For Quick Alerts
  ALLOW NOTIFICATIONS  
  For Daily Alerts

  ಶಿವಾಜಿ ಸೂರತ್ಕಲ್ ಸಿನಿಮಾ ಡಿಜಿಟಲ್ ಬಿಡುಗಡೆ ದಿನಾಂಕ ಪ್ರಕಟ

  |

  ರಮೇಶ್ ಅರವಿಂದ್ ನಟನೆಯ ಇತ್ತೀಚಿನ ಸಖತ್ ಹಿಟ್ ಸಿನಿಮಾ ಶಿವಾಜಿ ಸೂರತ್ಕಲ್ ಒಟಿಟಿಗೆ ಯಾವಾಗ ಬಿಡುಗಡೆ ಆಗುತ್ತದೆ ಎಂಬುದು ಹಲವರ ನಿರೀಕ್ಷೆ ಆಗಿತ್ತು.

  ಕೊನೆಗೂ ಶಿವಾಜಿ ಸೂರತ್ಕಲ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದ್ದು, ಚಿತ್ರತಂಡವು ದಿನಾಂಕವನ್ನು ಪ್ರಕಟಿಸಿದೆ.

  ಲಾಕ್‌ಡೌನ್‌ಗೆ ತುಸು ದಿನಗಳ ಹಿಂದಷ್ಟೆ ಶಿವಾಜಿ ಸೂರತ್ಕಲ್ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ಸಿನಿಮಾ ತುಂಬಾ ಉತ್ತಮ ಸ್ಪಂದನೆಯನ್ನು ಸಹ ಜನರಿಂದ ಗಳಿಸಿತ್ತು. ಸಿನಿಮಾ ಇನ್ನಷ್ಟು ಪಿಕ ಅಪ್ ಆಗುವ ವೇಳೆಗೆ ಲಾಕ್‌ಡೌನ್ ಘೋಷಣೆಯಾಗಿ ಚಿತ್ರಮಂದಿರ ಬಂದ್ ಆದವು. ಸತತ ಐದು ತಿಂಗಳು ಕಾದ ನಂತರ ಇದೀಗ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

  ಹಕ್ಕುಗಳನ್ನು ಜೀ ಗೆ ಮಾರಲಾಗಿತ್ತು

  ಹಕ್ಕುಗಳನ್ನು ಜೀ ಗೆ ಮಾರಲಾಗಿತ್ತು

  ಶಿವಾಜಿ ಸೂರತ್ಕಲ್ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಜೀ ಗೆ ಮಾರಾಟ ಮಾಡಲಾಗಿತ್ತು. ಪ್ರಸ್ತುತ ಜೀ ಮೂಲಕವೇ ಶಿವಾಜಿಸೂರತ್ಕಲ್ ಸಿನಿಮಾ ತೆರೆಗೆ ಬರುತ್ತಿದೆ. ಸಿನಿಮಾದ ಟಿವಿ ಹಕ್ಕುಗಳ ಸಹ ಜೀ ಗೆ ಮಾರಾಟವಾಗಿದೆ ಎನ್ನಲಾಗಿದೆ.

  ಡಿಜಿಟಲ್ ಬಿಡುಗಡೆ ದಿನಾಂಕ ಪ್ರಕಟ

  ಡಿಜಿಟಲ್ ಬಿಡುಗಡೆ ದಿನಾಂಕ ಪ್ರಕಟ

  ಶಿವರಾಜಿ ಸೂರತ್ಕಲ್ ಸಿನಿಮಾವು ಜೀ 5 ನಲ್ಲಿ ಆಗಸ್ಟ್ 7 ರಂದು ಪ್ರಸಾರವಾಗಲಿದೆ. ಮೊದಲಿಗೆ ಜಿ 5 ಮೂಲಕ ಡಿಜಿಟಲ್ ಬಿಡುಗಡೆ ಆಗಲಿರುವ ಸಿನಿಮಾ ನಂತರ ಜೀ ನಲ್ಲಿಯೇ ಸ್ಯಾಟಲೈಟ್ ಬಿಡುಗಡೆ ಆಗಲಿದೆ.

  ಮರುಬಿಡುಗಡೆ ಮಾಡುವ ಇರಾದೆ ಇತ್ತು

  ಮರುಬಿಡುಗಡೆ ಮಾಡುವ ಇರಾದೆ ಇತ್ತು

  ಕೊರೊನಾ ಪ್ರಕರಣಗಳು ಕಡಿಮೆಯಾಗಿ ಚಿತ್ರಮಂದಿರಗಳು ಪುನಃ ಪ್ರಾರಂಭವಾದಲ್ಲಿ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಬಿಡುಗಡೆ ಮಾಡುವ ಇರಾದೆ ಚಿತ್ರತಂಡಕ್ಕೆ ಇತ್ತು. ಫೆಬ್ರವರಿ 21 ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಒಂದು ಚಿತ್ರಮಂದಿರ ಬಂದ್ ಆಗುವವರೆಗೆ ಚೆನ್ನಾಗಿಯೇ ಪ್ರದರ್ಶನ ಕಂಡಿತ್ತು.

  ಆಕಾಶ್ ಶ್ರೀವತ್ಸ ನಿರ್ದೇಶನ

  ಆಕಾಶ್ ಶ್ರೀವತ್ಸ ನಿರ್ದೇಶನ

  ರಮೇಶ್ ಅರವಿಂದ್ ನಾಯಕ ನಟರಾಗಿ ನಟಿಸಿರುವ ಶಿವಾಜಿ ಸೂರತ್ಕಲ್ ಸಿನಿಮಾದಲ್ಲಿ ಅರೋಹಿ ನಾರಾಯಣ್, ರಾಧಿಕಾ ನಾರಾಯಣ್, ವಿನಯ್ ಗೌಡ, ಅವಿನಾಶ್, ಸೂರ್ಯ ವಸಿಷ್ಠ ನಟಿಸಿದ್ದಾರೆ. ಪತ್ತೆದಾರಿ ಕತೆಯ ಈ ಸಿನಿಮಾವನ್ನು ಆಕಾಶ್ ಶ್ರೀವತ್ಸ ನಿರ್ದೇಶಿಸಿದ್ದಾರೆ.

  English summary
  Shivaji Surathkal movie OTT release date announced by team. Movie will release on August 07 on Zee 5.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X