ಉಪ್ಪಿನ ಡಬ್ಬಿಗಾಗಿ ಶಮಿತಾ-ಅಕ್ಷರಾ ಜಗಳ: ಅಮ್ಮನ ವಯಸ್ಸಿನವಳು ಎಂದ ನಟಿ

ಭಾವ ರಾಜ್ ಕುಂದ್ರಾ ಜೈಲಿನಲ್ಲಿರುವಾಗ ನಟಿ ಶಮಿತಾ ಶೆಟ್ಟಿ ಬಿಗ್‌ಬಾಸ್‌ ನಲ್ಲಿ ಆಟವಾಡುತ್ತಿದ್ದಾರೆ. ಆದರೆ ಬಿಗ್‌ಬಾಸ್ ಮನೆ ಶಮಿತಾಗೆ ಸುಲಭವಾಗಿಯೇನೂ ಇಲ್ಲ. ಅಲ್ಲೂ ಸಾಕಷ್ಟು ಸಮಸ್ಯೆಗಳನ್ನು ಶಮಿತಾ ಅನುಭವಿಸುತ್ತಿದ್ದಾರೆ.

ಬಿಗ್‌ಬಾಸ್ ಒಟಿಟಿ ಪ್ರಾರಂಭವಾಗಿ ಹತ್ತು ದಿನಗಳಾಗಿದ್ದು ಶಮಿತಾ ಶೆಟ್ಟಿ ಈ ಶೋನ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಶಮಿತಾ ಜೊತೆಗೆ ಇನ್ನೂ 12 ಜನ ಸ್ಪರ್ಧಾಳುಗಳು ಮನೆಯಲ್ಲಿದ್ದು ಒಬ್ಬರು ಈಗಾಗಲೇ ಮನೆಯಿಂದ ಹೊರಗೆ ಹೋಗಿದ್ದಾರೆ. ಪ್ರಸ್ತುತ ಶಮಿತಾ ಸೇರಿ 12 ಮಂದಿ ಮಾತ್ರವೇ ಬಿಗ್‌ಬಾಸ್ ಮನೆಯೊಳಗೆ ಟ್ರೋಫಿಗಾಗಿ ಆಟವಾಡುತ್ತಿದ್ದಾರೆ.

ಬಿಗ್‌ಬಾಸ್‌ ಮನೆಯೊಳಗಿನ ಪ್ರಮುಖ ಸೆಲೆಬ್ರಿಟಿ ಆಗಿರುವ ಶಮಿತಾ ಶೆಟ್ಟಿ ಸಾಕಷ್ಟು ಕಠಿಣ ಸ್ಪರ್ಧೆಯನ್ನೇ ಮನೆಯ ಒಳಗೆ ಅನುಭವಿಸುತ್ತಿದ್ದಾರೆ. ಕೆಲವು ಸ್ಪರ್ಧಿಗಳೊಟ್ಟಿಗೆ ಈಗಾಗಲೇ ಶಮಿತಾ ಶೆಟ್ಟಿ ಜಗಳ ಮಾಡಿಕೊಂಡಿದ್ದಾರೆ. ಕೆಲವು ಸ್ಪರ್ಧಿಗಳ ಮೇಲಂತೂ ಆಗಾಗ್ಗೆ ಜಗಳ ಮಾಡಿಕೊಳ್ಳುತ್ತಲೇ ಇದ್ದಾರೆ. ಅದರಲ್ಲಿಯೂ ಆಕಾಂಕ್ಷಾ ಸಿಂಗ್‌ ಜೊತೆ ಸತತ ಜಗಳಗಳು ಆಗುತ್ತಲೇ ಇವೆ.

ಇದೀಗ ಉಪ್ಪಿನ ಡಬ್ಬಿಯ ವಿಚಾರವಾಗಿ ಶಮಿತಾ ಶೆಟ್ಟಿ ಹಾಗೂ ಅಕ್ಷರಾ ಸಿಂಗ್ ಜಗಳವಾಡಿದ್ದಾರೆ. ಅಕ್ಷರಾ ಸಿಂಗ್ ಶಮಿತಾ ಶೆಟ್ಟಿ ವಿರುದ್ಧ ಬಹಳ ಏರು ಧ್ವನಿಯಲ್ಲಿ ಜಗಳ ಮಾಡಿದ್ದಾರೆ. ಶಮಿತಾ ಶೆಟ್ಟಿಗೆ ಬೈದಿದ್ದಾರೆ ಸಹ.

ಉಪ್ಪಿನ ಡಬ್ಬಿಗಾಗಿ ಜಗಳ

ಉಪ್ಪಿನ ಡಬ್ಬಿಗಾಗಿ ಜಗಳ

ಪ್ರೋಮೊದಲ್ಲಿ ಕಂಡು ಬರುತ್ತಿರುವಂತೆ ಅಕ್ಷರಾ ಸಿಂಗ್, ಶಮಿತಾರನ್ನು ಉಪ್ಪಿನ ಡಬ್ಬಿ ಎಲ್ಲಿದೆ ಎಂದು ಕೇಳಿದ್ದಾರೆ ಇದಕ್ಕೆ ಇಂಗ್ಲೀಷ್‌ನಲ್ಲಿ 'ಇರಿಟೇಟಿಂಗ್' ಎಂದು ಶಮಿತಾ ಬೈದುಕೊಂಡಿದ್ದಾರೆ ಇದು ಅಕ್ಷರಾ ಅನ್ನು ಕೆರಳಿಸಿದೆ. 'ಉಪ್ಪಿನ ಡಬ್ಬಿ ಎಲ್ಲಿದೆ ಎಂದು ಕೇಳಿದರೆ ಅದಕ್ಕೆ ಇಷ್ಟೋಂದು ಉರಿದುಕೊಳ್ಳುವುದು ಏಕೆ. ನಿನಗೆ ಒಳ್ಳೆಯ ಇಂಗ್ಲೀಷ್ ಬರುವುದಿದ್ದರೆ ಅದನ್ನು ನಿನ್ನ ಬಳಿ ಇಟ್ಟುಕೊ, ನನ್ನ ಮೇಲೆ ಪ್ರಯೋಗ ಮಾಡಲು ಬರಬೇಡ'' ಎಂದು ಅಕ್ಷರಾ ಆವಾಜ್ ಹೊಡೆದಿದ್ದಾರೆ.

ನಾನೇನು ನಿನ್ನ ಕೆಲಸದವಳಾ? ಶಮಿತಾ ಪ್ರಶ್ನೆ

ನಾನೇನು ನಿನ್ನ ಕೆಲಸದವಳಾ? ಶಮಿತಾ ಪ್ರಶ್ನೆ

''ಇದಕ್ಕೆ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿರುವ ಶಮಿತಾ, ಬೆಳಿಗ್ಗೆಯಿಂದ ಅದು ಎಲ್ಲಿದೆ, ಇದು ಎಲ್ಲಿದೆ ಎಂದು ನನ್ನನ್ನು ಕೇಳುತ್ತಿದ್ದೀಯ. ನಾನೇನು ನಿನ್ನ ಕೆಲಸದವಳಾ? ನೀನು ಸೋಮಾರಿಯಾಗಿದ್ದೀಯ. ನಿನಗೆ ಬೇಕಾದ ವಸ್ತುವನ್ನು ನೀನೆ ಹುಡುಕಿಕೊ ನನ್ನನ್ನು ಕೇಳಬೇಡ'' ಎಂದಿದ್ದಾರೆ. ನಂತರ ಶಮಿತ್ ಬಳಿ ಹೋಗಿ, ''ನಾನು ಯಾವಾಗಲಾದರೂ ಆಕೆಗೆ ಏನಾದರೂ ಹೇಳಲು ಹೋದರೆ ಆಕೆ ನನ್ನ ಮೇಲೆ ಜಗಳವನ್ನೇ ಮಾಡುತ್ತಾಳೆ'' ಎಂದು ದೂರು ಹೇಳುತ್ತಾರೆ.

ಅಮ್ಮನಷ್ಟು ವಯಸ್ಸಾಗಿದೆ: ಅಕ್ಷರಾ

ಅಮ್ಮನಷ್ಟು ವಯಸ್ಸಾಗಿದೆ: ಅಕ್ಷರಾ

ಶಮಿತಾ ಉತ್ತರದಿಂದ ಸಿಟ್ಟಾದ ಅಕ್ಷರಾ ಸಿಂಗ್, ''ನನ್ನ ಅಮ್ಮನ ವಯಸ್ಸಾಗಿದೆ ಅವಳಿಗೆ, ಯಾರೊಂದಿಗೆ ಹೇಗೆ ಮಾತನಾಡಬೇಕು ಎಂಬುದು ಗೊತ್ತಿಲ್ಲ. ಸ್ವಲ್ಪವೂ ಬುದ್ಧಿ ಇಲ್ಲ. ಬಹಳ ಕೆಟ್ಟ ನಡವಳಿಕೆ ಇರುವ ಹೆಣ್ಣು ಈಕೆ'' ಎಂದು ಜೋರು ಧ್ವನಿಯಲ್ಲಿ ಕಿರುಚಿದ್ದಾರೆ ಅಕ್ಷರಾ ಸಿಂಗ್. ಅಕ್ಷರಾಳ ನಿಂದನೆ ಕೇಳಿ ಅವಾಕ್ಕಾಗಿದ್ದಾರೆ ನಟಿ ಶಮಿತಾ ಶೆಟ್ಟಿ. ಅಕ್ಷರಾ ಸಿಂಗ್ ಕೇವಲ ಶಮಿತಾ ಮೇಲೆ ಮಾತ್ರವೇ ಅಲ್ಲದೆ ಇನ್ನೂ ಹಲವರ ಮೇಲೆ ಜಗಳವಾಡಿದ್ದಾರೆ. ಬಿಗ್‌ಬಾಸ್ ಒಟಿಟಿ ಮನೆಯಲ್ಲಿ ಅತಿ ಹೆಚ್ಚು ಜಗಳ ಮಾಡುವ ಸ್ಪರ್ಧಿಯೆಂದೇ ಅಕ್ಷರಾ ಖ್ಯಾತರು. ಅಕ್ಷರಾ ಈ ಹಿಂದೆಯೂ ಶಮಿತಾ ಶೆಟ್ಟಿ ವಿರುದ್ಧ ಜಗಳ ಮಾಡಿದ್ದರು.

ಕಣ್ಣೀರು ಹಾಕಿದ್ದ ಶಮಿತಾ ಶೆಟ್ಟಿ

ಕಣ್ಣೀರು ಹಾಕಿದ್ದ ಶಮಿತಾ ಶೆಟ್ಟಿ

ಕೆಲವು ದಿನಗಳ ಹಿಂದಷ್ಟೆ ಶಮಿತಾ ಶೆಟ್ಟಿ ಬಿಗ್‌ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದರು. 20 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದೀನಿ ಆದರೆ ನನ್ನ ಸಿನಿ ಪಯಣ ಬಹಳ ಕಠಿಣವಾಗಿತ್ತು. ಅದರಲ್ಲೂ ಅಕ್ಕನ ನೆರಳಿನಲ್ಲಿರುವುದು ಸುಲಭವಲ್ಲ. ಎಲ್ಲರೂ ಅಕ್ಕನೊಂದಿಗೆ ಹೋಲಿಸಿಯೇ ನನ್ನ ನೋಡುತ್ತಾರೆ. ಆದರೆ ನಾನು ನನ್ನ ಪ್ರತ್ಯೇಕ ಗುರುತನ್ನು ಸಂಪಾದಿಸಿಕೊಂಡಿದ್ದೇನೆ. ಅಂಥಹಾ ಅಕ್ಕನನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದರು. ಶಮಿತಾರನ್ನು ಸಮಾಧಾನ ಮಾಡಿದ ಕರಣ್ ಜೋಹರ್, ಈ ಬಿಗ್‌ಬಾಸ್ ಶೋ ಮೂಲಕ ಜನರು ನಿನ್ನನ್ನು ಇನ್ನೂ ಹೆಚ್ಚು ಅರಿತುಕೊಳ್ಳುತ್ತಾರೆ ಎಂದಿದ್ದರು.

More from Filmibeat

English summary
Actress Shamita Shetty and Akshara Singh fight for salt bottle in Bigg Boss OTT. Akshara calls Shamita aged fool.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X