45 OTT Release Date: ತಿಂಗಳಿಗೂ ಮುನ್ನ ಓಟಿಟಿಗೆ '45' ಸಿನಿಮಾ; ಎಲ್ಲಿ ನೋಡಬಹುದು ಅಂದ್ರೆ?

ಡಿಸೆಂಬರ್‌ನಲ್ಲಿ 3 ಬಹುನಿರೀಕ್ಷಿತ ಕನ್ನಡ ಸಿನಿಮಾಗಳು ತೆರೆಗೆ ಬಂದಿದ್ದವು. ಡೆವಿಲ್ ಬಳಿಕ ಅರ್ಜುನ್ ಜನ್ಯಾ ನಿರ್ದೇಶನದ '45' ಹಾಗೂ ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆ ಆಗಿತ್ತು. 3 ಸಿನಿಮಾಗಳು ತಕ್ಕಮಟ್ಟಿಗೆ ಪ್ರೇಕ್ಷಕರನ್ನು ರಂಜಿಸಿದ್ದವು. ಈ ಚಿತ್ರಗಳು ಓಟಿಟಿಗೆ ಬರೋದು ಯಾವಾಗ ಎನ್ನುವ ಕುತೂಹಲ ಇತ್ತು.

ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್‌. ಬಿ ಶೆಟ್ಟಿ ನಟನೆಯ '45' ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಜೀ ಸಂಸ್ಥೆಗೆ '45' ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿತ್ತು. ಉತ್ತರಭಾರತದ ಥ್ರಿಯೇಟ್ರಿಕಲ್ ರೈಟ್ಸ್ ಕೂಡ ಬಿಕರಿ ಆಗಿತ್ತು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಭರ್ಕರಿ ಓಪನಿಂಗ್ ಸಿಕ್ಕರೂ ಬಳಿಕ ಕಾರಣಾಂತರಗಳಿಂದ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿತ್ತು.

Shivarajkumar Raj b shetty and upendra starrer 45 kannada movie ott Release date locked

ಮುಖ್ಯವಾಗಿ ಶಿವರಾಜ್‌ಕುಮಾರ್ ನಟನೆ ಬಗ್ಗೆ ಒಳ್ಳೆ ಮಾತುಗಳು ಕೇಳಿಬಂದಿತ್ತು. ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್ '45' ಚಿತ್ರದಲ್ಲಿ ಹೈಲೆಟ್ ಆಗಿತ್ತು. ಶಿವನ 11 ಅವತಾರಗಳಲ್ಲಿ ಸೆಂಚುರಿ ಸ್ಟಾರ್ ದರ್ಶನ ಕೊಟ್ಟಿದ್ದರು. ಅರ್ಜುನ್ ಜನ್ಯಾ ಮೊದಲ ಪ್ರಯತ್ನದಲ್ಲೇ ವಿಭಿನ್ನ ಕಥೆ ಹೇಳಿ ಗೆದ್ದಿದ್ದಾರೆ. ಕೆಲವರು ಅದ್ಭುತ ಸಿನಿಮಾ ಎಂದು ಮೆಚ್ಚಿಕೊಂಡರೂ ಪ್ರೇಕ್ಷಕರಿಗೆ ದೊಡ್ಡಮಟ್ಟದಲ್ಲಿ ರೆಸ್ಪಾನ್ಸ್ ಸಿಗಲಿಲ್ಲ.

ಸಂಕ್ರಾಂತಿ ಸಂಭ್ರಮದಲ್ಲಿ '45' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಅಪ್‌ಡೇಟ್ ಬಂದಿದೆ. ಜನವರಿ 23ರಂದು ಸಿನಿಮಾ ಜೀ5ನಲ್ಲಿ ರಿಲೀಸ್ ಆಗುವುದಾಗಿ ಘೋಷಿಸಲಾಗಿದೆ. 2025ರ ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಮಿಸ್ ಮಾಡ್ಕೊಬೇಡಿ ಎಂದು ಪ್ರೋಮೊ ಬಂದಿದೆ. ಸಾಕಷ್ಟು ಜನ ಈ ಚಿತ್ರವನ್ನು ಓಟಿಟಿಯಲ್ಲಿ ನೋಡಲು ಕಾಯುತ್ತಿದ್ದಾರೆ. ಅಂತಹವರಿಗೆ ಇದು ಸಿಹಿಸುದ್ದಿ ಎಂದೇ ಹೇಳಬೇಕು.

ರಮೇಶ್ ರೆಡ್ಡಿ ಬಹಳ ಅದ್ಧೂರಿಯಾಗಿ '45' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಗರುಣಪುರಾಣದ ಹಿನ್ನೆಲೆಯಲ್ಲಿ ಅರ್ಜುನ್ ಜನ್ಯಾ ಈ ಫ್ಯಾಂಟಸಿ ಆಕ್ಷನ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಕೌಸ್ತುಬಾ ಮಣಿ, ಜಿಸ್ಸು ಸೇನ್‌ಗುಪ್ತಾ ಚಿತ್ರದ ತಾರಾಗಣದಲ್ಲಿದ್ದಾರೆ. ಸ್ವತಃ ಅರ್ಜುನ್ ಜನ್ಯಾ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸತ್ಯಾ ಹೆಗಡೆ ಛಾಯಾಗ್ರಹಣ ಹಾಗೂ ಅನಿಲ್ ಕುಮಾರ್ ಸಂಭಾಷಣೆ ಚಿತ್ರಕ್ಕಿದೆ.

ಬಹಳ ವರ್ಷ ಶಿವಣ್ಣ ಹಾಗೂ ಉಪೇಂದ್ರ ಒಟ್ಟಿಗೆ ತೆರೆ ಹಂಚಿಕೊಂಡಿರುವುದೇ ವಿಶೇಷ. ಶಿವನಾಗಿ ಸೆಂಚುರಿ ಸ್ಟಾರ್, ಯಮನಾಗಿ ರಿಯಲ್ ಸ್ಟಾರ್ ಅಬ್ಬರಿಸಿದ್ದಾರೆ. ಇವರಿಬ್ಬರ ನಡುವೆ ಪಾಪ ಪುಣ್ಯದ ಕಥೆ ಹೇಳಲು ರಾಜ್‌. ಬಿ ಶೆಟ್ಟಿ ಕೈ ಜೋಡಿಸಿದ್ದಾರೆ. ಮುಂದಿನ ಶುಕ್ರವಾರ ಸಿನಿಮಾ ಓಟಿಟಿಗೆ ಬರಲಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಸೇರಿ 5 ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

ಬೆಂಗಳೂರು ಹಾಗೂ ಮೈಸೂರಿನಲ್ಲಿ 80 ದಿನಗಳ ಕಾಲ ಚಿತ್ರದ ಚಿತ್ರೀಕರಣ ಮಾಡಲಾಗಿತ್ತು. ಕೆನಡಾ ಮೂಲದ MARZ ಸ್ಟುಡಿಯೋ ಸಂಸ್ಥೆ CGI ವರ್ಕ್ ಮಾಡಿತ್ತು. 'Afro ಟಪಾಂಗ್' ಸಾಂಗ್ ಅನ್ನು ಚಿತ್ರದ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿತ್ತು. ಬಹಳ ಅದ್ಧೂರಿಯಾಗಿ ಈ ಸಾಂಗ್ ಶೂಟ್ ಮಾಡಿದ್ದರು. ಸಾಂಗ್ ಹಿಟ್ ಆಗಿ ಗಮನ ಸೆಳೆದಿತ್ತು. ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಸಾಂಗ್ ಪ್ರದರ್ಶನ ಮಾಡಿರಲಿಲ್ಲ. ಬಳಿಕ ಸಾಂಗ್ ಸೇರಿಸಿ ಸಿನಿಮಾ ಪ್ರದರ್ಶಿಸಿದ್ದರು.

'45'ಗೂ ಮುನ್ನ ಬಿಡುಗಡೆಯಾಗಿದ್ದ 'ಡೆವಿಲ್' ಸಿನಿಮಾ ಇನ್ನು ಓಟಿಟಿಗೆ ಬಂದಿಲ್ಲ. 5ನೇ ವಾರ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಓಟಿಟಿ ರೈಟ್ಸ್ ಜಿಯೋ ಹಾಟ್‌ಸ್ಟರ್ ಪಾಲಾಗಿದೆ. ಶೀಘ್ರದಲ್ಲೇ ಆ ಸಿನಿಮಾ ಕೂಡ ಓಟಿಟಿಗೆ ಬರಲಿದೆ.

More from Filmibeat

Read more about: shivarajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X