ಮಗಳು ನಿರ್ಮಿಸಲಿರುವ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ ಶಿವಣ್ಣ

ಶಿವರಾಜ್ ಕುಮಾರ್ ಎಂದೂ ನಿಂತ ನೀರಲ್ಲ. ಪದೇ ಪದೇ ತಮ್ಮನ್ನು ತಾವು ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಇರುತ್ತಾರೆ. ಸಿದ್ಧ ಮಾದರಿಗೆ ಜೋತು ಬೀಳುವ ನಟರೇ ಅವರಲ್ಲ. ಹಾಗಾಗಿಯೇ ಅವರು ಇಷ್ಟು ವರ್ಷಗಳಾದರೂ ಭಿನ್ನ ಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ.

ಮಾಸ್ ಸಿನಿಮಾ, ಕ್ಲಾಸ್ ಸಿನಿಮಾ, ರೊಮ್ಯಾಂಟಿಕ್ ಲೌವ್ ಸ್ಟೋರಿ, ಕೌಟುಂಬಿಕ ಸಿನಿಮಾ, ಅಧ್ಯಾತ್ಮದ ಸಿನಿಮಾ, ಐತಿಹಾಸಿಕ ಸಿನಿಮಾ, ಪಕ್ಕಾ ಆಕ್ಷನ್ ಸಿನಿಮಾ, ಸಂದೇಶ ಹೊಂದಿರುವ ಸಿನಿಮಾ ಹೀಗೆ ಶಿವಣ್ಣ ನಟಿಸಿರುವ ಸಿನಿಮಾಗಳ ಭಿನ್ನತೆ ಪಟ್ಟಿ ಉದ್ದವಾಗುತ್ತಾ ಸಾಗುತ್ತದೆ. ಇವುಗಳ ಜೊತೆಗೆ ರಿಯಾಲಿಟಿ ಶೋ, ಟಾಕ್ ಶೋಗಳನ್ನೂ ಸಹ ನಡೆಸಿಕೊಟ್ಟಿದ್ದಾರೆ.

ಸದಾ ಹೊಸತನಕ್ಕೆ ಒಡ್ಡಿಕೊಳ್ಳುವ ಶಿವರಾಜ್ ಕುಮಾರ್, ಇದೀಗ ವೆಬ್ ಸರಣಿಗೆ ಕಾಲಿಟ್ಟಿದ್ದಾರೆ. ಕೋವಿಡ್ ಬಳಿಕ ವೆಬ್ ಸರಣಿಗಳು ದೊಡ್ಡ ಮಟ್ಟದಲ್ಲಿ ಯಶಸ್ಸಾಗಿದ್ದು, ಶಿವಣ್ಣ ಇದರಲ್ಲೂ ಒಂದು ಕೈ ನೋಡಲು ಸಕಲ ಸಜ್ಜಾಗಿದ್ದಾರೆ.

ಟಾಕೀಸ್ ಒಟಿಟಿ ಅಪ್ಲಿಕೇಶನ್ ಉದ್ಘಾಟನೆ

ಟಾಕೀಸ್ ಒಟಿಟಿ ಅಪ್ಲಿಕೇಶನ್ ಉದ್ಘಾಟನೆ

ನಿನ್ನೆ 'ಟಾಕೀಸ್ ಒಟಿಟಿ' ಹೆಸರಿನ ಹೊಸ ಕನ್ನಡದ ಒಟಿಟಿ ಅಪ್ಲಿಕೇಶನ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್, ''ಕನ್ನಡದಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತರು ಇದ್ದಾರೆ. ಕೋವಿಡ್ ಬಳಿಕ ವೆಬ್ ಸರಣಿಗಳು ಸಾಕಷ್ಟು ಹಿಟ್ ಆಗಿವೆ. ನಮ್ಮ ಮಗಳು ಸಹ 'ಹೇಟ್ ಯು ರೋಮಿಯೊ', 'ಹನಿಮೂನ್' ಅಂಥಹಾ ವೆಬ್ ಸರಣಿಗಳನ್ನು ನಿರ್ಮಾಣ ಮಾಡಿದ್ದಾಳೆ'' ಎಂದರು.

ಒಳು ಕತೆಗಳನ್ನು ಒಟ್ಟಿಗೆ ವೆಬ್ ಸರಣಿ ಮಾಡುವ ಯೋಜನೆ

ಒಳು ಕತೆಗಳನ್ನು ಒಟ್ಟಿಗೆ ವೆಬ್ ಸರಣಿ ಮಾಡುವ ಯೋಜನೆ

ಮುಂದುವರೆದು, ''ನಮ್ಮಲ್ಲಿ ಒಟ್ಟು ಏಳು ಕತೆಗಳಿದ್ದವು. ಎಲ್ಲವನ್ನೂ ಒಟ್ಟಿಗೆ ನಿರ್ಮಾಣ ಮಾಡುವ ಯೋಚನೆ ಮಗಳಿಗೆ ಇತ್ತು. ಆದರೆ ಅಷ್ಟರಲ್ಲಿ ಕೋವಿಡ್ ಎರಡನೇ ಅಲೆ ಬಂದ ಕಾರಣ ಸುಮ್ಮನಾದೆವು. ಆದರೆ ಈಗ ಪ್ರಾರಂಭ ಮಾಡುತ್ತೇವೆ. ಈಗ ಟಾಕೀಸ್ ಒಟಿಟಿ ಸಹ ಬಂದಿರುವ ಕಾರಣ ನಮಗೆ ಇನ್ನಷ್ಟು ಧೈರ್ಯ ಬಂದಿದೆ. ನನ್ನ ಮಗಳು ನಿರ್ಮಿಸುವ ವೆಬ್ ಸರಣಿಯಲ್ಲಿ ನಾನೂ ಇರುತ್ತೇನೆ'' ಎಂದ ಶಿವಣ್ಣ, ''ಕನ್ನಡ ವೆಬ್ ಸರಣಿಗಳನ್ನು ತೆಗೆದುಕೊಳ್ಳಲು ಭಯಪಡುತ್ತಿದ್ದ ಸಮಯದಲ್ಲಿ ಟಾಕೀಸ್ ಒಟಿಟಿ ಪ್ರಾರಂಭ ಮಾಡಿದ್ದೀರಿ. ಕನ್ನಡದಲ್ಲಿ ಇನ್ನಷ್ಟು ಒಳ್ಳೆಯ ಕಂಟೆಂಟ್ ಬರಲಿ. ನಿಮ್ಮ ಈ ಅಪ್ಲಿಕೇಶನ್ ಬಹಳ ಯಶಸ್ವಿಯಾಗಲಿ. ನೀವು ಇನ್ನಷ್ಟು ಜನರಿಗೆ ಕೆಲಸ ಸಿಗುವಂತಾಗಲಿ'' ಎಂದರು.

ಪುನೀತ್ ರಾಜ್‌ಕುಮಾರ್ ಅನ್ನು ನೆನಪಿಸಿಕೊಂಡ ಶಿವಣ್ಣ

ಪುನೀತ್ ರಾಜ್‌ಕುಮಾರ್ ಅನ್ನು ನೆನಪಿಸಿಕೊಂಡ ಶಿವಣ್ಣ

ಪುನೀತ್ ರಾಜ್‌ಕುಮಾರ್ ಅನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡ ಶಿವರಾಜ್ ಕುಮಾರ್, ''ಅಪ್ಪುಗೆ ಈ ರೀತಿಯ ವಿಷಯಗಳಲ್ಲಿ ಬಹಳ ಆಸಕ್ತಿ ಇತ್ತು, ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿದ. ಒಂದಕ್ಕಿಂತಲೂ ಒಂದು ಭಿನ್ನವಾದ ಸಿನಿಮಾಗಳನ್ನು ಮಾಡಿದ. ಅವನನ್ನು ನೆನಪಿಸಿಕೊಳ್ಳದೆ ಮಾತು ಮುಗಿಯಲು ಸಾಧ್ಯವೇ ಇಲ್ಲ ಎಂಬಂತ ಸನ್ನಿವೇಶ ಇದೆ'' ಎಂದರು ಶಿವರಾಜ್ ಕುಮಾರ್.

ಗೀತಾ ಪ್ರೊಡಕ್ಷನ್ ಮೂಲಕ 125ನೇ ಸಿನಿಮಾ

ಗೀತಾ ಪ್ರೊಡಕ್ಷನ್ ಮೂಲಕ 125ನೇ ಸಿನಿಮಾ

ತಮ್ಮ ನಿರ್ಮಾಣ ಸಂಸ್ಥೆಯ ಬಗ್ಗೆಯೂ ಮಾತನಾಡಿರುವ ಶಿವರಾಜ್ ಕುಮಾರ್, ''ನನ್ನ 125ನೇ ಸಿನಿಮಾವನ್ನು ನಮ್ಮದೇ ನಿರ್ಮಾಣ ಸಂಸ್ಥೆ ಗೀತಾ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡುತ್ತಿದ್ದೇವೆ. ಒಬ್ಬರನ್ನು ನೋಡಿ ಒಬ್ಬರು ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿದ್ದೇವೆ, ಒಳ್ಳೆಯ ಸಿನಿಮಾ ನೀಡಬೇಕು ಎಂಬುದಷ್ಟೆ ನಮ್ಮ ಗುರಿ. ನಮ್ಮ ತಾಯಿಯವರು ಪ್ರಾರಂಭ ಮಾಡಿರುವುದು ಅದು ಹಾಗೆಯೇ ಮುಂದೆ ಸಾಗುತ್ತಿದೆ. ಒಟ್ಟಿನಲ್ಲಿ ಒಳ್ಳೆಯ ಸಿನಿಮಾಗಳು ಬರಬೇಕು ಎಂಬುದಷ್ಟೆ ಗುರಿ'' ಎಂದರು ಶಿವರಾಜ್ ಕುಮಾರ್.

More from Filmibeat

English summary
Actor Shiva Rajkumar acting in a web series produced by his daughter. He talked about this in Talkies OTT application launch event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X