For Quick Alerts
  ALLOW NOTIFICATIONS  
  For Daily Alerts

  ಓಟಿಟಿಗೆ ಲಗ್ಗೆ ಇಟ್ಟ ಶಿವಣ್ಣ, ಧನಂಜಯ್ ಅಭಿನಯದ 'ಬೈರಾಗಿ': ವೂಟ್ ಸೆಲೆಕ್ಟ್‌ ಪ್ರೀಮಿಯರ್

  |

  ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ರಿಲೀಸ್ ಆಗಿದ್ದ ಮಲ್ಟಿಸ್ಟಾರರ್ ಸಿನಿಮಾ 'ಬೈರಾಗಿ'. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬರ್ ಅಭಿನಯದ 'ಬೈರಾಗಿ' ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಅದೇ ಸಿನಿಮಾ ಈಗ ಓಟಿಟಿಗೆ ಲಗ್ಗೆ ಇಟ್ಟಿದೆ.

  ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದ 'ಬೈರಾಗಿ' ಸಿನಿಮಾ ವರ್ಲ್ಡ್‌ ವೈಡ್ ಡಿಜಿಟಲ್ ಪ್ರೀಮಿಯರ್‌‌ ಆಗಿದೆ. ವೂಟ್ ಸೆಲೆಕ್ಟ್ ವಿಜಯ್ ಮಿಲ್ಟನ್‌ ಚಿತ್ರಕಥೆ-ನಿರ್ದೇಶನ ಮಾಡಿದ ಸಿನಿಮಾ ರಿಲೀಸ್ ಆಗಿದೆ.

  ಓಟಿಟಿಗೆ ಒಂದೇ ಬಿಡ್ತು 'ಬೈರಾಗಿ'

  ಮಾಸ್ ಎಂಟರ್‌ಟೈನರ್ 'ಬೈರಾಗಿ' ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್, ಪೃಥ್ವಿ ಅಂಬರ್ ಮತ್ತು ಅಂಜಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಆಗಸ್ಟ್ 19ರಂದು ವೂಟ್ ಸೆಲೆಕ್ಟ್ ನಲ್ಲಿ ಬೈರಾಗಿಯ ಪ್ರಥಮ ಪ್ರದರ್ಶನ ಕಂಡಿದೆ.


  ಸಮಾಜದ ಕೆಲವು ಅನಿಷ್ಟಗಳ ವಿರುದ್ಧ ಹೋರಾಡುವ ಸಿನಿಮಾವೇ 'ಬೈರಾಗಿ'. ಸಮಾಜದ ಮೌಲ್ಯಗಳನ್ನು ಗೌರವಿಸುವ ಕಲಾವಿದ ಹುಲಿ ಶಿವನ ಕಥೆಯನ್ನು ಆಕ್ಷನ್ ಹಾಗೂ ಭಾವನಾತ್ಮಕ ಸನ್ನಿವೇಶಗಳ ಮೂಲಕ ತೆರೆಮೇಲೆ ತರಲಾಗಿದೆ. ಹೀಗಾಗಿ ಮಾಸ್ ಸಿನಿಮಾ ಇಷ್ಟ ಪಡುವವರಿಗೆ 'ಬೈರಾಗಿ' ಮಸ್ತ್ ಆಗಿ ಇಷ್ಟ ಆಗುತ್ತೆ.

  ಓಟಿಟಿ ರಿಲೀಸ್ ಬಗ್ಗೆ ಶಿವಣ್ಣ-ಡಾಲಿ ಪ್ರತಿಕ್ರಿಯೆ

  "ಹುಲಿ ಶಿವನ ಪಾತ್ರ ಮಾಡುವುದು ಮತ್ತು ಹುಲಿವೇಷ ಹಾಕುವುದು ನನಗೆ ಸವಾಲಾಗಿತ್ತು. ನಿರ್ದೇಶಕ ವಿಜಯ್ ಈ ಪಾತ್ರಕ್ಕೆ ಜೀವ ತುಂಬಲು ಸಹಾಯ ಮಾಡಿದ್ದಾರೆ. Voot Select ನಲ್ಲಿ ಚಲನಚಿತ್ರವು OTT ಬಿಡುಗಡೆ ಆಗುತ್ತಿದ್ದು, ನಾನು ತುಂಬಾ ಉತ್ಸುಕನಾಗಿದ್ದೇನೆ. ಸಾಮಾಜಿಕವಾಗಿ ಪ್ರಸ್ತುತವಾದ ಈ ಕಥೆಯು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಲಿದೆ" ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

  Shivarajkumar And Dhananjay Starrer Bairagee Will Telecast On Voot Select

  " ಬೈರಾಗಿ ಸಿನಿಮಾ ಮತ್ತು ನನ್ನ ಪಾತ್ರ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿವೆ. ನಾನು ಶಿವಣ್ಣನ ಅವರ ದೊಡ್ಡ ಅಭಿಮಾನಿ. ಅವರೊಂದಿಗೆ ನಟಿಸಲು ಮತ್ತೆ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ಅತಿ ದೊಡ್ಡ ಗೌರವ. ಶಿವಣ್ಣ ಮತ್ತು ವಿಜಯ್ ಅವರಂತಹ ದಿಗ್ಗಜರೊಂದಿಗೆ ಕೆಲಸ ಮಾಡುವ ಕನಸು ನನಸಾಗಿದೆ. ಪ್ರತಿ ದೃಶ್ಯವೂ ಅದ್ಬುತವಾಗಿದೆ." ಎಂದಿದ್ದಾರೆ ಡಾಲಿ ಧನಂಜಯ್.

  English summary
  Shivarajkumar And Dhananjay Starrer Bairagee Will Telecast On Voot Select, Know More.
  Friday, August 19, 2022, 10:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X