For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಮನೆಯಲ್ಲಿ ಶಮಿತಾ ಶೆಟ್ಟಿ ಪ್ರೀತಿ: ತಾಯಿಯ ಒಪ್ಪಿಗೆ

  |

  ನಟಿ ಶಮಿತಾ ಶೆಟ್ಟಿ ಈಗ ಬಿಗ್‌ಬಾಸ್ ಒಟಿಟಿ ಮನೆಯಲ್ಲಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಶಮಿತಾ ಹಾಗೂ ರಾಕೇಶ್ ನಡುವೆ ಆತ್ಮೀಯತೆಯೊಂದು ಬೆಳೆದಿದೆ. ಇಬ್ಬರೂ ಪರಸ್ಪರ ಪ್ರೀತಿಯಲ್ಲಿದ್ದಾರೆ ಎಂದೇ ಪ್ರೇಕ್ಷಕರು ಹೇಳುತ್ತಿದ್ದಾರೆ. ಅವರಿಬ್ಬರ ವರ್ತನೆಗಳು ಅದನ್ನೇ ಹೇಳುತ್ತಿವೆ.

  ಇದೀಗ ಶಮಿತಾ ಶೆಟ್ಟಿ ಹಾಗೂ ರಾಕೇಶ್ ಸಂಬಂಧಕ್ಕೆ ಶಮಿತಾರ ತಾಯಿ ಸಹ ಪರೋಕ್ಷವಾಗಿ ಒಪ್ಪಿಗೆ ನೀಡಿದ್ದಾರೆ. ಶಮಿತಾ ಶೆಟ್ಟಿ ಹಾಗೂ ರಾಕೇಶ್ ಆತ್ಮೀಯತೆ ಬಗ್ಗೆ ಇತ್ತೀಚೆಗೆ ಅವರ ತಾಯಿ ಸುನಂದಾ ಶೆಟ್ಟಿಗೆ ಪ್ರಶ್ನೆ ಎದುರಾಯಿತು. ಪ್ರಶ್ನೆಗೆ ಉತ್ತರಿಸಿದ ಸುನಂದಾ ಶೆಟ್ಟಿ, 'ರಾಕೇಶ್ ಬಹಳ ಒಳ್ಳೆಯ ಹುಡುಗ, ಒಳ್ಳೆಯ ಜಂಟಲ್‌ಮ್ಯಾನ್' ಎಂದಿದ್ದಾರೆ.

  ಶಮಿತಾ ಶೆಟ್ಟಿಯ ತಾಯಿ ಸುನಂದಾ ಶೆಟ್ಟಿ ಬಿಗ್‌ಬಾಸ್ ಮನೆಗೆ ಭೇಟಿ ನೀಡಿದ್ದರು. ಈ ಸಮಯ ಶಮಿತಾ ಶೆಟ್ಟಿ ಜೊತೆ ಕೆಲ ಕಾಲ ಸಮಯ ಕಳೆದರು. ಶಿಲ್ಪಾ ಶೆಟ್ಟಿಯ ಬಗ್ಗೆ ಶಮಿತಾ ಶೆಟ್ಟಿ ತಾಯಿ ಬಳಿ ವಿಚಾರಿಸಿದರು. ಮನೆಯ ವಾತಾವರಣ ಹೇಗಿದೆ? ಎಂದು ಸಹ ಕೇಳಿದರು.

  ''ಶಿಲ್ಪಾ ಚೆನ್ನಾಗಿದ್ದಾಳೆ. ಆಕೆ ನಿನ್ನನ್ನು ತುಂಬ ಮಿಸ್​ ಮಾಡಿಕೊಳ್ಳುತ್ತಿದ್ದಾಳೆ. ನಿನ್ನ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ. ಶಿಲ್ಪಾ ಬ್ಯುಸಿ ಆಗಿದ್ದರೂ ಕೂಡ ನನ್ನ ಬಳಿ ಕೇಳಿ ನಿನ್ನ ಬಗ್ಗೆ ಅಪ್​ಡೇಟ್​ ತಿಳಿದುಕೊಳ್ಳುತ್ತಾಳೆ. ನಾವು ಮೂವರು ಈ ಕುಟುಂಬದ ಗಟ್ಟಿ ಮಹಿಳೆಯರು'' ಎಂದು ಶಮಿತಾಗೆ ಧೈರ್ಯ ತುಂಬಿದರು ಸುನಂದಾ ಶೆಟ್ಟಿ.

  ಬಿಗ್‌ಬಾಸ್‌ ಒಟಿಟಿ ಮನೆಯಲ್ಲಿ ಶಮಿತಾ ಹಾಗೂ ರಾಕೇಶ್ ಬಾಪಟ್ ಆತ್ಮೀಯತೆಯದ್ದೇ ಸುದ್ದಿ. ರಾಕೇಶ್ ಕೆಲವು ಬಾರಿ ಶಮಿತಾಗೆ ಮುತ್ತು ಕೊಟ್ಟ ಮೇಲಂತೂ ಇವರಿಬ್ಬರೂ ಪ್ರೀತಿಯಲ್ಲಿದ್ದಾರೆ ಎಂಬ ಟಾಕ್ಸ್ ಜೋರಾಗಿ ಹರಿದಾಡುತ್ತಿದೆ.

  ಶಮಿತಾ ಶೆಟ್ಟಿ ಬಿಗ್‌ಬಾಸ್‌ ಒಟಿಟಿ ಮನೆಯೊಳಗಿನ ಗೆಲ್ಲುವ ಸ್ಪರ್ಧಿ ಎಂದು ಗುರುತಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಇತರೆ ಸ್ಪರ್ಧಿಗಳೊಟ್ಟಿಗೆ ಹೊಂದಿಕೊಳ್ಳಲು ಬಹಳ ಕಷ್ಟಪಟ್ಟ ಶಮಿತಾ ಶೆಟ್ಟಿ ಈಗ ಬಹಳ ಚೆನ್ನಾಗಿ ಆಟವಾಡುತ್ತಿದ್ದಾರೆ.

  ಹಲವು ಖಾಸಗಿ ವಿಷಯಗಳನ್ನು ಶಮಿತಾ ಶೆಟ್ಟಿ ಬಿಗ್‌ಬಾಸ್ ಒಟಿಟಿ ಮನೆಯಲ್ಲಿ ಹಂಚಿಕೊಂಡಿದ್ದಾರೆ. ಅಕ್ಕನ ನೆರಳಿನಲ್ಲಿ ಬೆಳೆಯುವುದು ಕಷ್ಟವಾದ ಪರಿ. ಎರಡು ದಶಕದಿಂದಲೂ ಚಿತ್ರರಂಗದಲ್ಲಿದ್ದರೂ ಸರಿಯಾಗಿ ಅವಕಾಶಗಳು ಸಿಗದೆ ಇರುವ ಬಗ್ಗೆ, ತಾನು ಚಿತ್ರರಂಗದಲ್ಲಿ ಮಾಡಿದ ಹೋರಾಟಗಳ ಬಗ್ಗೆ ಶಮಿತಾ ಶೆಟ್ಟಿ ಮಾತನಾಡಿದ್ದಾರೆ.

  ತಮ್ಮ ಮೊದಲ ಬಾಯ್‌ಫ್ರೆಂಡ್ ಕಾರು ಅಪಘಾತದಲ್ಲಿ ತೀರಿಕೊಂಡ ಬಗ್ಗೆಯೂ ಮಾತನಾಡಿದ ಶಮಿತಾ ಶೆಟ್ಟಿ, ಆ ಆಘಾತದಿಂದ ತಮಗೆ ಇನ್ನೂ ಹೊರಬರಲು ಆಗಿಲ್ಲವೆಂದು ಹೇಳಿಕೊಂಡಿದ್ದಾರೆ. ಶಮಿತಾ ಶೆಟ್ಟಿಗೆ ಈಗ 42 ವರ್ಷ ವಯಸ್ಸು ಆದರೆ ಇನ್ನೂ ಮದುವೆಯಾಗಿಲ್ಲ.

  English summary
  Shamita Shetty's mother Sunanda Shetty said Raqesh Bapat is a genteel. Shamita and Raqesh Bapat are very close in Bigg Boss OTT house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X