ಅನುಶ್ರೀ ಕ್ಯಾರವಾನ್‌ಗೆ ನುಗ್ಗಿದ ಕಾಫಿನಾಡು ಚಂದು: ಶಿವಣ್ಣನನ್ನು ನೋಡುವ ಛಾನ್ಸ್ ಸಿಕ್ತಾ?
ಕಾಫಿನಾಡು ಚಂದು. ಈ ಹೆಸರು ಕೇಳದ ನೆಟ್ಟಿಗರೇ ಇಲ್ಲ ಅನ್ನಿಸುತ್ತೆ. ವಿಭಿನ್ನವಾಗಿ ಹುಟ್ಟುಹಬ್ಬದ ಶುಭಾಶಯ ಕೋರುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಚಂದು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಕೆಲ ದಿನಗಳಿಂದ ಸಖತ್ ಟ್ರೆಂಡಿಂಗ್‌ನಲ್ಲಿರುವ ಚಂದು ಇದೀಗ ಆಂಕರ್ ಅನುಶ್ರೀನ ಭೇಟಿ ಮಾಡಿದ್ದಾರೆ. ಹುಟ್ಟುಹಬ್ಬ ಇಲ್ಲದೇ ಇದ್ದರೂ ಚಂದು ಬಾಯಲ್ಲಿ ಹುಟ್ಟುಹಬ್ಬದ ಶುಭಾಶಯ ಹೇಳಿಸಿಕೊಂಡು ಅನುಶ್ರೀ ಖುಷಿಪಟ್ಟಿದ್ದಾರೆ.
ಇತ್ತೀಚೆಗೆ ಕಾಫಿನಾಡು ಚಂದು ವಿಡಿಯೋ ಮಾಡಿ ಅನುಶ್ರೀ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದರು. ಅದೇ ವಿಚಾರವಾಗಿ ಈಗ ಸ್ಟಾರ್ ನಿರೂಪಕಿಯನ್ನು ಭೇಟಿ ಮಾಡಿದ್ದಂತೆ ಕಾಣುತ್ತಿದೆ. ಹಾಗಾದ್ರೆ, ಚಂದು ಕನಸು ಈಡೇರಿತಾ ಅನ್ನುವ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಚಿಕ್ಕಮಗಳೂರಿನ ಚಂದು ವೃತ್ತಿಯಲ್ಲಿ ಆಟೋ ಡ್ರೈವರ್. ಫ್ರೀ ಟೈಮಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಪ್ರತಿ ವಿಡಿಯೋದಲ್ಲೂ ನಾನು ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಅಭಿಮಾನಿ ಎಂದು ಹೇಳುವುದನ್ನು ಮರೆಯುವುದಿಲ್ಲ. ಇದೇ ಕಾರಣಕ್ಕೆ ಚಂದು ಬಹಳ ಜನಕ್ಕೆ ಇಷ್ಟವಾಗಿದ್ದಾರೆ. ಕಾಫಿನಾಡಿನ ಯುವಕ ಬಿಗ್‌ಬಾಸ್ ಮನೆಗೂ ಹೋಗಬೇಕು ಎಂದು ಸಾಕಷ್ಟು ಜನ ಆಸೆ ಪಟ್ಟಿದ್ದರು ಆದರೆ ಅದು ಸಾಧ್ಯವಾಗಲಿಲ್ಲ.
ಚಂದು ಸೆಲೆಬ್ರೆಟಿಗಳು ಮತ್ತು ಆಪ್ತರಿಗೆ ಇದೇ ರೀತಿ ರಾಗವಾಗಿ ಹುಟ್ಟುಹಬ್ಬದ ಶುಭಾಶಯ ಕೋರುತ್ತಾರೆ. ಕೆಲವರು ಟ್ರೋಲ್ ಮಾಡಿದ್ದರೂ ಹೆಚ್ಚು ತಲೆ ಕೆಡಿಸಿಕೊಳ್ಳದೇ ರೀಲ್ಸ್ ಮಾಡುವುದನ್ನು ಮುಂದುವರೆಸಿದ್ದಾರೆ. ಇನ್ನು ಚಂದುಗೆ ಸಾಕಷ್ಟು ಜನ ಅಭಿಮಾನಿಗಳು ಇದ್ದಾರೆ. ಇತ್ತೀಚೆಗೆ ಸ್ನೇಹಿತರು, ಆಪ್ತರ ಹುಟ್ಟುಹಬ್ಬಕ್ಕೆ ಚಂದು ರೀತಿಯಲ್ಲೇ ಶುಭಾಶಯ ಕೋರಿ ಖುಷಿಪಡುವವರನ್ನು ನೋಡಬಹುದು. ಕೆಲ ದಿನಗಳ ಹಿಂದೆ ಚಂದು ವಿಡಿಯೋ ಮಾಡಿ ಆಂಕರ್ ಅನುಶ್ರೀ ಬಳಿ ನಟ ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ಕೇಳಿಕೊಂಡಿದ್ದರು. ಇದೀಗ ಚಂದು, ಅನುಶ್ರೀ ಕ್ಯಾರವಾನ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ಅನುಶ್ರೀ ಜೊತೆ ವಿಡಿಯೋವನ್ನು ಮಾಡಿದ್ದಾರೆ. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಶಿವಣ್ಣನನ್ನು ಭೇಟಿ ಮಾಡಿದ್ರಾ ಕಾಫಿನಾಡು ಚಂದು?
ಪ್ರತಿವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಚಿತ್ರೀಕರಣದಲ್ಲಿ ಶಿವಣ್ಣ ಭಾಗವಹಿಸುತ್ತಾರೆ. ಇದೀಗ ಕಾಫಿ ನಾಡು ಚಂದು, ಅನುಶ್ರೀ ಜೊತೆ ಕಾಣಿಸಿಕೊಂಡಿರುವುದು ನೋಡಿದರೆ ಶಿವಣ್ಣನನ್ನು ಭೇಟಿ ಮಾಡಿದಂತೆ ಕಾಣುತ್ತಿದೆ. ಅಥವಾ ಶಿವಣ್ಣನನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುವಂತೆ ಅನುಶ್ರೀ ಬಳಿ ಮಾತನಾಡಿದಂತಿದೆ. ಒಟ್ನಲ್ಲಿ ಶೀಘ್ರದಲ್ಲೇ ಕಾಫಿನಾಡಿನ ಹುಡುಗನ ಆಸೆ ಈಡೇರುವ ಸುಳಿವು ಸಿಗುತ್ತಿದೆ.

ಕಾಫಿನಾಡು ಚಂದು ಹಾಡಿಗೆ ಅನುಶ್ರೀ ಖುಷ್
ಅನುಶ್ರೀ ಕ್ಯಾರವಾನ್‌ನಲ್ಲಿ ಅನುಶ್ರೀ ಜೊತೆಗೆ ಕಾಫಿನಾಡು ಚಂದು ಹೊಸದೊಂದು ವಿಡಿಯೋ ಮಾಡಿದ್ದಾರೆ. "ನಾನು ಶಿವಣ್ಣ, ಪುನೀತ್ ರಾಜ್‌ಕುಮಾರ್ ಅಭಿಮಾನಿ. ಕರ್ನಾಟಕದ ಜನತೆಗೆ ಕಾಫಿನಾಡು ಚಂದು ಮಾಡುವ ನಮಸ್ಕಾರಗಳು. ನನ್ನ ಜೊತೆ ಇದ್ದಾರೆ ಆಂಕರ್ ಅನುಶ್ರೀ ಅಕ್ಕ. ಅವರಿಗೆ ಕಾಫಿನಾಡು ಚಂದು ಮಾಡುವ ನಮಸ್ಕಾರಗಳು.. ಹಸಿಹಸಿರಲಿ ಉಸಿರುಸಿರಲಿ ಬೆಳೆದೆ ನಾಡಲಿ ಕಾಫಿ ನಾಡಲಿ.. ಹೀ ಹೀ ಅನುಶ್ರೀ ಅಕ್ಕ ಹ್ಯಾಪಿ ಬರ್ತ ಡೇ.. ನಿಮಗೆ ವಂದನೆ.. ಕಾಫಿನಾಡು ಚಂದು ಮಾಡುವ ಅಭಿನಂದನೆ.. ದುಬೈನಲ್ಲಿ ನೋಡಿದರೂ ಚಂದು ಚಂದು.. ಹೈದರಾಬಾದ್‌ನಲ್ಲೂ ಚಂದು ಚಂದು.. ಲಂಡನ್‌ನಲ್ಲೂ ಚಂದು, ಚಿಕ್ಕಮಗಳೂರು ಕಾಫಿನಾಡೇ ನಾನೇ ಚಂದು. ಬೆಂಗಳೂರಿನಲ್ಲಿ ಅನುಶ್ರೀ ಅಕ್ಕನಾ ಮರೆಯಲ್ಲ ಯಾವತ್ತು, ಈ ಕಾಫಿನಾಡು ಚಂದು. ಧನ್ಯವಾದಗಳು" ಎಂದು ಹಾಡಿದ್ದಾರೆ. ಚಂದು ಹಾಡಿಗೆ ಎಲ್ಲರೂ ಚಪ್ಪಾಳೆ ತಟ್ಟಿ ಖುಷಿಪಟ್ಟಿದ್ದಾರೆ.

ಶಿವಣ್ಣನನ್ನು ಹಿಂದಿಕ್ಕಿದ್ದ ಚಂದು!
ಇನ್‌ಸ್ಟಾಗ್ರಾಂನಲ್ಲಿ ಕಾಫಿನಾಡು ಚಂದುಗೆ ಲಕ್ಷಾಂತರ ಜನ ಫಾಲೋವರ್ಸ್ ಇದ್ದಾರೆ. ಫಾಲೋವರ್ಸ್ ಸಂಖ್ಯೆಯಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಗೂ ನಟ ಶಿವಣ್ಣನನ್ನು ಚಂದು ಹಿಂದಿಕ್ಕಿದ್ದಾರೆ ಎನ್ನಲಾಗಿತ್ತು. ದಿನದಿಂದ ದಿನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕಾಫಿನಾಡು ಚಂದುನ ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಬಿಗ್‌ಬಾಸ್ ಓಟಿಟಿಯಿಂದ ಚಂದುಗೆ ನಿರಾಸೆ?
ಚಂದು ಕ್ರೇಜ್ ನೋಡಿ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗುವುದು ಗ್ಯಾರೆಂಟಿ ಎಂದು ಸಾಕಷ್ಟು ಜನ ಅಂದುಕೊಂಡಿದ್ದರು. ಸಂಭಾವ್ಯರ ಪಟ್ಟಿಯಲ್ಲೂ ಚಂದು ಹೆಸರು ಕೇಳಿಬಂದಿತ್ತು. ಆದರೆ ಬಿಗ್‌ಬಾಸ್ ಕನ್ನಡ ಓಟಿಟಿ ಸೀಸನ್‌ಗೆ ಚಂದು ಹೋಗಲಿಲ್ಲ. ಕೆಲವರಿಗೆ ಇದು ಬೇಸರ ತಂದಿದ್ದು ಸುಳ್ಳಲ್ಲ. ಟಿವಿಯಲ್ಲಿ ಪ್ರಸಾರವಾಗುವ ಬಿಗ್‌ಬಾಸ್ 9ನೇ ಸೀಸನ್‌ಗೆ ಈ ಕಾಫಿನಾಡು ಯುವಕ ಹೋಗುವುದು ಗ್ಯಾರೆಂಟಿ ಎನ್ನುವುದು ಕೆಲವರ ವಾದ.


Click it and Unblock the Notifications











