ಓಟಿಟಿಯಲ್ಲೂ ಮೋಡಿ ಮಾಡಿ ಶಿವಣ್ಣ: 125ನೇ ಸಿನಿಮಾ 'ವೇದ'ಗೆ ಭರ್ಜರಿ ರೆಸ್ಪಾನ್ಸ್
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ 125ನೇ ಸಿನಿಮಾ 'ವೇದ' ಓಟಿಟಿಗೆ ಲಗ್ಗೆ ಇಟ್ಟು 10 ದಿನಗಳಾಗಿವೆ. ಫೆಬ್ರವರಿ 10ರಂದು ZEE 5 ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದೇ ಸಿನಿಮಾ ಥಿಯೇಟರ್‌ನಲ್ಲೂ ತೆರೆಕಂಡು ಭರ್ಜರಿ ಪ್ರದರ್ಶನ ಕಂಡಿತ್ತು.
ಅಂದ್ಹಾಗೆ ಈ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಒಂದು ಇದು ಶಿವರಾಜ್‌ಕುಮಾರ್ ಅಭಿನಯದ 125ನೇ ಸಿನಿಮಾ. ಎರಡನೆಯದು ಗೀತಾ ಶಿವರಾಜ್‌ಕುಮಾರ್ ನಿರ್ಮಾಣದ ಮೊದಲ ಸಿನಿಮಾ. ಇದೇ ಸಿನಿಮಾವೀಗ ಓಟಿಟಿಗೂ ಲಗ್ಗೆ ಇಟ್ಟು ದಾಖಲೆ ಬರೆದಿದೆ.

'ವೇದ' ಶಿವಣ್ಣ 125ನೇ ಸಿನಿಮಾ ಅನ್ನೋದರ ಜೊತೆಗೆ ನಿರ್ದೇಶಕ ಎ.ಹರ್ಷ ಜೊತೆಗೆ ಮೂಡಿ ಬಂದ 4ನೇ ಸಿನಿಮಾ. ಡಿಸೆಂಬರ್ 23ರಂದು ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಅಲ್ಲಿಯೂ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ. ಆ ಬಳಿಕ 'ವೇದ'ವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಯ್ತು.
ಫೆಬ್ರವರಿ 10ರಂದು ಜನಪ್ರಿಯ ಒಟಿಟಿ ಪ್ಲಾಟ್ ಫಾರ್ಮ್ ZEE5ನಲ್ಲಿ 'ವೇದ' ಸಿನಿಮಾವನ್ನು ಸ್ಟ್ರೀಮಿಂಗ್ ಮಾಡಲಾಗಿತ್ತು. ಸಿನಿಮಾ ಪ್ರಸಾರವಾದ ಒಂದು ವಾರದೊಳಗೆ 'ವೇದ' 100 ಮಿಲಿಯನ್‌ಗೂ ಅಧಿಕ ನಿಮಿಷಗಳಷ್ಟು ಸ್ಟ್ರೀಮಿಂಗ್ ಆಗಿ ಹೊಸ ದಾಖಲೆಯನ್ನು ಬರೆದಿದೆ.

ಶಿವರಾಜ್‌ಕುಮಾರ್ ಜೊತೆಗೆ ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಸ್ಯಾಂಡಲ್‌ವುಡ್ ಪ್ರಮುಖ ಕಲಾವಿದರೇ ನಟಿಸಿದ್ದರು.ಅರ್ಜುನ್ ಜನ್ಯ ಈ ಸಿನಿಮಾಗೆ ಸಂಗೀತ ನೀಡಿದ್ದರು.
ZEE5ನಲ್ಲಿ 'ವಿಕ್ರಾಂತ್ ರೋಣ', 'ಗಾಳಿಪಟ-2', 'ಗುರು ಶಿಷ್ಯರು' ಹಲವು ಸೂಪರ್ ಹಿಟ್ ಸಿನಿಮಾಗಳನ್ನು ರಿಲೀಸ್ ಮಾಡಲಾಗಿದೆ. ಈ ಎಲ್ಲಾ ಸಿನಿಮಾಗಳು ಕಡಿಮೆ ಅವಧಿಯಲ್ಲಿಯೇ ಹೊಸ ಹೊಸ ದಾಖಲೆಗಳನ್ನು ಬರೆದಿವೆ. ಇದೀಗ 'ವೇದ' ಕೂಡ ZEE5ನಲ್ಲಿ ಹೊಸ ದಾಖಲೆ ಬರೆದು ಇತಿಹಾಸ ಸೃಷ್ಟಿಸಿದೆ.


Click it and Unblock the Notifications











