ಸಿಎಂ ಮೊಮ್ಮಕಳಿಬ್ಬರನ್ನು ಡೇಟ್ ಮಾಡಿದ್ದ ಸಾರಾ ಅಲಿ ಖಾನ್-ಜಾನ್ಹವಿ! ಕರಣ್ ಬಿಚ್ಚಿಟ್ಟ ರಹಸ್ಯ
'ಕಾಫಿ ವಿತ್ ಕರಣ್' ಸೀಸನ್ 7 ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ. ಹಲವು ವಿವಾದಗಳ ಬಳಿಕವೂ ಕರಣ್ ಜೋಹರ್ ಮತ್ತೊಮ್ಮೆ ಈ ಶೋ ಅನ್ನು ಹೊತ್ತು ತಂದಿದ್ದಾರೆ.
ಏಳನೇ ಸೀಸನ್‌ನ ಮೊದಲ ಎಪಿಸೋಡ್‌ಗೆ ಕರಣ್ ಜೋಹರ್‌ನ ಇಬ್ಬರು ಆತ್ಮೀಯ ಸ್ಟಾರ್ ನಟರಾದ ರಣ್ವೀರ್ ಸಿಂಗ್ ಹಾಗೂ ನಟಿ ಆಲಿಯಾ ಭಟ್ ಆಗಮಿಸಿದ್ದರು. ಆ ಶೋ ಸಖತ್ ವೈರಲ್ ಆಗಿತ್ತು. ಇದೀಗ ಎರಡನೇ ಶೋ ಪ್ರಸಾರವಾಗಿದ್ದು ಆ ಶೋ ಸಹ ಸಖತ್ ವೈರಲ್ ಆಗುತ್ತಿದೆ. ಹೆಚ್ಚು ವೀಕ್ಷಕರನ್ನು ಸೆಳೆಯುತ್ತಿದೆ.
ಬಾಲಿವುಡ್‌ನ ಯುವ, ಉದಯೋನ್ಮುಖ ನಟಿಯರಾದ ಸಾರಾ ಅಲಿ ಖಾನ್ ಹಾಗೂ ಜಾನ್ಹವಿ ಕಪೂರ್ ಅವರುಗಳು ಕಾಫಿ ವಿತ್ ಕರಣ್‌ನ ಎರಡನೇ ಎಪಿಸೋಡ್‌ನ ಅತಿಥಿಗಳಾಗಿದ್ದು, ತಮ್ಮ ಯುವ ಅತಿಥಿಗಳ ಹಲವು ಖಾಸಗಿ ವಿಷಯಗಳನ್ನು ಕರಣ್ ತಮ್ಮ ಶೋ ನಲ್ಲಿ ಬಯಲಿಗೆಳೆದಿದ್ದಾರೆ. ಅದರಲ್ಲಿ ಒಂದೆಂದರೆ, ಸಾರಾ ಅಲಿ ಖಾನ್ ಹಾಗೂ ಜಾನ್ಹವಿ ಕಪೂರ್ ಇಬ್ಬರು ಸಹೋದರರನ್ನು ಪ್ರೇಮಿಸಿದ್ದರಂತೆ, ಕೆಲ ಕಾಲ ಡೇಟಿಂಗ್ ಮಾಡಿದ್ದರಂತೆ!

ಅವಾಕ್ಕಾದ ಲಲನೆಯರು
'ನೀವಿಬ್ಬರೂ ಸ್ವಂತ ಅಣ್ಣ-ತಮ್ಮಂದಿರನ್ನು ಡೇಟ್ ಮಾಡಿದ್ದಿರಿ' ಆ ಬಗ್ಗೆ ಸ್ವಲ್ಪ ಹೇಳಿ? ಎಂದು ಶೋನಲ್ಲಿ ಕರಣ್ ಜೋಹರ್ ಜಾನ್ಹವಿ ಹಾಗೂ ಸಾರಾ ಅಲಿ ಖಾನ್ ಅನ್ನು ಕೇಳಿದ್ದಾರೆ. ಆಗ ಇಬ್ಬರೂ ಅವಾಕ್ಕಾಗಿದ್ದಾರೆ. ಈ ವಿಷಯ ನಿಮಗೆ ಹೇಗೆ ಗೊತ್ತು ಎಂದು ಗಾಬರಿಯಾಗಿದ್ದಾರೆ. ಅಸಲಿಗೆ ಜಾನ್ಹವಿ ಹಾಗೂ ಸಾರಾ ಅಲಿ ಖಾನ್ ಡೇಟ್ ಮಾಡಿದ ಹುಡುಗರು ಸಾಮಾನ್ಯದವರಲ್ಲ, ಬದಲಿಗೆ ಮಹಾರಾಷ್ಟ್ರದ ಮಾಜಿ ಸಿಎಂನ ಮೊಮ್ಮಕ್ಕಳು!

ಮಾಜಿ ಸಿಎಂ ಮೊಮ್ಮಕಳ ಜೊತೆ ಡೇಟಿಂಗ್
ಸಾರಾ ಅಲಿ ಖಾನ್ ವೀರ್ ಪಹಾರಿಯಾ ಎಂಬುವರನ್ನು ಪ್ರೀತಿಸಿದ್ದರೆ, ಜಾನ್ಹವಿ ಶಿಖರ್ ಪಹಾರಿಯಾ ಅನ್ನು ಪ್ರೇಮಿಸಿದ್ದರು. ಈ ಇಬ್ಬರು ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಕ್ಕಳು. ವೀರ್ ಪಹಾರಿಯಾ ಉದ್ಯಮಿ ಆಗಿದ್ದು, ಆಲ್ಬಂ ನಿರ್ಮಾಪಕ ಮತ್ತು ಸಂಗೀತ ಸಂಯೋಜಕ ಸಹ ಆಗಿದ್ದಾರೆ. ಇನ್ನು ಶಿಖರ್ ಪಹಾರಿಯಾ ಉದ್ಯಮಿ ಆಗಿದ್ದು ಒಳ್ಳೆಯ ಪೋಲೋ ಆಟಗಾರ ಆಗಿದ್ದಾರೆ.

ಚಿತ್ರಗಳ ಸಮೇತ ಮಾಹಿತಿ ಹುಡುಕಿದ ನೆಟ್ಟಿಗರು
ಶೋ ನಲ್ಲಿ ಆ ಇಬ್ಬರು ಅಣ್ಣ ತಮ್ಮಂದಿರು ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆಯ ಮೊಮ್ಮಕ್ಕಳು ಎಂಬ ಅಂಶವನ್ನು ಬಹಿರಂಗಪಡಿಸಿಲ್ಲ. ಆದರೆ ಶೋ ನೋಡಿದ ನೆಟ್ಟಿಗರು ಈ ವಿಷಯವನ್ನು ಹುಡುಕಿ ಹೊರಹಾಕಿದ್ದಾರೆ. ಅಷ್ಟೆ ಅಲ್ಲದೆ, ಸಾರಾ-ವೀರ್ ಒಟ್ಟಿಗಿರುವ ಚಿತ್ರವನ್ನು, ಜಾನ್ಹವಿ, ಶಿಖರ್ ಪಹಾರಿಯಾ ಅನ್ನು ಮಾದಕವಾಗಿ ತಬ್ಬಿಕೊಂಡಿರುವ ಚಿತ್ರವನ್ನು ಸಹ ಹುಡುಕಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ಕರಣ್ ಅಪಾರ್ಟ್‌ಮೆಂಟ್‌ನಲ್ಲಿಯೇ ಇದ್ದರಂತೆ ಯುವಕರು
ಕರಣ್ ಜೋಹರ್, ಸಾರಾ ಅಲಿ ಖಾನ್ ಹಾಗೂ ಜಾನ್ಹವಿ ಕಪೂರ್ ಅವರನ್ನು ತಮ್ಮ ಹಳೆಯ ಪ್ರೇಮಕತೆ ಬಗ್ಗೆ ಕೇಳಿದಾಗ ಇಬ್ಬರಿಗೂ ಶಾಕ್ ಆಗಿದೆ. ''ಈ ಪ್ರಶ್ನೆ ಕೇಳುತ್ತಾರೆಂಬುದು ನಿನಗೆ ಗೊತ್ತಿತ್ತ'' ಎಂದು ಸಾರಾ, ಜಾಹ್ನವಿಯನ್ನು ಅನುಮಾನದಿಂದ ಕೇಳಿದ್ದಾರೆ. ಅದಕ್ಕೆ ಇಲ್ಲ ಎಂದ ಜಾನ್ಹವಿ, ''ಈ ವಿಷಯ ನಿಮಗೆ ಹೇಗೆ ಗೊತ್ತು?'' ಎಂದು ಕರಣ್ ಜೋಹರ್ ಅನ್ನೇ ಪ್ರಶ್ನೆ ಮಾಡಿದ್ದಾರೆ. ಅಸಲಿಗೆ ಆ ಇಬ್ಬರು ಹುಡುಗರು ನಾನಿದ್ದ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿಯೇ ವಾಸವಿದ್ದರು ಎಂದು ಗುಟ್ಟು ರಟ್ಟು ಮಾಡಿದ್ದಾರೆ.


Click it and Unblock the Notifications











