Sapta Sagaradaache Ello: ಮಧ್ಯರಾತ್ರಿ ಸ್ವೀಟ್ ಶಾಕ್‌ ಕೊಟ್ಟ ರಕ್ಷಿತ್.. ಇನ್ನೊಂದು ಬ್ಯಾಡ್‌ ನ್ಯೂಸ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಸಕ್ಸಸ್ ಕಂಡಿದೆ. ಹೇಮಂತ್ ರಾವ್ ನಿರ್ದೇಶನದ ರೊಮ್ಯಾಂಟಿಕ್ ಎಂಟರ್‌ಟೈನರ್‌ ಸಿನಿಮಾ ಸಿನಿರಸಿಕರ ಮನಗೆದ್ದಿದೆ. 2ನೇ ಭಾಗ ನೋಡೊಕೆ ಪ್ರೇಕ್ಷಕರು ಕಾತರದಿಂದ ಕಾಯುವಂತೆ ಮಾಡಿದ್ದಾರೆ. ತೆಲುಗು ಪ್ರೇಕ್ಷಕರು ಕೂಡ ಮನು ಮುಂದಿನ ಕತೆ ನೋಡಲು ಉತ್ಸುಕರಾಗಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಅಕ್ಟೋಬರ್ 20ಕ್ಕೆ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್- B ತೆರೆಗೆ ಬರಬೇಕಿತ್ತು. 'ಘೋಸ್ಟ್', 'ಲಿಯೋ' ರೀತಿಯ ದೊಡ್ಡ ಸಿನಿಮಾಗಳ ಪೈಪೋಟಿ ಎದುರಿಸಬೇಕಿತ್ತು. ಆದರೆ ರಕ್ಷಿತ್ ತಮ್ಮ ನಿರ್ಧಾರ ಬದಲಿಸಿದ್ದಾರೆ. ಸಿನಿಮಾ ರಿಲೀಸ್ ಒಂದು ವಾರ ಮುಂದೂಡಿದ್ದಾರೆ. ಅಕ್ಟೋಬರ್ 27ಕ್ಕೆ ಸಿನಿಮಾ ತೆರೆಗೆ ತರುವುದಾಗಿ ಘೋಷಿಸಿದ್ದಾರೆ. ಒಂದು ವಾರ ತಡವಾಗುತ್ತಿರುವುದಕ್ಕೆ ಸಿನಿರಸಿಕರು ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ.

Sapta Sagaradaache Ello Side- A is Now Premiere in Amazon Prime, Side- B now on Oct 27th

ಸೆಪ್ಟೆಂಬರ್ 1ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಅದಕ್ಕೂ ಮುನ್ನ ಪೇಯ್ಡ್ ಪ್ರೀಮಿಯರ್‌ ಶೋಗಳು ನಡೆದು ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಬರೀ ಪ್ರೀಮಿಯರ್ ಶೋಗಳಿಂದಲೇ 40 ಲಕ್ಷ ಕಲೆಕ್ಷನ್ ಆಗಿತ್ತು. ಕರ್ನಾಟಕದ ಮಾತ್ರವಲ್ಲದೇ ದೇಶದ ಆಯ್ದ ನಗರಗಳಲ್ಲಿ ಸಿನಿಮಾ ತೆರೆಕಂಡಿತ್ತು. ಎಲ್ಲಾ ಕಡೆ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗು ರಾಜ್ಯಗಳಲ್ಲಿ ಕೆಲವರು ಕನ್ನಡದಲ್ಲೇ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಹಾಗಾಗಿ ತೆಲುಗು ವರ್ಷನ್ ಥ್ರಿಯೇಟ್ರಿಕಲ್ ರಿಲೀಸ್‌ಗೆ ಸಿಂಪಲ್ ಸ್ಟಾರ್ ಪ್ಲ್ಯಾನ್ ಮಾಡಿದ್ದರು.

ಹೇಮಂತ್ ರಾವ್ ಸ್ಕ್ರೀನ್‌ ಪ್ಲೇ, ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಕೆಮೆಸ್ಟ್ರಿ ಕ್ಲಿಕ್ ಆಗಿತ್ತು. ಸಿನಿಮಾ ಚಿತ್ರೀಕರಣಕ್ಕೂ ಮುನ್ನ ರಕ್ಷಿತ್- ರುಕ್ಮಿಣಿ ವರ್ಕ್‌ಶಾಪ್‌ ನಡೆಸಲಾಗಿತ್ತು. ಹಾಗಾಗಿ ತೆರೆಮೇಲೆ ಅವರಿಬ್ಬರ ಕೆಮೆಸ್ಟ್ರಿಗೆ ವರ್ಕ್‌ ಆಗಿದೆ. ಮನು- ಪ್ರಿಯಾ ಆಗಿ ಪ್ರೇಕ್ಷಕರ ಮನಗೆದ್ದರು. ತೆಲುಗು ಪ್ರೇಕ್ಷಕರು ಕೂಡ ಇವರಿಬ್ಬರ ನಟನೆಗೆ ಮೆಚ್ಚಿಕೊಂಡರು. ಸ್ಲೋ ನರೇಶನ್ ಎನ್ನುತ್ತಲೇ ಸ್ಲೋ ಪಾಯ್ಸನ್ ರೀತಿ ಪ್ರೇಮಕತೆ ಪ್ರೇಕ್ಷಕರ ಮನಸ್ಸಿನಾಳಕ್ಕೆ ಇಳಿಯಿತು.

ಮೊದಲಿಗೆ ಒಂದೇ ಸಿನಿಮಾ ಆಗಿ ಶುರುವಾಗಿತ್ತು. ಚಿತ್ರೀಕರಣ ಮಾಡ್ತಾ ಮಾಡ್ತಾ 2 ಭಾಗಗಳಾಗಿ ಚಿತ್ರವನ್ನು ತೆರೆಗೆ ತರುವ ಲೆಕ್ಕಾಚಾರ ಶುರುವಾಯಿತು. ಚರಣ್ ರಾಜ್ ಸಂಗೀತ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಹೈಲೆಟ್ ಎನಿಸಿಕೊಳ್ತು. ಅಚ್ಯುತ್‌ಕುಮಾರ್, ಪವಿತ್ರಾ ಲೋಕೇಶ್, ಅವಿನಾಶ್, ಶರತ್ ಲೋಹಿತಾಶ್ವ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಚ್ಚರಿ ಎನ್ನುವಂತೆ ರಮೇಶ್ ಇಂದಿರಾ ಪಾತ್ರ, ನಟನೆ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಯಿತು.

ಇನ್ನು ಮಧ್ಯರಾತ್ರಿ ರಕ್ಷಿತ್ ಶೆಟ್ಟಿ ಸಿನಿರಸಿಕರಿಗೆ ಒಂದು ಸ್ವೀಟ್ ಶಾಕ್ ಕೊಟ್ಟಿದ್ದಾರೆ. ಯಾವುದೇ ಮಾಹಿತಿ ಇಲ್ಲದೇ ದಿಢೀರನೆ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್- A ಓಟಿಟಿಗೆ ಎಂಟ್ರಿ ಕೊಟ್ಟಿದೆ. ಹೌದು ಮಧ್ಯರಾತ್ರಿಯಿಂದ ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳನ್ನು ಬದಲಿಸಿಕೊಂಡು ಸಿನಿಮಾ ನೋಡುವ ಅವಕಾಶ ಕೂಡ ಸಿಕ್ಕಿದೆ. ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಗೊಂದಲ ಇತ್ತು. 2ನೇ ಭಾಗ ಥಿಯೇಟರ್‌ಗೆ ಬಂದಮೇಲೆ ಮೊದಲ ಎರಡು ಭಾಗ ಓಟಿಟಿಗೆ ಬರುತ್ತಾ ಎನ್ನುವ ನಿರೀಕ್ಷೆ ಇತ್ತು. ಆದರೆ ದಿಢೀರನೆ ಮೊದಲ ಭಾಗ ಸ್ಟ್ರೀಮಿಂಗ್ ಆರಂಭವಾಗಿದೆ.

ಸೈಡ್- B ರಿಲೀಸ್ ಒಂದು ವಾರ ತಡವಾಗುವುದಕ್ಕೂ ಒಂದು ಕಾರಣ ಇದೆ. ತೆಲುಗಿನಲ್ಲಿ ಇತ್ತೀಚೆಗೆ ಸಿನಿಮಾ 'ಸಪ್ತಸಾಗರಾಲು ದಾಟಿ' ಹೆಸರಿನಲ್ಲಿ ಡಬ್ ಆಗಿ ರಿಲೀಸ್ ಆಗಿತ್ತು. ಅದರ 2ನೇ ಭಾಗ ಅಕ್ಟೋಬರ್ 27ಕ್ಕೆ ತೆರೆಗೆ ತರಲು ಪ್ಲ್ಯಾನ್ ಆಗಿತ್ತು. ಹಾಗಾಗಿ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್- B ಥ್ರಿಯೇಟ್ರಿಕಲ್ ರಿಲೀಸ್ ನಿರ್ಧಾರಕ್ಕೆ ರಕ್ಷಿತ್ ಶೆಟ್ಟಿ ಬಂದಿದ್ದಾರೆ.

More from Filmibeat

English summary
Rakshit Shetty, Rukmini Vasanth, sapta Sagaradaache Ello Streaming on Amazon Prime, Sagaradaache Ello B on Oct 27th, Sagaradaache Ello B postponed, Sagaradaache Ello Side- A Prime,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X