For Quick Alerts
  ALLOW NOTIFICATIONS  
  For Daily Alerts

  ಸಮಂತಾ ನಟನೆಯ 'ದಿ ಫ್ಯಾಮಿಲಿ ಮ್ಯಾನ್ 2' ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

  |

  ನಟಿ ಸಮಂತಾ ವಿಲನ್ ಪಾತ್ರದಲ್ಲಿ ನಟಿಸಿರುವ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿ ಜೂನ್ 4 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

  ಮೊದಲ ಸರಣಿಗಿಂತಲೂ 'ದಿ ಫ್ಯಾಮಿಲಿ ಮ್ಯಾನ್ 2' ಸರಣಿ ಚೆನ್ನಾಗಿದೆ ಎಂತಲೂ, ಸಮಂತಾ ನಟನೆ ಅದ್ಭುತ ಎಂಬ ವಿಮರ್ಶೆಗಳು ಈ ವೆಬ್ ಸರಣಿಗೆ ಬಂದಿದೆ. ಆದರೆ ತಮಿಳುನಾಡಿನಲ್ಲಿ ವೆಬ್ ಸರಣಿಗೆ ವಿರೋಧ ವ್ಯಕ್ತವಾಗಿದೆ.

  ವೆಬ್ ಸರಣಿಯಲ್ಲಿ ಶ್ರೀಲಂಕನ್ ತಮಿಳರನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ತಮಿಳುನಾಡಿನ ರಾಜಕಾರಣಿಗಳು, ಕೆಲವು ಸಂಸದರು ಆರೋಪಿಸಿದ್ದಾರೆ.

  ವೆಬ್ ಸರಣಿಯಲ್ಲಿ ರಾಜಿ ಹೆಸರಿನ ವಿಲನ್ ಪಾತ್ರದಲ್ಲಿ ನಟಿಸಿರುವ ಸಮಂತಾ ಶ್ರೀಲಂಕನ್ ತಮಿಳು ಪ್ರಜೆಯಾಗಿರುತ್ತಾಳೆ. ತನ್ನ ಹೋರಾಟಗಾರ ಸಂಗಾತಿಗಳನ್ನು ಕೊಂದವರ ಮೇಲೆ, ಭಾರತ ಸರ್ಕಾರದ ಮೇಲೆ ಸೇಡು ತೀರಿಸಿಕೊಳ್ಳುವ ಪಾತ್ರ ಅವರದ್ದು. ವೆಬ್ ಸರಣಿಯಲ್ಲಿ ಶ್ರೀಲಂಕನ್ ತಮಿಳರ ಕುರಿತು ಹಲವಾರು ದೃಶ್ಯಗಳು, ಸಂಭಾಷಣೆಗಳು ಇವೆ.

  ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಎನ್‌ಟಿಕೆ ಪಕ್ಷದ ಮುಖಂಡ ಸೀಮನ್, 'ಶ್ರೀಲಂಕನ್ ತಮಿಳರನ್ನು ಕೆಟ್ಟದಾಗಿ ಚಿತ್ರೀಕರಿಸಲಾಗಿರುವ 'ದಿ ಫ್ಯಾಮಿಲಿ ಮ್ಯಾನ್ 2' ಅನ್ನು ಕೂಡಲೇ ನಿಷೇಧಿಸಬೇಕು ಇಲ್ಲವಾದರೆ ಕಾನೂನು ಹೋರಾಟ ಮಾಡಲಾಗುವುದು' ಎಂದಿದ್ದಾರೆ.

  ಸೀಮನ್ ಮಾತ್ರವೇ ಅಲ್ಲದೆ. ಎಐಡಿಎಂಕೆ ಪಕ್ಷದ ರಾಜ್ಯಸಭಾ ಸದಸ್ಯ ವೈಕೋ ಸಹ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್‌ಗೆ ಪತ್ರ ಬರೆದು ಈ ವೆಬ್ ಸರಣಿಯನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

  ವೆಬ್ ಸರಣಿಯಲ್ಲಿ ಶ್ರೀಲಂಕನ್ ತಮಿಳರ ಬಂಡಾಯ ತಂಡವು ಐಎಸ್‌ಐಎಸ್‌ ಉಗ್ರರ ಜೊತೆ ಕೈ ಸೇರಿಸಿ ಭಾರತದಲ್ಲಿ ಬಾಂಬ್ ದಾಳಿ ಮಾಡಲು ಯೋಜನೆ ರೂಪಿಸುತ್ತದೆ. ಈ ದೃಶ್ಯದ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

  English summary
  NTK chief Seenam and some other leaders on Tamil Nadu demanding to ban 'The Family Man 2' web series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X