For Quick Alerts
  ALLOW NOTIFICATIONS  
  For Daily Alerts

  ಒಟಿಟಿಯಲ್ಲಿ 'ಶಂಷೇರಾ'; ಎಲ್ಲಿಗೆ.. ಯಾವಾಗ?

  |

  ಅದ್ಯಾಕೋ ಈ ವರ್ಷ ಬಾಲಿವುಡ್ ನಸೀಬೇ ಚೆನ್ನಾಗಿಲ್ಲ ಅನ್ನಿಸುತ್ತೆ. ದೊಡ್ಡ ದೊಡ್ಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತಿವೆ. ಈ ವರ್ಷ ರಿಲೀಸ್ ಆಗಿರೋ ಬಹುತೇಕ ಹಿಂದಿ ಸಿನಿಮಾಗಳು ಸೋಲುಂಡಿವೆ. ಇದೇ ಸಾಲಿಗೆ ರಣ್‌ಬೀರ್‌ ಕಪೂರ್ ನಟನೆಯ 'ಶಂಷೇರಾ' ಸಿನಿಮಾ ಕೂಡ ಸೇರಿಕೊಂಡಿದೆ. ಕಳೆದ ಶುಕ್ರವಾರ ತೆರೆಕಂಡ ಚಿತ್ರಕ್ಕೆ ಮೊದಲ ದಿನವೇ ಹಿನ್ನಡೆ ಉಂಟಾಗಿತ್ತು. ವಿಮರ್ಶಕರು ಕೂಡ ಸಿನಿಮಾ ನೋಡಿ ಶಾಕ್ ಆಗಿದ್ದರು. ಬಹುಕೋಟಿ ವೆಚ್ಚದಲ್ಲಿ ಅದ್ಧೂರಿ ತಾರಾಗಣದಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದೇನೋ ನಿಜ. ಆದರೆ ಕಳಪೆ ಸ್ಕ್ರೀನ್‌ ಪ್ಲೇ ಚಿತ್ರವನ್ನು ಹಳ್ಳ ಹಿಡಿಸಿದೆ.

  ಕರಣ್ ಮಲ್ಹೋತ್ರಾ ನಿರ್ದೇಶನದ ಈ ಐತಿಹಾಸಿಕ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ಯಶ್‌ ರಾಜ್‌ ಫಿಲ್ಮ್ಸ್ ಬ್ಯಾನರ್‌ನಲ್ಲಿ ಆದಿತ್ಯಾ ಚೋಪ್ರಾ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಂಜಯ್ ದತ್, ವಾಣಿ ಕಪೂರ್, ಸೌರಭ್ ಶುಕ್ಲಾ ಸೇರಿದಂತೆ ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಸೂಪರ್ ಹಿಟ್ 'ಸಂಜು' ರಿಲೀಸ್ ಆಗಿ 4 ವರ್ಷಗಳ ನಂತರ 'ಶಂಷೇರಾ' ಆಗಿ ರಣ್‌ಬೀರ್ ಕಪೂರ್ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಚಿತ್ರ ಮಾತ್ರ ನಿರೀಕ್ಷೆ ಹುಸಿ ಮಾಡಿದೆ.

  ಶಂಷೇರಾ ಸಿನಿಮಾ ವಿಮರ್ಶೆ: ಕಳಪೆ ಚಿತ್ರಕತೆಯಲ್ಲಿ ರಣ್ಬೀರ್ ಮಿಂಚುಶಂಷೇರಾ ಸಿನಿಮಾ ವಿಮರ್ಶೆ: ಕಳಪೆ ಚಿತ್ರಕತೆಯಲ್ಲಿ ರಣ್ಬೀರ್ ಮಿಂಚು

  ಶತದಿನೋತ್ಸವದ ಕಲ್ಪನೆ ಹೋಗಿ ಫಸ್ಟ್‌ ವೀಕ್, ಸೆಕೆಂಡ್ ವೀಕ್ ಕಲೆಕ್ಷನ್ ಲೆಕ್ಕಾಚಾರ ಶುರುವಾಗಿದೆ. ಫಸ್ಟ್ ವೀಕೆಂಡ್‌ನಲ್ಲಿ 'ಶಂಷೇರಾ' ಸಿನಿಮಾ ಹೀನಾಯವಾಗಿ ಸೋಲುಂಡಿದ್ದು, ಪ್ರೇಕ್ಷಕರ ಬರ ಎದುರಿಸುತ್ತಿದೆ. ಸದ್ಯದ ಬಾಕ್ಸಾಫೀಸ್ ರಿಪೋರ್ಟ್ ನೋಡುತ್ತಿದ್ದರೆ ಫಸ್ಟ್‌ ವೀಕ್‌ ಮುಕ್ತಾಯದ ವೇಳೆಗೆ ಸಿನಿಮಾ ಥಿಯೇಟರ್‌ಗಳಿಂದ ಗಂಟುಮೂಟೆ ಕಟ್ಟುವ ಸುಳಿವು ಸಿಗುತ್ತಿದೆ. ಥಿಯೇಟರ್ ನಂತರ ಒಟಿಟಿಗೆ ಯಾವಾಗ ಅನ್ನುವ ಪ್ರಶ್ನೆ ಮೂಡುವುದು ಸಹಜ.

  ನಿಮ್ಮ ಮಧುರ ಕ್ಷಣಗಳಲ್ಲಿ ನಾವು ಇರಲಿಲ್ಲ: ಕಾಂಡೋಮ್ ಕಂಪನಿ ಟ್ವೀಟ್‌ ಭೇಷ್ ಎಂದ ನೆಟ್ಟಿಗರು! ನಿಮ್ಮ ಮಧುರ ಕ್ಷಣಗಳಲ್ಲಿ ನಾವು ಇರಲಿಲ್ಲ: ಕಾಂಡೋಮ್ ಕಂಪನಿ ಟ್ವೀಟ್‌ ಭೇಷ್ ಎಂದ ನೆಟ್ಟಿಗರು!

   ಫಸ್ಟ್‌ ವೀಕೆಂಡ್ ಕಲೆಕ್ಷನ್ 31 ಕೋಟಿ ರೂ.

  ಫಸ್ಟ್‌ ವೀಕೆಂಡ್ ಕಲೆಕ್ಷನ್ 31 ಕೋಟಿ ರೂ.

  ಅಂದಾಜು 150 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿರೋ 'ಶಂಷೇರಾ' ಸಿನಿಮಾ ಫಸ್ಟ್ ವೀಕೆಂಡ್ 31 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಶುಕ್ರವಾರ 10.25 ಕೋಟಿ ರೂ. ಶನಿವಾರ 10.50 ಕೋಟಿ ರೂ. ಭಾನುವಾರ 11 ಕೋಟಿ ರೂ. ಗಳಿಕೆ ಮಾಡಿದ್ದು, ಸೋಮವಾರ, ಮಂಗಳವಾರವೂ ಸಿನಿಮಾ ಕಲೆಕ್ಷನ್ ಡಲ್ಲಾಗಿದೆ.

   ಪ್ರೇಕ್ಷಕರ ಬರ ಎದುರಿಸುತ್ತಿರುವ 'ಶಂಷೇರಾ'

  ಪ್ರೇಕ್ಷಕರ ಬರ ಎದುರಿಸುತ್ತಿರುವ 'ಶಂಷೇರಾ'

  ರಣ್‌ಬೀರ್ ಕಪೂರ್‌ ಕರಿಯರ್‌ನಲ್ಲೇ 'ಶಂಷೇರಾ' ಬಹಳ ದೊಡ್ಡ ಸೋಲುಂಡ ಸಿನಿಮಾ ಅನ್ನಿಸಿಕೊಂಡಿದೆ. ಕೆಲವೆಡೆ ಪ್ರೇಕ್ಷಕರು ಅರ್ಧದಲ್ಲೇ ಥಿಯೇಟರ್‌ಗಳಿಂದ ಎದ್ದು ಹೊರಟು ಹೋಗುತ್ತಿದ್ದಾರೆ. ಇನ್ನು ಪ್ರೇಕ್ಷಕರಿಲ್ಲದೇ ಸಾಕಷ್ಟು ಕಡೆಗಳಲ್ಲಿ 'ಶಂಷೇರಾ' ಶೋಗಳನ್ನು ರದ್ದು ಮಾಡಲಾಗುತ್ತಿದೆ.

   'ಶಂಷೇರಾ' ಸಿನಿಮಾ ಕಥೆ

  'ಶಂಷೇರಾ' ಸಿನಿಮಾ ಕಥೆ

  ಸೇಡಿನ ಕಥೆ ಆಧರಿಸಿ, 'ಶಂಷೇರಾ' ಸಿನಿಮಾ ಕಥೆ ಕಟ್ಟಿಕೊಡಲಾಗಿದೆ. 18ನೇ ಶತಮಾನದಲ್ಲಿ ನಡೆಯುವ ಕಥೆಯಲ್ಲಿ ರಣ್‌ಬೀರ್ ಕಪೂರ್ ತಂದೆ 'ಶಂಷೇರಾ' ಹಾಗೂ ಮಗ 'ಬಲ್ಲಿ' ಆಗಿ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ಸಿನಿಮಾ ಟ್ರೈಲರ್‌ ನೋಡಿದಾಗಲೇ ಅಭಿಮಾನಿಗಳಿಗೆ ಸಿನಿಮಾದ ಭವಿಷ್ಯ ಗೊತ್ತಾಗಿ ಹೋಗಿತ್ತು.

   ಒಟಿಟಿಯಲ್ಲಿ 'ಶಂಷೇರಾ' ಸಿನಿಮಾ

  ಒಟಿಟಿಯಲ್ಲಿ 'ಶಂಷೇರಾ' ಸಿನಿಮಾ

  ಈಗಾಗಲೇ ಅಮೆಜಾನ್ ಪ್ರೈಂ 'ಶಂಷೇರಾ' ಡಿಜಿಟಲ್ ಹಕ್ಕುನ್ನು ಭಾರೀ ಮೊತ್ತಕ್ಕೆ ಖರೀದಿಸಿದೆ. ಆಗಸ್ಟ್ 2ನೇ ವಾರದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ರಿಲೀಸ್ ಆದ 1 ತಿಂಗಳ ನಂತರ ಓಟಿಟಿಗೆ ಬರುತ್ತೆ. ಥಿಯೇಟರ್‌ಗಳಲ್ಲಿ ಹೀನಾಯ ಸೋಲುಂಡಿರುವ ಈ ಸಿನಿಮಾ ಆದಷ್ಟು ಬೇಗ ಸ್ಮಾಲ್‌ ಸ್ಕ್ರೀನ್‌ಗೆ ಬರುವ ನಿರೀಕ್ಷೆಯಿದೆ.

  English summary
  Shamshera Movie Will Be Streaming In OTT Platform And Date Fixed. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X