾ-2'; ಈಗ್ಲೇ ನೋಡಿ

ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ'-2 ಸಿನಿಮಾ ವರ್ಷದ ಆರಂಭದಲ್ಲೇ ತೆರೆಗೆ ಬಂದಿತ್ತು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಬಳಿಕ 20 ನಿಮಿಷ ಹೊಸ ಫುಟೇಜ್ ಸೇರಿಸಿ ರೀ-ರಿಲೀಸ್ ಮಾಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಈ ರೊಮ್ಯಾಂಟಿಕ್ ಲವ್ ಸ್ಟೋರಿ ಓಟಿಟಿಗೆ ಬಂದಿದೆ.

14 ವರ್ಷಗಳ ಹಿಂದೆ ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ನಟಿಸಿದ್ದ 'ಸಂಜು ವೆಡ್ಸ್ ಗೀತಾ' ಚಿತ್ರ ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ಹಾಡುಗಳನ್ನು ಜನ ಇನ್ನು ಮರೆತ್ತಿಲ್ಲ. ಅದೇ ಟೈಟಲ್‌ನಲ್ಲಿ ಹೊಸ ಕಥೆಯನ್ನು ಈ ಬಾರಿ ನಾಗಶೇಖರ್ ಹೇಳಿದ್ದರು. ಎರಡೂ ಕಥೆಗಳಿಗೆ ಯಾವುದೇ ಸಂಬಂಧವಿಲ್ಲ. ಸಂಕ್ರಾಂತಿ ಹಬ್ಬದ ಬೆನ್ನಲ್ಲೇ ಸಿನಿಮಾ ತೆರೆಗೆ ಬಂದಿತ್ತು. ಆದರೆ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಎಡವಿತ್ತು.

Sanju Weds Geetha 2 Kannada movie Arrives on OTT After Box Office Failure

ರೇಷ್ಮೇ ಬೆಳೆಗಾರರ ಸಂಕಷ್ಟಗಳ ಹಿನ್ನೆಲೆಯಲ್ಲಿ ನಾಗಶೇಖರ್ ಈ ಚಿತ್ರದ ಕಥೆ ಹೇಳಿದ್ದರು. ರೇಷ್ಮೆ ಕೈಮಗ್ಗ ವ್ಯಾಪಾರಿ ಸಂಜು ಹಾಗೂ 'ಮಿಸ್ ಕರ್ನಾಟಕ' ಗೀತಾ ನಡುವೆ ಪ್ರೀತಿ ಹುಟ್ಟುತ್ತದೆ. ಅಷ್ಟಕ್ಕೂ ಅವರಿಬ್ಬರನ್ನು ಒಂದು ರೇಷ್ಮೆ ಸೀರೆ ಹೇಗೆ ಹತ್ತಿರ ಮಾಡುತ್ತದೆ? ಮುಂದೆ ಅವರ ಪ್ರೇಮ್ ಕಹಾನಿ ಏನಾಗುತ್ತದೆ? ಎನ್ನುವುದೇ ಇನ್ನುಳಿದ ಕಥೆ.

ಚಲವಾದಿ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಸಿನಿಮಾ ರೀ-ರಿಲೀಸ್ ವೇಳೆ ಸಣ್ಣ ವಿವಾದವೂ ಸುತ್ತಿಕೊಂಡಿತ್ತು. ಪ್ರಚಾರಕ್ಕೆ ಚಿತ್ರದ ನಾಯಕಿ ರಚಿತಾ ರಾಮ್ ಬರ್ತಿಲ್ಲ ಎಂದು ಚಿತ್ರತಂಡ ಆರೋಪಿಸಿತ್ತು. ಆದರೆ ನಾನು ನನ್ನ ಕೈಲಾದಷ್ಟು ಪ್ರಚಾರ ಮಾಡಿದ್ದೀನಿ. ಈಗ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದೀನಿ. ಹಾಗಾಗಿ ಪ್ರಚಾರಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದು ರಚಿತಾ ಸ್ಪಷ್ಟನೆ ನೀಡಿದ್ದರು.

ಸತ್ಯಾ ಹೆಗಡೆ ಛಾಯಾಗ್ರಹಣ ಹಾಗೂ ಶ್ರೀಧರ್ ಸಂಭ್ರಮ್ ಸಂಗೀತ ಚಿತ್ರಕ್ಕಿದೆ. ಹಿಂದಿನ ಚಿತ್ರಕ್ಕೆ ಹೋಲಿಸಿದರೆ ಈ ಚಿತ್ರದಲ್ಲಿ ಹಾಡುಗಳು ಅಷ್ಟಾಗಿ ಗೆಲ್ಲಲಿಲ್ಲ. ಇನ್ನು ರಚಿತಾ ರಾಮ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಳೆದೊಂದು ತಿಂಗಳಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗುತ್ತಿದೆ. ಕನ್ನಡದ 'ಸು ಫ್ರಂ ಸೋ', ಆನಿಮೇಷನ್ ಸಿನಿಮಾ 'ಮಹಾವತಾರ್ ನರಸಿಂಹ' ಜೊತೆಗೆ ಪರಭಾಷೆಯ ಸಿನಿಮಾಗಳು ಸಖತ್ ಸದ್ದು ಮಾಡ್ತಿವೆ. ಇದರ ನಡುವೆ ಈ ವಾರ ಓಟಿಟಿಗೆ ಇಂಟ್ರೆಸ್ಟಿಂಗ್ ಚಿತ್ರಗಳು ಬಂದಿವೆ.

Sanju Weds Geetha 2 Kannada movie Arrives on OTT After Box Office Failure

ಕನ್ನಡ 2 ಸಿನಿಮಾ ಜೊತೆಗೆ ಒಂದು ವೆಬ್ ಸೀರಿಸ್ ಕೂಡ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಅಮೇಜಾನ್ ಪ್ರೈಂ ವೀಡಿಯೋದಲ್ಲಿ 'ಸಂಜು ವೆಡ್ಸ್ ಗೀತಾ'-2 ಲಭ್ಯವಿದೆ. ಅದೇ ರೀತಿ ಸನ್ ನೆಕ್ಸ್ಟ್‌ನಲ್ಲಿ 'ಕಪಟ ನಾಟಕ ಸೂತ್ರಧಾರಿ' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಇನ್ನು ಜೀ5ನಲ್ಲಿ 'ಶೋಧ' ವೆಬ್ ಸೀರಿಸ್ ರಿಲೀಸ್ ಆಗಿದೆ. ನಿರ್ದೇಶಕ ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ವೆಬ್ ಸೀರಿಸ್ ಇದು. ತಮಿಳಿನ 'ಮಾರೀಸನ್' ಸಿನಿಮಾ ಕನ್ನಡಕ್ಕೆ ಡಬ್ ಆಗಿ ನೆಟ್‌ಫ್ಲಿಕ್ಸ್‌ಗೆ ಬಂದಿದೆ. ಹಾಗಾಗಿ ಕನ್ನಡ ಸಿನಿರಸಿಕರಿಗೆ ಭರ್ಜರಿ ಮನರಂಜನೆ ಸಿಗುತ್ತಿದೆ.

ಬರೋಬ್ಬರಿ 7 ತಿಂಗಳ ಬಳಿಕ 'ಸಂಜು ವೆಡ್ಸ್ ಗೀತಾ-2' ಸಿನಿಮಾ ಓಟಿಟಿಗೆ ಬಂದಿದೆ. ಜೊತೆಗೆ ತಮಿಳು, ತೆಲುಗು, ಹಿಂದಿಯ ಹಿಟ್ ಸಿನಿಮಾಗಳು ಹಾಗೂ ವೆಬ್ ಸೀರಿಸ್‌ಗಳು ಇಂದೇ(ಆಗಸ್ಟ್ 22) ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿವೆ.

More from Filmibeat

English summary
Sanju Weds Geetha 2, starring Rachita Ram, is now streaming on OTT
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X