For Quick Alerts
  ALLOW NOTIFICATIONS  
  For Daily Alerts

  'ದಿ ಫ್ಯಾಮಿಲಿ ಮ್ಯಾನ್ 2'ನಲ್ಲಿ ಸಮಂತಾ ನಟಿಸಿದ್ದ ಹಾಟ್ ದೃಶ್ಯಗಳು ಡಿಲೀಟ್!

  |

  'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯಲ್ಲಿ ಸಮಂತಾ ನಟನೆ ಬಗ್ಗೆ ಪ್ರಶಂಸೆಗಳ ಸುರಿಮಳೆಯೇ ಸುರಿಸಲಾಗುತ್ತಿದೆ. ವೆಬ್ ಸರಣಿಯಲ್ಲಿ ಮೈ ಚಳಿ ಬಿಟ್ಟು ಅಪ್ಪಟ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ ಸಮಂತಾ.

  ವೆಬ್ ಸರಣಿಯಲ್ಲಿ ತಾವೇ ಫೈಟ್ ದೃಶ್ಯಗಳಲ್ಲಿ ಪಾಲ್ಗೊಂಡಿರುವ ಸಮಂತಾ ಯಾವುದೇ ಡ್ಯೂಪ್ ಬಳಸದೆ ಸ್ಟಂಟ್‌ಗಳನ್ನು ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಬಹಳ ಹಾಟ್ ದೃಶ್ಯಗಳಲ್ಲಿಯೂ ನಟಿಸಿದ್ದಾರೆ ಈ ನಟಿ.

  'ದಿ ಫ್ಯಾಮಿಲಿ ಮ್ಯಾನ್ 2'ನಲ್ಲಿ ಸಮಂತಾ ನಟಿಸಿದ್ದ ಒಂದು ಹಾಟ್ ದೃಶ್ಯದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಈನ್ನೂ ಕೆಲವು ಹಸಿ-ಬಿಸಿ ದೃಶ್ಯಗಳಲ್ಲಿ ಸಮಂತಾ ನಟಿಸಿದ್ದರು ಆದರೆ ಅವನ್ನು ಡಿಲೀಟ್ ಮಾಡಲಾಗಿದೆ ಎಂದು ಅದೇ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ನಟ ಹೇಳಿದ್ದಾರೆ.

  ಸಮಂತಾ ಜೊತೆಗೆ ನಟಿಸಿರುವ ಶಹಾಬ್ ಅಲಿ

  ಸಮಂತಾ ಜೊತೆಗೆ ನಟಿಸಿರುವ ಶಹಾಬ್ ಅಲಿ

  ನಟ ಶಹಾಬ್ ಅಲಿ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿಯ ಎರಡೂ ಸೀಸನ್‌ನಲ್ಲಿ ನಟಿಸಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್ 2'ನಲ್ಲಿ ಸಮಂತಾ ಜೊತೆಗೆ ಸೇರಿ ಮಿಷನ್ ಅನ್ನು ರೂಪಿಸುವ ಕಾರ್ಯವನ್ನು ಶಹಾಬ್ ಅಲಿ ಮಾಡುತ್ತಾರೆ. ಸಮಂತಾ ಹಾಗೂ ಶಹಾಬ್ ಅಲಿ ನಡುವೆ ಹಲವು ದೃಶ್ಯಗಳು ವೆಬ್ ಸರಣಿಯಲ್ಲಿವೆ.

  ''ನನ್ನ ಹಾಗೂ ಸಮಂತಾ ಪಾತ್ರಗಳ ಹಾಟ್ ದೃಶ್ಯಗಳು ಡಿಲೀಟ್ ಆಗಿವೆ''

  ''ನನ್ನ ಹಾಗೂ ಸಮಂತಾ ಪಾತ್ರಗಳ ಹಾಟ್ ದೃಶ್ಯಗಳು ಡಿಲೀಟ್ ಆಗಿವೆ''

  ''ನನ್ನ ಹಾಗೂ ಸಮಂತಾ ನಡುವೆ ಚಿತ್ರೀಕರಿಸಲಾಗಿದ್ದ ಕೆಲವು ಹಾಟ್ ದೃಶ್ಯಗಳನ್ನು ಡಿಲೀಟ್ ಮಾಡಲಾಗಿದೆ. ನಾನು ನಿರ್ವಹಿಸಿದ್ದ ಪಾತ್ರ ಹಾಗೂ ಸಮಂತಾ ಪಾತ್ರದ ನಡುವೆ ಪ್ರೇಮವಿರುತ್ತದೆ. ಅದನ್ನು ತೋರಿಸಲೆಂದು ಕೆಲವು ಹಾಟ್ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು ಆದರೆ ಅವನ್ನು ಡಿಲೀಟ್ ಮಾಡಲಾಗಿದೆ'' ಎಂದಿದ್ದಾರೆ ಶಹಾಬ್ ಅಲಿ.

  ಹಾಟ್ ದೃಶ್ಯಗಳು ಎಂಬ ಕಾರಣಕ್ಕೆ ಡಿಲೀಟ್ ಆಗಿಲ್ಲ

  ಹಾಟ್ ದೃಶ್ಯಗಳು ಎಂಬ ಕಾರಣಕ್ಕೆ ಡಿಲೀಟ್ ಆಗಿಲ್ಲ

  ''ಅವು ಹಾಟ್ ದೃಶ್ಯಗಳಾಗಿದ್ದವು ಎಂಬ ಕಾರಣಕ್ಕೆ ಆ ದೃಶ್ಯಗಳು ಡಿಲೀಟ್ ಆಗಿಲ್ಲ. ವೆಬ್ ಸರಣಿಯ ಎಪಿಸೋಡ್ ಉದ್ದವಾಗಿದೆ ಎಂಬ ಕಾರಣಕ್ಕೆ ಡಿಲೀಟ್ ಆಗಿದೆ. ಅವು ಮಾತ್ರವೇ ಅಲ್ಲದೆ ಇನ್ನೂ ಕೆಲವು ದೃಶ್ಯಗಳು ಡಿಲೀಟ್ ಆಗಿವೆ. ವೆಬ್ ಸರಣಿಗಳಲ್ಲಿ ಹೀಗೆ ದೃಶ್ಯಗಳು ಡಿಲೀಟ್ ಆಗುವುದು ಸಾಮಾನ್ಯ'' ಎಂದಿದ್ದಾರೆ ಶಹಾಬ್ ಅಲಿ.

  ಸಮಂತಾ ಹಾಟ್ ಚಿತ್ರಗಳು ವೈರಲ್

  ಸಮಂತಾ ಹಾಟ್ ಚಿತ್ರಗಳು ವೈರಲ್

  'ದಿ ಫ್ಯಾಮಿಲಿ ಮ್ಯಾನ್ 2' ನಲ್ಲಿ ಸಮಂತಾ ತನ್ನೊಂದಿಗೆ ಹಾಸಿಗೆಯಲ್ಲಿ ಮಲಗಿದ್ದ ತನ್ನ ಬಾಸ್‌ನ ಕತ್ತು ಸೀಳಿ ಕೊಲ್ಲುವ ದೃಶ್ಯವೊಂದು ಸಖತ್ ವೈರಲ್ ಆಗಿದೆ. ಆ ದೃಶ್ಯದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ವೆಬ್ ಸರಣಿಯಲ್ಲಿ ಸಮಂತಾ, ಹಾಟ್‌ ಆಗಿಯೂ, ಫೈಟರ್ ಆಗಿಯೂ ಒಳ್ಳೆಯ ನಟಿಯಾಗಿ ಎಲ್ಲ ವಿಧದಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

  English summary
  Actor Shahab Ali said some intimate scenes shot between me and Samantha for The Family Man 2 but those scenes were edited.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X