ಬಾಕ್ಸಾಫೀಸ್‌ನಲ್ಲಿ ₹800 ಕೋಟಿ ಬಾಚಿದ ಹಾರರ್ ಸಿನಿಮಾ ಓಟಿಟಿ ಬಂತು; ಈಗ್ಲೇ ನೋಡಿ

ದೊಡ್ಡ ಸಿನಿಮಾಗಳು ಕೆಲವೊಮ್ಮೆ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿಬಿಡುತ್ತವೆ. ಆದರೆ ಕೆಲ ಚಿತ್ರಗಳು ಯಾವುದೇ ನಿರೀಕ್ಷೆ ಇಲ್ಲದೇ ಬಂದು ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ಕೊಳ್ಳೆ ಹೊಡೆದುಬಿಡುತ್ತವೆ. ಈ ವರ್ಷ ಬಾಲಿವುಡ್‌ನಲ್ಲಿ 'ಸ್ತ್ರೀ-2' ಸಿನಿಮಾ ಇದೇ ರೀತಿ ಅಚ್ಚರಿಯ ಗೆಲುವು ಕಂಡಿದೆ.

ಅಮರ್ ಕೌಶಿಕ್ ನಿರ್ದೇಶನದಲ್ಲಿ ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್, ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ ನಟನೆಯ 'ಸ್ತ್ರೀ-2' ಚಿತ್ರ ಆಗಸ್ಟ್ 15ಕ್ಕೆ ತೆರೆಗೆ ಬಂದಿತ್ತು. ಅಂದಾಜು 120 ಕೋಟಿ ರೂ. ಬಜೆಟ್ ಸಿನಿಮಾ 800 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಸ್ಟಾರ್ ಕಲಾವಿದರು ಇಲ್ಲದೇ ಸಿನಿಮಾ ಈ ಪಾಟಿ ಸದ್ದು ಮಾಡಿದ್ದು ಅಚ್ಚರಿ ಮೂಡಿಸಿದೆ.

Stree- 2 Ott Shraddha Kapoor starrer now streaming on Prime Video for Rent

6 ವರ್ಷಗಳ ಹಿಂದೆ ಸಕ್ಸಸ್ ಕಂಡಿದ್ದ 'ಸ್ತ್ರೀ' ಚಿತ್ರದ ಸೀಕ್ವೆಲ್ ಇದು. ಮ್ಯಾಡಾಕ್ ಸೂಪರ್ ನ್ಯಾಚುರಲ್ ಯೂನಿವರ್ಸ್‌ ಸರಣಿಯ 5ನೇ ಸಿನಿಮಾ ಇದು. 'ಸ್ತ್ರೀ-2' ಚಿತ್ರದ ಭರ್ಜರಿ ಸಕ್ಸಸ್ ಬಾಲಿವುಡ್‌ಗೆ ಖುಷಿ ತಂದಿದೆ. ಸಿನಿಮಾ ತೆರೆಕಂಡು 40 ದಿನ ಕಳೆದಿದೆ. ಇದೀಗ ಸದ್ದಿಲ್ಲದೇ ಓಟಿಟಿಗೆ ಬಂದು ಸಿನಿಮಾ ಗಮನ ಸೆಳೆಯುತ್ತಿದೆ. ಈಗಾಗಲೇ ತೆರೆಮೇಲೆ ಸಿನಿಮಾ ನೋಡಿದವರು, ನೋಡದವರು ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ.

ಸಿಂಪಲ್ ಕಥೆಯನ್ನು ಪರಿಣಾಮಕಾರಿಯಾಗಿ ತೆರೆಗೆ ತಂದು 'ಸ್ತ್ರೀ-2' ಚಿತ್ರತಂಡ ಗೆದ್ದಿದೆ. ಚಂದೇರಿಯಲ್ಲಿ ಮತ್ತೆ ದೆವ್ವದ ಕಾಟ ಶುರುವಾಗುತ್ತದೆ. ಮಹಿಳೆಯರು ಊರಿನಿಂದ ನಿಗೂಢವಾಗಿ ಕಾಣೆಯಾಗುತ್ತಿರುತ್ತಾರೆ. ವಿಕ್ಕಿ(ರಾಜ್‌ಕುಮಾರ್ ರಾವ್) ಹಾಗೂ ಆತನ ಸ್ನೇಹಿತರು ಮತ್ತೊಮ್ಮೆ ತಮ್ಮ ಊರು ಹಾಗೂ ಆಪ್ತರನ್ನು ಹೇಗೆ ರಕ್ಷಿಸುತ್ತಾರೆ ಎನ್ನುವುದು ಚಿತ್ರದ ಕಥೆ.

ಬಾಲಿವುಡ್‌ನಲ್ಲಿ ಆಗೊಮ್ಮೆ ಈಗೊಮ್ಮೆ ಹಾರರ್-ಕಾಮಿಡಿ ಚಿತ್ರಗಳು ದೊಡ್ಡದಾಗಿ ಸಕ್ಸಸ್ ಕಂಡ ಉದಾಹರಣೆಯಿದೆ. 'ಸ್ತ್ರೀ-2' ಕೂಡ ಅದೇ ಸಾಲಿಗೆ ಸೇರಿಕೊಂಡಿದೆ. ಫ್ಯಾಮಿಲಿ ಆಡಿಯನ್ಸ್ ಮುಗಿಬಿದ್ದು ಸಿನಿಮಾ ನೋಡಿದ್ದರು. ಮುಖ್ಯವಾಗಿ ಈ ವರ್ಷ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಕ್ಕೆ ಬರ್ತಿಲ್ಲ. ಹಾಗಾಗಿ ಇದ್ದಿದ್ದರಲ್ಲೇ ಪರವಾಗಿಲ್ಲ ಎನ್ನುವ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುತ್ತಿದೆ.

'ಸ್ತ್ರೀ-2' ಸಕ್ಸಸ್ ಬೆನ್ನಲ್ಲೇ ಶ್ರದ್ಧಾ ಕಪೂರ್ ಕ್ರೇಜ್ ಕೂಡ ಹೆಚ್ಚಾಗಿದೆ. ಮ್ಯಾಡಾಕ್ ಫಿಲ್ಮ್ಸ್ ಹಾಗೂ ಜಿಯೋ ಸ್ಟುಡಿಯೋಸ್ ಸಂಸ್ಥೆ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿವೆ. 1,100 ಕೋಟಿ ರೂ. ಕಲೆಕ್ಷನ್ ಮಾಡಿರುವ ಪ್ರಭಾಸ್ ನಟನೆಯ 'ಕಲ್ಕಿ 2898AD' ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. 850 ಕೋಟಿ ರೂ. ಕಲೆಕ್ಷನ್ ಮಾಡಿ 'ಸ್ತ್ರೀ-2' ಸಿನಿಮಾ 2ನೇ ಸ್ಥಾನಕ್ಕೇರಿದೆ.

ಬಾಲಿವುಡ್‌ನಲ್ಲಿ ಈ ವರ್ಷ ಅತಿಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಸ್ತ್ರೀ-2' ಮೊದಲ ಸ್ಥಾನದಲ್ಲಿದೆ. ಈ ಸಿನಿಮಾ ಸಕ್ಸಸ್ ಬಾಲಿವುಡ್ ಬಡಾ ಸ್ಟಾರ್‌ಗಳನ್ನು ದಂಗುಬಡಿಸಿದೆ. 'ಸ್ತ್ರೀ-2' ಚಿತ್ರಕ್ಕೆ ಜಿಷ್ಣು ಬೆನರ್ಜಿ ಛಾಯಾಗ್ರಹಣವಿದೆ. ಸಚಿನ್- ಜಿಗರ್(ಹಾಡುಗಳು) ಹಾಗೂ ಜಸ್ಟೀನ್ ವರ್ಗೀಸ್(ಬಿಜಿಎಂ) ಸಂಗೀತವಿದೆ. ಆಗಸ್ಟ್ 30ಕ್ಕೆ ಬರಬೇಕಿದ್ದ ಸಿನಿಮಾ 15 ದಿನ ಮೊದ್ಲೆ ಬಂದು ಸದ್ದು ಮಾಡಿತ್ತು.

ಅಮೇಜಾನ್ ಪ್ರೈಂ ಸಂಸ್ಥೆ 'ಸ್ತ್ರೀ-2' ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಈಗಾಗಲೇ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಆದರೆ ಸದ್ಯಕ್ಕೆ ಬಾಡಿಗೆ ಕಟ್ಟಿ ಚಂದಾದಾರರು ಸಿನಿಮಾ ವೀಕ್ಷಿಸಲು ಅವಕಾಶವಿದೆ. ಮುಂದಿನ 10 ದಿನಗಳಲ್ಲಿ ಉಚಿತವಾಗಿ ಸಿನಿಮಾ ವೀಕ್ಷಣಗೆ ಸಿಗಲಿದೆ. ಹಾರರ್ ಕಾಮಿಡಿ ಚಿತ್ರಗಳನ್ನು ಇಷ್ಟಪಡುವವರು ಈಗ್ಲೇ ಪ್ರೈಂ ವೀಡಿಯೋದಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿ.

More from Filmibeat

English summary
Bollywood Super hit horror comedy film Stree- 2 Ott details;
Read more about: ott bollywood shraddha kapoor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X