For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್‌ ಮಂಡಳಿಗೆ ಶಪಿಸಿ, ತನ್ನದೇ ಪ್ರತ್ಯೇಕ ಒಟಿಟಿ ಘೋಷಿಸಿದ ಶಕೀಲಾ

  |

  ತಮಗೆ ಬೇಕಾದಂತಹಾ ಸಿನಿಮಾಗಳನ್ನು ಕುಟುಂಬದ ಜೊತೆಗೆ ಹಾಗೂ ಖಾಸಗಿಯಾಗಿ ನೋಡುವ ಅವಕಾಶವನ್ನು ಒಟಿಟಿಗಳು ಒದಗಿಸುತ್ತಿವೆ. ಹೀಗಾಗಿಯೇ ಜನರು ಏಕಾಂತದಲ್ಲಿದ್ದಾಗ ನೋಡಲು ಬಯಸುವಂಥಹಾ ಸಿನಿಮಾ, ವಿಡಿಯೋಗಳನ್ನು ಒದಗಿಸುವ ಒಟಿಟಿಗಳು ಸಹ ಜನಪ್ರಿಯತೆ ಪಡೆದುಕೊಂಡಿವೆ.

  ಒಂದು ಕಾಲದ ಸಾಫ್ಟ್ ಪೋರ್ನ್ ನಟಿ ಶಕೀಲಾ ತಮ್ಮದೇ ಆದ ಪ್ರತ್ಯೇಕ ಒಟಿಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಆ ಒಟಿಟಿಯಲ್ಲಿ ಸಾಫ್ಟ್ ಪೋರ್ನ್ ಮಾದರಿಯ ಸಿನಿಮಾಗಳನ್ನು ಪ್ರದರ್ಶಿಸುವ ಸಾಧ್ಯತೆ ಇದೆ. ಈಗಾಗಲೇ ಆಲ್ಟ್ ಬಾಲಾಜಿ ಮತ್ತು ಇತರೆ ಕೆಲವು ಒಟಿಟಿಗಳು ಇದೇ ಮಾದರಿಯ ಕಂಟೆಂಟ್ ಅನ್ನು ನೀಡುತ್ತಿವೆ.

  ಶಕೀಲ ನಿರ್ಮಾಣ ಮಾಡಿ, ಶಕೀಲ ಮಗಳು ಮಿಲಾ ನಟಿಸಿರುವ 'ಅಟ್ಟರ್ ಫ್ಲಾಪ್ ಮೂವಿ' ಮತ್ತು 'ರೊಮ್ಯಾಂಟಿಕ್' ಸಿನಿಮಾಗಳ ಪೋಸ್ಟರ್ ಬಿಡುಗಡೆ ಮಾಡಿದ ಶಕೀಲ, ಎರಡೂ ಸಿನಿಮಾಗಳಲ್ಲಿ ಮಗಳು ಮಿಲಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾಳೆ. ಸಿನಿಮಾದ ಕತೆ ಬಹಳ ಇಷ್ಟವಾದ ಕಾರಣ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಸಿನಿಮಾವನ್ನು ಗೋವಾ ಹಾಗೂ ಇನ್ನಿತರೆ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದಿದ್ದಾರೆ.

  ಮುಂದುವರೆದು, ಈ ಹಿಂದೆ ನಮ್ಮ ನಿರ್ಮಾಣದ 'ಲೇಡೀಸ್ ನಾಟ್ ಅಲೌಡ್' ಹಾಗೂ ಇನ್ನಿತರೆ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿಯಿಂದ ಬಹಳ ಸಮಸ್ಯೆ ಎದುರಾಯಿತು. ಇದರಿಂದ ನಮಗೂ, ಸಿನಿಮಾದಲ್ಲಿ ನಟಿಸಿದ್ದ ಹೊಸ ಪ್ರತಿಭೆಗಳಿಗೂ ಕಷ್ಟವಾಯಿತು. ಈ ಸಮಸ್ಯೆಯಿಂದ ಬಿಡುಗಡೆ ಪಡೆಯಲು ಇದೀಗ ನಾವೇ ಹೊಸ ಒಟಿಟಿ ಬಿಡುಗಡೆ ಗೊಳಿಸಲಿದ್ದೇವೆ ಎಂದರು ಶಕೀಲಾ.

  ನನ್ನ ಹಲವು ಸಿನಿಮಾಗಳಿಗೆ ಸೆನ್ಸಾರ್ ಮಂಡಳಿಯವರು ಅಡ್ಡಗಾಲು ಹಾಕಿದರು. ನಮ್ಮ ಸಿನಿಮಾಗಳು ಚಿತ್ರಮಂದಿರಗಳಿಗೆ ಬರದಂತೆ ತಡೆದರು ಎಂದು ಕಣ್ಣೀರು ಹಾಕಿದ ಶಕೀಲಾ, ಸೆನ್ಸಾರ್ ಮಂಡಳಿಯವರಿಗೆ ಹಿಡಿ ಶಾಪ ಹಾಕಿದರು. ಇನ್ನು ಮುಂದೆ ಬರುವ ಹೊಸ ಪ್ರತಿಭೆಗಳಿಗೆ ಈ ರೀತಿಯ ಸಮಸ್ಯೆ ಆಗಬಾರದೆಂದು ತಾವು ಒಟಿಟಿ ಆರಂಭಿಸುತ್ತಿರುವುದಾಗಿ ಶಕೀಲಾ ಹೇಳಿದರು.

  English summary
  Actress Shakeela said she will release OTT platform of her own. She said many of her and her production movie face problem from censor so she is releasing OTT platform.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X