ಶ್ರೀಲೀಲಾ ನಟನೆಯ 'ಐ ಲವ್ ಯು ಈಡಿಯಟ್' ಸಿನಿಮಾ ಓಟಿಟಿಯಲ್ಲಿ ರಿಲೀಸ್

ಕನ್ನಡದ ಹುಡುಗಿ ಶ್ರೀಲೀಲಾ ಕ್ರೇಜ್‌ ಟಾಲಿವುಡ್‌ನಲ್ಲಿ ಜೋರಾಗಿದೆ. ಅದ್ಯಾವ ಮಟ್ಟಿಗೆ ಅಂದ್ರೆ, ಆಕೆ ನಟಿಸಿದ ಕನ್ನಡ ಸಿನಿಮಾಗಳೆಲ್ಲಾ ಈಗ ತೆಲುಗಿಗೆ ಡಬ್ ಆಗುತ್ತಿದೆ. ಸದ್ಯ ಶ್ರೀ ನಟನೆಯ 'ಐ ಲವ್ ಯು ಈಡಿಯಟ್' ಸಿನಿಮಾ ತೆಲುಗಿನ ಅಹಾ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಬಂದಿದೆ. ತೆಲುಗಿನ ಸೂಪರ್ ಸ್ಟಾರ್‌ಗಳ ಜೊತೆ ನಟಿಸುತ್ತಿರುವ ಶ್ರೀಲೀಲಾ ಈ ಸಿನಿಮಾದಲ್ಲಿ ಯಾವಾಗ ನಟಿಸಿದ್ರು ಎನ್ನುವ ಅನುಮಾನ ಮೂಡುವುದು ಸಹಜ.

ಅಂದ ಹಾಗೆ 'ಐ ಲವ್ ಯು ಈಡಿಯಟ್' ಶ್ರೀಲೀಲಾ ನಟಿಸಿರುವ ಹೊಸ ಸಿನಿಮಾ ಅಲ್ಲ. ಬದಲಿಗೆ ಆಕೆಯ ಚೊಚ್ಚಲ ಕನ್ನಡ ಸಿನಿಮಾ 'ಕಿಸ್‌' ತೆಲುಗು ವರ್ಷನ್. ಹೌದು ಎ. ಪಿ ಅರ್ಜುನ್ ನಿರ್ದೇಶನದ ಈ ರೊಮ್ಯಾಂಟಿಕ್ ಸಿನಿಮಾ ಈಗ ತೆಲುಗಿಗೆ ಡಬ್ ಸ್ಮಾಲ್‌ ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತಿದೆ. 'ಪೆಳ್ಳಿ ಸಂದD', 'ಧಮಾಕ' ಸಿನಿಮಾಗಳಲ್ಲಿ ನಟಿಸಿದ ಶ್ರೀಲೀಲಾ ಹವಾ ಟಾಲಿವುಡ್‌ನಲ್ಲಿ ಜೋರಾಗಿದೆ. ಏಳೆಂಟು ಸಿನಿಮಾಗಳು ಸದ್ದು ಈ ಚಂದನವನದ ಚೆಲುವೆ ಕೈಯಲ್ಲಿವೆ.

Sreeleela Starrer I Love You Idiot movie now Streaming On Aha OTT platform

ಮಹೇಶ್ ಬಾಬು, ಪವನ್ ಕಲ್ಯಾಣ್ ಸಿನಿಮಾಗಳಿಗೆ ನಾಯಕಿಯಾಗಿ ಶ್ರೀಲೀಲಾ ಹೆಸರು ಕೇಳಿಬರ್ತಿದೆ. ಇದೇ ಕ್ರೇಜ್ ಎನ್‌ಕ್ಯಾಶ್ ಮಾಡಿಕೊಳ್ಳಲು ಕನ್ನಡದ 'ಕಿಸ್' ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ವಿರಾಟ್ ಜೋಡಿಯಾಗಿ ಈ ಚಿತ್ರದಲ್ಲಿ ಶ್ರೀ ನಟಿಸಿದ್ದರು. ಕನ್ನಡದಲ್ಲಿ ವಿ. ರವಿಕುಮಾರ್ ನಿರ್ಮಿಸಿದ್ದ ಚಿತ್ರವನ್ನು ನಿರ್ಮಾಪಕ ಸಾಯಿ ಕೃಷ್ಣ ಬತುಲ ತೆಲುಗಿಗೆ ಡಬ್ ಮಾಡಿದ್ದರು. ಡಿಸೆಂಬರ್‌ನಲ್ಲಿ 'ಐ ಲವ್ ಯು ಈಡಿಯಟ್' ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು.

ಪೋಸ್ಟರ್‌ಗಳಲ್ಲಿ ಶ್ರೀಲೀಲಾ ಹೈಲೆಟ್ ಮಾಡಿ ಸಿನಿಮಾ ಪ್ರಚಾರ ಮಾಡಲಾಗುತ್ತಿದೆ. ಕನ್ನಡದಲ್ಲಿ 'ಕಿಸ್' ಸಿನಿಮಾ ಅಷ್ಟೇನು ಸದ್ದು ಮಾಡಿರಲಿಲ್ಲ. ಈ ಸಿನಿಮಾ ನಂತರ ಶ್ರೀಮುರಳಿ ಜೊತೆ ಭರಾಟೆ ಚಿತ್ರದಲ್ಲಿ ನಟಿಸಿದ್ದರು. ಅಲ್ಲಿಂದ ಮುಂದೆ ನೇರವಾಗಿ ಟಾಲಿವುಡ್ ಪ್ರವೇಶಿಸಿದರು. ಇದೀಗ ಅಹಾ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ 'ಐ ಲವ್ ಯು ಈಡಿಯಟ್' ಸ್ಟ್ರೀಮಿಂಗ್ ಆಗ್ತಿದೆ. '100 ಡೇಸ್ ವಿತ್ ಮಿಸ್ಟರ್ ಆರೊಗೆಂಟ್' ಎನ್ನುವ ಕೊರಿಯನ್ ಸಿನಿಮಾದಿಂದ ಪ್ರೇರಣೆಗೊಂಡು ಎ. ಪಿ ಅರ್ಜುನ್ ಈ ಸಿನಿಮಾ ಮಾಡಿದ್ದರು.

Sreeleela Starrer I Love You Idiot movie now Streaming On Aha OTT platform

ಮಹೇಶ್‌ ಬಾಬು ನಟನೆಯ 28ನೇ‌ ಚಿತ್ರದಲ್ಲಿ 2ನೇ ನಾಯಕಿಯಾಗಿ ಶ್ರೀಲೀಲಾ ಹೆಸರು ಕೇಳಿಬರ್ತಿದೆ. NBK108 ಚಿತ್ರದಲ್ಲಿ ಬಾಲಕೃಷ್ಣ ಸಹೋದರಿ ಪಾತ್ರದಲ್ಲಿ ಈಗಾಗಲೇ ಬಣ್ಣ ಹಚ್ಚಿದ್ದಾರೆ. ಇನ್ನು ಬೋಯಪಾಟಿ ಶ್ರೀನಿ- ರಾಮ್ ಕಾಂಬಿನೇಷನ್‌ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ನಿತಿನ್ ನಟನೆಯ 32ನೇ ಚಿತ್ರಕ್ಕೂ ನಾಯಕಿ ಆಗುವ ಸಾಧ್ಯತೆಯಿದೆ. ಪವನ್ ಕಲ್ಯಾಣ್ - ಹರೀಶ್ ಶಂಕರ್ ಕಾಂಬಿನೇಷನ್‌ನಲ್ಲಿ ಬರ್ತಿರೋ 'ಉಸ್ತಾದ್ ಭಗತ್‌ ಸಿಂಗ್' ಚಿತ್ರಕ್ಕೂ ನಾಯಕಿಯಾಗಿ ಶ್ರೀ ಹೆಸರು ಚಾಲ್ತಿಯಲ್ಲಿದೆ.

More from Filmibeat

English summary
Sreeleela Starrer I Love You Idiot movie now Streaming On Aha OTT platform. this is Sreeleela's Debut Kannada movie Kiss Telugu dubbed verion. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X