ವೈರಲ್ ಆಗಿದ್ದ ತನ್ನ ಬೆತ್ತಲೆ ವಿಡಿಯೋ ಬಗ್ಗೆ ಮಾತನಾಡಿದ ಸೋನು ಗೌಡ

ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸೋನು ಗೌಡ ಇದೀಗ ಬಿಗ್‌ಬಾಸ್ ಮನೆ ಸೇರಿದ್ದಾರೆ. ಟಿಕ್‌ಟಾಕ್ ಮೂಲಕ ಜನಪ್ರಿಯವಾಗಿದ್ದ ಸೋನು ಗೌಡ ಆ ನಂತರ ಇನ್‌ಸ್ಟಾಗ್ರಾಂ ಮೂಲಕ ಇನ್ನಷ್ಟು ಜನಪ್ರಿಯತೆ ಗಳಿಸಿದರು.

ಸೋನು ಗೌಡ ಅವರನ್ನು ಸತತವಾಗಿ ಟ್ರೋಲ್ ಮಾಡುವ ದೊಡ್ಡ ವರ್ಗವೇ ಸಾಮಾಜಿಕ ಜಾಲತಾಣದಲ್ಲಿ ಇದೆ. ಸೋನು ಗೌಡ ಹಲವು ವಿಷಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿರುತ್ತಾರೆ.

ಕೆಲ ತಿಂಗಳ ಹಿಂದೆ ಸೋನು ಗೌಡ ಅವರದ್ದು ಎನ್ನಲಾದ ಬೆತ್ತಲೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಬಿಗ್‌ಬಾಸ್‌ ಮನೆಯಲ್ಲಿರುವ ಸೋನು ಗೌಡ ಆ ವಿಡಿಯೋ ತಮ್ಮದೇ ಎಂದು ಹೇಳಿರುವುದು ಮಾತ್ರವಲ್ಲದೆ ಆ ವಿಡಿಯೋ ವೈರಲ್ ಆಗಿದ್ದರ ಹಿಂದಿನ ಕಾರಣವನ್ನೂ ತಿಳಿಸಿದ್ದಾರೆ.

ಮೊದಲ ದಿನ ಎಲ್ಲರೂ ಬಿಗ್‌ಬಾಸ್ ಮನೆಯೊಳಗೆ ಹೋದ ಬಳಿಕ ರಾಕೇಶ್ ಅಡಿಗ, ಸಾನಿಯಾ ಐಯ್ಯರ್ ಇನ್ನೂ ಕೆಲವರೊಟ್ಟಿಗೆ ಲಾನ್‌ ಎದುರು ಕೂತು ಸೋನು ಶ್ರೀನಿವಾಸ್ ಗೌಡ ಮಾತನಾಡುತ್ತಿದ್ದರು. ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದ ಕಹಿ ಘಟನೆಗಳ ಬಗ್ಗೆ ಸಂಕ್ಷಪ್ತವಾಗಿ ಮಾತನಾಡುತ್ತಿದ್ದರು. ಅದೇ ಸಮಯದಲ್ಲಿ ಸೋನು ಗೌಡ ತಮ್ಮ ಬೆತ್ತಲೆ ವೀಡಿಯೋ ವೈರಲ್ ಆದ ಬಗ್ಗೆ ಮಾತನಾಡಿದರು.

ಇಷ್ಟಪಟ್ಟ ಹುಡುಗನಿಂದಲೇ ಮೋಸ

ಇಷ್ಟಪಟ್ಟ ಹುಡುಗನಿಂದಲೇ ಮೋಸ

ನಾನು ಒಬ್ಬ ಹುಡುಗನನ್ನು ಇಷ್ಟಪಡುತ್ತಿದ್ದೆ. ಅವನೂ ನನ್ನನ್ನು ಇಷ್ಟಪಡುತ್ತಿದ್ದ ಇಬ್ಬರೂ ಮದುವೆ ಸಹ ಆಗಬೇಕು ಎಂದುಕೊಂಡಿದ್ದೆವು. ಅವನೂ ಮದುವೆಗೆ ಒಪ್ಪಿಕೊಂಡಿದ್ದ. ಒಮ್ಮೆ ಆತ ನನ್ನ ವಿಡಿಯೋ ಕಳಿಸಲು ಹೇಳಿದ. ನಾನೂ ಸಹ ನನ್ನ ಬೆತ್ತಲೆ ವಿಡಿಯೋ ಕಳಿಸಿಬಿಟ್ಟೆ. ಆದರೆ ಅದನ್ನು ಅವನು ವೈರಲ್ ಮಾಡಿಬಿಟ್ಟ ಎಂದು ಹೇಳುತ್ತಾ ಸೋನು ಗೌಡ ಕಣ್ಣೀರು ಹಾಕಿದ್ದಾರೆ.

ವಿಡಿಯೋ ಇಟ್ಟುಕೊಂಡು ಬ್ಲಾಕ್‌ ಮೇಲ್ ಮಾಡಿದ್ದ: ಸೋನು

ವಿಡಿಯೋ ಇಟ್ಟುಕೊಂಡು ಬ್ಲಾಕ್‌ ಮೇಲ್ ಮಾಡಿದ್ದ: ಸೋನು

ಆ ವಿಡಿಯೋ ಇಟ್ಟುಕೊಂಡು ಆತ ನನ್ನನ್ನು ಬ್ಲಾಕ್‌ಮೇಲ್ ಸಹ ಮಾಡಿದ. ಇನ್ನು ಮುಂದೆ ಅದು ಯಾರನ್ನು ನೀನು ಮದುವೆ ಆಗುತ್ತೀಯೋ ನೋಡುತ್ತೇನೆ ಎಂದೆಲ್ಲ ಹೆದರಿಸಿದ ಎಂದು ಕಣ್ಣೀರು ಹಾಕುತ್ತಾ ಸೋನು ಶ್ರೀನಿವಾಸ ಗೌಡ ಹೇಳಿದರು. ಸೋನು ಶ್ರೀನಿವಾಸ್ ಗೌಡ ಅಳುತ್ತಿದ್ದಂತೆ ರಾಕೇಶ್ ಅಡಿಗ, ಸೋನು ಅನ್ನು ತಬ್ಬಿಕೊಂಡು ಸಾಂತ್ವನ ಹೇಳಿದರು. ವಿಡಿಯೋ ವೈರಲ್ ಮಾಡಿದ ವ್ಯಕ್ತಿಯ ವ್ಯಕ್ತಿತ್ವವನ್ನು ಟೀಕಿಸಿ ಸೋನು ಗೌಡಾಗೆ ಸಮಾಧಾನ ಸಹ ಹೇಳಿದರು ರಾಕೇಶ್. ಅಲ್ಲಿದ್ದ ಇತರರು ಸಹ ಸೋನು ಶ್ರೀನಿವಾಸ್ ಗೌಡ ಸಮಾದಾನ ಮಾಡಿದರು.

ಸ್ಮೋಕ್ ಮಾಡ್ತೀನಿ ತಪ್ಪೇನು? ಸೋನು ಗೌಡ

ಸ್ಮೋಕ್ ಮಾಡ್ತೀನಿ ತಪ್ಪೇನು? ಸೋನು ಗೌಡ

ಸೋನು ಶ್ರೀನಿವಸ್ ಗೌಡ ಬಿಗ್‌ಬಾಸ್ ಮನೆಯಲ್ಲಿ ಸಾಕಷ್ಟು ಬಿಂದಾಸ್ ಆಗಿದ್ದಾರೆ. ಮೊದಲ ದಿನವೇ ತಾನು ಸಿಗರೇಟು ಸೇದುತ್ತೇನೆ ಎಂದು ಎಲ್ಲರ ಮುಂದೆ ಒಪ್ಪಿಕೊಂಡಿದ್ದಾರೆ ಹಾಗೂ ಅದೇನೂ ದೊಡ್ಡ ವಿಷಯವಲ್ಲ ಅದನ್ನು ದೊಡ್ಡ ವಿಷಯ ಮಾಡಬೇಡಿ ಎಂದು ಸೂಚ್ಯವಾಗಿ ಹೇಳಿದ್ದಾರೆ. ವೇದಿಕೆ ಮೇಲೆ ಸಹ ''ನಾನು ಮುಂಚೆ ಬ್ರೀಜರ್ ಕುಡಿಯುತ್ತಿದ್ದೆ ಅದಕ್ಕೆ ನನ್ನ ಪೆಟ್‌ಗೆ ನಾನು ಬ್ರೀಜರ್ ಎಂದು ಹೆಸರಿಟ್ಟೆ'' ಎಂದಿದ್ದಾರೆ. ಒಟ್ಟಾರೆ ಬಹಳ ಬಿಡು ಬೀಸಾಗಿ ಬಿಂದಾಸ್ ಆಗಿಯೇ ಬಿಗ್‌ಬಾಸ್ ಮನೆಯಲ್ಲಿ ಸೋನು ಗೌಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸೋನು ಗೌಡ ವಿರುದ್ಧ ಅಸಮಾಧಾನ

ಸೋನು ಗೌಡ ವಿರುದ್ಧ ಅಸಮಾಧಾನ

ಆದರೆ ಹೊರಗೆ ಸೋನು ಗೌಡ ಅವರಿಗೆ ವಿರೋಧ ವ್ಯಕ್ತವಾಗಿದೆ. ಸೋನು ಗೌಡ ಅವರನ್ನು ಬಿಗ್‌ಬಾಸ್ ಮನೆಯ ಒಳಗೆ ಕಳಿಸಿದ್ದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋನು ಗೌಡ ಯಾವ ಸಾಧನೆ ಮಾಡಿದ್ದಾರೆಂದು ಅವರನ್ನು ಬಿಗ್‌ಬಾಸ್ ಮನೆ ಒಳಗೆ ಕಳಿಸಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. 'ಕನ್ನಡಿಗರು ಬೆಳೆಸುವುದಿಲ್ಲ, ತುಳಿಯುತ್ತಾರೆ' ಎಂದು ಹಿಂದೊಮ್ಮೆ ನೀಡಿದ್ದ ಹೇಳಿಕೆಯನ್ನಿಟ್ಟುಕೊಂಡು ಸೋನು ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

More from Filmibeat

English summary
Social media star Sonu Shrinivas Gowda talks in Bigg Boss house about her viral indecent video. She said her ex boyfriend released that private video of her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X