ಪಾಸಿಟಿವ್ವೊ ನೆಗೆಟಿವ್ವೊ, ಎಲ್ಲರ ಕಣ್ಣು, ಕೆಂಗಣ್ಣು ಸೋನು ಮೇಲೆ!

ಬಿಗ್‌ ಬಾಸ್ ಮನೆಯಲ್ಲಿ ನಿಜವಾದ ಆಟ ಶುರುವಾಗಿದೆ. ಯಾರೆಲ್ಲಾ ಬಿಗ್‌ ಬಾಸ್ ಓಟಿಟಿ ಮನೆಗೆ ಹೋಗುತ್ತಾರೆ ಅನ್ನುವ ಕುತೂಹಲಕ್ಕೆ ಬ್ರೇಕ್‌ ಬಿದ್ದಿದೆ. ಆದರೆ 16 ಸ್ಪರ್ಧಿಗಳಲ್ಲಿ ಟಿಕ್‌ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ.

ಸೋನು ಬಿಗ್‌ ಬಾಸ್‌ ಮನೆಗೆ ಹೋಗಬಾರದಿತ್ತು. ಆಕೆ ಏನು ಸಾಧನೆ ಮಾಡಿದ್ದಾಳೆ ಅಂತ ಅಲ್ಲಿಗೆ ಕಳುಹಿಸಿದ್ದೀರಾ? ಆಕೆಗಿಂತ ಒಳ್ಳೆ ಸ್ಪರ್ಧಿಗಳು ಇರಲಿಲ್ವಾ ಅಂತೆಲ್ಲಾ ಕೆಲವರು ಚಕಾರ ಎತ್ತಿದ್ದಾರೆ. ಇನ್ನು ಮನೆಯಲ್ಲಿ ಸೋನು ಆಡುತ್ತಿರುವ ಮಾತುಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟಾಕ್ಕಿದೆ. ಕಳೆದ ಬಾರಿ ಬಿಗ್‌ ಬಾಸ್‌ ಶೋಗೆ ಸೋನು ಶ್ರೀನಿವಾಸ್ ಗೌಡ ಹೋಗುತ್ತಾರೆ ಅನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ನಿಜವಾಗಿರಲಿಲ್ಲ. ಆದರೆ ಈ ಬಾರಿ ಓಟಿಟಿ ಶೋಗೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.

ಟಿಕ್‌ ಟಾಕ್ ವೀಡಿಯೋಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸೋನು ಗೌಡ ಖ್ಯಾತಿ ಗಳಿಸಿದ್ದಾರೆ. ಆಕೆಯ ವೀಡಿಯೋಗಳು, ಮಾತುಗಳು ಸಾಕಷ್ಟು ಬಾರಿ ಟ್ರೋಲ್‌ಗೆ ಆಹಾರವಾಗಿದೆ. ಕೆಲ ದಿನಗಳ ಹಿಂದೆ "ಕನ್ನಡಿಗರು ಬೆಳೆಸಲ್ಲ, ತುಳಿತಾರೆ" ಅಂತ ಸೋನು ಹೇಳಿದ್ದ ಮಾತಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದರು.

 ಇಬ್ಬರು ಸ್ಪರ್ಧಿಗಳ ಎಂಟ್ರಿಗೆ ಆಕ್ರೋಶ

ಇಬ್ಬರು ಸ್ಪರ್ಧಿಗಳ ಎಂಟ್ರಿಗೆ ಆಕ್ರೋಶ

ಬಿಗ್‌ಬಾಸ್‌ ಓಟಿಟಿ ಮನೆಗೆ ಮೊದಲ ಇಬ್ಬರು ಸ್ಪರ್ಧಿಗಳಾಗಿ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಹಾಗೂ ಸೋನು ಶ್ರೀನಿವಾಸ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಆದರೆ ಇವರಿಬ್ಬರ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತವಾಗ್ತಿದೆ. ಕಿಚ್ಚನನ್ನು ಸೇರಿದಂತೆ ಶೋ ಆಯೋಜಕರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಶ್ಲೀಲವಾಗಿ ಕಾಣಿಸಿಕೊಳ್ಳುವ ಸೋನು ಅನ್ನು ಬಿಗ್‌ಬಾಸ್ ಮನೆಗೆ ಕಳುಹಿಸಿ, ಶೋ ಜನಪ್ರಿಯತೆ ಹಾಳು ಮಾಡಿದ್ದೀರಿ ಎಂದು ಕಾಮೆಂಟ್‌ಗಳ ಸುರಿಮಳೆಗೈಯ್ಯುತ್ತಿದ್ದಾರೆ.

 ಆಸ್ಟ್ರೇಲಿಯಾಗೆ ಹೋಗ್ಬೇಕಂತೆ ಸೋನು

ಆಸ್ಟ್ರೇಲಿಯಾಗೆ ಹೋಗ್ಬೇಕಂತೆ ಸೋನು

ವೇದಿಕೆಯಲ್ಲಿ ಪ್ಲೇ ಆದ ವಿಟಿಯಲ್ಲಿ ಸೋನು ಆಡಿರುವ ಮಾತುಗಳ ಕೆಲವರಿಗೆ ಅಸಮಾಧಾನ ತಂದಿದೆ. "ನನಗೆ ಭಾರತದಲ್ಲಿ ಇರಲು ಇಷ್ಟವಿಲ್ಲವಂತೆ, ಇಲ್ಲಿ ಫ್ಯಾನ್ಸ್ ಕಿರಿಕಿರಿ ಜಾಸ್ತಿ, ಆರಾಮಾಗಿ ರಸ್ತೆಯಲ್ಲಿ ನಡೆದುಕೊಂಡ ಹೋಗುವುದಕ್ಕೂ ಭಯ. ಅಂಗಡಿಗೆ ಹೋಗಿ ಗೋಲ್ಗೊಪ್ಪಾ ತಿನ್ನೋದಕ್ಕೂ ಆಗ್ತಿಲ್ಲ. ಅದನ್ನು ವಿಡಿಯೋ ಮಾಡಿ ಟ್ರೋಲ್ ಮಾಡಿಬಿಡ್ತಾರೆ. ಇಲ್ಲಿ ನನಗಿಷ್ಟ ಬಂದಂತೆ ಇರಲು ಫ್ರೀಡಂ ಇಲ್ಲ, ಆಸ್ಟ್ರೇಲಿಯಾಗೆ ಹೋಗಿ ಸೆಟಲ್ ಆಗ್ತೀನಿ' ಎಂದಿದ್ದಾರೆ. ಇದನ್ನೇ ಸುದೀಪ್ ಎದುರು ಪುನರುಚ್ಛರಿಸಿದ್ದಾರೆ.

 ಸ್ಮೋಕಿಂಗ್ ಮಾಡ್ತೀನಿ

ಸ್ಮೋಕಿಂಗ್ ಮಾಡ್ತೀನಿ

ಇನ್ನು ವಾಯ್ಸ್‌ ಬಗ್ಗೆ ಬಿಗ್‌ಬಾಸ್ ಮನೆಯಲ್ಲಿ ಮತ್ತೊಬ್ಬ ಸ್ಪರ್ಧಿ ರೂಪೇಶ್ ಶೆಟ್ಟಿ ಜೊತೆ ಮಾತುಕತೆ ನಡೀತು. ಈ ವೇಳೆ ನಾನು ಸ್ಮೋಕ್ ಮಾಡ್ತೀನಿ ಎಂದು ಸೋನು ಬೋಲ್ಡ್ ಆಗಿ ಹೇಳಿದ್ದಾರೆ. ರೂಪೇಶ್ ನಾನು ಸ್ಮೋಕ್ ಮಾಡುವುದಿಲ್ಲ ಎಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಸೋನುಗೌಡ, ನೀವು ಸ್ಮೋಕ್, ಡ್ರಿಂಗ್ಸ್ ಏನು ಮಾಡುವುದಿಲ್ವಾ ಅದಕ್ಕೆ ಇಷ್ಟು ಗಟ್ಟಿಯಾಗಿದ್ದೀರಿ, ನಾನು ಸ್ಮೋಕ್ ಮಾಡುತ್ತೇನೆ ಎಂದರು. ಇದಕ್ಕೆ ರೂಪೇಶ್ ಅಚ್ಚರಿ ವ್ಯಕ್ತಪಡಿಸಿದ್ದರು. ಅದರಲ್ಲೇನು ತಪ್ಪು ಅನ್ನುವ ರೀತಿ ಸೋನು ತಿರುಗಿ ಪ್ರಶ್ನಿಸಿದ್ದಾರೆ.

 ಬೆತ್ತಲೆ ವಿಡಿಯೋ ಬಗ್ಗೆ ಏನಂದ್ರು?

ಬೆತ್ತಲೆ ವಿಡಿಯೋ ಬಗ್ಗೆ ಏನಂದ್ರು?

ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸೋನು ಬೆತ್ತಲೆ ವಿಡಿಯೋ ಸಹ ಲೀಕ್ ಆಗಿ ವೈರಲ್ಲಾಗಿತ್ತು. ಈ ಬಗ್ಗೆ ಮಾತನಾಡಿರುವ ಸೋನು ವೈರಲ್ ಆಗಿರುವ ವಿಡಿಯೋದಲ್ಲಿ ನನ್ನ ತಪ್ಪಿಲ್ಲ ಎಂದಿದ್ದಾರೆ. ಇನ್ನು ಸೋನು ಗೌಡ ಪರವಾಗಿಯೂ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುತ್ತಿದ್ದಾರೆ.

More from Filmibeat

English summary
Sonu Srinivas Gowda Gets Criticised Over Her Bigg Boss Ott Entry. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X