For Quick Alerts
  ALLOW NOTIFICATIONS  
  For Daily Alerts

  ಓಟಿಟಿಯಲ್ಲಿ ಶಿವಣ್ಣ- ಡಾಲಿ 'ಬೈರಾಗಿ': ಎಲ್ಲಿ? ಯಾವಾಗ?

  |

  ಒಳ್ಳೆ ಸಿನಿಮಾಗಳನ್ನು ಕೆಲವೊಮ್ಮೆ ಪ್ರೇಕ್ಷಕರು ಥಿಯೇಟರ್‌ಗಳಲ್ಲಿ ನೋಡೋದು ಮಿಸ್ ಮಾಡಿಕೊಳ್ತಾರೆ. ಥಿಯೇಟರ್‌ ನಂತರ ಟಿವಿಗೂ ಮುನ್ನ ಈಗ ಓಟಿಟಿಯಲ್ಲಿ ಸಿನಿಮಾಗಳು ಸ್ಟ್ರೀಮಿಂಗ್ ಆಗಿ ಸದ್ದು ಮಾಡ್ತಿವೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ - ಡಾಲಿ ಧನಂಜಯ್ ಮುಖಾಮುಖಿಯಾಗಿದ್ದ 'ಬೈರಾಗಿ' ಡಿಜಿಟಲ್ ಫ್ಲಾಟ್‌ಫಾರ್ಮ್‌ಗೆ ಬರುವ ಮಹೂರ್ತ ಫಿಕ್ಸ್ ಆಗಿದೆ.

  ವಿಜಯ್ ಮಿಲ್ಟನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಜುಲೈ 1ರಂದು ರಿಲೀಸ್ ಆಗಿತ್ತು. ಚಿತ್ರಕ್ಕೆ ಆರಂಭದಲ್ಲಿ ಒಳ್ಳೆ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. 'ಟಗರು' ನಂತರ ಶಿವಣ್ಣ- ಡಾಲಿ ಒಟ್ಟಿಗೆ ನಟಿಸಿದ್ದಾರೆ ಅನ್ನುವ ಕಾರಣಕ್ಕೆ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದು ಸುಳ್ಳಲ್ಲ. ಯುವ ನಿರ್ಮಾಪಕ ಕೃಷ್ಣ ಸಾರ್ಥಕ್ 'ಬೈರಾಗಿ' ಚಿತ್ರವನ್ನು ನಿರ್ಮಾಣ ಮಾಡಿದ್ದರು.

  ರಾಕಿ ಭಾಯ್ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ!ರಾಕಿ ಭಾಯ್ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ!

  ಪೃಥ್ವಿ ಅಂಬರ್, ಅಂಜಲಿ, ಶರತ್ ಲೋಹಿತಾಶ್ವ, ಅನು ಪ್ರಭಾಕರ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಟೀಸರ್ ಹಾಗೂ ಹಾಡುಗಳಿಂದ ಸದ್ದು ಮಾಡಿದ್ದ ಸಿನಿಮಾ ಶಿವಣ್ಣ ವಿಭಿನ್ನ ಲುಕ್‌ಗಳ ಕಾರಣಕ್ಕೂ ನಿರೀಕ್ಷೆ ಮೂಡಿಸಿತ್ತು. ಟೆಕ್ನಿಕಲಿ ಸಿಕ್ಕಾಪಟ್ಟೆ ಸ್ಟ್ರಾಂಗ್‌ ಆಗಿದ್ದ 'ಬೈರಾಗಿ' ಚಿತ್ರಕ್ಕೆ ದೊಡ್ಡಮಟ್ಟದ ಸಕ್ಸಸ್ ಮಾತ್ರ ಸಿಗಲಿಲ್ಲ. ಫೈನಲಿ ಸಿನಿಮಾ ಓಟಿಟಿಗೆ ಬರುವ ಸಮಯ ಹತ್ತಿರ ಬರ್ತಿದೆ.

  ಆಗಸ್ಟ್ 19ಕ್ಕೆ ಓಟಿಟಿಗೆ 'ಬೈರಾಗಿ'

  ಸಾಮಾನ್ಯವಾಗಿ ದೊಡ್ಡ ದೊಡ್ಡ ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್ ಆದ 47 ದಿನಗಳ ನಂತರ ಓಟಿಟಿಗೆ ಬರುವಂತೆ ಮೊದಲೇ ಒಪ್ಪಂದವಾಗಿರುತ್ತದೆ. ಮುಂದಿನ ಶುಕ್ರವಾರ ಅಂದರೆ ಆಗಸ್ಟ್ 19ರಂದು ವೂಟ್‌ ಸೆಲೆಕ್ಟ್‌ನಲ್ಲಿ ಸ್ಟ್ರೀಮಿಂಗ್‌ ಆಗ್ತಿದೆ. ಸಿಲ್ವರ್ ಸ್ಕ್ರೀನ್‌ನಲ್ಲಿ ಶಿವಣ್ಣ- ಡಾಲಿ ಏಟು-ಎದಿರೇಟು ಮಿಸ್ ಮಾಡಿಕೊಂಡವರು ಓಟಿಟಿಯಲ್ಲಿ ಕಣ್ತುಂಬಿಕೊಳ್ಳಬಹುದು.

   'ಕಡುಗು' ಸಿನಿಮಾ ರೀಮೇಕ್

  'ಕಡುಗು' ಸಿನಿಮಾ ರೀಮೇಕ್

  5 ವರ್ಷಗಳ ಹಿಂದೆ ತಮಿಳಿನಲ್ಲಿ ಸಕ್ಸಸ್ ಕಂಡಿದ್ದ 'ಕಡುಗು' ಸಿನಿಮಾ ರೀಮೇಕ್ 'ಬೈರಾಗಿ'. ಮೂಲ ಚಿತ್ರದಲ್ಲಿ ರಾಜಕುಮಾರನ್ ಹಾಗೂ ಭರತ್ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದರು. ತಮಿಳು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ವಿಜಯ್ ಮಿಲ್ಟನ್ ಅ ಕಥೆಯನ್ನು ಕನ್ನಡಕ್ಕೆ ತಂದಿದ್ದರು. ರಾಜಕುಮಾರನ್ ಮಾಡಿದ್ದ ಪಾಂಡಿ ಪಾತ್ರದಲ್ಲಿ ಶಿವಣ್ಣ, ಭರತ್ ಮಾಡಿದ್ದ ನಂಬಿ ಪಾತ್ರದಲ್ಲಿ ಧನಂಜಯ್ ಮಿಂಚಿದ್ದಾರೆ.

   'ಬೈರಾಗಿ' ಯಾತ್ರೆಗೆ ಸಖತ್ ರೆಸ್ಪಾನ್ಸ್

  'ಬೈರಾಗಿ' ಯಾತ್ರೆಗೆ ಸಖತ್ ರೆಸ್ಪಾನ್ಸ್

  ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ 'ಬೈರಾಗಿ' ಚಿತ್ರಕ್ಕೆ ಭರ್ಜರಿ ಪ್ರಚಾರ ಮಾಡಿದ್ದರು. ಚಾಮರಾಜನಗರದಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್‌ ಪ್ಲ್ಯಾನ್ ಆಗಿತ್ತು. 'ಬೈರಾಗಿ' ಯಾತ್ರೆ ಹೆಸರಿನಲ್ಲಿ ಬೆಂಗಳೂರಿನಿಂದ ರಾಮನಗರ, ಮಂಡ್ಯ, ಮೈಸೂರು ಮಾರ್ಗವಾಗಿ ಚಾಮರಾಜನಗರಕ್ಕೆ ಚಿತ್ರತಂಡ ಹೋಗಿತ್ತು. ಮಾರ್ಗದುದ್ದುಕ್ಕೂ ಅಭಿಮಾನಿಗಳನ್ನು ಭೇಟಿಯಾಗಿದ್ದರು. ಶಿವಣ್ಣ- ಡಾಲಿನ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದರು. ಚಾಮರಾಜನಗರದಲ್ಲಿ ಈವೆಂಟ್ ಜೋರಾಗಿ ನಡೆದಿತ್ತು.

   ಮತ್ತೆ ಸಕ್ಸಸ್ ಕಂಡಿತ್ತು 'ಟಗರು' ಜೋಡಿ

  ಮತ್ತೆ ಸಕ್ಸಸ್ ಕಂಡಿತ್ತು 'ಟಗರು' ಜೋಡಿ

  'ಟಗರು' ಚಿತ್ರದಲ್ಲಿ ಎಸಿಪಿ ಶಿವಕುಮಾರ್ ಆಗಿ ಶಿವಣ್ಣ ಹಾಗೂ ರೌಡಿ ಡಾಲಿಯಾಗಿ ಧನಂಜಯ್ ಅಬ್ಬರಿದ್ದರು. 'ಬೈರಾಗಿ' ಚಿತ್ರದಲ್ಲಿ ಶಿವಪ್ಪನಾಗಿ ಶಿವರಾಜ್‌ಕುಮಾರ್ ಮಿಂಚಿದ್ರೆ, ನೆಗೆಟಿವ್ ಶೇಡ್ ಕರ್ಣನ ಪಾತ್ರದಲ್ಲಿ ಧನು ದರ್ಬಾರ್ ನಡೆಸಿದ್ದಾರೆ. ಇಬ್ಬರು ಮುಖಾಮುಖಿಯಾಗುವ ಕೆಲ ದೃಶ್ಯಗಳು ಸಖತ್ ಮಜವಾಗಿದೆ. ಒಂದೊಳ್ಳೆ ಸಂದೇಶವನ್ನು ಹೊತ್ತು ಬಂದಿದ್ದ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಇದು. ಮುಂದಿನ ವಾರವೇ ಓಟಿಟಿಗೆ 'ಬೈರಾಗಿ' ಎಂಟ್ರಿ ಆಗ್ತಿದೆ.

  English summary
  Shivarajkumar And Dhananjay Starrer Bairagee Movie OTT Release Date Confirmed. Know More.
  Saturday, August 13, 2022, 1:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X