For Quick Alerts
  ALLOW NOTIFICATIONS  
  For Daily Alerts

  ರಿಲೀಸ್ ಆದ ದಿನವೇ ಎರಡು ದೊಡ್ಡ ಚಿತ್ರಗಳು ಪೈರಸಿ

  |

  ಚಿತ್ರರಂಗದ ಅತಿ ದೊಡ್ಡ ಸಮಸ್ಯೆ ಪೈರಸಿ. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಚಿತ್ರರಂಗ ಹಿಂದೆ ಬಿದ್ದಿದೆ. ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಚಿತ್ರಗಳಿಗಿಂತ ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾಗಳನ್ನು ಬೇಗ ಪೈರಸಿ ಮಾಡಲಾಗುತ್ತಿದೆ ಎನ್ನುವುದು ದುರಂತ.

  ಶುಕ್ರವಾರವಷ್ಟೇ ತೆರೆಕಂಡ ಎರಡು ಚಿತ್ರಗಳು ಪೈರಸಿಯಾಗಿದೆ ಎಂದು ವರದಿಯಾಗಿದೆ. ವರುಣ್ ಧವನ್, ಸಾರಾ ಅಲಿ ಖಾನ್ ನಟಿಸಿರುವ ಕೂಲಿ ನಂ 1 ಚಿತ್ರದ ಡಿಜಿಟಲ್ ಪ್ರಿಂಟ್ ಪೈರಸಿಯಾಗಿದೆ.

  ಅನ್‌ಲೈನ್ ರಿಲೀಸ್ ಆದರೂ ತಪ್ಪುತ್ತಿಲ್ಲ ಪೈರಸಿ: ಸೂರ್ಯ ಚಿತ್ರಕ್ಕೆ ಮೊದಲ ದಿನವೇ ಶಾಕ್ಅನ್‌ಲೈನ್ ರಿಲೀಸ್ ಆದರೂ ತಪ್ಪುತ್ತಿಲ್ಲ ಪೈರಸಿ: ಸೂರ್ಯ ಚಿತ್ರಕ್ಕೆ ಮೊದಲ ದಿನವೇ ಶಾಕ್

  ಮತ್ತೊಂದೆಡೆ ಸಾಯಿ ಧರಮ್ ತೇಜ್ ನಟಿಸಿರುವ ಸೋಲೋ ಬ್ರಾತುಕ್ ಸೋ ಬೆಟರ್ ಸಿನಿಮಾ ಪೈರಸಿಯಾಗಿದೆ. ಈ ಎರಡು ಚಿತ್ರಗಳ ಡಿಟಜಿಲ್ ವರ್ಷನ್ ಹಾಗೂ ಎಚ್‌ಡಿ ಗುಣಮಟ್ಟದಲ್ಲಿ ನಕಲಿ ಕಾಪಿಯಾಗಿರುವುದು ಬೇಸರ ತರಿಸಿದೆ.

  ಅಂದ್ಹಾಗೆ, ತೆಲುಗಿನಲ್ಲಿ ಬಹಳ ತಿಂಗಳುಗಳ ನಂತರ ಮೊದಲ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಕ್ರಿಸ್‌ಮಸ್‌ ಹಬ್ಬಕ್ಕೆ ಉಡುಗೊರೆ ಎಂದುಕೊಂಡಿದ್ದಾರೆ.

  ನಯನತಾರ 'ಮೂಕುತಿ ಅಮ್ಮನ್' ಚಿತ್ರಕ್ಕೆ ಮೊದಲ ದಿನವೇ ಆಘಾತನಯನತಾರ 'ಮೂಕುತಿ ಅಮ್ಮನ್' ಚಿತ್ರಕ್ಕೆ ಮೊದಲ ದಿನವೇ ಆಘಾತ

  ಇದಕ್ಕೂ ಮುಂಚೆ ಸಹ ಒಟಿಟಿಯಲ್ಲಿ ರಿಲೀಸ್ ಆದ ಚಿತ್ರಗಳು ಮೊದಲ ದಿನವೇ, ಮೊದಲ ಶೋ ಮುಗಿದ ಬಳಿಕ ಪೈರಸಿಯಾಗಿದೆ. ನಯನತಾರಾ ನಟಿಸಿದ್ದ 'ಮೂಕುತ್ತಿ ಅಮ್ಮನ್' ಹಾಗೂ ಸೂರ್ಯ ನಟಿಸಿದ್ದ 'ಸೂರರೈ ಪೊಟ್ರು' ಸಿನಿಮಾಗಳು ಈ ಹಿಂದೆ ಪೈರಸಿಗೆ ಒಳಗಾಗಿದ್ದವು.

  English summary
  Telugu movie Solo brathuke so better and hindi movie coolie no 1 movie leaked in Online.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X