ಓಟಿಟಿಯಲ್ಲಿ ಧೂಳೆಬ್ಬಿಸಿದ 'ಫರ್ಜಿ' ವೆಬ್ ಸೀರಿಸ್: ಭಾರತದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು ಹೊಸ ದಾಖಲೆ
ಶಾಹಿದ್ ಕಪೂರ್- ವಿಜಯ್ ಸೇತುಪತಿ ನಟನೆಯ 'ಫರ್ಜಿ' ವೆಬ್ ಸೀರಿಸ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಈ ಬ್ಲ್ಯಾಕ್ ಕಾಮಿಡಿ ಕ್ರೈಂ ಥ್ರಿಲ್ಲರ್ ಸೀರಿಸ್ ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವೆಬ್ ಸೀರಿಸ್ ಎನಿಸಿಕೊಂಡಿದೆ. ದಿ 'ಫ್ಯಾಮಿಲಿ ಮ್ಯಾನ್' ರೀತಿಯ ಸೂಪರ್ ಹಿಟ್ ನೀಡಿದ ರಾಜ್ ಮತ್ತಿ ಡಿಕೆ ಜೋಡಿಯ ಮತ್ತೊಂದಯ ಪ್ರಾಜೆಕ್ಟ್ ಇದು.
ಫೆಬ್ರವರಿ 10ರಂದು 'ಫರ್ಜಿ' ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗಲು ಶುರುವಾಗಿತ್ತು. 8 ಎಪಿಸೋಡ್‌ಗಳಾಗಿ ಇದು ಮೂಡಿ ಬಂದಿದೆ. 3.7 ಕೋಟಿಗೂ ಅಧಿಕ ವೀಕ್ಷಕರನ್ನು ಪಡೆದ 'ಫರ್ಜಿ' ಆಲ್‌ಟೈಂ ಮೋಸ್ಟ್ ವಾಚ್ಡ್ ವೆಬ್ ಸೀರಿಸ್ ಎನ್ನುವ ಸಾರ್ವಕಾಲಿಕ ದಾಖಲೆ ಬರೆದಿದೆ. ಈ ಮೂಲಕ 'ರುದ್ರ' ಹಾಗೂ 'ಮಿರ್ಜಾಪುರ್' ವೆಬ್ ಸೀರಿಸ್‌ನ ಮೀರಿ 'ಫರ್ಜಿ' ಮೊದಲ ಸ್ಥಾನದಲ್ಲಿ ಸದ್ದು ಮಾಡ್ತಿದೆ. ಓರ್ಮ್ಯಾಕ್ಸ್ ಮೀಡಿಯಾ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಸಿಂಪಲ್ ಕಥೆಯನ್ನು ಸೊಗಸಾಗಿ ಕಟ್ಟುಕೊಡಲಾಗಿದೆ. ಕತೆ ಏನು ಅಂತ ನೋಡೋದಾದರೆ ಸನ್ನಿ(ಶಾಹಿದ್ ಕಪೂರ್) ಅದ್ಭುತ ಆರ್ಟಿಸ್ಟ್. ಯಾವಮಟ್ಟಿಗೆ ಅಂದರೆ ಆತ ಪೇಂಟಿಂಗ್ ಮಾಡಿದ್ರೆ ಯಾವ್ದು ಒರಿಜಿನಲ್ ಯಾವ್ದು ಡೂಪ್ಲಿಕೇಟ್ ಅಂತ ಕೂಡ ಗೊತ್ತಾಗಲ್ಲ. ತಂದೆ ತಾಯಿ ಇಲ್ಲದೇ ಬಾಲ್ಯದಿಂದಲೂ ತಾತನ ಆರೈಕೆಯಲ್ಲಿ ಸನ್ನಿ ಬೆಳೀತಾನೆ. ಸನ್ನಿಹೆ ಫಿರೋಜ್ ಅನ್ನೋ ಸ್ನೇಹಿತದ ಕೂಡ ಇರ್ತಾನೆ.
ತಾತ 'ಕ್ರಾಂತಿ' ಹೆಸರಿನಲ್ಲಿ ಒಂದು ಪತ್ರಿಕೆ ಮುದ್ರಣ ಮಾಡುತ್ತಿರುತ್ತಾನೆ. ಅದನ್ನು ಓದುವವರೇ ಇರುವುದಿಲ್ಲ.
ಒಂದ್ಕಡೆ ಪತ್ರಿಕೆ ಓದುವವರು ಇಲ್ಲ. ಮತ್ತೊಂದು ಕಡೆ ಸಾಲಭಾದೆ. ಒಮ್ಮೆ ಸಾಲ ಕೊಟ್ಟವರು ಬಂದು ಗಲಾಟೆ ಮಾಡುತ್ತಾರೆ. ಇದರಿಂದ ರೋಸಿ ಹೋದ ಸನ್ನಿ, ಫಿರೋಜ್ 500 ರೂ. ಖೋಟಾ ನೋಟ್ ಮುದ್ರಿಸುತ್ತಾರೆ. ಇದು ಮುಂದೆ ಅವರಿಗೆ ಅಭ್ಯಾಸ ಆಗಿ ಹೋಗುತ್ತದೆ. ಖೋಟಾ ನೋಟ್ ಮುದ್ರಿಸುವುದರಿಂದ ಬರುವ ಹಣದಲ್ಲಿ ಐಶಾರಾಮಿ ಜೀವನ ಸಾಗಿಸುತ್ತಿರುತ್ತಾರೆ. ಭಾರತದಲ್ಲಿ ಖೋಟಾ ನೋಟು ಚಲಾವಣೆಯ ಕಿಂಗ್ ಎನಿಸಿಕೊಂಡಿದ್ದ ಮನ್ಸೂರ್‌ಗೆ ಸನ್ನಿ ಬಗ್ಗೆ ತಿಳಿದ ಮೇಲೆ ಆತ ಏನು ಮಾಡ್ತಾನೆ? ಅನ್ನೋದನ್ನು ಇಂಟ್ರೆಸ್ಟಿಂಗ್ ಆಗಿ ಹೇಳಲಾಗಿದೆ.

ಇನ್ನು ಖೋಟಾ ನೋಟು ಚಲಾವಣೆ ವಿರುದ್ಧ ಹೋರಾಡುವ ಟಾಸ್ಕ್ ಫೋರ್ಸ್ ಆಫೀಸರ್ ಮೈಕಲ್ ತನ್ನ ಕರ್ತವ್ಯ ಹೇಗೆ ನಿಭಾಯಿಸುತ್ತಾನೆ? ಮೈಕಲ್ ಹಾಗೂ ಆತನ ಮಡದಿ ರೇಖಾ ನಡುವಿನ ಗಲಾಟೆ ಏನು? ಮೈಕಲ್ ಟೀಂನಲ್ಲಿ ಕೆಲಸ ಮಾಡುವ ಮೇಘ ಜೊತೆ ಸನ್ನಿ ಪರಿಚಯ ಬೆಳಸುವುದ ಏಕೆ? ಆಕೆಯನ್ನು ಯಾಕೆ ಪ್ರೀತಿಲಿ ಬೀಸಿಕೊಳ್ತಾನೆ? ಇದರ ಹಿಂದಿನ ಸೀಕ್ರೆಟ್ ಏನು? ಇದಕ್ಕೆಲ್ಲಾ ನಿಮಗೆ ಉತ್ತರ ಬೇಕು ಅಂದ್ರೆ 'ಫರ್ಜಿ' ಕಥೆ ನೋಡಲೇಬೇಕು.
ವೆಬ್ ಸೀರಿಸ್‌ನಲ್ಲಿ ಶಾಹಿದ್ ಕಪೂರ್ ಸಂದೀಪ್ ಅಲಿಯಾಸ್ ಸನ್ನಿ ಆಗಿ ಮಿಂಚಿದ್ರೆ, ವಿಜಯ್ ಸೇತುಪತಿ ಸ್ಪೆಷಲ್ ಟಾಸ್ಕ್‌ಫೋರ್ಸ್ ಆಫೀಸರ್ ಮೈಕಲ್ ವೇದ ನಾಯಗಂ ಆಗಿ ಕಾಣಿಸಿಕೊಂಡಿದ್ದಾರೆ. ಕಾಲಾವಧಿ ಕೊಂಚ ದೀರ್ಘವಾಗಿರುವುದು ವೀಕ್ಷಕರಿಗೆ ಕಸಿವಿಸಿ ಎನಿಸಿದೆ. ಅದರೆ ವಿಜಯ ಸೇತುಪತಿ ನಟಿಸಿದ್ದಾರೆ ಎನ್ನುವ ಕಾರಣಕ್ಕೋ ದಕ್ಷಿಣದ ಮಂದಿ ಕೂಡ ಹೆಚ್ಚು ಹೆಚ್ಚು ವೀಕ್ಷಿಸುತ್ತಿದ್ದಾರೆ. ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಬಂದ ರುದ್ರ (35.2 ಮಿಲಿಯನ್ ವ್ಯೂವರ್ಸ್), ಪಂಕಜ್ ತ್ರಿಪಾಠಿ ಅವರ ಮಿರ್ಜಾಪುರ್ ಸೀಸನ್ ಸೀಸನ್- 2(32.5 ಮಿಲಿಯನ್ ವ್ಯೂವರ್ಸ್), ಜಿತೇಂದ್ರ ಕುಮಾರ್ ಅವರ ಪಂಚಾಯತ್ ಸೀಸನ್- 2 (29.6 ಮಿಲಿಯನ್ ವ್ಯೂವರ್ಸ್), ಪಂಕಜ್ ತ್ರಿಪಾಠಿ ಅವರ ಕ್ರಿಮಿನಲ್ ಜಸ್ಟೀಸ್: ಬಿಹೈಡ್ ಕ್ಲೋಸ್ಡ್ ಡೋರ್ (29.1 ಮಿಲಿಯನ್ ವ್ಯೂವರ್ಸ್) ರೀತಿ ಸೀರಿಸ್‌ಗಳನ್ನು ಫರ್ಜಿ ಮೀರಿಸಿ ಮೊದಲ ಸ್ಥಾನಕ್ಕೇರಿದೆ.
'ಫರ್ಜಿ' ಸೀರಿಸ್‌ನಲ್ಲಿ ಕೆ ಕೆ ಮೆನನ್, ರಾಶಿ ಖನ್ನಾ, ಭುವನ್ ಅರೋರ, ಚಿತ್ತರಂಜನ್ ಗಿರಿ, ಜಾಕಿರ್ ಹುಸೇನ್, ಅಮೋಲ್ ಪಾಲೇಕರ್, ಕುಬ್ರಾ ಸೇಠ್, ರೆಜಿನಾ ಕಸೆಂದ್ರಾ ಸೇರಿದಂತೆ ದೊಡ್ಡ ತಾರಾಗಣವಿದೆ.


Click it and Unblock the Notifications











