ತಮ್ಮ ಜೀವನದ ಕರಾಳ ಘಟನೆ ಬಗ್ಗೆ ಹೇಳಿಕೊಂಡ ನಟಿ ಶಮಿತಾ ಶೆಟ್ಟಿ

By ಫಿಲ್ಮಿಬೀಟ್ ಡೆಸ್ಕ್

ನಟಿ ಶಮಿತಾ ಶೆಟ್ಟಿ ಬಿಗ್‌ಬಾಸ್ ಒಟಿಟಿಯಲ್ಲಿ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಗೆಲ್ಲುವ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಬಿಗ್‌ಬಾಸ್ ಒಟಿಟಿ ಮನೆಯಲ್ಲಿ ಭಾವನಾತ್ಮಕವಾಗಿ ಅವರು ಇತರ ಸ್ಪರ್ಧಿಗಳನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.

ತನ್ನ ಅಕ್ಕ ಶಿಲ್ಪಾ ಶೆಟ್ಟಿಯ ಬಗ್ಗೆ, ಚಿತ್ರರಂಗದಲ್ಲಿ ತಾವು ಎದುರಿಸಿದ ಕಷ್ಟಗಳ ಬಗ್ಗೆ ಕಣ್ಣೀರು ತುಂಬಿಕೊಂಡು ಮಾತನಾಡಿ ಪ್ರೇಕ್ಷಕರ, ಸ್ಪರ್ಧಿಗಳ ಸಿಂಪತಿ ಗಿಟ್ಟಿಸಿಕೊಂಡಿದ್ದ ಶಮಿತಾ ಶೆಟ್ಟಿ ತಮ್ಮ ಜೀವನದ ಕರಾಳ ಅನುಭವವೊಂದನ್ನು ಶೋನಲ್ಲಿ ಬಿಚ್ಚಿಟ್ಟಿದ್ದಾರೆ.

ಶಮಿತಾ ಶೆಟ್ಟಿಗೆ ಈಗ ವಯಸ್ಸು 42. ಇನ್ನೂ ಮದುವೆಯಾಗಿಲ್ಲ. ಶಮಿತಾ ಶೆಟ್ಟಿ ಹಾಲಿ ಬಾಯ್‌ಫ್ರೆಂಡ್‌ ಇಲ್ಲ. ಬಿಗ್‌ಬಾಸ್‌ ಮನೆಯಲ್ಲಿ ಒಬ್ಬ ಸ್ಪರ್ಧಿಯೊಂದಿಗೆ ಬಹಳ ಕ್ಲೋಸ್‌ ಆಗಿದ್ದಾರೆ. ಆದರೆ ಶಮಿತಾ ತಮ್ಮ ಮೊದಲ ಬಾಯ್‌ಫ್ರೆಂಡ್‌ ಬಗ್ಗೆ ಶೋನಲ್ಲಿ ಮಾತನಾಡಿದ್ದಾರೆ. ಆತನ ದುರಂತ ಅಂತ್ಯದ ಬಗ್ಗೆ ಹೇಳಿಕೊಂಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ರಾಕೇಶ್ ಜೊತೆ ಶಮಿತಾ ಕ್ಲೋಸ್‌ ಆಗಿದ್ದಾರೆ. ಇದೇ ವಿಷಯವನ್ನು ಮತ್ತೊಬ್ಬ ಸ್ಪರ್ಧಿ ನೇಹಾ, ಶಮಿತಾ ಬಳಿ ಕೇಳಿದಾಗ, ಶಮಿತಾ ತಮ್ಮ ಜೀವನದಲ್ಲಿ ನಡೆದ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ''ನಾನು ಪ್ರೀತಿಸಿದ ಮೊದಲ ವ್ಯಕ್ತಿ, ನನ್ನ ಮೊದಲ ಬಾಯ್‌ಫ್ರೆಂಡ್ ಕಾರು ಅಪಘಾತದಲ್ಲಿ ಮರಣ ಹೊಂದಿದ'' ಎಂದಿದ್ದಾರೆ.

ಆ ಆಘಾತದಿಂದ ಕಷ್ಟಪಟ್ಟು ಹೊರಬಂದಿದ್ದೀನಿ: ಶಮಿತಾ

ಆ ಆಘಾತದಿಂದ ಕಷ್ಟಪಟ್ಟು ಹೊರಬಂದಿದ್ದೀನಿ: ಶಮಿತಾ

''ಆ ಘಟನೆ ಆದಾಗಿನಿಂದಲೂ ನನ್ನ ಜೀವನದಲ್ಲಿ ಮತ್ತೊಬ್ಬ ವ್ಯಕ್ತಿ ಬರಲು ನಾನು ಬಿಟ್ಟಿಲ್ಲ. ಆ ಆಘಾತದಿಂದ ಹೊರಗೆ ಬರಲು ನಾನು ಬಹಳ ಕಷ್ಟಪಟ್ಟಿದ್ದೇನೆ. ಮುರಿದು ಹೋದ ನನ್ನನ್ನು ನಾನೇ ಮತ್ತೆ ಜೊಡಿಸಿಕೊಂಡು ಎದ್ದು ನಿಂತಿದ್ದೇನೆ. ಬಹಳ ಹೋರಾಟವನ್ನು ನಾನು ಮಾಡಿದ್ದೇನೆ'' ಎಂದಿದ್ದಾರೆ ಶಮಿತಾ ಶೆಟ್ಟಿ.

ರಾಕೇಶ್ ಬಹಳ ಲವ್ಲಿ ಬಾಯ್: ಶಮಿತಾ ಶೆಟ್ಟಿ

ರಾಕೇಶ್ ಬಹಳ ಲವ್ಲಿ ಬಾಯ್: ಶಮಿತಾ ಶೆಟ್ಟಿ

ಬಿಗ್‌ ಬಾಸ್ ಮನೆಯ ಸ್ಪರ್ಧಿ ರಾಕೇಶ್‌ ಜೊತೆಗೆ ಆಪ್ತ ಸಂಬಂಧವನ್ನು ಶಮಿತಾ ಶೆಟ್ಟಿ ಹೊಂದಿದ್ದಾರೆ. ಆರಂಭದಿಂದಲೂ ಈ ಇಬ್ಬರೂ ಕ್ಲೋಸ್ ಆಗಿದ್ದಾರೆ. ಆ ಬಗ್ಗೆ ನೇಹಾ ಪ್ರಶ್ನೆ ಮಾಡಿದಾಗ, ''ರಾಕೇಶ್ ಒಳ್ಳೆಯವನು, ಲವ್ಲಿ ಬಾಯ್ ಅವನು, ನನಗೆ ಅವನು ಇಷ್ಟ ಆದರೆ ಆತ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸದಾ ಗೊಂದಲದಲ್ಲಿರುತ್ತಾನೆ. ಅವನ ಆ ಗುಣ ನನಗೆ ಇಷ್ಟವಾಗುವುದಿಲ್ಲ'' ಎಂದಿದ್ದಾರೆ ಶಮಿತಾ ಶೆಟ್ಟಿ.

ರಾಕೇಶ್ ಅನ್ನು ಉಳಿಸಲು ಪತ್ರ ಹರಿದ ಶಮಿತಾ

ರಾಕೇಶ್ ಅನ್ನು ಉಳಿಸಲು ಪತ್ರ ಹರಿದ ಶಮಿತಾ

ರಾಕೇಶ್ ಹಾಗೂ ಶಮಿತಾ ಬಹಳ ಕ್ಲೋಸ್ ಆಗಿದ್ದಾರೆ. ಪರಸ್ಪರ ತಬ್ಬಿಕೊಳ್ಳುವುದು, ಮುತ್ತು ಕೊಟ್ಟುಕೊಳ್ಳುವುದು ಇಬ್ಬರ ನಡುವೆ ನಡೆದಿದೆ. ಟಾಸ್ಕ್ ಒಂದರಲ್ಲಿ ಶಮಿತಾ ತಮ್ಮ ಹೃದಯವನ್ನು ರಾಕೇಶ್‌ಗೆ ಕೊಟ್ಟಿದ್ದರು. ಇತ್ತೀಚೆಗೆ ರಾಕೇಶ್ ನಾಮಿನೇಟ್ ಆಗಿದ್ದಾಗ, ಆತನನ್ನು ಕಾಪಾಡಲು ಶಮಿತಾ, ತನ್ನ ಕುಟುಂಬದಿಂದ ಬಂದಿದ್ದ ಪತ್ರವನ್ನು ಹರಿದು ಬಿಸಾಡಿದ್ದರು. ಪತ್ರ ಹರಿದರೆ ರಾಕೇಶ್ ಎಲಿಮಿನೇಶನ್‌ನಿಂದ ಬಚಾವ್ ಆಗುತ್ತಾನೆ ಎಂದು ಬಿಗ್‌ಬಾಸ್ ಹೇಳಿದ್ದರು.

ಸಂದರ್ಶನದಲ್ಲಿ ಹೇಳಿಕೊಂಡಿದ್ದ ಶಮಿತಾ

ಸಂದರ್ಶನದಲ್ಲಿ ಹೇಳಿಕೊಂಡಿದ್ದ ಶಮಿತಾ

ಮದುವೆ ಆಗದೇ ಇರುವ ಬಗ್ಗೆ ಖಾಸಗಿ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಶಮಿತಾ ಶೆಟ್ಟಿ, ''ನನ್ನ ಜೀವನಕ್ಕೆ ಸರಿಯಾದ ವ್ಯಕ್ತಿ ಸಿಕ್ಕಾಗ ವಿವಾಹ ಮಾಡಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ. ವಾಸ್ತವವಾಗಿ ಸಮಾಜವನ್ನು ನೋಡಿದ ಬಳಿಕ ಒಂಟಿಯಾಗಿರುವುದು ಲೇಸು ಎಂದೆನಿಸುತ್ತದೆ. ನಾನು ಸಿಂಗಲ್ ಆಗಿ ಆರಾಮಾಗಿದ್ದೇನೆ. ಮದುವೆಯಾದಾಗ ಜೊತೆಗಾರರು ಸರಿಯಾದ ಗೌರವ ಕೊಡಲ್ಲ ಎಂದು ಶಮಿತಾ ಸಂದರ್ಶನದಲ್ಲಿ ಜನರು ಮದುವೆಯಾಗಿದ್ದರೂ, ಮತ್ತೊಂದೆಡೆ ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ. ಮದುವೆ ನಂತರ ತನ್ನ ಜೊತೆಗಾರರನ್ನು ಸರಿಯಾಗಿ ಗೌರವಿಸಲ್ಲ. ಮದುವೆಗೆ ಮುಂಚೆ ಇದ್ದ ರೀತಿ ನಡೆಸಿಕೊಳ್ಳುವುದಿಲ್ಲ. ಈಗಿನ ಸಮಾಜದಲ್ಲಿ ಪ್ರೀತಿಯಲ್ಲಿ ಬೀಳುವುದು, ಮದುವೆಯಾಗುವುದನ್ನು ನಾನು ನಂಬುವುದಿಲ್ಲ. ಇದೆಲ್ಲ ನನಗೆ ಸಂಬಂಧಿಸಿದ್ದಲ್ಲ'' ಎಂದಿದ್ದರು.

More from Filmibeat

English summary
Actress Shamita Shetty said her first boyfriend died in a car accident. She is now in Bigg Boss OTT house. She seems to have a good connection with contestant Raqesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X