Bigg Boss OTT Kannada: ಕಿಚ್ಚನ ಎದುರು ಸೋನು- ಸಾನ್ಯಾ ಜಡೆ ಜಗಳ; ಅಷ್ಟಕ್ಕೂ ಆಗಿದ್ದೇನು?

ಬಿಗ್‌ಬಾಸ್‌ ಓಟಿಟಿ ಕನ್ನಡ ಸೀಸನ್‌ 1 ಶುರುವಾಗಿ ವಾರ ಕಳೆದಿದೆ. 7 ದಿನಗಳಿಂದ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಶೋ ವೀಕ್ಷಕರಿಗೆ ಭರ್ಜರಿ ಮನರಂಜನೆ ಒದಗಿಸುತ್ತಿದೆ. 'ಸೂಪರ್ ಸಂಡೇ ವಿತ್ ಕಿಚ್ಚ' ಎಪಿಸೋಡ್‌ನಲ್ಲಿ ಸೋನು ಶ್ರೀನಿವಾಸ್‌ ಗೌಡಗೆ ನಟ ಸುದೀಪ್ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ.

ಕಿಚ್ಚ ಸುದೀಪ್ ಬಿಗ್‌ಬಾಸ್‌ ಓಟಿಟಿ ಶೋನ ಮೊದಲ ವಾರದ ಪಂಚಾಯಿತಿಯನ್ನು ನಡೆಸಿಕೊಟ್ಟಿದ್ದಾರೆ. ಎಂದಿನಂತೆ ತಮ್ಮದೇ ಸ್ಟೈಲ್‌ನಲ್ಲಿ ಸ್ಪರ್ಧಿಗಳನ್ನು ಕಿಚಾಯಿಸುತ್ತಾ, ತಮಾಷೆ ಮಾಡುತ್ತಾ, ತಪ್ಪು ಮಾಡಿದವರಿಗೆ ಬುದ್ಧಿ ಹೇಳುತ್ತಾ ಸಖತ್ ಜೋಶ್‌ನಲ್ಲಿ ನಿರೂಪಣೆ ಮಾಡಿದ್ದು, ವೀಕ್ಷಕರಿಗೂ ಇಷ್ಟವಾಗಿದೆ. ಕಳೆದೊಂದು ವಾರದಲ್ಲಿ ದೊಡ್ಮನೆಯಲ್ಲಿ ಸಾಕಷ್ಟು ಸಂಗತಿಗಳು ನಡೆದಿದೆ. ಕಿಚ್ಚನ ಶೋನಲ್ಲಿ ಅವೆಲ್ಲದರ ಪೋಸ್ಟ್ ಮಾರ್ಟಂ ಮಾಡುವ ಕೆಲಸ ನಡೀತು.

ಬಿಗ್‌ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇನ್ನು ಮನೆಯಲ್ಲಿ ಜಡೆ ಜಗಳಗಳಿಗೂ ಬರವಿಲ್ಲ. ತಮ್ಮ ಮಾತಿನಿಂದ ಪದೇ ಪದೇ ಇತರ ಸ್ಪರ್ಧಿಗಳ ಸೋನು ಕಿರಿಕ್ ತೆಗೆಯುತ್ತಲೇ ಇರುತ್ತಾರೆ. 'ಸೂಪರ್ ಸಂಡೇ ವಿತ್ ಕಿಚ್ಚ' ಎಪಿಸೋಡ್‌ನಲ್ಲೂ ಇದು ಮುಂದುವರೆಯಿತು. ಸುದೀಪ್ ಎದುರೇ ಸೋನು ಗೌಡ ಹಾಗೂ ಸಾನ್ಯಾ ಅಯ್ಯರ್ ನಡುವೆ ಜಟಾಪಟಿ ನಡೀತು.

ಕಿಚ್ಚನ ಮುಂದೆ ಸೋನು-ಸಾನ್ಯಾ ಕಿರಿಕ್

ಕಿಚ್ಚನ ಮುಂದೆ ಸೋನು-ಸಾನ್ಯಾ ಕಿರಿಕ್

ಕಿಚ್ಚನ ಶೋನಲ್ಲಿ ಎಸ್‌ ಆರ್ ನೋ ರೌಂಡ್‌ ಮಜವಾಗಿರುತ್ತದೆ. ಅಷ್ಟೇ ಇಂಟ್ರೆಸ್ಟಿಂಗ್ ಆಗಿಯೂ ಇರುತ್ತದೆ. ಸುದೀಪ್ ಒಂದಷ್ಟು ಸ್ಟೇಟ್‌ಮೆಂಟ್‌ಗಳನ್ನು ಹೇಳುವುದು, ಅದಕ್ಕೆ ಸ್ಪರ್ಧಿಗಳೆಲ್ಲಾ ಎಸ್ ಅಥವಾ ನೋ ಫಲಕ ತೋರಿಸುವುದು, ನಂತರ ಅದರ ಕುರಿತು ವಿಶ್ಲೇಷಣೆ ಹೀಗೆ ರಸವತ್ತಾಗಿ ಈ ರೌಂಡ್ ನಡೆಯುತ್ತದೆ. ಬಿಗ್‌ ಬಾಸ್ ಓಟಿಟಿ ಕನ್ನಡ ಮೊದಲ ಸೀಸನ್‌ನ ಎಸ್‌ ಆರ್ ನೋ ರೌಂಡ್‌ ಸಾನ್ಯಾ ಹಾಗೂ ಸೋನು ಕಿರಿಕ್‌ನಿಂದ ಅರ್ಧಕ್ಕೆ ನಿಂತು ಹೋಯಿತು.

ಬೇಕರಿ ಬಗ್ಗೆ ಆರ್ಯವರ್ಧನ್ ಧ್ಯಾನ

ಬೇಕರಿ ಬಗ್ಗೆ ಆರ್ಯವರ್ಧನ್ ಧ್ಯಾನ

ಆರ್ಯವರ್ಧನ್ ಗುರೂಜಿ ತಮ್ಮ ವಿಭಿನ್ನ ನಡೆ ನುಡಿಯಿಂದ ಬಿಗ್‌ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಗುರೂಜಿ ಏನೇ ಮಾತನಾಡಿದರೂ ಆ ಮಾತು ಮತ್ತೆಲ್ಲಿಗೋ ಹೋಗಿಬಿಡುತ್ತದೆ ಅನ್ನುವುದು ಎಲ್ಲರ ವಾದ. ಇದೇ ಸ್ಟೇಟ್‌ಮೆಂಟ್ ಬಗ್ಗೆ ಎಸ್ ಅಥವಾ ನೋ ಆಟ ನಡೀತು. ಎಲ್ಲರೂ ಎಸ್‌ ಅನ್ನುವ ಫಲಕ ತೋರಿಸಿದರು. ನಿಧಾನವಾಗಿ ಈ ಬಗ್ಗೆ ಚರ್ಚೆ ಶುರುವಾಯಿತು. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ತಿಳಿಸಿದರು. ಈ ವೇಳೆ ಸೋನು ಗೌಡ ಕೊಂಚ ಹೆಚ್ಚಾಗಿಯೇ ಮಾತನಾಡಿದರು. ಯಾವುದೇ ವಿಚಾರ ಆದರೂ ಗುರೂಜಿ ಮಾತು ಬೇಕರಿಗೆ ಹೋಗುತ್ತದೆ ಅನ್ನುವ ಚರ್ಚೆಯೂ ಮುಗೀತು. ಎಲ್ಲರ ಜೊತೆ ಸೇರಿ ಸುದೀಪ್ ಕೂಡ ಮಾತಿನಲ್ಲೇ ಗುರೂಜಿ ಕಾಲು ಎಳೆದರು.

ಗುರೂಜಿ ಅಸಿಸ್ಟೆಂಟ್ ಸೋನು!

ಗುರೂಜಿ ಅಸಿಸ್ಟೆಂಟ್ ಸೋನು!

ಆರ್ಯವರ್ಧನ್ ಗುರೂಜಿ ರೀತಿಯಲ್ಲೇ ಸೋನು ಗೌಡ ಕೂಡ ಏನೇನೋ ಮಾತನಾಡುತ್ತಿರುತ್ತಾರೆ. ಆಕೆಯ ಮಾತು ಕೂಡ ಎಲ್ಲಿಂದ ಮತ್ತೆಲ್ಲಿಗೋ ಹೋಗುತ್ತದೆ ಅನ್ನುವ ಸ್ಟೇಟ್‌ಮೆಂಟ್‌ ಅನ್ನು ಸುದೀಪ್ ಎಲ್ಲರ ಮುಂದಿಟ್ಟರು. ಕೆಲವರು ಹೌದು ಎಂದು ಫಲಕ ತೋರಿಸಿದರು. ಅದು ಯಾಕೆ ಎಂದು ಸುದೀಪ್, ಸಾನ್ಯಾನ ಕೇಳಿದರು. ಸಾನ್ಯಾ ಮಾತನಾಡುತ್ತಾ ಹೌದು ಸರ್, 'ಸೋನು ಗುರೂಜಿ ಅಸಿಸ್ಟೆಂಟ್ ತರ', ಅನ್ನುತ್ತಿದ್ದಂತೆ ಸೋನು ಗೌಡ ಗರಂ ಆಗಿಬಿಟ್ಟರು. ಆ ರೀತಿ ಹೇಳಬೇಡ, ಅಸಿಸ್ಟೆಂಟ್ ಎಂದು ಹೇಳಬೇಡ, ಈ ಹಿಂದೆ ಕೂಡ ಇದನ್ನು ಹೇಳಿದ್ದೀನಿ ಎಂದು ಗಲಾಟೆ ಶುರು ಮಾಡಿಬಿಟ್ಟರು.

ಬಾಯಿಬಡುಕಿ ಸೋನು ಗೌಡ!

ಬಾಯಿಬಡುಕಿ ಸೋನು ಗೌಡ!

ಬಿಗ್‌ಬಾಸ್‌ ಮನೆಯಲ್ಲಿ ಸದಾ ಮಾತನಾಡುತ್ತಲೇ ಇರುವ ಸ್ಪರ್ಧಿ ಸೋನು ಗೌಡ. ಯಾವುದಾದರೂ ವಿಚಾರವನ್ನು ಹಿಡಿದುಕೊಂಡು ಸದಾ ಜೋರು ದನಿಯಲ್ಲಿ ಮಾತನಾಡುತ್ತಲೇ ಇರುತ್ತಾರೆ. ಒಮ್ಮೊಮ್ಮೆ ಆಕೆ ಏನು ಮಾತನಾಡುತ್ತಿದ್ದಾಳೆ ಎನ್ನುವುದು ಯಾರಿಗೂ ಅರ್ಥವಾಗುವುದೇ ಇಲ್ಲ. ಟ್ರೋಲ್‌ ಬಗ್ಗೆ ಹೆದರಿಕೊಳ್ಳುವುದಿಲ್ಲ ಅಂತಲೂ ಸೋನು ಹೇಳಿದ್ದಾಳೆ. ಲೀಕ್ ಆಗಿದ್ದ ವಿಡಿಯೋ ಬಗ್ಗೆ ಮುಕ್ತವಾಗಿ ಸೋನು ಮಾತನಾಡಿದ್ದಳು. ಈಕೆಯ ವೀಕ್ಷಕರ ಬೆಂಬಲವೂ ಇದೆ. ಇನ್ನು ಆಕೆ ಮೆಚೂರ್ಡ್ ರೀತಿ ವರ್ತಿಸುವುದಿಲ್ಲ ಅಂತಲೂ ಮನೆಮಂದಿ ಸುದೀಪ್ ಮುಂದೆ ಹೇಳಿದರು. ಸಾನ್ಯಾ ಜೊತೆ ಗಲಾಟೆ ಮಾಡಿದ್ದಕ್ಕೆ ಕಿಚ್ಚ ಸುದೀಪ್ ಗರಂ ಆಗಿ ಸೋನುಗೆ ಸರಿಯಾಗಿ ಕ್ಲಾಸ್ ತಗೊಂಡರು.

More from Filmibeat

English summary
Sonu Srinivas Gowda and Sanya Iyer Fought in front Of Sudeep. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X