ಭಾರತದೆಲ್ಲೆಡೆ ದಿ ಫ್ಯಾಮಿಲಿ ಮ್ಯಾನ್ 3 ಹವಾ, ಹೊಸ ದಾಖಲೆ ಬರೆದ ಶ್ರೀಕಾಂತ್ ತಿವಾರಿ
ಮತ್ತೊಮ್ಮೆ ಮನೋಜ್ ಬಾಜಪೇಯಿ ಅಬ್ಬರ ಶುರುವಾಗಿದೆ. ಅವರ ಸೂಪರ್ ಹಿಟ್ ಸೀರೀಸ್ 'ದಿ ಫ್ಯಾಮಿಲಿ ಮ್ಯಾನ್' ಸೀಸನ್ 3 ದಾಖಲೆ ಬರೆದಿದೆ. ಈ ಸರಣಿಯು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಇದು
ಬಿಡುಗಡೆಯಾದ ಮೊದಲ ವಾರದಲ್ಲಿ 2025 ರ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸೀರೀಸ್ ಎಂಬ ಹೆಗ್ಗಳಿಕೆ ಪಡೆದಿದೆ. ವಿಶೇಷ ಅಂದರೆ ಕೇವಲ ಭಾರತದಲ್ಲಿ ಮಾತ್ರವಲ್ಲ...
ವಿಶ್ವದಾದ್ಯಂತ 35ಕ್ಕೂ ಹೆಚ್ಚು ದೇಶಗಳಲ್ಲಿ '' ದಿ ಫ್ಯಾಮಿಲಿ ಮ್ಯಾನ್ 3'' ಟಾಪ್ 5 ಟ್ರೆಂಡಿಂಗ್ ಶೋಗಳಲ್ಲಿ ಸ್ಥಾನ ಪಡೆದಿದೆ. ಈ ಮೂಲಕ ಒಳ್ಳೆಯ ಕಥೆ ಮತ್ತು ಚಿತ್ರತಂಡ ಇದ್ದರೆ ಪ್ರೇಕ್ಷಕರನ್ನು ತಲುಪಬಹುದು ಎನ್ನುವ ಮಾತನ್ನು ಕೂಡ ಸಾಬೀತು ಮಾಡಿದೆ. ಒಟಿಟಿ ಲೋಕದಲ್ಲಿ ಈ ಮೂಲಕ ಹೊಸ ಇತಿಹಾಸವನ್ನು ಬರೆದಿದೆ.

ದೇಶಾದ್ಯಂತ 'ಫ್ಯಾಮಿಲಿ ಮ್ಯಾನ್ 3' ಫೀವರ್
ಈ ಸ್ಪೈ-ಆಕ್ಷನ್ ಥ್ರಿಲ್ಲರ್ ಸರಣಿಯ ಕ್ರೇಜ್ ಎಷ್ಟಿದೆ ಎಂದರೆ ಬಿಡುಗಡೆಯಾದ ಮೊದಲ ವಾರದಲ್ಲೇ ಭಾರತದ 96% ವ್ಯಾಪ್ತಿಯನ್ನು ತಲುಪಿದೆ. ಹಿಂದಿನ ಎರಡು ಸೀಸನ್‌ಗಳಿಗಿಂತಲೂ ಈ ಬಾರಿ ಮೂರನೇ ಸೀಸನ್ ಹೆಚ್ಚು ಯಶಸ್ಸು ಕಂಡಿದೆ. ವೀಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಸರಣಿಯ ನಿರ್ದೇಶಕರು ರಾಜ್ & ಡಿಕೆ. ಇವರ ವಿಭಿನ್ನ ಶೈಲಿ ಮತ್ತು ನಿರೂಪಣೆಗೆ ಜನ ಫಿದಾ ಆಗಿದ್ದಾರೆ.
ಹಿಂದಿನ ಸೀಸನ್‌ಗಳ ಐತಿಹಾಸಿಕ ಯಶಸ್ಸು
''ದಿ ಫ್ಯಾಮಿಲಿ ಮ್ಯಾನ್'' ಸರಣಿಯ ಯಶಸ್ಸಿಗೆ ಭದ್ರ ಬುನಾದಿ ಹಾಕಿದ್ದು ಸೀಸನ್ 1 ಮತ್ತು ಸೀಸನ್ 2. ಮೊದಲ ಸೀಸನ್ ಬಿಡುಗಡೆಯಾದಾಗಲೇ ಇದು ಭಾರತೀಯ ಒ.ಟಿ.ಟಿ ಜಗತ್ತಿನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತು. ಶ್ರೀಕಾಂತ್ ತಿವಾರಿ ಪಾತ್ರದ ಸಾಮಾನ್ಯ ಜೀವನದ ಸಮಸ್ಯೆಗಳು ಮತ್ತು ಗೂಢಚಾರಿಕೆಯ ಜಗತ್ತು ಪ್ರೇಕ್ಷಕರಿಗೆ ಕನೆಕ್ಟ್ ಆಯಿತು.
ಸೀಸನ್ 2 ನಲ್ಲಿ ತಮಿಳುನಾಡಿನ ಹಿನ್ನೆಲೆ ಮತ್ತು ಸಮಂತಾ ಅದ್ಭುತ ಪಾತ್ರವು ಇನ್ನಷ್ಟು ಸದ್ದು ಮಾಡಿತು. ಈ ಹಿಂದಿನ ಎರಡು ಸೀಸನ್ಗಳು ಗಳಿಸಿದ ಅಪಾರ ಜನಪ್ರಿಯತೆ ಮತ್ತು ವಿಮರ್ಶಕರ ಮೆಚ್ಚುಗೆಯೇ ಸೀಸನ್ 3ಗೆ ಇಷ್ಟು ದೊಡ್ಡ ಓಪನಿಂಗ್ ಸಿಗಲು ಕಾರಣ. ಈ ಸರಣಿಯು ಪ್ರಾರಂಭದಿಂದಲೂ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿದೆ.
ನಟರ ಅದ್ಭುತ ಪರ್ಫಾರ್ಮೆನ್ಸ್...
ಶ್ರೀಕಾಂತ್ ತಿವಾರಿ ಪಾತ್ರದಲ್ಲಿ ಮನೋಜ್ ಬಾಜಪೇಯಿ ಅಭಿನಯಕ್ಕೆ ಭಾರೀ ಮೆಚ್ಚುಗೆ ಸಿಕ್ಕಿದೆ. ಅವರದ್ದು ಕ್ಲಾಸಿಕ್ ಪರ್ಫಾರ್ಮೆನ್ಸ್. ಈ ಬಾರಿ ಸರಣಿಯಲ್ಲಿ ಜೈದೀಪ್ ಅಹ್ಲಾವತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಟನೆ ಸಹ ಗಮನ ಸೆಳೆಯುವಂತಿದೆ. ಇಡೀ ತಂಡದ ಕಠಿಣ ಪರಿಶ್ರಮ ಮತ್ತು ಕಥೆಯ ಬಲದಿಂದಾಗಿ ಈ ಸೀಸನ್ ಒಂದು ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಪ್ರೇಕ್ಷಕರ ಅಚಲ ಪ್ರೀತಿ ಮತ್ತು ಬೆಂಬಲಕ್ಕೆ ಸರಣಿಯ ನಿರ್ಮಾಪಕರು ಹಾಗೂ ನಟರು ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರೇಕ್ಷಕರ ಪ್ರತಿಕ್ರಿಯೆ: ಸೀಸನ್ 4 ನಿರೀಕ್ಷೆ...
''ದಿ ಫ್ಯಾಮಿಲಿ ಮ್ಯಾನ್ 3'' ಗೆ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಹರಿದುಬರುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಸರಣಿಯ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಮನೋಜ್ ಬಾಜಪೇಯಿ ಟೈಮಿಂಗ್ ಕಾಮಿಡಿ ಮತ್ತು ತೀವ್ರ ಆಕ್ಷನ್ ದೃಶ್ಯಗಳನ್ನು ಜನರು ಇಷ್ಟಪಟ್ಟಿದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಮುಂದಿನ ಭಾಗದಲ್ಲಿ ಶ್ರೀಕಾಂತ್ ತಿವಾರಿ ಎದುರಿಸುವ ಹೊಸ ಸವಾಲುಗಳಿಗಾಗಿ ಎಲ್ಲರೂ ಕಾತುರರಾಗಿದ್ದಾರೆ. ಈ ಯಶಸ್ಸು 'ಫ್ಯಾಮಿಲಿ ಮ್ಯಾನ್' ಸರಣಿ ಮತ್ತಷ್ಟು ಕಾಲ ಮುಂದುವರಿಯುವ ಭರವಸೆ ನೀಡಿದೆ. ಒಟ್ಟಿನಲ್ಲಿ ''ದಿ ಫ್ಯಾಮಿಲಿ ಮ್ಯಾನ್ 3'' ಕೇವಲ ಸರಣಿಯಲ್ಲ, ಇದು ಭಾರತೀಯ ಒ.ಟಿ.ಟಿ ಜಗತ್ತಿನ ಮೈಲಿಗಲ್ಲು ಅಂದರೆ ಅದು ತಪ್ಪಾಗಲಿಕ್ಕಿಲ್ಲ.


Click it and Unblock the Notifications











