Bagheera OTT; ಶ್ರೀಮುರಳಿ 'ಬಘೀರ' ಓಟಿಟಿ ಪಾರ್ಟ್ನರ್ ಫಿಕ್ಸ್; ಯಾವಾಗ ಸ್ಟ್ರೀಮಿಂಗ್?

ಡಾ. ಸೂರಿ ನಿರ್ದೇಶನದ 'ಬಘೀರ' ಸಿನಿಮಾ ದೀಪಾವಳಿ ಸಂಭ್ರಮದಲ್ಲಿ ತೆರೆಗಪ್ಪಳಿಸಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಶ್ರೀಮುರಳಿ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಚಿತ್ರ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುವ ಸುಳಿವು ಸಿಕ್ಕಿದೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ಬಘೀರ' ಸಿನಿಮಾ ನಿರ್ಮಾಣ ಆಗಿದ್ದು ಪ್ರಶಾಂತ್ ನೀಲ್ ಕತೆ ಬರೆದಿದ್ದಾರೆ. ರುಕ್ಮಿಣಿ ವಸಂತ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಪ್ರಕಾಶ್ ರಾಜ್, ರಂಗಾಯಣ ರಘು, ಸುಧಾರಾಣಿ, ಅಚ್ಯುತ್ ಕುಮಾರ್ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ನಟಿಸಿದ್ದಾರೆ.

Srimurali Starrer Bagheera Movie Ott Streaming Partner Fixed

ಎಜೆ ಶೆಟ್ಟಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ 'ಬಘೀರ' ಚಿತ್ರಕ್ಕಿದೆ. ಚಿತ್ರದಲ್ಲಿ ರೋರಿಂಗ್ ಸ್ಟಾರ್ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಸೂಪರ್ ಹೀರೊ ಗೆಟಪ್‌ನಲ್ಲಿ ಮಾಸ್ಕ್ ಧರಿಸಿ ದುಷ್ಟರ ಸಂಹಾರ ಮಾಡಿದ್ದಾರೆ. 'ಬಘೀರ' ಕನ್ನಡದ ಮೊದಲ ಸೂಪರ್ ಹೀರೊ ಸಿನಿಮಾ ಎನ್ನಬಹುದು.

ಫಸ್ಟ್‌ ಹಾಫ್ ಅದ್ಭುತವಾಗಿದ್ದು ಸೆಕೆಂಡ್ ಹಾಫ್ ಕೊಂಚ ತಾಳ್ಮೆ ಪರೀಕ್ಷೆ ಮಾಡುತ್ತದೆ. ಇನ್ನು ರುಕ್ಮಿಣಿ ವಸಂತ್ ಪಾತ್ರಕ್ಕೆ ಹೆಚ್ಚಿನ ಮಹತ್ವ ಸಿಗದೇ ಇರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇಡೀ ಸಿನಿಮಾ ರೋರಿಂಗ್ ಸ್ಟಾರ್ ಆವರಿಸಿಕೊಂಡಿದ್ದಾರೆ. ಚೇತನ್ ಡಿಸೋಜಾ ಸ್ಟಂಟ್ಸ್ ಹುಬ್ಬೇರಿಸುವಂತಿದೆ. ಬಹಳ ಅದ್ಧೂರಿಯಾಗಿ ಹೊಂಬಾಳೆ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿದೆ.

'ಬಘೀರ' ಅಡ್ವಾನ್ಸ್ ಬುಕ್ಕಿಂಗ್‌ಗೆ ಅಷ್ಟೇನು ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ ಜನ ಟಿಕೆಟ್ ಕೌಂಟರ್‌ನಲ್ಲೇ ಟಿಕೆಟ್ ಖರೀದಿಸಿ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಪಾಸಿಟಿವ್ ಟಾಕ್ ಬರುತ್ತಿದ್ದಂತೆ ಬುಕ್‌ಮೈ ಶೋನಲ್ಲಿ ಕೂಡ ರೆಸ್ಪಾನ್ಸ್ ಚೆನ್ನಾಗಿದೆ. ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವ ಸುಳಿವು ಸಿಗುತ್ತಿದೆ. ಪರಭಾಷೆಯ ಯಾವುದೇ ದೊಡ್ಡ ಸಿನಿಮಾ ಬರದೇ ಇರುವುದು ಕೂಡ 'ಬಘೀರ'ನಿಗೆ ಪ್ಲಸ್ ಆಗಲಿದೆ.

'ಬಘೀರ' ಚಿತ್ರದ ಕಥೆ ಏನು ಎಂದರೆ ವೇದಾಂತ್ (ಶ್ರೀಮುರಳಿ) ತನ್ನ ತಾಯಿಯ ಮಾತಿನಂತೆ ಖಡಕ್ ಪೊಲೀಸ್ ಆಫೀಸರ್ ಆಗುತ್ತಾನೆ. ಆದರೆ ಖಾಕಿ ಧರಿಸಿ ತಾನು ಅಂದುಕೊಂಡಂತೆ ಅನ್ಯಾಯವನ್ನು ಕೊನೆಗಾಣಿಸಲು ಸಾಧ್ಯವಿಲ್ಲ ಎಂದು ಅರ್ಥ ಮಾಡಿಕೊಳ್ಳುತ್ತಾನೆ. ಮುಂದೆ ತಾನೊಬ್ಬ ಭ್ರಷ್ಟ ಅಧಿಕಾರಿ ಎಂದು ಬಿಂಬಿಸಿಕೊಂಡು ರಾತ್ರಿ ವೇಳೆ ದುಷ್ಟರನ್ನು ಸದೆಬಡೆಯುತ್ತಾನೆ. ಅದಕ್ಕಾಗಿ ಮಾಸ್ಕ್ ಧರಿಸಿ 'ಬಘೀರ' ಅವತಾರ ತಾಳುತ್ತಾನೆ. ಮಂಗಳೂರು ಹಿನ್ನೆಲೆಯಲ್ಲಿ ಸಿನಿಮಾ ಕಥೆ ಸಾಗುತ್ತದೆ. ಕೊನೆಗೆ ಮಾನವ ಕಳ್ಳಸಾಗಣೆ ಜಾಲವನ್ನು ಭೇದಿಸುತ್ತಾನೆ.

ಅದ್ಧೂರಿ ಮೇಕಿಂಗ್, ಹೈವೋಲ್ಟೇಜ್ ಆಕ್ಷನ್, ಶ್ರೀಮುರಳಿ ಮಾಸ್ ಪರ್ಫಾರ್ಮನ್ಸ್‌ನಿಂದ 'ಬಘೀರ' ಸಿನಿಮಾ ಇಷ್ಟವಾಗುತ್ತದೆ. ಬೆಳ್ಳಿ ಪರದೆಯಲ್ಲಿ ಮಾಸ್ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸುತ್ತದೆ. ಹೊಂಬಾಳೆ ಸಂಸ್ಥೆ ಯಾವುದಕ್ಕೂ ರಾಜಿಯಾಗದೇ ಸಿನಿಮಾ ಮಾಡಿರುವುದು ಗೊತ್ತಾಗುತ್ತಿದೆ. ದೀಪಾವಳಿ ಲಾಂಗ್ ವೀಕೆಂಡ್‌ನಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎಂದು ಕಾದು ನೋಡಬೇಕಿದೆ.

Srimurali Starrer Bagheera Movie Ott Streaming Partner Fixed

ಇನ್ನು ಚಿತ್ರದ ಸ್ಟ್ರೀಮಿಂಗ್ ಪಾರ್ಟ್ನರ್ ಫಿಕ್ಸ್ ಆಗಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ 'ಬಘೀರ' ಸಿನಿಮಾ ರಿಲೀಸ್ ಆಗಲಿದೆ. ಈವರೆಗೆ ನೆಟ್‌ಫ್ಲಿಕ್ಸ್‌ ಯಾವುದೇ ದೊಡ್ಡ ಕನ್ನಡ ಸಿನಿಮಾ ಕೊಂಡುಕೊಂಡಿರಲಿಲ್ಲ ಎನ್ನುವ ಆರೋಪ ಇತ್ತತು. 'ಬಘೀರ' ಮೂಲಕ ಅದು ದೂರವಾಗುತ್ತಿದೆ. ಮುಂದೆ ಮತ್ತಷ್ಟು ಚಿತ್ರಗಳು ಸ್ಟ್ರೀಮಿಂಗ್ ಆಗಲಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸಿನಿಮಾ ಓಟಿಟಿಗೂ ಬರಲಿದೆ.

ತಮಿಳು, ಹಿಂದಿ, ಮಲಯಾಳಂ ಭಾಷೆಗಳಿಗೂ 'ಬಘೀರ' ಸಿನಿಮಾ ಡಬ್ ಆಗಿ ಸ್ಟ್ರೀಮಿಂಗ್ ಆಗುತ್ತಾ ಕಾದು ನೋಡಬೇಕಿದೆ. ದೊಡ್ಡ ದೊಡ್ಡ ಸಿನಿಮಾಗಳೇ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿದೆ. ಹೊಂಬಾಳೆ ಸಂಸ್ಥೆ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಒಳ್ಳೆ ಮೊತ್ತಕ್ಕೆ ಬೇಗ ಸಿನಿಮಾ ಸ್ಟ್ರೀಮಿಂಗ್ ಮಾಡಲು ಒಪ್ಪಿಕೊಳ್ಳುತ್ತಿದೆ. ಹಾಗಾಗಿ ಡಿಸೆಂಬರ್ ಮೊದಲ ವಾರದ ವೇಳೆಗೆ 'ಬಘೀರ' ಓಟಿಟಿಯಲ್ಲಿ ಘರ್ಜಿಸಲಿದ್ದಾನೆ.

More from Filmibeat

English summary
Bagheera OTT release date: When and where to watch srimurali's vigilante thriller
Read more about: srimurali sandalwood ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X