OTT releases this week: ಈ ವಾರ 22 ಸಿನಿಮಾ ಹಾಗೂ ವೆಬ್‌ ಸೀರಿಸ್ ರಿಲೀಸ್: ಆದ್ರೆ ಈ ವೆಬ್ ಸೀರಿಸ್ ಮೇಲೆ ಎಲ್ಲರ ಕಣ್ಣು

ಕೊರೊನಾ ಹಾವಳಿ ಸಮಯದಲ್ಲಿ ಓಟಿಟಿ ಆರ್ಭಟ ಹೆಚ್ಚಾಯಿತು. ಇತ್ತೀಚೆಗೆ ಪ್ರತಿ ಶುಕ್ರವಾರ ಥಿಯೇಟರ್‌ಗಳಲ್ಲಿ ಮಾತ್ರವಲ್ಲ ಓಟಿಟಿಯಲ್ಲೂ ಹೊಸ ಹೊಸ ಸಿನಿಮಾಗಳು, ವೆಬ್‌ ಸೀರಿಸ್ ರಿಲೀಸ್ ಆಗುತ್ತಿವೆ. ಸಿನಿರಸಿಕರು ಮನೆಯಲ್ಲೇ ಕೂತು ತಮ್ಮಿಷ್ಟದ ಸಿನಿಮಾಗಳನ್ನು ನೋಡುವ ಅವಕಾಶ ಸಿಗುತ್ತಿದೆ.

ಕೆಲ ಚಿಕ್ಕ ಬಜೆಟ್ ಸಿನಿಮಾಗಳು ನೇರವಾಗಿ ಓಟಿಟಿಗೆ ಎಂಟ್ರಿ ಕೊಡುತ್ತಿವೆ. ಇನ್ನು ಸ್ಟಾರ್ ನಟ-ನಟಿಯರೇ ವೆಬ್‌ ಸೀರಿಸ್‌ಗಳಲ್ಲಿ ನಟಿಸುತ್ತಿದ್ದಾರೆ. ಈ ವಾರ ಥಿಯೇಟರ್‌ಗಳಲ್ಲಿ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಹಾಗೂ ವಿಜಯ್ ದೇವರಕೊಂಡ ನಟನೆಯ 'ಖುಷಿ' ರಿಲೀಸ್ ಆಗುತ್ತಿವೆ. ಇನ್ನು ಓಟಿಟಿಯಲ್ಲಿ ಸಾಲು ಸಾಲು ಸಿನಿಮಾಗಳು, ವೆಬ್‌ ಸೀರಿಸ್‌ಗಳು ಸಿನಿರಸಿಕರನ್ನು ರಂಜಿಸಲು ಸಿದ್ಧವಾಗಿವೆ.

September first week ott releases, Movies, web series list

ಓಟಿಟಿ ಮೂಲಕ ಪ್ರೇಕ್ಷಕರು ಪರಭಾಷೆ ಸಿನಿಮಾ, ವೆಬ್‌ ಸೀರಿಸ್‌ ಹೆಚ್ಚು ನೋಡಲು ಆರಂಭಿಸಿದ್ದಾರೆ. ಸೆಪ್ಟೆಂಬರ್‌ ಮೊದಲ ವಾರ 22 ಹೊಸ ಸಿನಿಮಾಗಳು ಹಾಗೂ ವೆಬ್‌ ಸೀರಿಸ್‌ಗಳು ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ಸೇರಿದಂತೆ ವಿವಿಧ ಫ್ಲಾಟ್‌ಪಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಆಗಲಿವೆ.

ನೆಟ್‌ಫ್ಲಿಕ್ಸ್‌

ಈಗಾಗಲೇ ಸ್ಪಾನಿಶ್ ಸಿನಿಮಾ 'ಮಿಸ್ ಆಡ್ರಿನಲ್' ಎ ಟೇಲ್ ಹಾಫ್ ಟ್ವೀನ್‌ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. 'ಲೈವ್ ಟು 100: ಸೀಕ್ರೆಟ್ಸ್ ಆಫ್ ದಿ ಬ್ಲೂ ಜೋನ್ಸ್' ಇಂಗ್ಲೀಷ್‌ ಸಿನಿಮಾ ಕೂಡ ಈಗಾಗಲೇ ವೀಕ್ಷಕರ ಮುಂದೆ ಬಂದಿದೆ. 'ಚೂಸ್ ಲವ್' ಹಾಗೂ 'ಒನ್ ಪೀಸ್' ಇಂಗ್ಲೀಷ್ ಸಿನಿಮಾಗಳು ಇಂದು (ಆಗಸ್ಟ್ 31) ಬಿಡುಗಡೆಯಾಗಲಿದೆ. 'ಡಿಸೆನ್ ಎನ್‌ಚಾಂಟ್‌ಮೆಂಟ್- 5' ಸೆಪ್ಟೆಂಬರ್ 1 ರಂದು ಬಿಡುಗಡೆ ಆಗ್ತಿದ್ದು ಅದೇ ದಿನ 'ಫ್ರೈಡೇ ನೈಟ್ ಪ್ಲಾನ್' ಹಿಂದಿ ಸಿನಿಮಾ ಕೂಡ ಸ್ಟ್ರೀಮ್ ಆಗಲಿದೆ. ಡಚ್ ಚಿತ್ರ 'ಹ್ಯಾಪಿ ಎಂಡಿಂಗ್' ಸೆಪ್ಟೆಂಬರ್ 1 ರಂದು ಸ್ಟ್ರೀಮ್ ಆಗಲಿದೆ. ಅದೇ ದಿನ, 'ಲವ್ ಈಸ್ ಬ್ಲೈಂಡ್ ಆಫ್ಟರ್ ದಿ ಆಲ್ಟರ್- 4 ಹಾಗೂ ಸೆಪ್ಟೆಂಬರ್ 3ರಂದು, ಜಪಾನೀಸ್ ಸರಣಿ 'ಈಸ್ ಶಿ ದಿ ವುಲ್ಫ್' ಬಿಡುಗಡೆ ಆಗಲಿದೆ.

ಅಮೇಜಾನ್ ಪ್ರೈಂ

1. ದ ವೀಲ್ ಆಫ್ ಟೈಂ-2- ಸೆ.1

2. ಬಾ ಬಾ ಬ್ಲ್ಯಾಕ್ ಶೀಪ್

3. ನಲ್ಲ ನಿಲವುಲ ರಾತ್ರಿ


ಹಾಟ್‌ಸ್ಟಾರ್

1. ದ ಫ್ರೀಲಾನ್ಸರ್- ಸೆ.1

ಸೋನಿ ಲಿವ್

1. ಸ್ಕ್ಯಾಮ್ 2003: ದ ತೆಲಗಿ ಸ್ಟೋರಿ

20 ವರ್ಷಗಳ ಹಿಂದೆ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದ್ದ ತೆಲಗಿ ಛಾಪಾ ಕಾಗದ ಹಗರಣದ ಕಥೆಯನ್ನು ಈ ವೆಬ್‌ ಸೀರಿಸ್‌ನಲ್ಲಿ ಹೇಳಲಾಗಿದೆ. 'ಸ್ಕ್ಯಾಮ್ 2003: ದ ತೆಲಗಿ ಸ್ಟೋರಿ' ಹೆಸರಿನಲ್ಲಿ ಹರ್ಷದ್ ಮೆಹ್ತಾ ಈ ಸರಣಿ ಕಟ್ಟಿಕೊಟ್ಟಿದ್ದಾರೆ. ಇಡೀ ಹಗರಣದ ರುವಾರಿ ಕರೀಂ ಲಾಲ್ ತೆಲಗಿ ಕತೆಯನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. 3 ವರ್ಷಗಳ ಹಿಂದೆ ಹರ್ಷದ್ ಮೆಹ್ತಾ ನಿರ್ದೇಶನದ 'ಸ್ಕ್ಯಾಮ್ 1992: ದ ಹರ್ಷದ್ ಮೆಹ್ತಾ ಸ್ಟೋರಿ' ಹಿಟ್ ಆಗಿತ್ತು. ಅದೇ ಹಾದಿಯಲ್ಲಿ ಈಗ ಮತ್ತೊಂದು ನೈಜಕತೆ ಮೂಡಿ ಬರುತ್ತಿದೆ.

ಜೀ-5

1. ಡಿಡಿ ರಿಟರ್ನ್ಸ್: ಭೂತಾಲ ಬಂಗ್ಲ- ಸೆ.1
2. ಬಿಯೇ ಬಿಬ್ರಾತ್(ಬೆಂಗಾಲಿ ಸಿನಿಮಾ)- ಸೆ.1

More from Filmibeat

English summary
new OTT releases this week: 22 movies and web series releasing this week
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X