ಹೆಮ್ಮೆಯ ಕನ್ನಡಿಗನ ಬಗ್ಗೆ ತಮಿಳು ಸಿನಿಮಾ: ಟ್ರೇಲರ್ ಬಿಡುಗಡೆ

ಹೆಮ್ಮೆಯ ಕನ್ನಡಿಗನ ಬಗ್ಗೆ ತಮಿಳು ಸಿನಿಮಾ ಒಂದು ತಯಾರಾಗಿದ್ದು, ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ.

ಕನ್ನಡಿಗ ಜಿ.ಆರ್.ಗೋಪಿನಾಥ್ ಅಲಿಯಾಸ್ ಕ್ಯಾಪ್ಟನ್ ಗೋಪಿನಾಥ್ ಜೀವನ ಕುರಿತು ತಮಿಳಿನಲ್ಲಿ ಸೂರರೈ ಪೊಟ್ರು ಎಂಬ ಸಿನಿಮಾ ತಯಾರಾಗಿದೆ. ಸಿನಿಮಾದಲ್ಲಿ ಖ್ಯಾತ ನಟ ಸೂರ್ಯಾ ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡಿಗನ ಬಗೆಗಿನ ಸಿನಿಮಾ ಸೂರರೈ ಪೊಟ್ರು ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಸಿನಿಮಾದ ಗುಣಮಟ್ಟ, ಕಲಾವಿದರ ಅದ್ಭುತ ನಟನೆ, ಮೈನವಿರೇಳಿಸುವ ಕಥಾ ಹಂದರದ ಝಲಕ್ ಒಂದನ್ನು ಟ್ರೇಲರ್ ನೀಡುತ್ತಿದೆ.

ಮೇಲುಕೋಟೆಯಲ್ಲಿ ಹುಟ್ಟಿದ ಕ್ಯಾಪ್ಟನ್ ಗೋಪಿನಾಥ್

ಮೇಲುಕೋಟೆಯಲ್ಲಿ ಹುಟ್ಟಿದ ಕ್ಯಾಪ್ಟನ್ ಗೋಪಿನಾಥ್

ಮಂಡ್ಯದ ಮೇಲುಕೋಟಿಯಲ್ಲಿ ಹುಟ್ಟು, ಹಾಸನದ ಗ್ರಾಮ ಗೋರೂರಿನಲ್ಲಿ ಬೆಳೆದ ಗೋಪಿನಾಥ್, ನಂತರ ಭಾರತೀಯ ವಾಯುಸೇನೆಯಲ್ಲಿ ಕ್ಯಾಪ್ಟನ್‌ ಆಗಿ ಕಾರ್ಯನಿರ್ವಹಿಸಿದರು. ಬಾಂಗ್ಲಾ ವಿಮೋಚನೆಯಲ್ಲೂ ಭಾಗವಹಿಸಿದ್ದರು. ಸೇನೆಯಿಂದ ಬೇಗನೇ ನಿವೃತ್ತಿ ಪಡೆದು ನಂತರ ಮಧ್ಯಮ ವರ್ಗದವರು ವಿಮಾನ ಪ್ರಯಾಣ ಮಾಡುವಂತಾಗುವಂತೆ ಏರ್ ಡೆಕ್ಕನ್ ವಿಮಾನ ಸಂಸ್ಥೆಯನ್ನು ಪ್ರಾರಂಭಿಸಿದರು.

ಗೋಪಿನಾಥ್ ಎದುರಿಸಿದ ಸವಾಲುಗಳೇ ಕಥಾ ಹಂದರ

ಗೋಪಿನಾಥ್ ಎದುರಿಸಿದ ಸವಾಲುಗಳೇ ಕಥಾ ಹಂದರ

ಬಹಳ ಸಾಹಸಮಯ ಜೀವನ ಕ್ಯಾಪ್ಟನ್ ಗೋಪಿನಾಥ್ ಅವರದ್ದು. ಅವರ ಜೀವನನ್ನು ಆಧರಿಸಿ 'ಸೂರರೈ ಪೊಟ್ರು' ಸಿನಿಮಾ ನಿರ್ಮಿಸಲಾಗಿದೆ. ನಟ ಸೂರ್ಯಾ, ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ನಟಿಸಿದ್ದಾರೆ. ಸೇನೆಯಲ್ಲಿ ಗೋಪಿನಾಥ್ ಸಾಧನೆ, ಏರ್ ಡೆಕ್ಕನ್ ಸಂಸ್ಥೆ ಕಟ್ಟುವಾಗ ಎದುರಾದ ಸಮಸ್ಯೆಗಳನ್ನೇ ಇಟ್ಟುಕೊಂಡು ಸಿನಿಮಾ ಕಟ್ಟಲಾಗಿದೆ.

ಕನ್ನಡಿಗರೂ ಇದ್ದಾರೆ ಸಿನಿಮಾದಲ್ಲಿ

ಕನ್ನಡಿಗರೂ ಇದ್ದಾರೆ ಸಿನಿಮಾದಲ್ಲಿ

ಸೂರರೈ ಪೊಟ್ರು ಸಿನಿಮಾ ಬಹುತಾರಾಗಣದ್ದಾಗಿದ್ದು, ಅಪರ್ಣಾ ಬಾಲಮುರಳಿ ನಾಯಕಿಯಾಗಿ ನಟಿಸಿದ್ದಾರೆ. ಕವಿತಾ ರಂಜಿನಿ, ತೆಲುಗು ನಟ ಮೋಹನ್ ಬಾಬು, ಬಾಲಿವುಡ್‌ನ ಜಾಕಿ ಶ್ರಾಫ್, ಪರೇಶ್ ರಾವಲ್, ಮಾಲಿನಿ ಸತ್ತಪ್ಪನ್, ಕರುನಾಸ್, ಕನ್ನಡಿಗ ಸಂಪತ್ ರಾಜ್, ಅಚ್ಯುತ್ ಕುಮಾರ್ ಇನ್ನೂ ಹಲವರು ನಟಿಸಿದ್ದಾರೆ.

ಸುಧಾ ಕೊಂಗರ ಪ್ರಸಾದ್ ನಿರ್ದೇಶನ

ಸುಧಾ ಕೊಂಗರ ಪ್ರಸಾದ್ ನಿರ್ದೇಶನ

ಸುಧಾ ಕೊಂಗರ ಪ್ರಸಾದ್ ನಿರ್ದೇಶಿಸಿರುವ ಸೂರರೈ ಪೊಟ್ರು ಸಿನಿಮಾ ಅಮೆಜಾನ್ ಪ್ರೈಂ ನಲ್ಲಿ ಅಕ್ಟೋಬರ್ 30 ರಂದು ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ನಟ ಸೂರ್ಯಾ ಮತ್ತು ಗುನೀತ್ ಮೊಂಗಾ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಜಿ.ವಿ.ಪ್ರಕಾಶ್ ಕುಮಾರ್.

More from Filmibeat

English summary
Suriya's movie Soorarai Potru's trailer released, Movie is based On captain Gopinath's life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X