ರಶ್ಮಿಕಾ-ವಿಜಯ್ ದೇವರಕೊಂಡ ಡೇಟಿಂಗ್ ವಿಷಯ ಬಹಿರಂಗಪಡಿಸಿದ ಸಾರಾ ಅಲಿ ಖಾನ್!

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಯಲ್ಲಿದ್ದಾರೆ ಎಂಬ ವಿಷಯ ಬಹು ಸಮಯದಿಂದ ಹರಿದಾಡುತ್ತಲೇ ಇದೆ.

ಆಗಾಗ್ಗೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ರಶ್ಮಿಕಾ ಅಂತೂ ವಿಜಯ್ ದೇವರಕೊಂಡರ ಮನೆಗೆ ಹೋಗಿ ಹಬ್ಬ ಸಹ ಆಚರಿಸಿದ್ದಾರೆ. ಆದರೆ ಅವರಿಬ್ಬರೂ ನಿಜವಾಗಿಯೂ ಪ್ರೀತಿಸುತ್ತಿದ್ದಾರೆಯೋ ಇಲ್ಲವೊ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸ್ವತಃ ಅವರಿಬ್ಬರೂ ಸಹ ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.

ಆದರೆ ಈಗ ಚಿತ್ರೋದ್ಯಮದವರೇ ಒಬ್ಬರು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿರುವ ವಿಷಯ ಬಹಿರಂಗಪಡಿಸಿದ್ದಾರೆ. ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕಾಫಿ ವಿತ್ ಕರಣ್ ಶೋ ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿದ್ದಾರೆ.

ವಿಜಯ್‌ ದೇವರಕೊಂಡ ಬಗ್ಗೆ ಜಾನ್ಹವಿ, ಸಾರಾ ಮಾತು

ವಿಜಯ್‌ ದೇವರಕೊಂಡ ಬಗ್ಗೆ ಜಾನ್ಹವಿ, ಸಾರಾ ಮಾತು

ಕರಣ್ ಜೋಹರ್ ನಿರೂಪಿಸುವ ಕಾಫಿ ವಿತ್ ಕರಣ್‌ನ ಏಳನೇ ಸೀಸನ್‌ನ ಎರಡನೇ ಎಪಿಸೋಡ್‌ಗೆ ಅತಿಥಿಯಾಗಿ ಆಗಮಿಸಿದ್ದ ಬಾಲಿವುಡ್ ಉದಯೋನ್ಮುಖ ಹಾಗೂ ಯುವ ನಟಿಯರಾದ ಸಾರಾ ಅಲಿ ಖಾನ್ ಮತ್ತು ಜಾನ್ಹವಿ ಕಪೂರ್ ತಮ್ಮ ಬಗ್ಗೆ ಹಾಗೂ ಉದ್ಯಮದವರ ಬಗ್ಗೆ ಹಲವು ವಿಚಾರಗಳನ್ನು ಮಾತನಾಡಿದ್ದಾರೆ. ಅದರಲ್ಲಿಯೂ ನಟ ವಿಜಯ್ ದೇವರಕೊಂಡ ಬಗ್ಗೆ ಈ ಶೋನಲ್ಲಿ ಸಾಕಷ್ಟು ಬಾರಿ ಚರ್ಚೆಯಾಗಿದೆ. ರಶ್ಮಿಕಾ ಮಂದಣ್ಣ ಬಗ್ಗೆ ಸಹ!

ರಶ್ಮಿಕಾ ಹೆಸರು ಉಲ್ಲೇಖವಾದಾಗ ವಿಜಯ್ ಹೆಸರು ಹೇಳಿದ ಸಾರಾ

ರಶ್ಮಿಕಾ ಹೆಸರು ಉಲ್ಲೇಖವಾದಾಗ ವಿಜಯ್ ಹೆಸರು ಹೇಳಿದ ಸಾರಾ

ರ್ಯಾಪಿಡ್ ಫೈರ್ ರೌಂಡ್‌ನಲ್ಲಿ, ಜಾನ್ಹವಿಗೆ ಯಾವ ಸ್ಟಾರ್ ನಟರ ಇನ್‌ಸ್ಟಾಗ್ರಾಂ ಅನ್ನು ಹೆಚ್ಚು ನೋಡುತ್ತೀರಿ, ನಿಮ್ಮ ಇನ್‌ಸ್ಟಾ ಜೊತೆ ಕಂಪೇರ್ ಮಾಡುತ್ತೀರಿ ಎಂದು ಕರಣ್ ಪ್ರಶ್ನಿಸಿದಾಗ, ಇತ್ತೀಚೆಗೆ ರಶ್ಮಿಕಾ ಮಂದಣ್ಣರ ಇನ್‌ಸ್ಟಾಗ್ರಾಂ ಫಾಲೋವರ್‌ಗಳು ವೇಗವಾಗಿ ಹೆಚ್ಚಾಗಿದ್ದಾರೆ ಅದನ್ನು ಇತ್ತೀಚೆಗೆ ಗಮನಿಸಿದೆ ಎಂದರು ಜಾನ್ಹವಿ, ಆಗ ಮಧ್ಯೆ ಮಾತನಾಡಿದ ಸಾರಾ ಅಲಿ ಖಾನ್, 'ಹೌ ಚೀಸ್' ಎಂದರು. ಅಸಲಿಗೆ ಆ ಶೋನಲ್ಲಿ ವಿಜಯ್ ದೇವರಕೊಂಡಗೆ 'ಚೀಸ್' ಎಂದು ಸಾರಾ ಅಲಿ ಖಾನ್ ಹೆಸರಿಟ್ಟಿದ್ದರು. ಹಾಗಾಗಿ ರಶ್ಮಿಕಾ ಹೆಸರು ಹೇಳಿದಾಗ 'ಚೀಸ್' ಎಂದು ವಿಜಯ್ ದೇವರಕೊಂಡ ಅನ್ನು ನೆನಪು ಮಾಡಿಕೊಂಡರು ಸಾರಾ. ಅಲ್ಲದೆ, ಅವರೇ ಹೇಳಿದರು, 'ಈ ಶೋನಲ್ಲಿ ನಾವು 'ಚೀಸ್' ಎಂದು ಯಾರನ್ನು ಕರೆಯುತ್ತಿದ್ದೇವೆ ಗೊತ್ತಲ್ಲವೇ' ಎಂದು ಸಹ ಕೇಳಿದರು.

''ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಹೋಗಲು ಆಸೆ''

''ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಹೋಗಲು ಆಸೆ''

ವಿಜಯ್ ದೇವರಕೊಂಡ ಹೆಸರು ಹಲವು ಬಾರಿ ಆ ಶೋನಲ್ಲಿ ಕೇಳಿ ಬಂತು. ಯಾವ ನಟನೊಂದಿಗೆ ಡೇಟಿಂಗ್‌ಗೆ ಹೋಗಲು ಇಷ್ಟ ಎಂದಾಗ, ''ವಿಜಯ್ ದೇವರಕೊಂಡ' ಎಂದರು ಸಾರಾ, ಜಾನ್ಹವಿ ಸಹ ವಿಜಯ್ ದೇವರಕೊಂಡ ಜೊತೆ ಕ್ಲೋಸ್ ಆಗಿರುವ ಕಾರಣ, 'ವಿಜಯ್ ನಿನಗೆ ಇಷ್ಟ ಇಲ್ಲವೇ' ಎಂದು ಪದೇ ಪದೇ ಒತ್ತಿ-ಒತ್ತಿ ಕೇಳಿದರು ಸಾರಾ ಅಲಿ ಖಾನ್. 'ಆತ ಬಹಳ ಸ್ವಿಟ್ ವ್ಯಕ್ತಿ ನೀನು ಅವನನ್ನು ಡೇಟ್ ಮಾಡು' ಎಂದು ಜಾನ್ಹವಿ, ಸಾರಾಗೆ ಹೇಳುತ್ತಾರೆ. ಆಗ ಕರಣ್, ವಿಜಯ್ ಏನು ಚೀಸ್‌ನ ತುಣುಕೆ ಹೀಗೆ ಹಂಚಿಕೊಳ್ಳಲು ಎಂದು ಪ್ರಶ್ನೆ ಮಾಡುತ್ತಾರೆ. ಆಗಿನಿಂದ ವಿಜಯ್ ಹೆಸರನ್ನು ಚೀಸ್ ಎಂದು ಶೋನಲ್ಲಿ ಕರೆಯಲಾಗುತ್ತದೆ.

ವಿಜಯ್ ಸ್ವೀಟ್ ಹುಡುಗ, ಚೆನ್ನಾಗಿ ನಗಿಸುತ್ತಾನೆ: ಜಾನ್ಹವಿ

ವಿಜಯ್ ಸ್ವೀಟ್ ಹುಡುಗ, ಚೆನ್ನಾಗಿ ನಗಿಸುತ್ತಾನೆ: ಜಾನ್ಹವಿ

ಮತ್ತೊಮ್ಮೆ, ಅದೇ ಶೋನಲ್ಲಿ ಜಾನ್ಹವಿ ತಾನು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಹೇಳುವಾಗ, ನನ್ನನ್ನು ಚೆನ್ನಾಗಿ ನಗಿಸಬೇಕು ಎಂದು ಹೇಳುತ್ತಾರೆ. ಆಗ ಸಾರಾ, ವಿಜಯ್ ದೇವರಕೊಂಡ ಚೆನ್ನಾಗಿ ನಗಿಸುತ್ತಾನಾ, (ಈಸ್ ಹೀ ಚೀಸಿ?) ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಎಲ್ಲರೂ ನಗುತ್ತಾರೆ. ಆ ನಂತರ ಜಾನ್ಹವಿ, ವಿಜಯ್ ಚೆನ್ನಾಗಿ ನಗಿಸುತ್ತಾರೆ, ಆತ ಫನ್ನಿ, ಆದರೆ ಸಾರಾ ಅಲಿ ಖಾನ್ ಹೆಚ್ಚು ನಗಿಸುತ್ತಾಳೆ ಆಕೆ ಹೆಚ್ಚು ಫನ್ನಿಯರ್' ಎನ್ನುತ್ತಾರೆ ಜಾನ್ಹವಿ.

More from Filmibeat

English summary
Sara Ali Khan hinted that Rashmika Mandanna and Vijay Devarkonda are dating together. She talked about them in Koffee With Karan Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X