For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರದಲ್ಲಿ ಹಿಟ್ ಆಗಿದ್ದ ಶಿವಾಜಿ ಸೂರತ್ಕಲ್ ಬರಲಿದೆ ಮೊಬೈಲ್‌ ಗೆ!

  |

  ರಮೇಶ್ ಅರವಿಂದ ಅಭಿನಯದ ಹಿಟ್ ಚಿತ್ರ 'ಶಿವಾಜಿ ಸೂರತ್ಕಲ್' ಓಟಿಟಿ ಯಲ್ಲಿ ಬಿಡುಗಡೆ ಆಗಲಿದ್ದು, ಕೆಲವೇ ದಿನಗಳಲ್ಲಿ ಮೊಬೈಲ್‌ಗಳಲ್ಲಿ ನೋಡಲು ಸಿಗಲಿದೆ.

  ಲಾಕ್‌ಡೌನ್‌ ಗೆ ಮುನ್ನಾ ಬಿಡುಗಡೆ ಆಗಿದ್ದ ಕೆಲವು ಚಿತ್ರಗಳು ಲಾಭ ಮಾಡಿಕೊಳ್ಳುವ ವೇಳೆಗೆ ಚಿತ್ರಮಂದಿರಗಳು ಬಂದ್ ಆಗಿ ನಿರಾಸೆ ಅನುಭವಿಸಿದ್ದವು. ಅವುಗಳಲ್ಲಿ ಶಿವಾಜಿ ಸೂರತ್ಕಲ್ ಸಹ ಒಂದು.

  ಲಾಕ್‌ಡೌನ್‌ ಗೆ ಮುನ್ನಾ ಚಿತ್ರಮಂದಿರಗಳಲ್ಲಿದ್ದ, ಪ್ರೇಕ್ಷಕರಿಂದ, ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿದ್ದ ಶಿವಾಜಿ ಸೂರತ್ಕಲ್ ಸಿನಿಮಾ ಸಹ ಲಾಕ್‌ಡೌನ್‌ ನಿಂದ ತೊಂದರೆ ಅನುಭವಿಸಿದೆ. ಆದರೆ ಶಿವಾಜಿ ಸೂರತ್ಕಲ್ ಓಟಿಟಿಗೆ ಶೀಘ್ರದಲ್ಲಿಯೇ ಬರುವ ಸಾಧ್ಯತೆ ಇದೆ.

  ಚಿತ್ರತಂಡದ ನಂಬಿಕೆ ಹುಸಿಯಾಯ್ತು

  ಚಿತ್ರತಂಡದ ನಂಬಿಕೆ ಹುಸಿಯಾಯ್ತು

  ಫೆಬ್ರವರಿ 21 ರಂದು ಬಿಡುಗಡೆ ಆದ ಶಿವಾಜಿ ಸೂರತ್ಕಲ್ ಸಿನಿಮಾ, ಮೂರು ವಾರಗಳ ಕಾಲ ಭರ್ತಿ ಚಿತ್ರಮಂದಿರದ ಪ್ರದರ್ಶನ ನೀಡಿ, ಇನ್ನು ಲಾಭದತ್ತ ಹೊರಳುವವೇಳೆಗೆ ಚಿತ್ರಮಂದಿರ ಬಂದ್ ಆಯಿತು. ಚಿತ್ರಮಂದಿರ 30-40 ದಿನಗಳಲ್ಲಿ ಪುನರಾರಂಭವಾಗುತ್ತದೆ ಎಂಬ ತಂಡದ ನಂಬಿಕೆ ಹುಸಿಯಾಗಿದೆ.

  ಓಟಿಟಿಗೆ ಈಗಾಗಲೇ ಮಾರಾಟವಾಗಿದೆ

  ಓಟಿಟಿಗೆ ಈಗಾಗಲೇ ಮಾರಾಟವಾಗಿದೆ

  ಶಿವಾಜಿ ಸೂರತ್ಕಲ್ ಸಿನಿಮಾವನ್ನು ಈಗಾಗಲೇ ಝೀ5 ಗೆ ಮಾರಾಟ ಮಾಡಲಾಗಿದೆ. ಅವರು ಈ ತಿಂಗಳ ಅಂತ್ಯದ ವೇಳೆಗೆ ಸಿನಿಮಾವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇಂಥಹಾ ದಿನವೇ ಬಿಡುಗಡೆ ಮಾಡುತ್ತಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ.

  ಚಿತ್ರಮಂದಿರದಲ್ಲಿ ಹಿಟ್ ಆಗಿದ್ದ ಶಿವಾಜಿ ಸೂರತ್ಕಲ್

  ಚಿತ್ರಮಂದಿರದಲ್ಲಿ ಹಿಟ್ ಆಗಿದ್ದ ಶಿವಾಜಿ ಸೂರತ್ಕಲ್

  ಶಿವಾಜಿ ಸೂರತ್ಕಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಹಿಟ್ ಎನಿಸಿಕೊಂಡಿತ್ತು. ರಮೇಶ್ ಅರವಿಂದ್, ಆರೋಹಿ, ರಾಧಿಕಾ ನಾರಾಯಣ್, ಅವಿನಾಶ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಕ್ರೈಂ ಥ್ರಿಲ್ಲರ್ ಆಗಿದೆ.

  ಭಾರಿ ಹಿಟ್ ಆಗಿದ್ದ ದಿಯಾ, ಲವ್ ಮಾಕ್ಟೆಲ್

  ಭಾರಿ ಹಿಟ್ ಆಗಿದ್ದ ದಿಯಾ, ಲವ್ ಮಾಕ್ಟೆಲ್

  ಲಾಕ್‌ಡೌನ್ ಕಾರಣದಿಂದ ಹಲವು ಸಿನಿಮಾಗಳು ಓಟಿಟಿ ಯಲ್ಲಿ ಬಿಡುಗಡೆ ಕಾಣುತ್ತಿವೆ. ಚಿತ್ರಮಂದಿರಗಳಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ಕಾಣದಿದ್ದ, ದಿಯಾ, ಲವ್ ಮಾಕ್ಟೇಲ್ ಸಿನಿಮಾಗಳು ಅಮೆಜಾನ್ ಪ್ರೈಂ ನಲ್ಲಿ ಭಾರಿ ಹಿಟ್ ಎನಿಸಿಕೊಂಡವು. ಚಿತ್ರಮಂದಿರಗಳಲ್ಲಿಯೇ ಹಿಟ್ ಆಗಿರುವ ಶಿವಾಜಿ ಸೂರತ್ಕಲ್ ಓಟಿಟಿ ಯಲ್ಲಿ ಏನು ಮೋಡಿ ಮಾಡಲಿದೆ ಕಾದು ನೋಡಬೇಕಿದೆ.

  English summary
  Kannada movie Shivaji Surathkal may release in OTT platform soon. Movie is a hit in theaters. While running successfully lock down happen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X