Don't Miss!
- News
ಡಿಕೆಶಿ ಯಾರ ಯಾರ ಸಿಡಿ ಮಾಡ್ತಿದ್ದಾರೋ .? ಇನ್ನು ಯಾವ ಸಿಡಿ,ಸಿನಿಮಾ,ಟ್ರೈಲರ್ ಇದೆ ಅವರನೇ ಕೇಳ್ಬೇಕು: ಅಶ್ವತ್ಥ ನಾರಾಯಣ್
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಶ್ಮಿಕಾ ಚಿತ್ರಕ್ಕಿಲ್ಲ ಥಿಯೇಟರ್ ಭಾಗ್ಯ: 'ಮಿಷನ್ ಮಜ್ನು' ಓಟಿಟಿ ರಿಲೀಸ್ ಡೇಟ್ ಘೋಷಿಸಿದ ಕಿರಿಕ್ ಬೆಡಗಿ
ಬಾಲಿವುಡ್‌ನಲ್ಲಿ ನೇರವಾಗಿ ಓಟಿಟಿಗೆ ಬರುವ ಸಿನಿಮಾಗಳ ಸಂಖ್ಯೆ ಹೆಚ್ಚಾಗ್ತಿದೆ. ರಶ್ಮಿಕಾ ಮಂದಣ್ಣ 'ಮಿಷನ್ ಮಜ್ನು' ಸಿನಿಮಾ ಮೂಲಕ ಬಿಟೌನ್ ಪ್ರವೇಶಿಸಿದ್ದರು. ಆ ಚಿತ್ರಕ್ಕೆ ಥ್ರಿಯೇಟ್ರಿಕಲ್ ರಿಲೀಸ್ ಭಾಗ್ಯ ಇಲ್ಲ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆಯೇ ಬಂದಿತ್ತು. ಇದೀಗ ಸಿನಿಮಾ ಯಾವಾಗ ಓಟಿಟಿಗೆ ಬರುತ್ತೆ ಎನ್ನುವುದು ಪಕ್ಕಾ ಆಗಿದೆ.
ಶಂತನು ಬಾಗ್ಚಿ ನಿರ್ದೇಶನದ ಸ್ಪೈ ಥ್ರಿಲ್ಲರ್ 'ಮಿಷನ್ ಮಜ್ನು' ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಜೋಡಿಯಾಗಿ ಕೊಡಗಿನ ಚೆಲುವೆ ಬಣ್ಣ ಹಚ್ಚಿದ್ದಾರೆ. ಈ ವರ್ಷ ಮೇ 13ಕ್ಕೆ ಸಿನಿಮಾ ತೆರೆಗೆ ಬರೋದಾಗಿ ಹೇಳಲಾಗಿತ್ತು. ನಂತರ ಜೂನ್ 10ಕ್ಕೆ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿತ್ತು. ಆದರೆ ಕೊನೆಗೂ ಸಿನಿಮಾ ಮಾತ್ರ ಥಿಯೇಟರ್‌ಗೆ ಬರಲೇ ಇಲ್ಲ. ಅಭಿಮಾನಿಗಳು ರಶ್ಮಿಕಾ ಮಂದಣ್ಣ ನಟನೆಯ ಚೊಚ್ಚಲ ಬಾಲಿವುಡ್ ಸಿನಿಮಾ ನೋಡಲು ಕಾದು ಕಾದು ಸುಸ್ತಾಗಿದರು.
ಫಿಲ್ಮ್
ಫೇರ್
ಓಟಿಟಿ
ಅವಾರ್ಡ್ಸ್:
ನಾಮಿನೇಟ್
ಆದ
ಕನ್ನಡದ
ಆಧ್ಯಾ
'ಮಿಷನ್ ಮಜ್ನು' ನಂತರ ರಶ್ಮಿಕಾ ನಟಿಸಿದ 'ಗುಡ್‌ಬೈ' ಸಿನಿಮಾ ಕೂಡ ರಿಲೀಸ್ ಆಯ್ತು. ಆದರೆ ಮೊದಲ ಸಿನಿಮಾ ಮಾತ್ರ ಬೆಳ್ಳಿಪರದೆ ಅಲಂಕರಿಸಲಿಲ್ಲ. ಇಂತಹ ಹೊತ್ತಲ್ಲೇ ಚಿತ್ರವನ್ನು ನೇರವಾಗಿ ಓಟಿಟಿಗೆ ತರುವ ಪ್ರಯತ್ನ ಶುರುವಾಯಿತು. ಇದೀಗ ಅದಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಜ. 20ಕ್ಕೆ ಓಟಿಟಿಯಲ್ಲಿ 'ಮಿಷನ್ ಮಜ್ನು'
ಹೌದು 'ಮಿಷನ್ ಮಜ್ನು' ಚಿತ್ರ ಜನವರಿ 20ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತೆ ಎನ್ನುವುದನ್ನು ಚಿತ್ರತಂಡ ಘೋಷಿಸಿದೆ. ರಶ್ಮಿಕಾ ಮಂದಣ್ಣ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. 'ಮಿಷನ್ ಮಜ್ನು' ಬರುವ ಸಮಯ ಬಂತು. ಎಲ್ಲಾ ಸಿದ್ಧರಿದ್ದೀರಾ ನನ್ನ ಪ್ರೀತಿಯ ಅಭಿಮಾನಿಗಳೇ ಎಂದು ಕಿರಿಕ್ ಬೆಡಗಿ ಪೋಸ್ಟ್ ಮಾಡಿದ್ದಾರೆ.

ನೈಜ ಘಟನೆಗಳನ್ನಾಧರಿದ ಚಿತ್ರ
1970ರ ದಶಕದಲ್ಲಿ ಪಾಕಿಸ್ತಾನದಲ್ಲಿ ನಡೆದ ಭಾರತದ ರೋಚಕ ರಹಸ್ಯ ಕಾರ್ಯಾಚರಣೆಯ ಕಥೆಯನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗುತ್ತಿದೆ. ಎರಡು ದೇಶಗಳ ನಡುವೆ ರಾಜಕೀಯವಾಗಿ ಆ ಸಮಯದಲ್ಲಿ ಏನೆಲ್ಲಾ ನಡೀತು ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದ್ದಾರಂತೆ. ಅಂದ ಹಾಗೆ ಚಿತ್ರದಲ್ಲಿ ಸಿದ್ಧಾರ್ಥ್ ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್ ಮತ್ತು ರಶ್ಮಿಕಾ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ.

ಶೀಘ್ರದಲ್ಲೇ ಟ್ರೈಲರ್ ರಿಲೀಸ್
ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಮಿಷನ್ ಮಜ್ನು' ರಶ್ಮಿಕಾ ಚೊಚ್ಚಲ ಬಾಲಿವುಡ್ ಸಿನಿಮಾ ಆಗಬೇಕಿತ್ತು. ಈ ಸಿನಿಮಾ ಮೂಲಕವೇ ಕೊಡಗಿನ ಕುವರಿ ಟಾಲಿವುಡ್‌ನಿಂದ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಆದರೆ 'ಮಿಷನ್ ಮಜ್ನು' ತಡವಾಗಿದ್ದಕ್ಕೆ 'ಗುಡ್‌ಬೈ' ಮೊದಲು ರಿಲೀಸ್ ಆಗುವಂತಾಯಿತು. ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ನಟಿಸಿದ 'ಗುಡ್‌ಬೈ' ಫ್ಲಾಪ್ ಆಗಿತ್ತು. ಶೀಘ್ರದಲ್ಲೇ 'ಮಿಷನ್ ಮಜ್ನು' ಟ್ರೈಲರ್ ರಿಲೀಸ್ ಆಗಲಿದೆ.

ದೊಡ್ಡ ದೊಡ್ಡ ಚಿತ್ರಗಳಲ್ಲಿ ರಶ್ಮಿಕಾ
ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಣ್‌ಬೀರ್ ಕಪೂರ್ ಜೊತೆ 'ಅನಿಮಲ್' ಚಿತ್ರದಲ್ಲಿ ಕೊಡಗಿನ ಬೆಡಗಿ ಬಣ್ಣ ಹಚ್ಚಿದ್ದಾರೆ. ತೆಲುಗಿನಲ್ಲಿ 'ಪುಷ್ಪ- 2' ಚಿತ್ರೀಕರಣ ನಡೀತಿದೆ. ತಮಿಳಿನ 'ವಾರೀಸು' ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ತೆಲುಗಿನಲ್ಲೂ ಏಕಕಾಲಕ್ಕೆ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸಲಿದೆ.