Bhairathi Ranagal OTT: ಬ್ಲಾಕ್‌ಬಸ್ಟರ್ 'ಭೈರತಿ ರಣಗಲ್' ಓಟಿಟಿಗೆ ಬರೋದು ಯಾವಾಗ?

ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಮತ್ತೊಮ್ಮೆ ಮ್ಯಾಜಿಕ್ ಮಾಡಿದೆ. 'ಭೈರತಿ ರಣಗಲ್' ಸಿನಿಮಾ ಬಾಕ್ಸಾಫೀಸ್ ಕೊಳ್ಲೆ ಹೊಡೆಯುತ್ತಿದೆ. ಈಗಾಗಲೇ ಸಿನಿಮಾ 15 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಸದ್ಯ ಸಿನಿಮಾ 2ನೇ ವಾರಕ್ಕೆ ಕಾಲಿಟ್ಟು ಪ್ರೇಕ್ಷಕರನ್ನು ರಂಜಿಸುತ್ತಿದೆ.

'ಮಫ್ತಿ' ಪ್ರೀಕ್ವೆಲ್ 'ಭೈರತಿ ರಣಗಲ್' ಭಾರೀ ನಿರೀಕ್ಷೆ ಮೂಡಿಸಿದ್ದು ಸುಳ್ಳಲ್ಲ. ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಿ ನರ್ತನ್ ಗೆದ್ದಿದ್ದಾರೆ. ಒನ್ಸ್ ಅಗೇನ್ ಶಿವಣ್ಣ ಲಾಂಗ್ ಝಳಪಿಸಿರುವ ಪರಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಫ್ಯಾಮಿಲಿ ಆಡಿಯನ್ಸ್ ಕೂಡ ಸಿನಿಮಾ ನೋಡಲು ಬರುತ್ತಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲೇ ಸಿನಿಮಾ ನಿರ್ಮಾಣ ಆಗಿತ್ತು.

Shivarajkumar s Bhairathi Ranagal OTT release Check date and streaming platform

6 ವರ್ಷಗಳ ಹಿಂದೆ 'ಮಫ್ತಿ' ಚಿತ್ರ ಬಂದಿತ್ತು. ರೋಣಾಪುರದ ಮಾಫಿಯಾ ಡಾನ್ ಭೈರತಿ ರಣಗಲ್ ಆಟಾಟೋಪಕ್ಕೆ ಬ್ರೇಕ್ ಹಾಕಲು ಪೊಲೀಸ್ ಆಫೀಸರ್ ಗಣ ಎಂಟ್ರಿ ಕೊಟ್ಟಿದ್ದ. ನರರೂಪದ ರಾಕ್ಷಸನಂತ ರಣಗಲ್ ಕೋಟೆಗೆ ಲಗ್ಗೆ ಹಾಕಿ ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದ. ಆದರೆ ಆ ರಣಗಲ್ ಯಾರು? ಆತನ ಹಿನ್ನೆಲೆ ಏನು? ಎನ್ನುವ ಕಥೆ ಆ ಚಿತ್ರದಲ್ಲಿ ಅಷ್ಟಾಗಿ ಇರಲಿಲ್ಲ. ಅದನ್ನು 'ಭೈರತಿ ರಣಗಲ್' ಚಿತ್ರದಲ್ಲಿ ತೆರೆಗೆ ತರಲಾಗಿದೆ.

ರೋಣಾಪುರದ ಜನರಿಗಾಗಿ ಬಾಲ್ಯದಲ್ಲೇ ಸರ್ಕಾರಿ ಕಛೇರಿಗೆ ಬಾಂಬ್ ಹಾಕುವ ರಣಗಲ್, ಮುಂದೆ ತನ್ನ ಊರಿನ ಜನರಿಗಾಗಿ ದೊಡ್ಡ ಸಾಮ್ರಾಜ್ಯ ಕಟ್ಟುತ್ತಾನೆ. ಅದಕ್ಕೆ ಅಡ್ಡ ಬಂದವರ ರುಂಡ ತೆಗೆಯುತ್ತಾನೆ. ಚಿಕ್ಕಂದಿನಲ್ಲಿ ಮಾಡಿದ ತಪ್ಪಿಗೆ ಶಿಕ್ಷೆಯಾಗಿ ಜೈಲು ಸೇರುವ ರಣಗಲ್ ಅಲ್ಲೇ ಓದಿ ವಕೀಲನಾಗಿ ಹೊರಬರುತ್ತಾನೆ. ಆದರೆ ಕೈಗಾರಿಕೋದ್ಯಮಿ ಪರಾಂಡೆ ಉಪಟಳಕ್ಕೆ ಅಂತ್ಯ ಹಾಡಲು ಕಪ್ಪು ಕೋರ್ಟ್ ತೆಗೆದಿಟ್ಟು ಕತ್ತಿ ಹಿಡಿಯುವಂತಾಗುತ್ತದೆ.

ಶಿವಣ್ಣ ಮತ್ತೊಮ್ಮೆ ರಣಗಲ್ ಆಗಿ ಪ್ರೇಕ್ಷಕರ ಹುಬ್ಬೇರಿಸಿದ್ದಾರೆ. ಸಣ್ಣ ಸಣ್ಣ ಎಲಿವೇಷನ್ ಸೀನ್ಸ್‌ ಪ್ರೇಕ್ಷಕರಿಗೆ ಮಜಾ ಕೊಡುತ್ತದೆ. ಸಣ್ಣ ಪುಟ್ಟ ತಪ್ಪುಗಳ ನಡುವೆಯೂ 'ಭೈರತಿ ರಣಗಲ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಮಾಸ್ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದೆ. ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್, ಛಾಯಾ ಸಿಂಗ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

Shivarajkumar s Bhairathi Ranagal OTT release Check date and streaming platform

ಬಹಳ ಹಿಂದೆಯೇ ಜೀ-5 ಸಂಸ್ಥೆ 'ಭೈರತಿ ರಣಗಲ್' ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಸಿನಿಮಾ ಯಾವಾಗ ಸ್ಟ್ರೀಮಿಂಗ್ ಆರಂಭಿಸುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ಕಾರಣ ದೊಡ್ಡ ದೊಡ್ಡ ಸಿನಿಮಾಗಳೇ 20 ದಿನಕ್ಕೆ ಓಟಿಟಿಗೆ ಬರ್ತಿದೆ. ಈ ವಾರ ಕನ್ನಡ 'ಮಾರ್ಟಿನ್' ಹಾಗೂ 'ಬಘೀರ' ಸಿನಿಮಾಗಳು ಸ್ಮಾಲ್ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿವೆ. ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ಇಷ್ಟು ಬೇಗ ಓಟಿಟಿಗೆ ಬಂದಿದ್ದು ಅಚ್ಚರಿ ಮೂಡಿಸಿದೆ.

ಡಾ. ಸೂರಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಬಘೀರ' ಅಕ್ಟೋಬರ್ 31ಕ್ಕೆ ತೆರೆಗೆ ಬಂದಿತ್ತು. ನವೆಂಬರ್ 21ಕ್ಕೆ ನೆಟ್‌ಫ್ಲಿಕ್ಸ್‌ಗೆ ಬಂದುಬಿಟ್ಟಿದೆ. 35 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾವನ್ನು ಇಷ್ಟು ಬೇಗ ಓಟಿಟಿಗೆ ತಂದಿದ್ದು ಸರಿಯಲ್ಲ ಎಂದು ಸಿನಿರಸಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದ್ದ ಧ್ರುವ ಸರ್ಜಾ 'ಮಾರ್ಟಿನ್' ಸಿನಿಮಾ ಕೂಡ ಪ್ರೈಮ್ ವಿಡಿಯೋಗೆ ಬಂದಿದೆ.

ಮುಂದಿನ ವಾರ ತೆಲುಗು, ತಮಿಳಿಗ ಡಬ್ ಆಗಿ ಸಿನಿಮಾ ತೆರೆಗೆ ಬರಲಿದೆ. ಇನ್ನು 50 ದಿನ ಪೂರೈಸುವವರೆಗೆ 'ಭೈರತಿ ರಣಗಲ್' ಸಿನಿಮಾ ಓಟಿಟಿಗೆ ಬರಲ್ಲ ಎನ್ನುವ ಊಹಾಪೋಹ ಶುರುವಾಗಿದೆ. ಆ ಲೆಕ್ಕದಲ್ಲಿ ಡಿಸೆಂಬರ್ ಕೊನೆ ಅಥವಾ ಜನವರಿ ಮೊದಲ ವಾರ ಓಟಿಟಿಗೆ ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಜೀ-5 ಸಂಸ್ಥೆ ಭಾರೀ ಮೊತ್ತಕ್ಕೆ ರೈಟ್ಸ್ ಕೊಂಡುಕೊಂಡಿದೆ.

Disclaimer

ಜನವರಿ ಮೊದಲ ವಾರವೇ 'ಭೈರತಿ ರಣಗಲ್' ಓಟಿಟಿಗೆ ಬರಬಹುದು ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಜೀ-5 ಸಂಸ್ಥೆ ಅಧಿಕೃತ ಮಾಹಿತಿ ನೀಡಿಲ್ಲ.

More from Filmibeat

English summary
Shivarajkumar Starrer blockbuster Bhairathi Ranagal OTT release date is here
Read more about: shivarajkumar ott sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X