twitter
    For Quick Alerts
    ALLOW NOTIFICATIONS  
    For Daily Alerts

    ಬಂಪರ್ ಆಫರ್: ಎರಡು ದಿನ ನೆಟ್‌ಫ್ಲಿಕ್ಸ್ ಅನ್ನು ಉಚಿತವಾಗಿ ನೋಡಿ

    |

    ನೆಟ್‌ಫ್ಲಿಕ್ಸ್‌, ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಜನಪ್ರಿಯ ಒಟಿಟಿಗಳಲ್ಲೇ ದುಬಾರಿ ಸಬ್‌ಸ್ಕ್ರಿಪ್ಷನ್ ಚಾರ್ಜ್‌ ಹೊಂದಿದೆ. ಜೊತೆಗೆ ಅತ್ಯಂತ ಹೆಚ್ಚು ವೈವಿಧ್ಯಮಯ ಕಂಟೆಂಟ್ ಹೊಂದಿರುವ ಒಟಿಟಿಯೂ ಸಹ ಇದೇ.

    ಚಂದಾ ಮೊತ್ತ ತಿಂಗಳಿಗೆ 199 ರು. ನಿಂದ ಪ್ರಾರಂಭವಾಗುತ್ತದೆಯಾದರೂ, ಉತ್ತಮ ಗುಣಮಟ್ಟದ ವಿಡಿಯೋ ಕ್ವಾಲಿಟಿ ಬೇಕೆಂದರೆ ತಿಂಗಳಿಗೆ 799 ರು. ಪಾವತಿಸಬೇಕು. ಇದು ತುಸು ದುಬಾರಿಯೇ.

    ಒಟಿಟಿಗಿಲ್ಲ ಸರ್ಕಾರದ ಮೂಗುದಾರ, ಟಿವಿ ಮಾಧ್ಯಮಗಳಿಗೆ ಸ್ವಯಂ ಲಗಾಮುಒಟಿಟಿಗಿಲ್ಲ ಸರ್ಕಾರದ ಮೂಗುದಾರ, ಟಿವಿ ಮಾಧ್ಯಮಗಳಿಗೆ ಸ್ವಯಂ ಲಗಾಮು

    ಆದರೆ ಈಗ ನೆಟ್‌ಫ್ಲಿಕ್ಸ್‌ ಹೊಸ ಆಫರ್ ಒಂದನ್ನು ನೀಡಿದೆ. ಡಿಸೆಂಬರ್ ತಿಂಗಳಲ್ಲಿ ನೆಟ್‌ಫ್ಲಿಕ್ಸ್‌, 'ಸ್ಟ್ರೀಮ್ ಫೆಸ್ಟ್‌' ನಡೆಸುತ್ತಿದ್ದು, ಎರಡು ದಿನಗಳ ಕಾಲ ನೆಟ್‌ಫ್ಲಿಕ್ಸ್‌ನ ಸಿನಿಮಾ, ವೆಬ್ ಸರಣಿ, ಡಾಕ್ಯುಮೆಂಟರಿ, ಪಾಡ್‌ಕಾಸ್ಟ್‌ಗಳನ್ನು ಉಚಿತವಾಗಿ ನೋಡಬಹುದಾಗಿದೆ.

    ಡಿಸೆಂಬರ್ 5,6 ರಂದು ಉಚಿತವಾಗಿ ನೋಡಬಹುದು

    ಡಿಸೆಂಬರ್ 5,6 ರಂದು ಉಚಿತವಾಗಿ ನೋಡಬಹುದು

    ಡಿಸೆಂಬರ್ 5, 6 ರಂದು ನೆಟ್‌ಫ್ಲಿಕ್ಸ್‌ನ ಕಂಟೆಂಟ್ ಅನ್ನು ಭಾರತದಲ್ಲಿ ಉಚಿತವಾಗಿ ನೋಡಬಹುದಾಗಿದೆ. ಡಿಸೆಂಬರ್ 4 ರ ಮಧ್ಯರಾತ್ರಿ 12 ಗಂಟೆ ನಂತರ ಪ್ರಾರಂಭವಾಗುವ ಈ ಆಫರ್, ಡಿಸೆಂಬರ್ 6 ರ ಮಧ್ಯರಾತ್ರಿ 11:59 ರ ವರೆಗೆ ಇರಲಿದೆ.

    ಖಾತೆ ತೆರೆದು ಹಣ ನೀಡದೇ ನೆಟ್‌ಫ್ಲಿಕ್ಸ್ ನೋಡಿ

    ಖಾತೆ ತೆರೆದು ಹಣ ನೀಡದೇ ನೆಟ್‌ಫ್ಲಿಕ್ಸ್ ನೋಡಿ

    ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು, ಖಾತೆ ತೆರೆದು ಯಾವುದೇ ಪೇಮೆಂಟ್ ಮಾಡದೆ ನೆಟ್‌ಫ್ಲಿಕ್ಸ್‌ನ ಕಂಟೆಂಟ್ ಅನ್ನು ನೋಡಬಹುದಾಗಿದೆ. ಶನಿವಾರ-ಭಾನುವಾರ ಈ ಆಫರ್ ನೀಡಿರುವ ಕಾರಣ ಹೆಚ್ಚು ಜನರು ನೆಟ್‌ಫ್ಲಿಕ್ಸ್‌ನಲ್ಲಿ ಕಂಟೆಂಟ್ ನೋಡುವ ಸಾಧ್ಯತೆ ಇದೆ. ಆದರೆ ಒಂದೇ ಇಮೇಲ್ ಐಡಿ-ಪಾಸ್‌ವರ್ಡ್‌ ಅನ್ನು ಬಳಲಿ ಒಂದಕ್ಕಿಂತಲೂ ಹೆಚ್ಚು ಮಂದಿ ನೆಟ್‌ಫ್ಲಿಕ್ಸ್‌ ನೋಡುವಂತಿಲ್ಲ.

    'ಬಲ'ವನ್ನು 'ಎಡ' ಮಾಡಲು ತೆಲುಗಿಗೆ ಹೋದ ಲೂಸಿಯಾ ಪವನ್'ಬಲ'ವನ್ನು 'ಎಡ' ಮಾಡಲು ತೆಲುಗಿಗೆ ಹೋದ ಲೂಸಿಯಾ ಪವನ್

    ಬಳಕೆದಾರರ ಸಂಖ್ಯೆ ಮೇಲೆ ಮಿತಿಯೂ ಇದೆ

    ಬಳಕೆದಾರರ ಸಂಖ್ಯೆ ಮೇಲೆ ಮಿತಿಯೂ ಇದೆ

    ಆ ಎರಡು ದಿನಗಳಿಗೆ ನೆಟ್‌ಫ್ಲಿಕ್ಸ್‌ ಬಳಕೆದಾರರ ಮೇಲೆ ಮಿತಿ ಸಹ ಹೇರಲಾಗಿದೆ. ಹೆಚ್ಚು ಮಂದಿ ನೆಟ್‌ಫ್ಲಿಕ್ಸ್‌ ನೋಡಲು ಆರಂಭಿಸಿದರೆ ಹೊಸದಾಗಿ ಲಾಗ್‌ಇನ್ ಆದವರಿಗೆ 'ನೆಟ್‌ಫ್ಲಿಕ್ಸ್‌ ಅಟ್ ಇಟ್ಸ್ ಕೆಪಾಸಿಟಿ' ಎಂಬ ಸಂದೇಶ ಬರಲಿದೆ. ಆದರೆ ಸಂಖ್ಯೆ ಕಡಿಮೆ ಆದ ನಂತರ 'ಯು ಕ್ಯಾನ್ ಸ್ಟಾರ್ಟ್ ಸ್ಟ್ರೀಮಿಂಗ್ ನೌ' ಎಂಬ ಸಂದೇಶ ಬರಲಿದೆ, ಆಗ ಲಾಗಿನ್‌ ಆಗಿ ಇಷ್ಟದ ಕಂಟೆಂಟ್ ನೋಡಬಹುದಾಗಿರುತ್ತದೆ.

     3000 ಕೋಟಿ ಬಂಡವಾಳ ಹೂಡಿರುವ ನೆಟ್‌ಫ್ಲಿಕ್ಸ್

    3000 ಕೋಟಿ ಬಂಡವಾಳ ಹೂಡಿರುವ ನೆಟ್‌ಫ್ಲಿಕ್ಸ್

    ನೆಟ್‌ಫ್ಲಿಕ್ಸ್‌, ಭಾರತೀಯ ಸಿನಿಮಾ, ವೆಬ್‌ಸರಣಿ, ರಿಯಾಲಿಟಿ ಶೋಗಳ ಮೇಲೆ ಅಂದಾಜು 3000 ಕೋಟಿ ಬಂಡವಾಳ ಹೂಡಿದೆ. ಆದರೆ ಇಲ್ಲಿ ಜೀ ಪ್ಲಸ್ ಹಾಗೂ ಅಮೆಜಾನ್ ಪ್ರೈಂ ನಿಂದ ಭಾರಿ ಸ್ಪರ್ಧೆ ಎದುರಿಸುತ್ತಿದೆ. ಹಾಗಾಗಿ ಈ ಸ್ಟ್ರೀಮ್ ಫೆಸ್ಟ್ ಮೂಲಕ ಇನ್ನಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯುವ ಕಾರ್ಯ ಮಾಡುತ್ತಿದೆ ನೆಟ್‌ಫ್ಲಿಕ್ಸ್.

    ಪೂರಿ ಜಗನ್ನಾಥ್ ಮಗನ 'ರೊಮ್ಯಾಂಟಿಕ್' ಚಿತ್ರ ಆನ್‌ಲೈನ್ನಲ್ಲಿ ಬಿಡುಗಡೆ!ಪೂರಿ ಜಗನ್ನಾಥ್ ಮಗನ 'ರೊಮ್ಯಾಂಟಿಕ್' ಚಿತ್ರ ಆನ್‌ಲೈನ್ನಲ್ಲಿ ಬಿಡುಗಡೆ!

    English summary
    Netflix giving offer to stream Netflix for free on December 05th and 6th. offer is only for two days.
    Monday, November 23, 2020, 9:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X