BBK OTT : ಬಿಗ್ ಬಾಸ್ ಮನೆಯಲ್ಲಿ ದೆವ್ವ, ಹೆದರಿದ ಆರ್ಯವರ್ಧನ್ ಗುರುಜೀ!

ಬಿಗ್ ಬಾಸ್ ಸೀಸನ್‌ಗಳಲ್ಲಿ ಹಲವು ಬಾರಿ ಈ ದೆವ್ವದ ಚರ್ಚೆ ಬಂದು ಹೋಗುತ್ತದೆ. ಮನೆಯಲ್ಲಿ ದೆವ್ವ ಇದೆ ಎನ್ನವ ಬಗ್ಗೆ ಹಲವು ಸೀಸನ್‌ಗಳಲ್ಲಿ ಚರ್ಚೆ ಆಗುತ್ತಲೇ ಇದೆ. ಈ ಓಟಿಟಿ ಸೀಸನ್‌ನಲ್ಲು ಕೂಡ ಈ ಚರ್ಚೆ ಮುಂದುವರೆದಿದೆ.

ಕೆಲವು ದಿನಗಳ ಹಿಂದೆ ಮನೆಯಲ್ಲಿ ದೆವ್ವ ಇದೆ, ಏನೇನೋ ಸದ್ದು ಬಂತು ಅಂತೆಲ್ಲಾ ಸ್ಪರ್ಧಿಗಳು ಮಾತನಾಡಿಕೊಂಡಿದ್ದಾರೆ. ಈಗ ಅದು ನಿಜವಾದಂತಿದೆ. ಅಂದರೆ ದೆವ್ವ ಇದೆ ಇದೆ ಎನ್ನುವುದನ್ನು ಸ್ಪರ್ಧಿಗಳೇ ನಿಜ ಮಾಡಿದ್ದಾರೆ. ದೆವ್ವವನ್ನು ಸೃಷ್ಟಿ ಮಾಡಿದ್ದಾರೆ.

ಬಗ್ ಬಾಸ್ ಮನೆಯಲ್ಲಿ ದೆವ್ವ ಆಗಿರುವುದು ಮತ್ಯಾರು ಅಲ್ಲ, ಸೋನು ಶ್ರೀನಿವಾಸ್ ಗೌಡ. ಆರ್ಯವರ್ಧನ್​ ಗುರೂಜಿಗೆ ದೆವ್ವ ಅಂದ್ರೆ ಸಿಕ್ಕಾಪಟ್ಟೆ ಭಯ. ಇದನ್ನು ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ. ಈ ದೆವ್ವದ ವಿಚಾರ ಬಳಸಿಕೊಂಡ ಇತರ ಸ್ಪರ್ಧಿಗಳು ಆರ್ಯವರ್ಧನ್​ ಗುರೂಜಿಗೆ ಭಯ ಪಡಿಸಲು ಮುಂದಾಗಿದ್ದಾರೆ.

ದೆವ್ವದ ರೂಪದಲ್ಲಿ ಸೋನು!

ದೆವ್ವದ ರೂಪದಲ್ಲಿ ಸೋನು!

ಸೋನು ಶ್ರೀನಿವಾಸ್​ ಗೌಡ ದೆವ್ವದ ರೀತಿಯಲ್ಲಿ ಮೇಕಪ್​ ಮಾಡಿಕೊಂಡಿದ್ದಾರೆ. ಆರ್ಯವರ್ಧನ್​ ಗುರೂಜಿ ಅವರನ್ನು ಹೆದರಿಸಬೇಕು ಎಂದು ಸೋನು ಶ್ರೀನಿವಾಸ್​ ಗೌಡ ಹಾಗೂ ಅಕ್ಷತಾ ಕುಕ್ಕಿ ಅವರು ಪ್ಲ್ಯಾನ್​ ಮಾಡಿದ್ದರು. ಈ ವೇಳೆ ಜೊತೆಯಲ್ಲೇ ರಾಕೇಶ್​, ಗುರೂಜಿ ಬಳಿ ಸೋನು ಮಾಡಿರೋ ಪ್ಲ್ಯಾನ್​ ಬಗ್ಗೆ ಬಾಯ್ಬಿಟ್ಟಿದ್ದರು. ಇದಕ್ಕೆ ಸೋನು, ಅಕ್ಷತಾ ಸಹ ರಾಕೇಶ್​ ಮೇಲೆ ಸಿಟ್ಟಾಗಿದ್ರು. ಆದ್ರೂ ಪ್ಲ್ಯಾನ್​ ಪ್ರಕಾರ ಸೋನು ದೆವ್ವದ ವೇಷ ಹಾಕಿಕೊಂಡರು.

ಆರ್ಯವರ್ಧನ್‌ಗೆ ಹೆದರಿಸಿದ ಸೋನು!

ಆರ್ಯವರ್ಧನ್‌ಗೆ ಹೆದರಿಸಿದ ಸೋನು!

ಆರ್ಯವರ್ಧನ್​ ರಾತ್ರಿ ಬಾತ್​ ರೂಮ್​ಗೆ ಹೋಗಿದ್ದರು. ಈ ವೇಳೆ ಸೋನು ಗೌಡ ಮುಖಕ್ಕೆ ಪೌಡರ್​ ಬಳಿದುಕೊಂಡು, ಹಣೆಗೆ ದೊಡ್ಡದಾಗಿ ಕುಂಕುಮ ಹಚ್ಚಿಕೊಂಡು, ಕೂದಲು ಕೆದರಿಕೊಂಡು ಬಾತ್​ ರೂಮ್​ ಹೊರಗೆ ನಿಂತಿದ್ದರು. ಬಾತ್​ ರೂಮ್​ ಬಾಗಿಲು ತೆಗೆಯುತ್ತಿದ್ದಂತೆಯೇ ಸೋನು ಗೌಡ ಮುಖ ನೋಡಿ ಗುರೂಜಿ ನಿಜವಾಗಿಯೂ ಬೆಚ್ಚಿ ಬಿದ್ದರು.

ಮನೆಯಲ್ಲಿ ಆತಂಕ!

ಮನೆಯಲ್ಲಿ ಆತಂಕ!

ಗುರುಜಿ ಕೆಳಗಿ ಬಿದ್ದು ಪ್ರಜ್ಞೆ ತಪ್ಪಿದ್ದರು. ಅವರನ್ನು ರೂಪೇಶ್​ ಮತ್ತು ರಾಕೇಶ್​ ಎತ್ತಿಕೊಂಡು ಬಂದರು. ಬಿಗ್​ ಬಾಸ್​ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಪರ್ಧಿಗಳು ಗುರೂಜಿಗೆ ಏನಾಯ್ತು ಅನ್ನೋ ಭಯದಲ್ಲಿದ್ರು. ಆರ್ಯವರ್ಧನ್​ ಅವರಿಗೆ ಹಾರ್ಟ್​ ಅಟ್ಯಾಕ್​ ಆಗಿರಬಹುದು ಎಂದು ಎಲ್ಲರೂ ಭಯಪಟ್ಟರು. ಸೋನು ಗೌಡ, ಅಕ್ಷತಾ ಮಾಡಿದ ಚೇಷ್ಟಯಿಂದ ಗುರೂಜಿ ಪ್ರಜ್ಞೆ ತಪ್ಪಿಬಿದ್ದರು. ಬಳಿಕ ಎಲ್ಲರೂ ಸೇರಿ ಗುರೂಜಿಗೆ ಸಮಾಧಾನ ಮಾಡಿದ್ರು. ನಿಜಕ್ಕೂ ನಾನು ದೆವ್ವ ಅಂತ ಹೆದರಿಕೊಂಡೆ ಎಂದು ಗುರೂಜಿ ಕಣ್ಣೀರು ಹಾಕಿದ್ದಾರೆ.

ಗುರುಜಿಗೆ ಸುದೀಪ್ ಭರವಸೆ!

ಗುರುಜಿಗೆ ಸುದೀಪ್ ಭರವಸೆ!

ಸೂಪರ್​ ಸಂಡೇ ವಿತ್​ ಸುದೀಪ್​ ಎಪಿಸೋಡ್​ನಲ್ಲಿ ಈ ದೆವ್ವದ ವಿಚಾರ ಚರ್ಚೆಗೆ ಬಂತು. ಆರ್ಯವರ್ಧನ್​ ಗುರೂಜಿಗೆ ಕಿಚ್ಚ ಸುದೀಪ್​ ಸಮಾಧಾನ ಮಾಡಿದ್ದಾರೆ. ಬಾತ್​ ರೂಮ್​ನಲ್ಲಿ ದೆವ್ವ ಇಲ್ಲ. ನಿಮ್ಮ ಸುತ್ತ-ಮುತ್ತ 300 ತಂತ್ರಜ್ಞರು ಇದ್ದಾರೆ. ನಿಮಗೆ ತೊಂದರೆ ಆದ್ರೆ ತಕ್ಷಣ ಸಹಾಯಕ್ಕೆ ಬರುತ್ತಾರೆ ಎಂದು ಸುದೀಪ್​ ಭರವಸೆ ನೀಡಿದ್ದಾರೆ. ಇದೇ ವೇಳೆ ಬಿಗ್​ ಬಾಸ್​ ಮನೆಯಲ್ಲಿ ಪ್ರ್ಯಾಂಕ್​ ಮಾಡುವವರಿಗೆ ಸುದೀಪ್ ​ ಎಚ್ಚರಿಕೆ ನೀಡಿದ್ದಾರೆ.

More from Filmibeat

English summary
Sonu Srinivas Gowda Horror Prank On Aryavardhan Guruji, Guruji Was Unconscious, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X