For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದ ಶಕುಂತಲಾ ದೇವಿ ಜೀವನ ಆಧಾರಿತ ಸಿನಿಮಾ ಟ್ರೇಲರ್ ಬಿಡುಗಡೆ

  |

  ಮಾನವ ಕಂಪ್ಯೂಟರ್ ಎಂದೇ ಕರೆಯಲಾಗುವ ಕರ್ನಾಟಕದ ಶಕುಂತಲಾ ದೇವಿ ಜೀವನ ಆಧಾರಿಸಿದ ಸಿನಿಮಾದ ಟ್ರೇಲರ್ ಅನ್ನು ಅಮೆಜಾನ್ ಟ್ರೈಂ ಇಂದು ಬಿಡುಗಡೆ ಆಗಿದೆ.

  ಅವರ ಮನೆಯಲ್ಲಿ ಅಷ್ಟು ನೋವಿದ್ರು ಕೂಡ ಕಾಫಿ ಕುಡಿದು ಹೋಗಿ ಅನ್ನೋರು | Filmibeat Kannada

  ಖ್ಯಾತ ನಟಿ ವಿದ್ಯಾ ಬಾಲನ್ ಶಕುಂತಲಾ ದೇವಿ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾವು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗುತ್ತಿದ್ದು, ಟ್ರೇಲರ್ ಗಮನ ಸೆಳೆಯುತ್ತಿದೆ.

  ಬಿಡುಗಡೆಗೆ ಸಿದ್ಧ ಕರ್ನಾಟಕದ ಸಾಧಕಿ ಬಗ್ಗೆ ಬಾಲಿವುಡ್‌ ಸಿನಿಮಾಬಿಡುಗಡೆಗೆ ಸಿದ್ಧ ಕರ್ನಾಟಕದ ಸಾಧಕಿ ಬಗ್ಗೆ ಬಾಲಿವುಡ್‌ ಸಿನಿಮಾ

  ಚೆನ್ನಾಗಿ ನಟಿಸುವುದು ವಿದ್ಯಾ ಬಾಲನ್ ಅವರಿಗೆ ಮಾಮೂಲಾಗಿಬಿಟ್ಟಿದೆ ಅದು ಟ್ರೇಲರ್‌ನಲ್ಲೂ ಕಾಣುತ್ತಿದೆ. ಶಂಕುತಲಾ ದೇವಿ ಪಾತ್ರವನ್ನು ಚೆನ್ನಾಗಿ ನಿಭಾಯಿಸಿರುವ ಸೂಚನೆ ಟ್ರೇಲರ್‌ನಲ್ಲಿದೆ.

  ಹಾಸ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ?

  ಹಾಸ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ?

  ಟ್ರೇಲರ್‌ನಲ್ಲಿ ಸಾಕಷ್ಟು ಹಾಸ್ಯ, ವಿದ್ಯಾ ಬಾಲನ್ ಅವರ ತರ್ಲೆ, ಪಂಚಿಂಗ್‌ ಡೈಲಾಗ್‌ಗಳು ಗಮನ ಸೆಳೆಯುತ್ತಿವೆ. ನಿಜ ಜೀವನಕ್ಕೆ ಹತ್ತಿರ ಮಾಡದೆ, ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ ಮಸಾಲೆಗಳನ್ನು ಸಿನಿಮಾದಲ್ಲಿ ತುಂಬಿರುವುದು ಕಾಣುತ್ತಿದೆ.

  ಭಾವನಾತ್ಮಕ ಸನ್ನಿವೇಶಗಳೂ ಇವೆ

  ಭಾವನಾತ್ಮಕ ಸನ್ನಿವೇಶಗಳೂ ಇವೆ

  ಸಿನಿಮಾದಲ್ಲಿ ಗಣಿತದ ಹೊರತಾಗಿ ಭಾವನಾತ್ಮಕ ಅಂಶಗಳು ಇರುವುದು ಸಹ ಟ್ರೇಲರ್‌ ನೋಡಿದರೆ ಗೊತ್ತಾಗುತ್ತದೆ. ಶಕುಂತಲಾ ದೇವಿ ಪಾತ್ರದ ಮಗಳೊಂದಿಗಿನ ಪ್ರೀತಿ, ಜಗಳ, ಕೌಟುಂಬಿಕ ಕಲಹ, ಗಣಿತದೊಂದಿಗೆ ಪ್ರೀತಿ ಹಲವು ವಿಷಯಗಳು ಟ್ರೇಲರ್‌ನಲ್ಲಿ ಬಂದು ಹೋಗುತ್ತವೆ.

  ವಿದ್ಯಾ ಬಾಲನ್ ಬಳಿ 'ರೂಂಮಿಗೆ ಬಾ' ಎಂದಿದ್ದರಂತೆ ತಮಿಳು ನಿರ್ದೇಶಕವಿದ್ಯಾ ಬಾಲನ್ ಬಳಿ 'ರೂಂಮಿಗೆ ಬಾ' ಎಂದಿದ್ದರಂತೆ ತಮಿಳು ನಿರ್ದೇಶಕ

  ಪ್ರಕಾಶ್ ಬೆಳವಾಡಿ ನಟನೆ

  ಪ್ರಕಾಶ್ ಬೆಳವಾಡಿ ನಟನೆ

  ಸಿನಿಮಾದಲ್ಲಿ ಕನ್ನಡದ ಪ್ರಕಾಶ್ ಬೆಳವಾಡಿ ಸಹ ನಟಿಸಿದ್ದಾರೆ. ವಿದ್ಯಾ ಜೊತೆಗೆ ಸಾನ್ಯಾ ಮಲ್ಹೋತ್ರಾ, ಅಮಿತ್ ಸಧಾ, ಜಿಶು ಸೇನ್‌ಗುಪ್ತಾ ಇನ್ನೂ ಹಲವರು ನಟಿಸಿದ್ದಾರೆ.

  ಅನು ಮೆನನ್ ನಿರ್ದೇಶನ

  ಅನು ಮೆನನ್ ನಿರ್ದೇಶನ

  ಸಿನಿಮಾವನ್ನು ಅನು ಮೆನನ್ ನಿರ್ದೇಶಿಸಿದ್ದಾರೆ. ವಿಕ್ರಂ ಮಲ್ಹೋತ್ರಾ ಮತ್ತು ಸೋನಿ ಪಿಕ್ಚರ್ಸ್ ನಿರ್ಮಿಸಿರುವ ಈ ಸಿನಿಮಾ ಜುಲೈ 31 ಕ್ಕೆ ಬಿಡುಗಡೆ ಆಗಲಿದೆ. ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದ ಶಕುಂತಲಾ ದೇವಿ ಜೀವನ ಆಧಾರಿಸಿದ ಈ ಸಿನಿಮಾ ಬಗ್ಗೆ ಕುತೂಹಲ ತುಸು ಹೆಚ್ಚೇ ಇದೆ.

  ''ರಾಷ್ಟ್ರೀಯತೆ ಚಿತ್ರಗಳಲ್ಲಿ ಇರಲಿ, ಚಿತ್ರಮಂದಿರಗಳಲ್ಲಿ ಅಲ್ಲ'' - ವಿದ್ಯಾ ಬಾಲನ್''ರಾಷ್ಟ್ರೀಯತೆ ಚಿತ್ರಗಳಲ್ಲಿ ಇರಲಿ, ಚಿತ್ರಮಂದಿರಗಳಲ್ಲಿ ಅಲ್ಲ'' - ವಿದ್ಯಾ ಬಾಲನ್

  English summary
  Vidya Balan acted Shakuntala Devi movie trailer released today. Movie will release on Amazon prime on July 31.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X