ಶೀಘ್ರದಲ್ಲಿಯೇ ತೆರೆಗೆ ಬರುತ್ತಿದೆ ಶಾರುಖ್ ಖಾನ್ 'ಬೇತಾಳ'!
ಈಗೆಲ್ಲರಿಗೂ ದೆವ್ವದ ಹುಚ್ಚು ಹಿಡಿದಿದೆ. ಇದಕ್ಕೆ ಕಾರಣ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ರೀತಿಯ ಓಟಿಟಿಗಳು. ಓಟಿಟಿಗಳಲ್ಲಿ ಥ್ರಿಲ್ಲರ್ ಕತೆಗಳನ್ನೇ ಹೆಚ್ಚು ಮಂದಿ ನೋಡುತ್ತಿರುವ ಕಾರಣ ಎಲ್ಲರೂ ಕೊಲೆ, ದೆವ್ವಗಳ ಹಿಂದೆ ಬಿದ್ದಿದ್ದಾರೆ.
ಪ್ರೇಮಕತೆಗಳಿಗೆ ಹೆಸರಾದ, ಅವುಗಳಿಂದಲೇ ವಿಶ್ವದಾದ್ಯಂತ ಖ್ಯಾತಿ ಗಳಿಸಿದ ಶಾರುಖ್ ಖಾನ್ ಸಹ 'ಬೇತಾಳ'ದಂತಹಾ ದೆವ್ವದ ಕತೆಗಳ ಹಿಂದೆ ಬಿದ್ದಿದ್ದಾರೆ.
ಶಾರುಖ್ ಖಾನ್ 'ಬೇತಾಲ್' ಎಂಬ ಹೊಸ ವೆಬ್ ಸರಣಿ ನಿರ್ಮಿಸಿದ್ದು, ಅದು ನೆಟ್‌ಫ್ಲಿಕ್ಸ್ ನಲ್ಲಿ ಇದೇ ತಿಂಗಳ 24 ಕ್ಕೆ ಬಿಡುಗಡೆ ಆಗಲಿದೆ. ನಟಿ ಅನುಷ್ಕಾ ಶರ್ಮಾ ಸಹ ವೆಬ್ ಸೀರೀಸ್ ನಿರ್ಮಾಣ ಮಾಡಿದ್ದು ಅದರ ಟ್ರೇಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ.

ಶಾರುಖ್ ನಿರ್ಮಿಸಿರುವ ವೆಬ್ ಸೀರೀಸ್
ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೈನ್‌ಮೆಂಟ್ ನಿರ್ಮಾಣದ ವೆಬ್ ಸೀರೀಸ್ ಬೇತಾಲ್ ನ ಮೊದಲ ಲುಕ್ ಇಂದಷ್ಟೆ ಬಿಡುಗಡೆ ಆಗಿದ್ದು, ಭರವಸೆ ಮೂಡಿಸಿದೆ.

ಬ್ರಿಟಿಷ್ ಅಧಿಕಾರಿಯ ದೆವ್ವದ ಕತೆ
ಬೇತಾಲ್ ವೆಬ್ ಸೀರೀಸ್, ಪೊಲೀಸ್ ಅಧಿಕಾರಿಗಳು ಮತ್ತು ಹಳ್ಳಿಗರನ್ನು ಕಾಡುತ್ತಿರುವ ಬ್ರಟಿಶ್ ಅಧಿಕಾರಿಯೊಬ್ಬನ ಆತ್ಮ ಮತ್ತು ಅವನ ಸೈನ್ಯದ ಆತ್ಮಗಳ ನಡುವೆ ನಡೆವ ಕತೆಯಾಗಿದೆ. ವೆಬ್ ಸೀರೀಸ್ ಅನ್ನು ಪ್ರತಿಕ್ ಗ್ರಾಹ್ಮನ್ ಮತ್ತು ನಿಖಿಲ್ ಮಹಾಜನ್ ನಿರ್ದೇಶಿಸುತ್ತಿದ್ದಾರೆ.

ಬಾರ್ಡ್ ಆಫ್ ಬ್ಲಡ್ ನಿರ್ಮಿಸಿದ್ದ ಶಾರುಖ್
ಕೆಲವೇ ದಿನಗಳ ಹಿಂದೆ ಬಾರ್ಡ್ ಆಫ್ ಬ್ಲಡ್ ಎಂಬ ವೆಬ್ ಸೀರೀಸ್ ಅನ್ನೂ ಸಹ ಅವರು ನೆಟ್‌ಫ್ಲಿಕ್ಸ್ ಗಾಗಿಯೇ ನಿರ್ಮಿಸಿದ್ದಾರೆ. ಈ ಸೀರೀಸ್ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದೆ. ಇದು ಬಿಲಾಲ್ ಸಿದ್ಧಿಕಿ ಅವರ ಇದೇ ಹೆಸರಿನ ಕಾದಂಬರಿ ಆಧರಿತ ವೆಬ್ ಸೀರೀಸ್ ಆಗಿದೆ.

ಅನುಷ್ಕಾ ಶರ್ಮಾ ಸಹ ನಿರ್ಮಿಸಿದ್ದಾರೆ ವೆಬ್ ಸೀರೀಸ್
ಅನುಷ್ಕಾ ಶರ್ಮಾ ಸಹ ವೆಬ್ ಸೀರೀಸ್ ಅನ್ನು ಬಿಡುಗಡೆ ಮಾಡುವವರಿದ್ದು, ನಿನ್ನೆಯಷ್ಟೆ ತಮ್ಮ ವೆಬ್ ಸೀರೀಸ್ 'ಪಾತಾಳ್ ಲೋಕ್' ನ ಟ್ರೇಲರ್ ಬಿಡುಗಡೆ ಆಗಿದೆ. ಪಾತಾಳ್ ಲೋಕ್ ವೆಬ್ ಸೀರೀಸ್ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











