For Quick Alerts
  ALLOW NOTIFICATIONS  
  For Daily Alerts

  ಅದ್ಧೂರಿಯಾಗಿ ಒಟಿಟಿಗೆ ಬರ್ತಿದ್ದಾರೆ ಶಾರುಖ್ ಖಾನ್

  |

  ಬಾಲಿವುಡ್‌ನ ದೊಡ್ಡ-ದೊಡ್ಡ ಸ್ಟಾರ್‌ಗಳು ಒಟಿಟಿಗೆ ಬಂದಾಯಿತು. ಬಾಕಿ ಉಳಿದಿರುವುದು ಶಾರುಖ್ ಖಾನ್ ಹಾಗೂ ಅಮೀರ್ ಖಾನ್. ಇದೀಗ ಶಾರುಖ್ ಖಾನ್ ಸಹ ಒಟಿಟಿಗೆ ಬರುತ್ತಿದ್ದಾರೆ.

  ಶಾರುಖ್ ಖಾನ್, ಡಿಸ್ನಿ ಹಾಟ್‌ಸ್ಟಾರ್ ಮೂಲಕ ಒಟಿಟಿ ಪ್ರವೇಶ ಮಾಡಲಿದ್ದಾರೆ. ಈ ಬಗ್ಗೆ ಜಾಹೀರಾತನ್ನೇ ಬಿಡುಗಡೆ ಮಾಡಿದೆ ಡಿಸ್ನಿ ಹಾಟ್‌ಸ್ಟಾರ್.

  ಈಗೇನೋ ನಿಮಗೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ ಆದರೆ ಮುಂದೆ ಹೀಗೆ ಇರುತ್ತಾರೆಯೇ ಇಲ್ಲವೊ ಹೇಳಲು ಬರುವುದಿಲ್ಲ ಎಂದು ವ್ಯಕ್ತಿಯೊಬ್ಬ ಶಾರುಖ್‌ಗೆ ಹೇಳುತ್ತಾನೆ. ಈಗೆಲ್ಲ ಒಟಿಟಿ ಜಮಾನಾ, ಅಕ್ಷಯ್ ಕುಮಾರ್,ಅಜಯ್ ದೇವಗನ್, ಸಂಜಯ್ ದತ್ ಇನ್ನೂ ಹಲವು ನಟರು ಒಟಿಟಿಗೆ ಬಂದಿದ್ದಾರೆ. ನೀವೊಬ್ಬರು ಇನ್ನೂ ಒಟಿಟಿಗೆ ಬಂದಿಲ್ಲ ಎನ್ನುತ್ತಾನೆ. ವ್ಯಕ್ತಿಯ ಮಾತು ಕೇಳಿ ಆತಂಕಗೊಳ್ಳುತ್ತಾರೆ ಶಾರುಖ್. ಇದು ಡಿಸ್ನಿ ಹಾಟ್‌ಸ್ಟಾರ್ ಕೊಟ್ಟಿರುವ ಜಾಹೀರಾತು.

  ಜಾಹೀರಾತು ಕೊಡುವ ಮೂಲಕ ಶಾರುಖ್ ಖಾನ್ ಡಿಸ್ನಿ ಹಾಟ್‌ಸ್ಟಾರ್ ಮೂಲಕ ಒಟಿಟಿ ಪ್ರವೇಶ ಮಾಡಲಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿದ್ದಾರೆ. ಆದರೆ ಶಾರುಖ್ ಒಟಿಟಿ ಪ್ರವೇಶ ಮಾಡುತ್ತಿರುವುದು ಸಿನಿಮಾ ಮೂಲಕವೊ, ವೆಬ್ ಸರಣಿ ಮೂಲಕವೊ ಅಥವಾ ಇನ್ನಾವುದೇ ರಿಯಾಲಿಟಿ ಶೋ ಮೂಲಕವೊ ಖಾತ್ರಿಯಾಗಿಲ್ಲ.

  ಬಾಲಿವುಡ್‌ನ ಹಲವು ಸ್ಟಾರ್ ನಟರು ಒಟಿಟಿಗೆ ಬಂದಾಗಿದೆ. ಹಲವು ಸ್ಟಾರ್ ನಟರು ತಮ್ಮ ಸಿನಿಮಾಗಳನ್ನು ನೇರವಾಗಿ ಒಟಿಟಿಗೆ ಬಿಡುಗಡೆ ಮಾಡಿದ್ದಾರೆ. ಶಾರುಖ್ ಖಾನ್ ಹಾಗೂ ಅಮೀರ್ ಖಾನ್ ಮಾತ್ರವೇ ಈವರೆಗೆ ತಮ್ಮ ಸಿನಿಮಾವನ್ನು ಒಟಿಟಿಗೆ ನೇರ ಬಿಡುಗಡೆ ಮಾಡಿಲ್ಲ.

  ಶಾರುಖ್ ಖಾನ್ ಪ್ರಸ್ತುತ 'ಪಠಾಣ್' ಹೆಸರಿನ ಆಕ್ಷನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಹೃತಿಕ್ ರೋಷನ್ ಮತ್ತು ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ತಮಿಳಿನ ನಿರ್ದೇಶಕ ಅಟ್ಲಿ ಜೊತೆಗೆ ಹೊಸ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಇದರ ಬಳಿಕ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.

  English summary
  Sharukh Khan entering OTT with Disney hotstar soon. Disney Hotstar released a advertisement related to Sharukh entering OTT.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X