ಸಂಗಾತಿಯೊಂದಿಗೆ ಬಿಗ್‌ಬಾಸ್‌ ಒಟಿಟಿಗೆ ಬರಲಿದ್ದಾರೆ ಸನ್ನಿ ಲಿಯೋನ್!

By ಫಿಲ್ಮಿಬೀಟ್ ಡೆಸ್ಕ್

ನಟಿ ಸನ್ನಿ ಲಿಯೋನ್ ಮನರಂಜನಾ ಕ್ಷೇತ್ರದ ಬಹುಬೇಡಿಕೆಯ ಸೆಲೆಬ್ರಿಟಿ. ಸಿನಿಮಾಗಳಾಗಲಿ, ವೆಬ್ ಸರಣಿಗಳಾಗಲಿ, ರಿಯಾಲಿಟಿ ಶೋಗಳಾಗಲಿ, ಪ್ರೊಮೋಷನ್‌ ಆಗಲಿ, ಐಟಂ ಹಾಡುಗಳಾಗಲಿ ಅವರೇ ಬೇಕು. ಬಾಲಿವುಡ್ ಮಾತ್ರವಲ್ಲ ಇತರೆ ಚಿತ್ರರಂಗಗಳಲ್ಲಿಯೂ ಸನ್ನಿಗೆ ಬೇಡಿಕೆ ಇದೆ. ನೇಪಾಳ, ಬಾಂಗ್ಲಾದೇಶದ ಸಿನಿಮಾಗಳಲ್ಲಿಯೂ ಸನ್ನಿ ಲಿಯೋನ್ ನಟಿಸಿದ್ದಾರೆಂದರೆ ಅವರಿಗೆ ಇರುವ ಬೇಡಿಕೆ ಊಹಿಸಬಹುದು.

ಇದೀಗ ತುಸು ಸದ್ದು ಮಾಡಿರುತ್ತಿರುವ ಬಿಗ್‌ಬಾಸ್ ಒಟಿಟಿಗೆ ಸನ್ನಿ ಲಿಯೋನ್ ಅನ್ನು ಕರೆಸಲಾಗುತ್ತಿದೆ. ಶೋನಲ್ಲಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬಿಟ್ಟರೆ ಪ್ರೇಕ್ಷಕರನ್ನು ಸೆಳೆಯುವ ಸೆಲೆಬ್ರಿಟಿಗಳು ಇನ್ನಾರೂ ಇರದೇ ಇರುವ ಕಾರಣದಿಂದ ಶೋ ಆಯೋಕರು ಸನ್ನಿ ಲಿಯೋನ್ ಅನ್ನು ಕರೆತರುತ್ತಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದು ವಿಶೇಷವೆಂದರೆ ಬಿಗ್‌ಬಾಸ್‌ ಒಟಿಟಿಗೆ ಸನ್ನಿ ಲಿಯೋನ್ ಒಬ್ಬರೇ ಬರುತ್ತಿಲ್ಲ. ಬದಲಿಗೆ ತಮ್ಮ ಪತಿ ಡ್ಯಾನಿಯಲ್ ವೆಬರ್ ಅನ್ನೂ ಕರೆತರುತ್ತಿದ್ದಾರೆ. ಡ್ಯಾನಿಯಲ್ ವೆಬರ್ ಹಾಗೂ ಸನ್ನಿ ಲಿಯೋನ್ ಭಾರತದಲ್ಲಿಯೇ ವಾಸ್ತವ್ಯವಿದ್ದು ಇದೀಗ ಒಟ್ಟಿಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ.

ಬಿಗ್‌ಬಾಸ್ ಶೋನಿಂದಲೇ ಭಾರತಕ್ಕೆ ಹೆಚ್ಚು ಪರಿಚಯ

ಬಿಗ್‌ಬಾಸ್ ಶೋನಿಂದಲೇ ಭಾರತಕ್ಕೆ ಹೆಚ್ಚು ಪರಿಚಯ

ಅಸಲಿಗೆ ಸನ್ನಿ ಲಿಯೋನ್‌ ಅನ್ನು ಭಾರತಕ್ಕೆ ಪರಿಚಯಿಸಿದ್ದು, ಜನಪ್ರಿಯಗೊಳಿಸಿದ್ದು ಬಿಗ್‌ಬಾಸ್ ರಿಯಾಲಿಟಿ ಶೋ. 2011ರಲ್ಲಿ ಪ್ರಸಾರವಾಗಿದ್ದ ಬಿಗ್‌ಬಾಸ್ ಸೀಸನ್ 5ಗೆ ಮೊದಲ ಬಾರಿಗೆ ಸನ್ನಿ ಲಿಯೋನ್ ಅನ್ನು ಕರೆತರಲಾಗಿತ್ತು. 49 ದಿನಗಳ ನಂತರ ಸನ್ನಿ ಬಿಗ್‌ಬಾಸ್ ಮನೆಗೆ ಬಂದರು. ಆ ನಂತರ ಭಾರತದಲ್ಲಿ ಸನ್ನಿ ಲಿಯೋನ್ ಜನಪ್ರಿಯತೆ ಧಿಡೀರನೆ ಮೇಲಕ್ಕೇರಿತು. ಸನ್ನಿ ಬಿಗ್‌ಬಾಸ್ ಮನೆಯಲ್ಲಿರುವಾಗಲೇ ಮಹೇಶ್ ಭಟ್ ಸನ್ನಿಗೆ ಸಿನಿಮಾ ಅವಕಾಶ ನೀಡುವುದಾಗಿ ಹೇಳಿದರು. ಮನೆಯಿಂದ ಹೊರಗೆ ಬಂದ ಮೇಲೆ ಪೂಜಾ ಬೇಡಿ ಸನ್ನಿಗೆ ಮೊದಲ ಬಾಲಿವುಡ್ ಸಿನಿಮಾದಲ್ಲಿ ಅವಕಾಶ ನೀಡಿದ್ದರು.

ಹಲವು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ ಸನ್ನಿ

ಹಲವು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ ಸನ್ನಿ

ಸನ್ನಿ ಲಿಯೋನ್‌ಗೆ ರಿಯಾಲಿಟಿ ಶೋ ಹೊಸದೇನೂ ಅಲ್ಲ. ಈ ಮೊದಲೇ ಹೇಳಿರುವಂತೆ ಭಾರತೀಯ ಮನೊರಂಜನಾ ಮಾರುಕಟ್ಟೆಯನ್ನು ಸನ್ನಿ ಪ್ರವೇಶಿಸಿದ್ದೆ ರಿಯಾಲಿಟಿ ಶೋ ಮೂಲಕ. ಬಿಗ್‌ಬಾಸ್ ಸೀಸನ್ 5 ಆದ ಬಳಿಕ 'ಹಾಂಟೆಡ್ ವೀಕೆಂಡ್ಸ್ ವಿತ್ ಸನ್ನಿ ಲಿಯೋನ್', 'ಎಂಟಿವಿ ಸ್ಪಿಟ್‌ವಿಲ್ಲಾ', 'ಬಾಕ್ಸ್ ಕ್ರಿಕೆಟ್ ಲೀಗ್', 'ಮ್ಯಾನ್ ವರ್ಸಸ್ ವೈಲ್ಡ್ ವಿತ್ ಸನ್ನಿ ಲಿಯೋನ್'ಗಳನ್ನು ಸನ್ನಿ ಭಾಗವಹಿಸಿದ್ದಾರೆ.

ಹಲವು ಸಿನಿಮಾಗಳು ಸನ್ನಿ ಕೈಯಲ್ಲಿವೆ

ಹಲವು ಸಿನಿಮಾಗಳು ಸನ್ನಿ ಕೈಯಲ್ಲಿವೆ

ಸನ್ನಿ ಕೈಲಿ ಇದೀಗ ಹಲವು ಸಿನಿಮಾಗಳು, ವೆಬ್ ಸರಣಿಗಳಿವೆ ಅದಾಗ್ಯೂ ಸನ್ನಿ ಒಟಿಟಿ ಮನೆ ಪ್ರವೇಶಿಸುತ್ತಿದ್ದಾರೆ. ಸನ್ನಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ವೀರಮಾದೇವಿ' ತಮಿಳು ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಮೊದಲ ಮಲಯಾಳಂ ಸಿನಿಮಾ 'ರಂಗೀಲಾ' ಚಿತ್ರೀಕರಣದ ಹಂತದಲ್ಲಿದೆ. ತಮಿಳಿನ 'ಶೇರೊ' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಿಂದಿಯ 'ಕೋಕಾ ಕೊಲಾ', ಹಿಂದಿ-ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ 'ಹೆಲೆನ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಕನ್ನಡದ 'ಕೋಟಿಗೊಬ್ಬ 3' ನಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಮತ್ತೊಂದು ಸಿನಿಮಾ 'ಕಾಟನ್ ಪೇಟೆ' ಸಿನಿಮಾದಲ್ಲಿಯೂ ಸನ್ನಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಶೋ ಪ್ರಾರಂಭವಾಗಿ 21 ದಿನಗಳಾಗಿವೆ

ಶೋ ಪ್ರಾರಂಭವಾಗಿ 21 ದಿನಗಳಾಗಿವೆ

ಬಿಗ್‌ಬಾಸ್ ಒಟಿಟಿ ಪ್ರಾರಂಭವಾಗಿ ಇಂದಿಗೆ (ಆಗಸ್ಟ್ 28) 21ದಿನಗಳಾಗಿವೆ. ಆಗಸ್ಟ್ 8 ರಂದು ಈ ಶೋ ಆರಂಭವಾಗಿತ್ತು. ಇದೀಗ ಮನೆಯಲ್ಲಿ 9 ಜನಗಳಷ್ಟೆ ಇದ್ದಾರೆ. ಸನ್ನಿ ಲಿಯೋನ್, ಡ್ಯಾನಿಯಲ್ ವೆಬರ್ ಆಗಮನದಿಂದ ಮನೆಯಲ್ಲಿ ಈಗಿರುವ ಸ್ಪರ್ಧಿಗಳ ಸಮೀಕರಣಗಳು ಬದಲಾಗಲಿವೆ. ಸದ್ಯಕ್ಕೆ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬಿಗ್‌ಬಾಸ್‌ ಒಟಿಟಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಎರಡು ದಿನಗ ಹಿಂದೆಯಷ್ಟೆ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳು ಕೈ-ಕೈ ಮಿಲಾಯಿಸಿಕೊಂಡು ಜಗಳ ಮಾಡಿಕೊಂಡಿದ್ದಾರೆ ಹಾಗಾಗಿ ಸ್ಪರ್ಧಿ ಜಿಶನ್ ಅನ್ನು ಮನೆಯಿಂದ ಹೊರಗೆ ಹಾಕಲಾಗಿದೆ. ಬಿಗ್‌ಬಾಸ್ ಒಟಿಟಿಯನ್ನು ಕರಣ್ ಜೋಹರ್ ನಿರೂಪಣೆ ಮಾಡುತ್ತಿದ್ದು ಕರಣ್ ಪಕ್ಷಪಾತಿ ಗುಣದ ಬಗ್ಗೆಯೂ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.

More from Filmibeat

English summary
Actress Sunny Leone and Daniel Weber entering Bigg Boss OTT. Previously Sunny Leone participated in Bigg Boss season 05 in 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X