ಬಿಗ್ ಬಾಸ್ ಒಟಿಟಿ: ಇಡೀ ಮನೆ ಹೊತ್ತಿ ಉರಿಯುತ್ತಿದ್ದರೂ ಶಮಿತಾ ಶೆಟ್ಟಿ ಸೈಲೆಂಟ್ ಆಗಿ ಇದ್ದಿದ್ದೇಕೆ?
ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಹೋಸ್ಟ್ ಮಾಡುತ್ತಿರುವ ಬಿಗ್ ಬಾಸ್ ಒಟಿಟಿ ಶೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಿಗ್ ಮನೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸ್ಪರ್ಧಿಗಳ ನಡುವೆ ಕಿತ್ತಾಟ, ಕೂಗಾಟ ಜೋರಾಗುತ್ತಲೇ ಇದೆ. ಈ ಶೋನಲ್ಲಿ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಹೆಚ್ಚು ಹೈಲೈಟ್ ಆಗುತ್ತಿದ್ದಾರೆ.
ಬಿಗ್ ಮನೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಸ್ಪರ್ಧಿ ಎಂದರೆ ಶಮಿತಾ. ಆದರೆ ಇಂದು (ಆಗಸ್ಟ್ 22) ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಇಡೀ ಮನೆಹೊತ್ತಿ ಉರಿಯುತ್ತಿದ್ದರೂ ಶಮಿತಾ ಮಾತ್ರ ಸೈಲೆಂಟ್ ಆಗಿ ಎಲ್ಲವನ್ನು ವೀಕ್ಷಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಸಹ ಸ್ಪರ್ಧಿಗಳ ಜೊತೆ ಸದಾ ಜಗಳವಾಡುತ್ತಿದ್ದ ಶಮಿತಾ ಸೈಲೆಂಟ್ ಆಗಿ ಅಡುಗೆ ಮನೆ ಸೇರಿರುವುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಬಿಗ್ ಮನೆಯಲ್ಲಿ ಅಕ್ಷರಾ ಸಿಂಗ್ ಮತ್ತು ಜೀಶನ್ ಖಾನ್ ಜೋರಾಗಿ ಜಗಳವಾಡುತ್ತಿದ್ದಾರೆ. ಇಡೀ ಮನೆ ಅವರ ಜಗಳ ಬಿಡಿಸಲು ಪರಾದುಡುತ್ತಿದ್ದಾರೆ, ಆದರೆ ಶಮಿತಾ ಮಾತ್ರ ಎಂಟ್ರಿ ಕೊಟ್ಟಿಲ್ಲ. ಕಿಚನ್ ಸೇರಿರುವ ಶಮಿತಾ ರೋಟಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷರಾ ಸಿಂಗ್, ಜೀಶನ್ ಖಾನ್ ಗೆ ಜೋರಾಗಿ ಬೈಯುತ್ತಾ ಮಹಿಳೆಯರ ಜೊತೆ ಹೇಗೆ ಮಾತನಾಡಬೇಕೆಂದು ಗೊತ್ತಿಲ್ಲ ಎಂದು ಜೋರಾಗಿ ಕೂಗಾಡಿದ್ದಾರೆ.

ಇತ್ತೀಚಿಗೆ ಅಕ್ಷರಾ ಸಿಂಗ್, ವಯಸ್ಸಿನ ವಿಚಾರ ಇಟ್ಟುಕೊಂಡು ಶಮಿತಾಗೆ ಚುಚ್ಚು ಮಾತುಗಳನ್ನು ಆಡುತ್ತಿದ್ದರು. ಸ್ಪರ್ಧಿ ಅಕ್ಷರಾ ಸಿಂಗ್, ಶಮಿತಾಗೆ ತಾಯಿಯ ವಯಸ್ಸಾಗಿದೆ ಎಂದು ಆಡಿಕೊಳ್ಳುತ್ತಾ ಜೋರಾಗಿ ನಕ್ಕಿದ್ದರು. ತಾಯಿಯ ವಯಸ್ಸಾಗಿದೆ ಎಂದು ನಗುತ್ತಾ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿ, ಅಕ್ಷರಾ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರು.
ಟಾಸ್ಕ್ ಗಳ ವಿಚಾರಗಳಲ್ಲೂ ಶಮಿತಾ ಶೆಟ್ಟಿ ಪ್ರಬಲ ಸ್ಪರ್ಧಿಯಾಗಿದ್ದಾರೆ. ವೈಯಕ್ತಿಕ ಮತ್ತು ಗುಂಪು ಟಾಸ್ಕ್ ಗಳನ್ನು ಗಂಭೀರವಾಗಿ ಪರಿಗಣಿಸಿ ಆಡುತ್ತಿರುವ ಶಮಿತಾ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಕಟ್ಟುನಿಟ್ಟಿನ ಸ್ಪರ್ಧಿಯಾಗಿರುವ ಶಮಿತಾ, ಇತ್ತೀಚಿಗಷ್ಟೆ ಸಹ ಸ್ಪರ್ಧಿ ರಾಕೇಶ್ ಬಾಪಟ್ ಅವರನ್ನು ಮೂತ್ರ ವಿಸರ್ಜನೆಗೆ ಹೋಗದಂತೆ ತಡೆದು ಸುದ್ದಿಯಾಗಿದ್ದರು.
ಟಾಸ್ಕ್ ನಲ್ಲಿ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಇಬ್ಬರು ಸಂಚಾಲಕರಾಗಿದ್ದರು. ರಾಕೇಶ್ ತನ್ನ ಕೆಲಸ ಬಿಟ್ಟು ಮಧ್ಯದಲ್ಲೇ ವಾಶ್ ರೂಮ್ ಗೆ ಹೋಗಿದ್ದರು. ಈ ಸಮಯದಲ್ಲಿ ಶಮಿತಾ ಟಾಸ್ಕ್ ನಡುವೆ ವಾಶ್ ರೂಮ್ ಗೆ ಹೋಗದಂತೆ ಗದರಿಸಿದ್ದಾರೆ. ಈ ಸಮಯದಲ್ಲಿ ಶಮಿತಾ ಸಹ ಸ್ಪರ್ಧಿ ರಾಕೇಶ್ ಗೆ "ಮೂತ್ರ ವಿಸರ್ಜನೆಗೆ ಹೋಗುವ ಹಾಗಿಲ್ಲ. ಇಲ್ಲ ಅಂದರೆ ಡೈಪರ್ ಹಾಕ್ಕೋ. ನಾನು ಇದಕ್ಕೆಲ್ಲ ಹೆದರಲ್ಲ" ಎಂದು ಖಡಕ್ ವಾರ್ನಿಂಗ್ ಮಾಡಿದ್ದರು.
ಶಮಿತಾ ಮಾತಿಗೆ ಪ್ರತಿಯಾಗಿ ಸ್ಪರ್ಧಿ ರಾಕೇಶ್ 'ಆಯ್ಕೆ ಇದ್ದಿದ್ದರೇ ಖಂಡಿತ ಡೈಪರ್ ಹಾಕುತ್ತಿದ್ದೆ' ಎಂದು ಶಮಿತಾಗೆ ಉತ್ತರಿಸಿದ್ದರು. ಈ ವಿಡಿಯೋ ಈ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತು. ಅಂದಹಾಗೆ ಬಿಗ್ ಬಾಸ್ ಮನೆಯಲ್ಲಿ ಶಮಿತಾ ಶೆಟ್ಟಿ ಡೋಮಿನೇಟ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಪ್ರಬಲ ಸ್ಪರ್ಧಿಯಾಗಿರುವ ಶಮಿತಾ ವಿರುದ್ಧ ಅನೇಕ ಸ್ಪರ್ಧಿಗಳು ಕಿಡಿ ಕಾರುತ್ತಿದ್ದಾರೆ. ಶಮಿತಾ ಜೊತೆ ಜಗಳವಾಡುತ್ತಲೇ ಇರುತ್ತಾರೆ. ಆದರೆ ಇವತ್ತಿನ ಪ್ರೋಮೋದಲ್ಲಿ ಶಮಿತಾ ಸೈಲೆಂಟ್ ಆಗಿರುವುದು ಗಮನ ಸೆಳೆಯುತ್ತಿದೆ.


Click it and Unblock the Notifications











